Home
Deal of the day

15000 ಬೆಲೆ ಕುಸಿತ! 50MP ಸೆಲ್ಫಿ ಕ್ಯಾಮೆರಾ.. 512GB ಸ್ಟೋರೇಜ್.. 40% ಡಿಸ್ಕೌಂಟ್.. 20,000ಕ್ಕಿಂತ ಕಡಿಮೆಗೆ 5G ಫೋನ್

ಸೆಲ್ಫಿ ಪ್ರಿಯರಿಗೆ ಇಲ್ಲಿದೆ ಭರ್ಜರಿ ಸಿಹಿಸುದ್ದಿ! ನೀವು ಅತ್ಯುತ್ತಮ ಸೆಲ್ಫಿ ಕ್ಯಾಮೆರಾ ಹೊಂದಿರುವ ಫೋನ್ ಖರೀದಿಸಲು ಬಯಸಿದರೆ, ಈ ಹಾನರ್‌ ಮೊಬೈಲ್‌ ಅತ್ಯಂತ ಕಡಿಮೆ ಬೆಲೆಗೆ ಲಭ್ಯವಿದೆ. ಹೌದು, ಹಾನರ್ 200 5G (Honor 200 5G) ಫೋನಿನ ಬೆಲೆ ಇಳಿಕೆಯಾಗಿದೆ. ಅಮೆಜಾನ್‌ನಲ್ಲಿ ಶೇ.40 ರಷ್ಟು ರಿಯಾಯಿತಿ ಲಭ್ಯವಿದೆ. ಬ್ಯಾಂಕ್ ಕಾರ್ಡ್‌ಗಳ ಮೇಲೆ 2,000 ರೂ. ಹೆಚ್ಚುವರಿ ರಿಯಾಯಿತಿ ಸಹ ಪಡೆಯಬಹುದು. ಬನ್ನಿ, ಈ ಫೋನಿನ ಹೊಸ ಬೆಲೆ ಮತ್ತು ವಿಶೇಷತೆಗಳನ್ನು ತಿಳಿಯೋಣ.

ಹಾನರ್ 200 ಮೊಬೈಲ್ ಕಳೆದ ವರ್ಷ ಜುಲೈನಲ್ಲಿ ಬಿಡುಗಡೆಯಾಗಿತ್ತು. ಈ ಫೋನಿನಲ್ಲಿ 50 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಲಭ್ಯವಿದೆ. ಜೊತೆಗೆ 50 ಮೆಗಾಪಿಕ್ಸೆಲ್ ಟ್ರಿಪಲ್ ಕ್ಯಾಮೆರಾ ಸೆಟಪ್ ಹೊಂದಿದೆ. ಇದು ಕ್ವಾಲ್ಕಾಮ್‌ನ ಸ್ನಾಪ್‌ಡ್ರಾಗನ್ 7 ಜೆನ್ 3 ಪ್ರೊಸೆಸರ್‌ನಲ್ಲಿ ಕೆಲಸ ಮಾಡುತ್ತದೆ. ಈ ಫೋನಿನಲ್ಲಿ 6.7 ಡಿಸ್ಪ್ಲೇ ಇದೆ. ಜೊತೆಗೆ 12GB RAM + 512GB ಸ್ಟೋರೇಜ್, 5200mAh ಬ್ಯಾಟರಿ ಮತ್ತು 100W ಫಾಸ್ಟ್ ಚಾರ್ಜಿಂಗ್ ಸಹ ಒಳಗೊಂಡಿದೆ. ಪ್ರಸ್ತುತ ಈ ಮೊಬೈಲ್ ಬರೋಬ್ಬರಿ 11,001 ರೂ. ಕಡಿಮೆ ಬೆಲೆಯಲ್ಲಿ ಮಾರಾಟವಾಗುತ್ತಿದೆ.

15000 ಬೆಲೆ ಕುಸಿತ! 50MP ಸೆಲ್ಫಿ ಕ್ಯಾಮೆರಾ, 512GB ಸ್ಟೋರೇಜ್.. ಯಾವ ಫೋನ್?

ಹಾನರ್ 200 5G ವೈಶಿಷ್ಟ್ಯಗಳು

ಡಿಸ್ಪ್ಲೇ ಹೇಗಿದೆ

ಹಾನರ್ 200 5G ಸ್ಮಾರ್ಟ್‌ಫೋನ್ 6.7 ಇಂಚಿನ 1.5K ಕರ್ವ್ ಓಎಲ್‌ಇಡಿ ಡಿಸ್ಪ್ಲೇ ಹೊಂದಿದೆ. ಇದು 1200 x 2664 ಪಿಕ್ಸೆಲ್‌ ರೆಸಲ್ಯೂಶನ್, 120Hz ರಿಫ್ರೆಶ್ ದರ, 4000 ನಿಟ್ಸ್‌ ಗರಿಷ್ಠ ಬ್ರೈಟ್‌ನೆಸ್ ಬೆಂಬಲ ಹೊಂದಿದೆ. ಇದು ಫಿಂಗರ್‌ಪ್ರಿಂಟ್ ಡಿಸ್ಪ್ಲೇ ಸಹ ಹೊಂದಿದೆ. ಬಯೋಮೆಟ್ರಿಕ್ಸ್‌ಗಾಗಿ ಸ್ಕ್ಯಾನರ್ ಕೂಡ ಇದೆ.

ಪ್ರೊಸೆಸರ್ ಯಾವುದು?

ಹಾನರ್ 200 ಮೊಬೈಲ್ ಸ್ನಾಪ್‌ಡ್ರಾಗನ್ 7 ಜೆನ್ 3 ಆಕ್ಟಾಕೋರ್ ಪ್ರೊಸೆಸರ್‌ನೊಂದಿಗೆ ಬಿಡುಗಡೆ ಮಾಡಿದೆ. ಈ ಪ್ರೊಸೆಸರ್ ಅನ್ನು 4 ನ್ಯಾನೋಮೀಟರ್ ಫ್ಯಾಬ್ರಿಕೇಶನ್‌ಗಳಲ್ಲಿ ನಿರ್ಮಿಸಲಾಗಿದೆ. ಇದು ಗ್ರಾಫಿಕ್ಸ್‌ಗಾಗಿ, ಅಡ್ರಿನೊ 720 ಜಿಪಿಯು ಸಹ ಹೊಂದಿದೆ. ಈ ಸ್ಮಾರ್ಟ್‌ಫೋನ್ ಆಂಡ್ರಾಯ್ಡ್ 14 ಆಧಾರಿತ ಮ್ಯಾಜಿಕ್ ಓಎಸ್ 8.0 ನಲ್ಲಿ ಕೆಲಸ ನಿರ್ವಹಿಸುತ್ತದೆ. ಇದು 12GB RAM ಮತ್ತು 512GB ಸ್ಟೋರೇಜ್ ಆಯ್ಕೆ ಹೊಂದಿದೆ.

ಟ್ರಿಪಲ್ ಕ್ಯಾಮೆರಾ ಸೆಟಪ್

ಹಾನರ್ 200 5G ಫೋನ್ ಟ್ರಿಪಲ್ ಕ್ಯಾಮೆರಾ ಸೆಟಪ್ ಹೊಂದಿದೆ. ಈ ಫೋನಿನಲ್ಲಿ OIS ಜೊತೆಗೆ 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಲಭ್ಯವಿದೆ. ಹಾಗೆಯೇ 12 ಮೆಗಾಪಿಕ್ಸೆಲ್ ದ್ವಿತೀಯ ಕ್ಯಾಮೆರಾ ಮತ್ತು 2.5x ಆಪ್ಟಿಕಲ್ ಜೂಮ್‌ನೊಂದಿಗೆ 5 ಮೆಗಾಪಿಕ್ಸೆಲ್ ತೃತೀಯ ಕ್ಯಾಮೆರಾ ಹೊಂದಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, ಈ ಫೋನ್ 50 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಒಳಗೊಂಡಿದೆ.

15000 ಬೆಲೆ ಕುಸಿತ! 50MP ಸೆಲ್ಫಿ ಕ್ಯಾಮೆರಾ, 512GB ಸ್ಟೋರೇಜ್.. ಯಾವ ಫೋನ್?

ದೊಡ್ಡ ಬ್ಯಾಟರಿ

ಹಾನರ್ 200 5G ಸ್ಮಾರ್ಟ್‌ಫೋನ್ 5200mAh ಸಾಮರ್ಥ್ಯದ ಬ್ಯಾಟರಿ ಹೊಂದಿದೆ. ಈ ಬ್ಯಾಟರಿಯನ್ನು 100W ವೇಗದ ಚಾರ್ಜಿಂಗ್ ಮತ್ತು 100W ವೇಗದ ವೈರ್ಡ್ ಚಾರ್ಜಿಂಗ್ ಸೌಲಭ್ಯ ಒದಗಿಸಲಾಗಿದೆ. ಈ ಫೋನ್‌ ಕನೆಕ್ಟಿವಿಟಿ ಆಯ್ಕೆಗಳಲ್ಲಿ ಇದು 5G, ವೈ-ಫೈ, ಎನ್‌ಎಫ್‌ಸಿ, ಬ್ಲೂಟೂತ್ v5.3, ಯುಎಸ್‌ಬಿ ಟೈಪ್ ಸಿ, ಸ್ಟೀರಿಯೋ ಸ್ಪೀಕರ್ ಮತ್ತು ಐಆರ್ ಬ್ಲಾಸ್ಟರ್ ಸೇರಿದಂತೆ ಹಲವು ಸೌಲಭ್ಯಗಳನ್ನು ಒಳಗೊಂಡಿದೆ.

ಹಾನರ್ 200 ಬೆಲೆ ಮತ್ತು ಆಫರ್‌ಗಳು

ಹಾನರ್ 200 5G ಮೊಬೈಲ್ 8GB + 256GB ಸ್ಟೋರೇಜ್‌ ರೂಪಾಂತರವನ್ನು 34,999 ರೂ.ಗೆ ಬಿಡುಗಡೆ ಮಾಡಲಾಗಿದೆ. ಪ್ರಸ್ತುತ ಶಾಪಿಂಗ್ ಸೈಟ್ ಅಮೆಜಾನ್‌ನಲ್ಲಿ 11,001 ರೂ.ಗಳ ಅಗ್ಗದ ಬೆಲೆಯಲ್ಲಿ ಮಾರಾಟವಾಗುತ್ತಿದೆ. ನೀವು ಈ 5G ಫೋನನ್ನು 23,998 ರೂ.ಗೆ ಖರೀದಿಸಬಹುದು. ಜೊತೆಗೆ ಅಮೆಜಾನ್‌ನಲ್ಲಿ 2,000 ರೂ.ಗಳ ರಿಯಾಯಿತಿ ಕೂಪನ್ ಸಹ ನೀಡುತ್ತಿದೆ.

ರಿಯಾಯಿತಿಯ ನಂತರ ಈ 5G ಫೋನನ್ನು 21,998 ರೂ.ಗೆ ಖರೀದಿಸಬಹುದು. ಈ ರಿಯಾಯಿತಿಯ ಲಾಭ ಪಡೆಯಲು ವಿಶೇಷ ಬ್ಯಾಂಕ್ ಅಥವಾ ಕ್ರೆಡಿಟ್ ಕಾರ್ಡ್‌ನ ಅಗತ್ಯವಿಲ್ಲ. ಇದಲ್ಲದೇ, ಅಮೆಜಾನ್‌ ಮೂಲಕ ಯಾವುದೇ ಹಾನರ್ ಸ್ಮಾರ್ಟ್‌ಫೋನ್ ಖರೀದಿಸಿದರೆ, ಎಲ್ಲಾ ಬ್ಯಾಂಕ್ ಕಾರ್ಡ್‌ಗಳ ಮೇಲೆ 2,000 ರೂ.ಗಳ ಹೆಚ್ಚುವರಿ ಡಿಸ್ಕೌಂಟ್ ಸಹ ಪಡೆಯಬಹುದು. ಈ ಹೆಚ್ಚುವರಿ ರಿಯಾಯಿತಿಯ ಬಳಿಕ ಹಾನರ್ 200 ಫೋನಿನ ಬೆಲೆ 19,998 ರೂ.ಗೆ ಇಳಿಕೆಯಾಗುತ್ತದೆ.

Best Mobiles in India

English summary
40 Percent Discount on Honor 200 5G With 50MP Selfie Camera in amazon sale: Check Price, Offers, Specs
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+