Home
Deal of the day

ಮತ್ತೆ ಸಿಗಲ್ಲ..! 7.5% ರಿಯಾಯಿತಿ.. 5% ಕ್ಯಾಶ್‌ಬ್ಯಾಕ್.. ಈ ಫೋನ್‌ಗಳಿಗೆ ಬೊಂಬಾಟ್ ಆಫರ್.. ಇಲ್ಲಿದೆ ಪಟ್ಟಿ

ಅಮೆಜಾನ್ ತನ್ನ ಗ್ರಾಹಕರಿಗಾಗಿ ಸ್ಪೆಷಲ್ ಸೇಲ್ ನಡೆಸುತ್ತಿದೆ. ನೀವು ಭಾರೀ ರಿಯಾಯಿತಿ ದರದಲ್ಲಿ ನಿಮ್ಮ ನೆಚ್ಚಿನ ಸ್ಮಾರ್ಟ್‌ಫೋನ್‌ಗಳನ್ನು ಖರೀದಿಸಬಹುದು. ಹೌದು, ಅಮೆಜಾನ್ ಎಲೆಕ್ಟ್ರಾನಿಕ್ಸ್ ಪ್ರೀಮಿಯರ್ ಲೀಗ್ ಮಾರಾಟ (Amazon Electronics Premier League Sale) ಈಗಾಗಲೇ ಶುರುವಾಗಿದೆ. ಈ ಮಾರಾಟದಲ್ಲಿ ಸ್ಮಾರ್ಟ್‌ಫೋನ್‌ಗಳು, ಲ್ಯಾಪ್‌ಟಾಪ್‌ಗಳು, ಸ್ಮಾರ್ಟ್ ಟಿವಿಗಳು, ಮನೆ ಮತ್ತು ಅಡುಗೆ ಸಲಕರಣೆಗಳು ಸೇರಿದಂತೆ ಹಲವು ಗ್ಯಾಜೆಟ್‌ಗಳ ಮೇಲೆ ಸಖತ್ ಡಿಸ್ಕೌಂಟ್ ನೀಡಲಾಗಿದೆ. ಈ ಮಾರಾಟದಲ್ಲಿ ನೀವು ಆಪಲ್, ಸ್ಯಾಮ್‌ಸಂಗ್, ರೆಡ್ಮಿ, ಒನ್‌ಪ್ಲಸ್, ಐಕ್ಯೂ ಮತ್ತು ರಿಯಲ್‌ಮಿ ಸೇರಿದಂತೆ ಪ್ರಸಿದ್ಧ ಕಂಪನಿಗಳ ಮೊಬೈಲ್‌ಗಳನ್ನು ಕಡಿಮೆ ಬೆಲೆಗೆ ಖರೀದಿಸಬಹುದು.

ಈ ಸೇಲ್‌ನಲ್ಲಿ ಆಫರ್ ಹೊರತಾಗಿ, ಅಮೆಜಾನ್ ಐಸಿಐಸಿಐ ಮತ್ತು ಆಕ್ಸಿಸ್ ಬ್ಯಾಂಕ್ ಕಾರ್ಡ್‌ದಾರರಿಗೆ ಹೆಚ್ಚುವರಿ ಶೇ.7.5 ರಷ್ಟು ಡಿಸ್ಕೌಂಟ್ ನೀಡಲಾಗುವುದು. ಅಮೆಜಾನ್ ಪೇ ಐಸಿಐಸಿಐ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಬಳಕೆದಾರರು ಶೇ.5 ರಷ್ಟು ಕ್ಯಾಶ್‌ಬ್ಯಾಕ್ ಲಾಭ ಪಡೆಯಬಹುದು. ಅಮೆಜಾನ್ ಪೇ ಲೇಟರ್ ಬಳಸುವ ಗ್ರಾಹಕರು 60,000 ರೂ.ಗಳ ವರೆಗೆ ಕ್ರೆಡಿಟ್ ಪಡೆಯಬಹುದು. ನಿಮ್ಮ ಫೋನನ್ನು ಅಪ್‌ಗ್ರೇಡ್ ಮಾಡಲು ಬಯಸಿದರೆ, ಈ ಮಾರಾಟದಲ್ಲಿ ಶಾಪಿಂಗ್ ಮಾಡಬಹುದು. ನಿಮಗೆ ಅಪ್‌ಗ್ರೇಡ್ ಬೋನಸ್ ಸಹ ಲಭ್ಯವಿದೆ. ನಿಮ್ಮ ನೆಚ್ಚಿನ ಫೋನನ್ನು ಕಡಿಮೆ ಬೆಲೆಯಲ್ಲಿ ಬುಕ್ ಮಾಡಬಹುದು. ಈ ಸೇಲ್‌ನಲ್ಲಿ ಲಭ್ಯವಿರುವ ಕೆಲವು ಅತ್ಯುತ್ತಮ ಸ್ಮಾರ್ಟ್‌ಫೋನ್ ಡೀಲ್‌ಗಳು ಇಲ್ಲಿವೆ.

Amazon: ಈ ಫೋನ್‌ಗಳಿಗೆ ಬಂಪರ್ ಆಫರ್.. ಬೆಲೆ, ರಿಯಾಯಿತಿ ಎಷ್ಟು? ಇಲ್ಲಿದೆ ಮಾಹಿತಿ

ಒನ್‌ಪ್ಲಸ್ 13R = 44,999 ರೂ.

ರಿಯಾಯಿತಿ ಬೆಲೆ = 42,998 ರೂ. (ಬ್ಯಾಂಕ್ ಮತ್ತು ಕೂಪನ್ ರಿಯಾಯಿತಿ)

ಒನ್‌ಪ್ಲಸ್ 13 R (OnePlus 13R) ಮೊಬೈಲ್ 6.78 ಇಂಚಿನ ಅಮೋಲೆಡ್ ಡಿಸ್ಪ್ಲೇ ಹೊಂದಿದೆ. ಇದು 120Hz ರಿಫ್ರೆಶ್ ದರ, 2780 × 1264 ಪಿಕ್ಸೆಲ್ ರೆಸಲ್ಯೂಶನ್ ಮತ್ತು 4500 ನಿಟ್ಸ್‌ ಗರಿಷ್ಠ ಬ್ರೈಟ್‌ನೆಸ್ ಬೆಂಬಲ ಹೊಂದಿದೆ. ಈ ಡಿಸ್ಪ್ಲೇಯು ಗೊರಿಲ್ಲಾ ಗ್ಲಾಸ್ 7i ರಕ್ಷಣೆ ಪಡೆದಿದೆ. ಈ ಫೋನ್ ಕ್ವಾಲ್ಕಾಮ್‌ನ ಸ್ನಾಪ್‌ಡ್ರಾಗನ್ 8 ಜೆನ್ 3 ಪ್ರೊಸೆಸರ್‌ ಹೊಂದಿದೆ. ಇದು ಗ್ರಾಫಿಕ್ಸ್‌ಗಾಗಿ, ಅಡ್ರಿನೊ 750 ಜಿಪಿಯು ಸಹ ಹೊಂದಿದೆ. ಈ ಸ್ಮಾರ್ಟ್‌ಫೋನ್ ಆಂಡ್ರಾಯ್ಡ್ 15 ಆಧಾರಿತ ಆಕ್ಸಿಜನ್ ಓಎಸ್ 15.0 ಜೊತೆಗೆ ಕೆಲಸ ಮಾಡುತ್ತದೆ. ಈ ಸ್ಮಾರ್ಟ್‌ಫೋನ್ 12GB RAM ಮತ್ತು16GB RAM ಹೊಂದಿದೆ. ಜೊತೆಗೆ 256GB ಮತ್ತು 512GB ಸ್ಟೋರೇಜ್‌ ಆಯ್ಕೆ ಲಭ್ಯವಿದೆ.

ಒನ್‌ಪ್ಲಸ್ 13R ಸ್ಮಾರ್ಟ್‌ಫೋನ್ ಟ್ರಿಪಲ್ ಕ್ಯಾಮೆರಾ ಸೆಟಪ್ ಹೊಂದಿದೆ. ಈ ಫೋನಿನಲ್ಲಿ 50 ಮೆಗಾಪಿಕ್ಸೆಲ್ ಸೋನಿ ಮುಖ್ಯ ಕ್ಯಾಮೆರಾ ಲಭ್ಯವಿದೆ. ಇದು ಎಲ್ಇಡಿ ಫ್ಲಾಶ್‌ನೊಂದಿಗೆ ಬರುತ್ತದೆ. ಹಾಗೆಯೇ 8 ಮೆಗಾಪಿಕ್ಸೆಲ್ ದ್ವಿತೀಯ ಕ್ಯಾಮೆರಾ ಮತ್ತು 50 ಮೆಗಾಪಿಕ್ಸೆಲ್ ತೃತೀಯ ಕ್ಯಾಮೆರಾ ಇದೆ. ಈ ಫೋನಿನಲ್ಲಿ ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, 16 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಲಭ್ಯವಿದೆ. ಈ ಮೊಬೈಲ್ 6000mAh ಸಾಮರ್ಥ್ಯದ ಬ್ಯಾಟರಿ ಹೊಂದಿದೆ. ಈ ಬ್ಯಾಟರಿಯನ್ನು ಚಾರ್ಜ್ ಮಾಡಲು, 80W ವೇಗದ ಚಾರ್ಜಿಂಗ್ ಸೌಲಭ್ಯ ಒದಗಿಸಲಾಗಿದೆ.

Take a Poll

ರಿಯಲ್‌ಮಿ GT 6T 5G = 44,999 ರೂ.

ಆಪರ್ ಬೆಲೆ = 42,998 ರೂ.

ರಿಯಲ್‌ಮಿ GT 6T 5G (Realme GT 6T 5G) ಫೋನ್ 6.78 ಇಂಚಿನ ಅಮೋಲೆಡ್ ಡಿಸ್ಪ್ಲೇ ಹೊಂದಿದೆ. ಇದು 2780 x 1264 ಪಿಕ್ಸೆಲ್ ರೆಸಲ್ಯೂಶನ್, 120Hz ರಿಫ್ರೆಶ್ ದರ ಮತ್ತು 6000 ನಿಟ್ಸ್‌ ಗರಿಷ್ಠ ಬ್ರೈಟ್‌ನೆಸ್ ಬೆಂಬಲ ಹೊಂದಿದೆ. ಈ ಡಿಸ್ಪ್ಲೇಯು ಕಾರ್ನಿಂಗ್ ಗ್ಲಾಸ್ ವಿಕ್ಟಸ್ 2 ರಕ್ಷಣೆ ಹೊಂದಿದೆ. ಈ ಸ್ಮಾರ್ಟ್‌ಫೋನ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 7+ ಜೆನ್ 3 ಪ್ರೊಸೆಸರ್ ಹೊಂದಿದೆ. ಈ ಸ್ಮಾರ್ಟ್‌ಫೋನ್ ಆಂಡ್ರಾಯ್ಡ್ 14 ಓಎಸ್ ಆಧಾರಿತ ರಿಯಲ್‌ಮಿ UI 5 ನೊಂದಿಗೆ ಕೆಲಸ ನಿರ್ವಹಿಸುತ್ತದೆ. ಇದು ಗ್ರಾಫಿಕ್ಸ್‌ಗಾಗಿ, ಅಡ್ರಿನೊ 732 ಜಿಪಿಯು ಸಹ ಹೊಂದಿದೆ. ಈ ಫೋನಿನಲ್ಲಿ 12GB RAM ಮತ್ತು 512GB ಸ್ಟೋರೇಜ್‌ ಆಯ್ಕೆ ಲಭ್ಯವಿದೆ.

ರಿಯಲ್‌ಮಿ GT 6T 5G ಮೊಬೈಲ್ ಡ್ಯುಯಲ್ ಕ್ಯಾಮೆರಾ ಸೆಟಪ್ ಹೊಂದಿದೆ. ಈ ಫೋನಿನಲ್ಲಿ OIS ಜೊತೆಗೆ 50 ಮೆಗಾಪಿಕ್ಸೆಲ್ ಸೋನಿ ಮುಖ್ಯ ಕ್ಯಾಮೆರಾ ಲಭ್ಯವಿದೆ. ಹಾಗೆಯೇ 8 ಮೆಗಾಪಿಕ್ಸೆಲ್ ದ್ವಿತೀಯ ಕ್ಯಾಮೆರಾ ಹೊಂದಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, ಈ ಫೋನಿನಲ್ಲಿ 32 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಇದೆ. ಈ ರಿಯಲ್‌ಮಿ ಫೋನ್ 5500mAh ಸಾಮರ್ಥ್ಯದ ಬ್ಯಾಟರಿ ಹೊಂದಿದೆ. ಈ ಬ್ಯಾಟರಿಯನ್ನು ಚಾರ್ಜ್ ಮಾಡಲು, 120W ಫಾಸ್ಟ್ ಚಾರ್ಜಿಂಗ್ ಸೌಲಭ್ಯ ಒದಗಿಸಲಾಗಿದೆ. ನೀವು ಕೇವಲ 10 ನಿಮಿಷಗಳಲ್ಲಿ ಶೇ.50 ರಷ್ಟು ಬ್ಯಾಟರಿಯನ್ನು ಚಾರ್ಜ್ ಮಾಡಬಹುದು ಎಂದು ರಿಯಲ್‌ಮಿ ಹೇಳಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ ಇದು 5G, ಬ್ಲೂಟೂತ್ 5.2, ವೈ-ಫೈ 6, ಜಿಪಿಎಸ್, ಯುಎಸ್‌ಬಿ 2.0 ಸಿ ಪೋರ್ಟ್ ಸೇರಿದಂತೆ ಹಲವು ಸೌಲಭ್ಯಗಳನ್ನು ಒಳಗೊಂಡಿದೆ.

ಸ್ಯಾಮ್‌ಸಂಗ್ ಗ್ಯಾಲಕ್ಸಿ M16 5G = 17,499 ರೂ.

ಆಫರ್ ಬೆಲೆ = 13,999 ರೂ.

ಸ್ಯಾಮ್‌ಸಂಗ್ ಗ್ಯಾಲಕ್ಸಿ M16 5G (Samsung Galaxy M16 5G) ಮೊಬೈಲ್‌ 6.7 ಇಂಚಿನ ಸೂಪರ್ ಅಲೋಲೆಡ್ ಡಿಸ್ಪ್ಲೇ ಹೊಂದಿದೆ. ಈ ಡಿಸ್ಪ್ಲೇಯು ಫುಲ್ ಹೆಚ್‌ಡಿ ಪ್ಲಸ್ ರೆಸಲ್ಯೂಶನ್ ಮತ್ತು 120Hz ರಿಫ್ರೆಶ್ ದರದ ಬೆಂಬಲದೊಂದಿಗೆ ಬರುತ್ತದೆ. ಈ ಫೋನ್ ನಯವಾದ ವಿನ್ಯಾಸದೊಂದಿಗೆ ಬರುತ್ತದೆ. ಈ ಫೋನ್‌ ಮೀಡಿಯಾ ಟೆಕ್ ಡೈಮೆನ್ಸಿಟಿ 6300 ಪ್ರೊಸೆಸರ್ ಹೊಂದಿದೆ. ಗ್ರಾಫಿಕ್ಸ್‌ಗಾಗಿ ಈ ಮೊಬೈಲ್‌, ARM ಮಾಲಿ G57 MC2 ಜಿಪಿಯು ಸಹ ಹೊಂದಿದೆ. ಇದು 4GB RAM + 128GB ಆಂತರಿಕ ಸ್ಟೋರೇಜ್ ಆಯ್ಕೆ ಒಳಗೊಂಡಿದೆ.

ಸ್ಯಾಮ್‌ಸಂಗ್ ಗ್ಯಾಲಕ್ಸಿ M16 5G ಸ್ಮಾರ್ಟ್‌ಫೋನ್ ಟ್ರಿಪಲ್ ಕ್ಯಾಮೆರಾ ಸೆಟಪ್ ಹೊಂದಿದೆ. ಈ ಫೋನಿನಲ್ಲಿ 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಲಭ್ಯವಿದೆ. ಹಾಗೆಯೇ 5 ಮೆಗಾಪಿಕ್ಸೆಲ್ ದ್ವಿತೀಯ (ಅಲ್ಟ್ರಾ ವೈಡ್) ಕ್ಯಾಮೆರಾ ಮತ್ತು 2 ಮೆಗಾಪಿಕ್ಸೆಲ್ ತೃತೀಯ (ಮ್ಯಾಕ್ರೋ) ಕ್ಯಾಮೆರಾ ಹೊಂದಿದೆ. ಇದಲ್ಲದೆ, ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, ಈ ಫೋನಿನಲ್ಲಿ 13 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಇದೆ. ಈ ಸ್ಯಾಮ್‌ಸಂಗ್ ಮೊಬೈಲ್ 5000mAh ಸಾಮರ್ಥ್ಯದ ಬ್ಯಾಟರಿ ಹೊಂದಿದೆ. ಇದನ್ನು ಚಾರ್ಜ್ ಮಾಡಲು, 25W ವೈರ್ಡ್ ಫಾಸ್ಟ್ ಚಾರ್ಜಿಂಗ್ ಸೌಲಭ್ಯ ಒದಗಿಸಲಾಗಿದೆ.

ಐಕ್ಯೂ 13 = 61,999 ರೂ.

ಡಿಸ್ಕೌಂಟ್ ಬೆಲೆ = 54,998 ರೂ.

ಐಕ್ಯೂ 13 (iQOO 13) ಮೊಬೈಲ್ 6.82 ಇಂಚಿನ 2K ಅಮೋಲೆಡ್ ಡಿಸ್ಪ್ಲೇ ಹೊಂದಿದೆ. ಇದು 8T LTPO ಪಂಚ್ ಹೋಲ್ ಡಿಸ್ಪ್ಲೇ ಆಗಿದೆ. ಡಿಸ್ಪ್ಲೇಯು 1440 x 3168 ಪಿಕ್ಸೆಲ್‌ ರೆಸಲ್ಯೂಶನ್, 144Hz ರಿಫ್ರೆಶ್ ದರ, 4500 ನಿಟ್ಸ್‌ ಬ್ರೈಟ್‌ನೆಸ್ ಬೆಂಬಲ ಪಡೆದಿದೆ. ಇದು ಇನ್ ಡಿಸ್ಪ್ಲೇ ಅಲ್ಟ್ರಾಸಾನಿಕ್ ಫಿಂಗರ್‌ಪ್ರಿಂಟ್ ಸೆನ್ಸಾರ್ ಹೊಂದಿದೆ. ಈ ಫೋನ್ ಕ್ವಾಲ್ಕಾಮ್‌ನ ಸ್ನಾಪ್‌ಡ್ರಾಗನ್ 8 ಎಲೈಟ್ ಪ್ರೊಸೆಸರ್‌ ಹೊಂದಿದೆ. ಇದು ಆಂಡ್ರಾಯ್ಡ್‌ 15 ಆಪರೇಟಿಂಗ್ ಸಿಸ್ಟಮ್‌ನಲ್ಲಿ ಕೆಲಸ ಮಾಡುತ್ತದೆ. ಈ ಫೋನ್ 12GB ಮತ್ತು 16GB ವರ್ಚುವಲ್ RAM ಹೊಂದಿದೆ.

ಐಕ್ಯೂ 13 ಸ್ಮಾರ್ಟ್‌ಫೋನ್ ಟ್ರಿಪಲ್ ಕ್ಯಾಮೆರಾ ಸೆಟಪ್ ಹೊಂದಿದೆ. ಫೋನಿನಲ್ಲಿ 50 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ ಲಭ್ಯವಿದೆ. ಹಾಗೆಯೇ 50 ಮೆಗಾಪಿಕ್ಸೆಲ್ ದ್ವಿತೀಯ ಕ್ಯಾಮೆರಾ ಮತ್ತು 50 ಮೆಗಾಪಿಕ್ಸೆಲ್ ತೃತೀಯ ಕ್ಯಾಮೆರಾ ಹೊಂದಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, ಈ ಮೊಬೈಲ್ 32 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಹೊಂದಿದೆ. ಈ ಮೊಬೈಲ್ 6000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಈ ಬ್ಯಾಟರಿಯನ್ನು ಚಾರ್ಜ್ ಮಾಡಲು, 120W ವೇಗದ ಚಾರ್ಜಿಂಗ್ ಸೌಲಭ್ಯ ಒದಗಿಸಲಾಗಿದೆ. ಕೇವಲ 10 ನಿಮಿಷದಲ್ಲಿ ಶೇ.40ರಷ್ಟು ಚಾರ್ಜ್ ಮಾಡಬಹುದು ಮತ್ತು 30 ನಿಮಿಷದಲ್ಲಿ ಈ ಮೊಬೈಲ್ ಸಂಪೂರ್ಣವಾಗಿ ಚಾರ್ಜ್ ಆಗಲಿದೆ.

ರೆಡ್ಮಿ ನೋಟ್ 13 ಪ್ರೊ 5G = 19,833 ರೂ.

ರಿಯಾಯಿತಿ ಬೆಲೆ = 18,930 ರೂ.

ರೆಡ್ಮಿ ನೋಟ್ 13 ಪ್ರೊ 5G (Redmi Note 13 Pro 5G) ಫೋನ್‌ 6.67 ಇಂಚಿನ ಅಮೋಲೆಡ್ ಡಿಸ್ಪ್ಲೇ ಹೊಂದಿದೆ. ಇದು 1220 x 2712 ಪಿಕ್ಸೆಲ್‌ ರೆಸಲ್ಯೂಶನ್‌, 1800 ನಿಟ್ಸ್‌ ಗರಿಷ್ಠ ಬ್ರೈಟ್‌ನೆಸ್‌ ಬೆಂಬಲ ಪಡೆದಿದೆ. ಈ ಡಿಸ್ಪ್ಲೇಯು ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ವಿಕ್ಟಸ್ ರಕ್ಷಣೆ ಹೊಂದಿದೆ. ಈ ರೆಡ್ಮಿ ಮೊಬೈಲ್ ಸ್ನಾಪ್‌ಡ್ರಾಗನ್ 7s ಜೆನ್ 2 ಪ್ರೊಸೆಸರ್‌ ಹೊಂದಿದೆ. ಈ ಫೋನ್ ಆಂಡ್ರಾಯ್ಡ್ 13 ಆಧಾರಿತ ಹೈಪರ್ ಓಎಸ್‌ನೊಂದಿಗೆ ಕೆಲಸ ನಿರ್ವಹಿಸಲಿದೆ. ಈ ಸ್ಮಾರ್ಟ್‌ಫೋನ್ 8GB RAM ಮತ್ತು 128GB ಸ್ಟೋರೇಜ್ ಹೊಂದಿದೆ. ನೀವು ಮೈಕ್ರೋ ಎಸ್‌ಡಿ ಕಾರ್ಡ್ ಮೂಲಕ ಸ್ಟೋರೇಜ್‌ ಹೆಚ್ಚಿಸಬಹುದು.

ರೆಡ್ಮಿ ನೋಟ್‌ 13 5G ಸ್ಮಾರ್ಟ್‌ಫೋನ್‌ ಟ್ರಿಪಲ್‌ ರಿಯರ್‌ ಕ್ಯಾಮೆರಾ ಸೆಟಪ್‌ ಹೊಂದಿದೆ. ಈ ಫೋನಿನಲ್ಲಿ 200 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಲಭ್ಯವಿದೆ. 8 ಮೆಗಾಪಿಕ್ಸೆಲ್‌ ದ್ವಿತೀಯ ಕ್ಯಾಮೆರಾ ಮತ್ತು 2 ಮೆಗಾಪಿಕ್ಸೆಲ್ ತೃತೀಯ ಕ್ಯಾಮೆರಾ ಒಳಗೊಂಡಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, ಈ ಫೋನ್ 16 ಮೆಗಾಪಿಕ್ಸೆಲ್ ಕ್ಯಾಮೆರಾ ಹೊಂದಿದೆ. ಈ ರೆಡ್ಮಿ 5G ಮೊಬೈಲ್ 5100mAh ಸಾಮರ್ಥ್ಯದ ಬ್ಯಾಟರಿ ಹೊಂದಿದೆ. ಈ ಬ್ಯಾಟರಿಯನ್ನು ಚಾರ್ಜ್ ಮಾಡಲು, 67W ವೇಗದ ಚಾರ್ಜಿಂಗ್ ಸೌಲಭ್ಯ ಹೊಂದಿದೆ. ಈ ಮೊಬೈಲ್ ಧೂಳು ಮತ್ತು ನೀರಿನ ಪ್ರತಿರೋಧಕ್ಕಾಗಿ IP54 ರೇಟಿಂಗ್‌ ಪಡೆದಿದೆ. ಇದು ಇನ್ ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸಂವೇದಕ ಹೊಂದಿದೆ.

Best Mobiles in India

English summary
Amazon Electronics Premier League Sale: massive discounts on OnePlus 13R, Realme GT 6T 5G, Samsung Galaxy M16 5G, iQOO 13 and more
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+