Home
Deal of the day

8000 ಬೆಲೆ ಇಳಿಕೆ..! 50MP + 32MP ಕ್ಯಾಮೆರಾ.. 512GB ಸ್ಟೋರೇಜ್.. ಯಾವ ಫೋನ್? ಖರೀದಿ ಎಲ್ಲಿ, ಹೇಗೆ?

ರಿಯಲ್‌ಮಿ ಕಳೆದ ವರ್ಷ ಭಾರತದಲ್ಲಿ 32MP ಸೆಲ್ಫಿ ಕ್ಯಾಮೆರಾ ಹೊಂದಿರುವ ಸೊಗಸಾದ 5G ಮೊಬೈಲ್ ಬಿಡುಗಡೆ ಮಾಡಿತ್ತು. ಇದು ಸ್ಟೈಲಿಶ್ ಲುಕ್ ಮತ್ತು ಉತ್ತಮ ಗುಣಮಟ್ಟದ ವೈಶಿಷ್ಟ್ಯಗಳನ್ನು ಹೊಂದಿದೆ. ಪ್ರಸ್ತುತ, ಕಂಪನಿಯು ಈ ಫೋನಿನ ಬೆಲೆಯನ್ನು ದಿಢೀರನೆ ಇಳಿಕೆ ಮಾಡಿದೆ. ಹೌದು, ನೀವು ರಿಯಲ್‌ಮಿ 13 ಪ್ರೊ 5G (realme 13 Pro 5G) ಮೊಬೈಲ್ ಅನ್ನು 8,000 ರೂ.ಗಳ ರಿಯಾಯಿತಿಯೊಂದಿಗೆ ಖರೀದಿಸಬಹುದು. ಬನ್ನಿ, ನೀವು ರಿಯಲ್‌ಮಿ 13 ಪ್ರೊ 5G ಫೋನನ್ನು ಎಲ್ಲಿ ಮತ್ತು ಹೇಗೆ ಅಗ್ಗದ ದರದಲ್ಲಿ ಕೊಳ್ಳಬಹುದು ಎಂಬುವುದನ್ನು ತಿಳಿಯೋಣ.

ರಿಯಲ್‌ಮಿ 13 ಪ್ರೊ 5G ಮೊಬೈಲ್ ಎರಡು ಸ್ಟೋರೇಜ್ ಆಯ್ಕೆಗಲ್ಲಿ ಮಾರಾಟವಾಗುತ್ತಿದೆ. ಈ ಫೋನಿನ ವಿಶೇಷತೆಗಳೆಂದರೆ, ಇದು 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಮತ್ತು 32 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಹೊಂದಿದೆ. ಈ ಫೋನಿನಲ್ಲಿ 6.7 ಇಂಚಿನ ಡಿಸ್ಪ್ಲೇಯನ್ನು ಅಳವಡಿಸಲಾಗಿದೆ. ಈ ಮೊಬೈಲ್ ಕ್ವಾಲ್ಕಾಮ್‌ನ ಸ್ನಾಪ್‌ಡ್ರಾಗನ್ 7s ಜೆನ್ 2 ಪ್ರೊಸೆಸರ್ ಹೊಂದಿದೆ. ಇದರೊಂದಿಗೆ 5200mAh ಬ್ಯಾಟರಿ, 45W ವೇಗದ ಚಾರ್ಜಿಂಗ್ ಚಾರ್ಜ್, 512GB ಸ್ಟೋರೇಜ್ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಪ್ರಸ್ತುತ, ಇದು ಬಿಡುಗಡೆ ಬೆಲೆಗಿಂತ ಕಡಿಮೆಗೆ ಮಾರಾಟವಾಗುತ್ತಿದೆ.

8000 ಅಗ್ಗ..! 50MP + 32MP ಕ್ಯಾಮೆರಾ.. 512GB ಸ್ಟೋರೇಜ್.. ಯಾವ ಫೋನ್?

ರಿಯಲ್‌ಮಿ 13 ಪ್ರೊ 5G ಬೆಲೆ ಮತ್ತು ರಿಯಾಯಿತಿ

12GB RAM + 512GB ಸ್ಟೋರೇಜ್ = 31,999 ರೂ.
ರಿಯಾಯಿತಿ ಬೆಲೆ = 23,999 ರೂ.

8GB RAM + 128GB ಸ್ಟೋರೇಜ್ = 26,999 ರೂ.
ರಿಯಾಯಿತಿ ಬೆಲೆ = 19,999 ರೂ.

ರಿಯಲ್‌ಮಿ 13 ಪ್ರೊ 5G ಫೋನಿನ ಮೂಲ ಮಾದರಿಯನ್ನು 26,999 ರೂ.ಗೆ ಬಿಡುಗಡೆ ಮಾಡಲಾಗಿತ್ತು. ಪ್ರಸ್ತುತ, ಆನ್‌ಲೈನ್ ಶಾಪಿಂಗ್ ಸೈಟ್ ಅಮೆಜಾನ್‌ನಲ್ಲಿ 19,999 ರೂ.ಗೆ ಮಾರಾಟ ಮಾಡಲಾಗುತ್ತಿದೆ. ನೀವು 7,000 ರೂ.ಗಳ ರಿಯಾಯಿತಿಯ ಲಾಭ ಪಡೆಯಬಹುದು. ಅದೇ ರೀತಿ, 12GB RAM ಮತ್ತು 512GB ಸ್ಟೋರೇಜ್ ರೂಪಾಂತರವು 23,999 ರೂ.ಗೆ ಲಭ್ಯವಿದೆ. ಈ ಫೋನಿನ ಖರೀದಿ ಮೇಲೆ 8,000 ರೂ. ಉಳಿತಾಯ ಮಾಡಬಹುದು. ನೀವು ಈ ಮೊಬೈಲ್‌ ಅನ್ನು ಮೋನೆಟ್ ಪರ್ಪಲ್ ಬಣ್ಣದಲ್ಲಿ ಕೊಳ್ಳಬಹುದು. ಈ ಆಫರ್ ಎಲ್ಲಾ ಗ್ರಾಹಕರಿಗೆ ಲಭ್ಯವಿದೆ. ಇದಕ್ಕೆ ಯಾವುದೇ ಕೂಪನ್ ರಿಯಾಯಿತಿ ಅಥವಾ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಅಗತ್ಯವಿಲ್ಲ.

ರಿಯಲ್‌ಮಿ 13 ಪ್ರೊ 5G ವೈಶಿಷ್ಟ್ಯಗಳು

8000 ಅಗ್ಗ..! 50MP + 32MP ಕ್ಯಾಮೆರಾ.. 512GB ಸ್ಟೋರೇಜ್.. ಯಾವ ಫೋನ್?

ರಿಯಲ್‌ಮಿ 13 ಪ್ರೊ 5G ಡಿಸ್ಪ್ಲೇ

ರಿಯಲ್‌ಮಿ 13 ಪ್ರೊ 5G ಮೊಬೈಲ್ 6.7 ಇಂಚಿನ ಫುಲ್ ಎಚ್‌ಡಿ ಪ್ಲಸ್ ಅಮೋಲೆಡ್ ಡಿಸ್ಪ್ಲೇ ಹೊಂದಿದೆ. ಇದು 2,412 x 1,080 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಬೆಂಬಲದೊಂದಿಗೆ ಬರುತ್ತದೆ. ಈ ಡಿಸ್ಪ್ಲೇಯು 120Hz ರಿಫ್ರೆಶ್ ದರ, 2,000 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಹೊಂದಿದೆ. ಇದರೊಂದಿಗೆ ಇನ್ ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸಾರ್ ಸಹ ಲಭ್ಯವಿದೆ. ಈ ಫೋನಿನ ಡಿಸ್‌ಪ್ಲೇ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 7i ರಕ್ಷಣೆ ಸಹ ಹೊಂದಿದೆ.

ರಿಯಲ್‌ಮಿ 13 ಪ್ರೊ 5G ಪ್ರೊಸೆಸರ್

ರಿಯಲ್‌ಮಿ 13 ಪ್ರೊ 5G ಸ್ಮಾರ್ಟ್‌ಫೋನ್ ಕ್ವಾಲ್ಕಾಮ್‌ನ ಸ್ನಾಪ್‌ಡ್ರಾಗನ್ 7S ಜೆನ್ 2 ಪ್ರೊಸೆಸರ್ ಹೊಂದಿದೆ. ಇದನ್ನು 4 ನ್ಯಾನೊಮೀಟರ್ ಫ್ಯಾಬ್ರಿಕೇಶನ್‌ಗಳ ಆಧಾರದ ಮೇಲೆ ನಿರ್ಮಿಸಲಾಗಿದೆ. ಈ ಮೊಬೈಲ್ ಆಂಡ್ರಾಯ್ಡ್ 14 ಆಧಾರಿತ Realme UI 5.0 ಜೊತೆಗೆ ಕೆಲಸ ಮಾಡುತ್ತದೆ. ಗ್ರಾಫಿಕ್ಸ್‌ಗಾಗಿ, ಈ ಫೋನ್ ಅಡ್ರಿನೊ 710 ಜಿಪಿಯು ಸಹ ಹೊಂದಿದೆ.

ರಿಯಲ್‌ಮಿ 13 ಪ್ರೊ 5G ಕ್ಯಾಮೆರಾ

ರಿಯಲ್‌ಮಿ 13 ಪ್ರೊ 5G ಫೋನ್ ಟ್ರಿಪಲ್ ಕ್ಯಾಮೆರಾ ಸೆಟಪ್ ಹೊಂದಿದೆ. ಈ ಫೋನಿನಲ್ಲಿ OIS ಜೊತೆಗೆ 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಲಭ್ಯವಿದೆ. ಇದರೊಂದಿಗೆ ಎರಡನೇ ಕ್ಯಾಮೆರಾವು 8 ಮೆಗಾಪಿಕ್ಸೆಲ್ ಅಲ್ಟ್ರಾ ವೈಡ್ ಆಂಗಲ್ ಲೆನ್ಸ್‌ ಹೊಂದಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, ಈ ಫೋನಿನಲ್ಲಿ 32 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಅಳವಡಿಸಲಾಗಿದೆ.

ರಿಯಲ್‌ಮಿ 13 ಪ್ರೊ 5G ಬ್ಯಾಟರಿ

ರಿಯಲ್‌ಮಿ 13 ಪ್ರೊ 5G ಮೊಬೈಲ್ 5200mAh ಸಾಮರ್ಥ್ಯದ ಬ್ಯಾಟರಿ ಹೊಂದಿದೆ. ಈ ಬ್ಯಾಟರಿಯನ್ನು ಚಾರ್ಜ್ ಮಾಡಲು, ಈ ಸ್ಮಾರ್ಟ್‌ಫೋನ್ 45W ವೇಗದ ಚಾರ್ಜಿಂಗ್ ತಂತ್ರಜ್ಞಾನವನ್ನು ಹೊಂದಿದೆ.

Best Mobiles in India

English summary
8000 discount on realme 13 Pro 5G with 12GB RAM: check new price, offers, specifications and more details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+