6000ಕ್ಕಿಂತ ಹೆಚ್ಚು ಡಿಸ್ಕೌಂಟ್! ಹೊಸ Realme GT7 Pro ಬೆಲೆ ಕುಸಿತ.. ಆಫರ್ ಏನಿದೆ?
ರಿಯಲ್‌ಮಿ ಸ್ಮಾರ್ಟ್‌ಫೋನ್‌ಗಳಿಗೆ ಭಾರತದಲ್ಲಿ ಹೆಚ್ಚು ಡಿಮ್ಯಾಂಡ್ ಇದೆ. ಕಂಪನಿಯು ಕಳೆದ ತಿಂಗಳು ರಿಯಲ್‌ಮಿ GT7 ಪ್ರೊ (Realme GT7 Pro) ಫೋನನ್ನು ಬಿಡುಗಡೆ ಮಾಡಿತ್ತು. ಇದು ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 8 ಎಲೈಟ್ ಪ್ರೊಸೆಸರ್‌ನಲ್ಲಿ ಬಿಡುಗಡೆಯಾದ ಭಾರತದ ಮೊದಲ ಮೊಬೈಲ್ ಆಗಿದೆ. ಪ್ರಸ್ತುತ, ಕಂಪನಿಯು ಈ ಫೋನಿನ ಬೆಲೆಯನ್ನು ಇಳಿಕೆ ಮಾಡಿದೆ. ಜೊತೆಗೆ ಸಖತ್ ಆಫರ್‌ಗಳನ್ನು ನೀಡುತ್ತಿದೆ. ನೀವು 6,000 ರೂ.ಗಿಂತ ಹೆಚ್ಚು ಉಳಿತಾಯ ಮಾಡಬಹುದು. ಬನ್ನಿ, ಈ ಫೋನಿನ ವಿಶೇಷತೆಗಳನ್ನು ತಿಳಿಯೋಣ.
ರಿಯಲ್‌ಮಿ GT7 ಪ್ರೊ ಮೊಬೈಲ್ 50 ಮೆಗಾಪಿಕ್ಸೆಲ್ ಟ್ರಿಪಲ್ ಕ್ಯಾಮೆರಾ ಹೊಂದಿದೆ. ಮೊದಲೇ ಹೇಳಿದಂತೆ ಇದು ಕ್ವಾಲ್ಕಾಮ್‌ನ ಸ್ನಾಪ್‌ಡ್ರಾಗನ್ 8 ಎಲೈಟ್ ಪ್ರೊಸೆಸರ್‌ನಲ್ಲಿ ಕೆಲಸ ಮಾಡುತ್ತದೆ. ಈ ಫೋನ್ 6.78 ಇಂಚಿನ ಡಿಸ್ಪ್ಲೇ ಹೊಂದಿದೆ. ಜೊತೆಗೆ 512GB ಸ್ಟೋರೇಜ್, 5800mAh ಬ್ಯಾಟರಿ ಮತ್ತು 120W ವೇಗದ ಚಾರ್ಜಿಂಗ್ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಇದು ಎರಡು ಸ್ಟೋರೇಜ್ ರೂಪಾಂತರಗಲ್ಲಿ ಮಾರಾಟವಾಗುತ್ತಿದೆ. ನೀವು ಮಾರ್ಸ್ ಆರೆಂಜ್ ಮತ್ತು ಗ್ಯಾಲಕ್ಸಿ ಗ್ರೇ ಬಣ್ಣಗಳಲ್ಲಿ ಖರೀದಿಸಬಹುದು. ಈ ಫೋನಿನ ಹೊಸ ಬೆಲೆ ತಿಳಿಯಲು ಮುಂದೆ ಓದಿ.

ರಿಯಲ್‌ಮಿ GT7 ಪ್ರೊ ವೈಶಿಷ್ಟ್ಯಗಳು
ಡಿಸ್ಪ್ಲೇ ಹೇಗಿದೆ
ರಿಯಲ್‌ಮಿ GT7 ಪ್ರೊ ಫೋನ್ 6.78 ಇಂಚಿನ ಡಿಸ್ಪ್ಲೇ ಹೊಂದಿದೆ. ಇದು 1.5K ಓಎಲ್‌ಇಡಿ ಪಂಚ್ ಹೋಲ್ ಡಿಸ್ಪ್ಲೇ ಆಗಿದೆ. ಈ ಡಿಸ್ಪ್ಲೇಯು 120Hz ರಿಫ್ರೆಶ್ ದರ, 2780 x 1264 ಪಿಕ್ಸೆಲ್‌ಗಳ ರೆಸಲ್ಯೂಶನ್ ಮತ್ತು 6500 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಬೆಂಬಲ ಹೊಂದಿದೆ. ಇದು ಇನ್ ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸಾರ್ ತಂತ್ರಜ್ಞಾನ ಹೊಂದಿದೆ.
ಪ್ರೊಸೆಸರ್ ಯಾವುದು
ರಿಯಲ್‌ಮಿ GT7 ಪ್ರೊ ಸ್ಮಾರ್ಟ್‌ಫೋನ್ ಕ್ವಾಲ್ಕಾಮ್‌ನ ಸ್ನಾಪ್‌ಡ್ರಾಗನ್ 8 ಎಲೈಟ್ ಪ್ರೊಸೆಸರ್ ಹೊಂದಿದೆ. ಈ ಫೋನ್ ಆಂಡ್ರಾಯ್ಡ್ 15 ಆಧಾರಿತ ಒರಿಜಿನ್ ಓಎಸ್‌ನಲ್ಲಿ ಕೆಲಸ ಮಾಡುತ್ತದೆ. ಈ ಸ್ಮಾರ್ಟ್‌ಫೋನ್ 12GB RAM + 256GB ಮತ್ತು 16GB RAM + 512GB ಸ್ಟೋರೇಜ್ ಹೊಂದಿದೆ. ಇದು ಡೈನಾಮಿಕ್ RAM ತಂತ್ರಜ್ಞಾನವನ್ನು ಹೊಂದಿದೆ. ನೀವು ಭೌತಿಕ RAM ಜೊತೆಗೆ 28GB RAM ಬಳಸಬಹುದು.
ಟ್ರಿಪಲ್ ಕ್ಯಾಮೆರಾ ಸೆಟಪ್
ರಿಯಲ್‌ಮಿ GT7 ಪ್ರೊ ಮೊಬೈಲ್ ಟ್ರಿಪಲ್ ಕ್ಯಾಮೆರಾ ಸೆಟಪ್ ಹೊಂದಿದೆ. ಈ ಫೋನಿನಲ್ಲಿ OIS ಜೊತೆಗೆ 50 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ ಲಭ್ಯವಿದೆ. ಜೊತೆಗೆ 50 ಮೆಗಾಪಿಕ್ಸೆಲ್ ದ್ವಿತೀಯ ಕ್ಯಾಮೆರಾ ಮತ್ತು 8 ಮೆಗಾಪಿಕ್ಸೆಲ್ ತೃತೀಯ ಕ್ಯಾಮೆರಾ ಹೊಂದಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, ಈ ಫೋನ್ 16 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಒಳಗೊಂಡಿದೆ.
ದೊಡ್ಡ ಬ್ಯಾಟರಿ
ರಿಯಲ್‌ಮಿ GT7 ಪ್ರೊ ಫೋನ್ 5800mAh ಸಾಮರ್ಥ್ಯದ ಬ್ಯಾಟರಿ ಹೊಂದಿದೆ. ಈ ದೊಡ್ಡ ಬ್ಯಾಟರಿಯನ್ನು ಚಾರ್ಜ್ ಮಾಡಲು, 120W ವೇಗದ ಚಾರ್ಜಿಂಗ್ ಸೌಲಭ್ಯ ಒದಗಿಸಲಾಗಿದೆ. ಈ ಸ್ಮಾರ್ಟ್‌ಫೋನ್ ನೀರು ಮತ್ತು ಧೂಳಿನ ವಿರುದ್ಧ ರಕ್ಷಣೆಗಾಗಿ IP69 ರೇಟಿಂಗ್ ಪಡೆದಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ ಇದು ವೈ-ಫೈ, ಬ್ಲೂಟೂತ್ 5.4 ಮತ್ತು ಎನ್‌ಎಫ್‌ಸಿ ಸೇರಿದಂತೆ ಹಲವು ಸೌಲಭ್ಯಗಳನ್ನು ಒಳಗೊಂಡಿದೆ.

ರಿಯಲ್‌ಮಿ GT7 ಪ್ರೊ ಬೆಲೆ ಮತ್ತು ಆಫರ್‌ಗಳು
12GB RAM + 256GB ಸ್ಟೋರೇಜ್ ಬೆಲೆ = 59,999 ರೂ.
ಆಫರ್ ಬೆಲೆ ಬೆಲೆ = 54,999 ರೂ.
16GB RAM + 512GB ಸ್ಟೋರೇಜ್ ಬೆಲೆ = 65,999 ರೂ.
ಆಫರ್ ಬೆಲೆ ಬೆಲೆ = 59,999 ರೂ.
ರಿಯಲ್‌ಮಿ GT7 ಪ್ರೊ ಫೋನಿನ ಎರಡು ಸ್ಟೋರೇಜ್ ರೂಪಾಂತರಗಳನ್ನು ರಿಯಾಯಿತಿ ಬೆಲೆಯಲ್ಲಿ ಮಾರಾಟವಾಗುತ್ತಿದೆ. ಫೋನಿನ 12GB RAM ರೂಪಾಂತರದ ಮೇಲೆ 5,000 ರೂ. ಮತ್ತು 16GB RAM ರೂಪಾಂತರದ ಮೇಲೆ 6,000 ರೂ. ಡಿಸ್ಕೌಂಟ್ ನೀಡಲಾಗುತ್ತಿದೆ. ಈ ಎರಡೂ ರೂಪಾಂತರಗಳನ್ನು ಕ್ರಮವಾಗಿ 59,999 ರೂ. ಮತ್ತು 54,999 ರೂ.ಗೆ ಖರೀದಿಸಬಹುದು. ಈ ರಿಯಾಯಿತಿಯ ಜೊತೆಗೆ, 1200 ರೂ. ಹೆಚ್ಚುವರಿ ರಿಯಾಯಿತಿ ಸಹ ಲಭ್ಯವಿದೆ.
ಇದು ಆಫ್‌ಲೈನ್ ಗರಿಷ್ಠ ಸ್ಲ್ಯಾಬ್ ಆಫರ್ ಆಗಿದೆ. ನೀವು ಫೋನಿನ 12GB ರೂಪಾಂತರದ ಖರೀದಿ ಮೇಲೆ 6,200 ರೂ. ಮತ್ತು 16GB ಮಾದರಿಯ ಮೇಲೆ 7,200 ರೂ. ರಿಯಾಯಿತಿ ಪಡೆಯಬಹುದು. ಈ ಆಫರ್ ಸೀಮಿತ ಅವಧಿಗೆ ಮಾತ್ರ ನೀಡಲಾಗಿದೆ. ಈ ಫೋನನ್ನು ಆಫ್‌ಲೈನ್ ಮಾರುಕಟ್ಟೆ, ಚಿಲ್ಲರೆ ಅಂಗಡಿಗಳು ಮತ್ತು ಮೊಬೈಲ್ ಅಂಗಡಿಗಳಲ್ಲಿ ಅಗ್ಗವಾಗಿ ಖರೀದಿಸಬಹುದು.


Click it and Unblock the Notifications








