Home
Deal of the day

ಬಿಗ್ ಡಿಸ್ಕೌಂಟ್! 7000 ದೊಡ್ಡ ಉಳಿತಾಯ.. ಈ ಆಫರ್‌ ಕೆಲವೇ ದಿನ ಮಾತ್ರ.. ಖರೀದಿಗೆ ಮುಗಿಬಿದ್ದ ಗ್ರಾಹಕರು!

ರಿಯಲ್‌ಮಿ ಪ್ರಿಯರಿಗೆ ಇದಕ್ಕಿಂತ ಹೆಚ್ಚೇನು ಬೇಕಿಲ್ಲ! ನೀವು 7,000 ರೂ.ಗಳ ಭಾರೀ ರಿಯಾಯಿತಿಯೊಂದಿಗೆ ಇತ್ತೀಚೆಗೆ ಬಿಡುಗಡೆಯಾದ ಫೋನನ್ನು ಖರೀದಿಸಬಹುದು. ಹೌದು, ರಿಯಲ್‌ಮಿ ತನ್ನ ಶಕ್ತಿಶಾಲಿ ಸ್ಮಾರ್ಟ್‌ಫೋನ್‌ ರಿಯಲ್‌ಮಿ 13 ಪ್ರೊ+ 5G (Realme 13 Pro+ 5G) ಬೆಲೆಯನ್ನು 2,000 ರೂ. ಇಳಿಕೆ ಮಾಡಿತ್ತು. ಪ್ರಸ್ತುತ, ಪ್ರೇಮಿಗಳ ದಿನಾಚರಣೆ ಪ್ರಯುಕ್ತ ತನ್ನ ಅಭಿಮಾನಿಗಳಿಗೆ ಉಡುಗೊರೆ ನೀಡಿದೆ. ಈ ಫೋನ್ ಖರೀದಿ ಮೇಲೆ 7,000 ರೂ.ಗಳ ಡಿಸ್ಕೌಂಟ್ ನೀಡಲಾಗುತ್ತಿದೆ. ಈ ಆಫರ್‌ ಸೀಮಿತ ಅವಧಿಗೆ ಮಾತ್ರ ಲಭ್ಯವಿರುತ್ತದೆ. ಈ ಫೋನಿನ ಹೊಸ ಬೆಲೆ ಮತ್ತು ವಿಶೇಷತೆಗಳನ್ನು ತಿಳಿಯಲು ಮುಂದೆ ಓದಿ.

ರಿಯಲ್‌ಮಿ 13 ಪ್ರೊ+ 5G ಫೋನ್ ಸ್ನಾಪ್‌ಡ್ರಾಗನ್ 7S ಜೆನ್ 2 ಪ್ರೊಸೆಸರ್‌ನಲ್ಲಿ ಕೆಲಸ ಮಾಡುತ್ತದೆ. ಈ ಫೋನಿನಲ್ಲಿ 50 ಮೆಗಾಪಿಕ್ಸೆಲ್ ಟ್ರಿಪಲ್ ಕ್ಯಾಮೆರಾ ಲಭ್ಯವಿದೆ. ಹಾಗೆಯೇ 32 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಹೊಂದಿದೆ. ಈ ಮೊಬೈಲ್ 6.7 ಇಂಚಿನ ಡಿಸ್ಪ್ಲೇ ಹೊಂದಿದೆ. ಜೊತೆಗೆ12GB RAM + 512GB ಸ್ಟೋರೇಜ್, 5200mAh ಬ್ಯಾಟರಿ ಮತ್ತು 80W ಸೂಪರ್‌ವೂಕ್ ಚಾರ್ಜಿಂಗ್ ಒಳಗೊಂಡಿದೆ. ಪ್ರಸ್ತುತ, ಕಂಪನಿಯು ಫೋನಿನ ಮೂರು ಸ್ಟೋರೇಜ್‌ ರೂಪಾಂತರಗಳ ಮೇಲೆ ರಿಯಾಯಿತಿ ಘೋಷಿಸಿದೆ. ನೀವು ಬಿಡುಗಡೆ ಬೆಲೆಗಿಂತ ಕಡಿಮೆಗೆ ಖರೀದಿಸಬಹುದು.

Realme 13 Pro+ ಬೆಲೆ ಇಳಿಕೆ; 7000 ರಿಯಾಯಿತಿ.. ಮಸ್ತ್ ಫೀಚರ್ಸ್‌

ರಿಯಲ್‌ಮಿ 13 ಪ್ರೊ+ 5G ಹೊಸ ಬೆಲೆ ಮತ್ತು ಆಫರ್‌

* 8GB RAM + 256GB ಸ್ಟೋರೇಜ್ = 30,999 ರೂ.
ಆಫರ್‌ ಬೆಲೆ = 24,999 ರೂ. (6,000 ಬೆಲೆ ಇಳಿಕೆ)

* 12GB RAM + 256GB ಸ್ಟೋರೇಜ್ = 32,999 ರೂ.
ಆಫರ್‌ ಬೆಲೆ = 25,999 ರೂ. (7,000 ಬೆಲೆ ಇಳಿಕೆ)

* 12GB RAM + 512GB ಸ್ಟೋರೇಜ್ = 34,999 ರೂ.
ಆಫರ್‌ ಬೆಲೆ = 28,999 ರೂ. (6,000 ಬೆಲೆ ಇಳಿಕೆ)

ರಿಯಲ್‌ಮಿ 13 ಪ್ರೊ+ 5G ಫೋನ್ ಮೂರು ಸ್ಟೋರೇಜ್‌ ಆಯ್ಕೆಗಳಲ್ಲಿ ಮಾರಾಟವಾಗುತ್ತಿದೆ. ಕಂಪನಿಯು ಎಲ್ಲಾ ರೂಪಾಂತರಗಳ ಮೇಲೆ ಭಾರೀ ರಿಯಾಯಿತಿ ಘೋಷಿಸಿದೆ. ನೀವು ಈ ಫೋನಿನ 12GB + 256GB ಸ್ಟೋರೇಜ್ ರೂಪಾಂತರದ ಮೇಲೆ 7,000 ರೂ.ಗಳ ಡಿಸ್ಕೌಂಟ್ ಪಡೆಯಬಹುದು. ಹಾಗೆಯೇ 8GB + 256GB ಮತ್ತು 12GB + 512GB ರೂಪಾಂತರದ ಫೋನ್‌ಗಳನ್ನು 6,000 ರೂ.ಗಳ ರಿಯಾಯಿತಿಯೊಂದಿಗೆ ಖರೀದಿಸಬಹುದು. ಈ ಆಫರ್‌ ಸೀಮಿತ ಅವಧಿಗೆ ಲಭ್ಯವಿದ್ದು, ಈ ವಾರ ಕೊನೆಗೊಳ್ಳುತ್ತದೆ. ಈ ಫೋನನ್ನು ಮೊನೆಟ್ ಗೋಲ್ಡ್ ಮತ್ತು ಎಮರಾಲ್ಡ್ ಗ್ರೀನ್ ಬಣ್ಣಗಳಲ್ಲಿ ಖರೀದಿಸಬಹುದು.

ರಿಯಲ್‌ಮಿ 13 ಪ್ರೊ+ 5G ವೈಶಿಷ್ಟ್ಯಗಳು

ಅಮೋಲೆಡ್ ಡಿಸ್ಪ್ಲೇ

ರಿಯಲ್‌ಮಿ 13 ಪ್ರೊ+ 5G ಫೋನ್ 6.7 ಇಂಚಿನ ಪೂರ್ಣ ಎಚ್‌ಡಿ ಪ್ಲಸ್ ಡಿಸ್ಪ್ಲೇ ಹೊಂದಿದೆ. ಇದು ಪಂಚ್ ಹೋಲ್ ಶೈಲಿಯ ಅಮೋಲೆಡ್ ಡಿಸ್ಪ್ಲೇ ಆಗಿದೆ. ಈ ಡಿಸ್ಪ್ಲೇಯು 2412 x 1080 ಪಿಕ್ಸೆಲ್ ರೆಸಲ್ಯೂಶನ್‌ನೊಂದಿಗೆ ಬರುತ್ತದೆ. ಹಾಗೆಯೇ 120Hz ರಿಫ್ರೆಶ್ ದರ ಮತ್ತು 2,000 ನಿಟ್ಸ್‌ ಗರಿಷ್ಠ ಬ್ರೈಟ್‌ನೆಸ್ ಬೆಂಬಲ ಪಡೆದಿದೆ. ಈ ಮೊಬೈಲ್ ಇನ್ ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸಂವೇದಕ ಹೊಂದಿದೆ. ಈ ಡಿಸ್ಪ್ಲೇಯು ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 7i ರಕ್ಷಣೆಯನ್ನು ಹೊಂದಿದೆ.

ಕ್ವಾಲ್ಕಾಮ್‌ ಪ್ರೊಸೆಸರ್

ರಿಯಲ್‌ಮಿ 13 ಪ್ರೊ+ 5G ಸ್ಮಾರ್ಟ್‌ಫೋನ್ ಕ್ವಾಲ್ಕಾಮ್‌ನ ಸ್ನಾಪ್‌ಡ್ರಾಗನ್ 7S ಜೆನ್ 2 ಪ್ರೊಸೆಸರ್ ಹೊಂದಿದೆ. ಇದನ್ನು 4 ನ್ಯಾನೋಮೀಟರ್ ಫ್ಯಾಬ್ರಿಕೇಶನ್‌ಗಳಲ್ಲಿ ನಿರ್ಮಿಸಲಾಗಿದೆ. ಈ ಮೊಬೈಲ್ ಆಂಡ್ರಾಯ್ಡ್‌ 14 ಆಧಾರಿತ ರಿಯಲ್‌ಮಿ ಯುಐ 5.0 ಓಎಸ್‌ನಲ್ಲಿ ಕೆಲಸ ನಿರ್ವಹಿಸುತ್ತದೆ. ಗ್ರಾಫಿಕ್ಸ್‌ಗಾಗಿ, ಇದು ಅಡ್ರಿನೊ 710 ಜಿಪಿಯು ಹೊಂದಿದೆ.

Realme 13 Pro+ ಬೆಲೆ ಇಳಿಕೆ; 7000 ರಿಯಾಯಿತಿ.. ಮಸ್ತ್ ಫೀಚರ್ಸ್‌

50MP + 50MP + 32MP ಕ್ಯಾಮೆರಾಗಳು

ರಿಯಲ್‌ಮಿ 13 ಪ್ರೊ+ 5G ಮೊಬೈಲ್ ಟ್ರಿಪಲ್ ಕ್ಯಾಮೆರಾ ಸೆಟಪ್ ಹೊಂದಿದೆ. ಇದು ಹೈಪರ್‌ ಇಮೇಜ್ + ತಂತ್ರಜ್ಞಾನ ಹೊಂದಿದೆ. ಈ ಫೋನಿನಲ್ಲಿ 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಲಭ್ಯವಿದೆ. ಜೊತೆಗೆ 50 ಮೆಗಾಪಿಕ್ಸೆಲ್ ದ್ವಿತೀಯ (ಪೆರಿಸ್ಕೋಪ್ ಲೆನ್ಸ್) ಕ್ಯಾಮೆರಾ ಮತ್ತು 8 ಮೆಗಾಪಿಕ್ಸೆಲ್ ತೃತೀಯ (ಅಲ್ಟ್ರಾ ವೈಡ್ ಆಂಗಲ್ ಲೆನ್ಸ್‌) ಕ್ಯಾಮೆರಾ ಹೊಂದಿದೆ. ಈ ಫೋನಿನಲ್ಲಿ ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, 32 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಇದೆ.

ದೊಡ್ಡ ಬ್ಯಾಟರಿ ಬ್ಯಾಕಪ್

ರಿಯಲ್‌ಮಿ 13 ಪ್ರೊ+ 5G ಫೋನ್ 5200mAh ಸಾಮರ್ಥ್ಯದ ಬ್ಯಾಟರಿ ಹೊಂದಿದೆ. ಈ ಬ್ಯಾಟರಿಯನ್ನು ಚಾರ್ಜ್ ಮಾಡಲು, 80W ಸೂಪರ್‌ವೂಕ್ ವೇಗದ ಚಾರ್ಜಿಂಗ್ ಸೌಲಭ್ಯ ಒದಗಿಸಲಾಗಿದೆ. ಈ ಮೊಬೈಲ್ ನೀರು ಮತ್ತು ಧೂಳಿನ ವಿರುದ್ಧ ರಕ್ಷಣೆಗಾಗಿ IP65 ರೇಟಿಂಗ್ ಪಡೆದಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ ಇದು 3.5 ಎಂಎಂ ಆಡಿಯೊ ಜಾಕ್, ಸ್ಟಿರಿಯೊ ಸ್ಪೀಕರ್‌ಗಳು, 5G, ಡ್ಯುಯಲ್ 4G VoLTE, ವೈ-ಫೈ 6, ಬ್ಲೂಟೂತ್ 5.4, ಜಿಪಿಎಸ್, ಯುಎಸ್‌ಬಿ ಟೈಪ್ ಸಿ ಸೇರಿದಂತೆ ಹಲವು ಸೌಲಭ್ಯಗಳನ್ನು ಒಳಗೊಂಡಿದೆ.

Best Mobiles in India

English summary
7000 discount on Realme 13 Pro+ 5G with 12GB RAM: check new Price, offers and more Details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+