Home
Deal of the day

ಅಮೆಜಾನ್‌ ಸೇಲ್‌ನಲ್ಲಿ ಗೇಮಿಂಗ್‌ ಲ್ಯಾಪ್‌ಟಾಪ್‌ಗಳಿಗೆ ಬಿಗ್‌ ಡಿಸ್ಕೌಂಟ್‌!

ಇತ್ತಿಚಿನ ದಿನಗಳಲ್ಲಿ ಆನ್‌ಲೈನ್‌ ಶಾಪಿಂಗ್‌ ಮಾಡುವವರ ಸಂಖ್ಯೆ ಸಾಕಷ್ಟು ಬೆಳವಣಿಗೆಯನ್ನು ಸಾಧಿಸಿದೆ. ಹೆಚ್ಚಿನ ಜನರು ಮನೆಯಲ್ಲಿಯೇ ಕುಳಿತು ತಮಗೆ ಬೇಕಾದ ವಸ್ತುಗಳನ್ನ ಆನ್‌ಲೈನ್‌ ಆರ್ಡರ್‌ ಮೂಲಕ ತರಿಸಿಕೊಳ್ಳುತ್ತಿದ್ದಾರೆ. ಇನ್ನು ಆನ್‌ಲೈನ್‌ ಶಾಪಿಂಗ್‌ ಪ್ರಿಯರನ್ನು ಸೆಳೆಯುವುದಕ್ಕಾಗಿಯೇ ಇ-ಕಾಮರ್ಸ್‌ ಪ್ಲಾಟ್‌ಫಾರ್ಮ್‌ಗಳು ಕೂಡ ವಿಶೇಷ ಆಪರ್‌ಗಳನ್ನು ನೀಡುತ್ತಾ ಬಂದಿವೆ. ಇದರಲ್ಲಿ ಅಮೆಜಾನ್‌ ಆನ್‌ಲೈನ್‌ ಶಾಪಿಂಗ್‌ ಪ್ರಿಯರ ನೆಚ್ಚಿನ ತಾಣ ಎನಿಸಿಕೊಂಡಿದೆ. ವಿಶೇಷ ದಿನಗಳಲ್ಲಿ ಮಾತ್ರವಲ್ಲದೆ ಸಾಮಾನ್ಯ ದಿನಗಳಲ್ಲಿ ಕೂಡ ಅಮೆಜಾನ್‌ ಒಂದಿಲ್ಲೊಂದು ಆಫರ್‌ ನೀಡಲಿದೆ.

ಅಮೆಜಾನ್‌ ಸೇಲ್‌ನಲ್ಲಿ ಗೇಮಿಂಗ್‌ ಲ್ಯಾಪ್‌ಟಾಪ್‌ಗಳಿಗೆ ಬಿಗ್‌ ಡಿಸ್ಕೌಂಟ್‌!

ಹೌದು, ಅಮೆಜಾನ್‌ ತಾಣದಲ್ಲಿ ವಿಶೇಷ ಡಿಸ್ಕೌಂಟ್‌ ಪಡೆದುಕೊಳ್ಳಬಹುದು. ಅದರಲ್ಲೂ ವಿಶೇಷ ಸೇಲ್‌ಗಳಲ್ಲಿ ಭರ್ಜರಿ ರಿಯಾಯಿತಿ ದೊರೆಯಲಿದೆ. ಸದ್ಯ ಅಮೆಜಾನ್‌ ಪ್ಲಾಟ್‌ಫಾರ್ಮ್‌ನಲ್ಲಿ ಗ್ರ್ಯಾಂಡ್‌ ಗೇಮಿಂಗ್‌ ಡೇ ಸೇಲ್‌ 2022 ಆಯೋಜಿಸಿದ್ದು, ಗೇಮಿಂಗ್‌ ಡಿವೈಸ್‌ಗಳ ಮೇಲೆ ಬಿಗ್‌ ಆಫರ್‌ ನೀಡುತ್ತಿದೆ. ಗೇಮಿಂಗ್ ಲ್ಯಾಪ್‌ಟಾಪ್‌ಗಳು, ಗೇಮಿಂಗ್ ಡೆಸ್ಕ್‌ಟಾಪ್‌ಗಳು, ಗೇಮಿಂಗ್ ಮಾನಿಟರ್‌ಗಳ ಮೇಲೆ ಅನೇಕ ಆಫರ್‌ಗಳನ್ನು ಪಡೆದುಕೊಳ್ಳಬಹುದಾಗಿದೆ. ಹಾಗಾದ್ರೆ ಅಮೆಜಾನ್ ಗ್ರ್ಯಾಂಡ್ ಗೇಮಿಂಗ್ ಡೇ ಸೇಲ್ 2022ನಲ್ಲಿ ನೀವು ಆಫರ್‌ನಲ್ಲಿ ಖರೀದಿಸಬಹುದಾದ ಗೇಮಿಂಗ್‌ ಡಿವೈಸ್‌ಗಳ ಬಗ್ಗೆ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ವಿಕ್ಟಸ್ ಹೆಚ್‌ಪಿ ರೈಜೆನ್‌ 7-5800H ಗೇಮಿಂಗ್‌ ಲ್ಯಾಪ್‌ಟಾಪ್‌
ವಿಕ್ಟಸ್ ಹೆಚ್‌ಪಿ ರೈಜೆನ್‌ 7-5800H ಗೇಮಿಂಗ್‌ ಲ್ಯಾಪ್‌ಟಾಪ್‌ 16.1 ಇಂಚಿನ ಫುಲ್‌ ಹೆಚ್‌ಡಿ ಡಿಸ್‌ಪ್ಲೇ ಹೊಂದಿದೆ. ಈ ಡಿಸ್‌ಪ್ಲೇ IPS, ಮೈಕ್ರೋ-ಎಡ್ಜ್, ಆಂಟಿ-ಗ್ಲೇರ್, ಲೋ ಬ್ಲೂ ಲೈಟ್, 300 ನಿಟ್ಸ್‌ ಬ್ರೈಟ್‌ನೆಸ್‌ ಅನ್ನು ಹೊಂದಿದೆ. ಇದು 5ನೇ ತಲೆಮಾರಿನ AMD ರೈಜೆನ್ 7 5800H ಪ್ರೊಸೆಸರ್‌ ಬಲವನ್ನು ಪಡೆದಿದೆ. ಹಾಗೆಯೇ 16GB RAM ಮತ್ತು 512GB ಇಂಟರ್‌ ಸ್ಟೋರೇಜ್‌ ಸಾಮರ್ಥ್ಯವನ್ನು ಹೊಂದಿದೆ. ಇದು RTX 3050 ಗ್ರಾಫಿಕ್ಸ್ ಒಳಗೊಂಡಿದ್ದು, ಈ ಲ್ಯಾಪ್‌ಟಾಪ್‌ ಗೇಮಿಂಗ್‌ ಪ್ರಿಯರಿಗೆ ಸೂಕ್ತವಾಗಿದೆ.

ಆಸುಸ್‌ ಟಫ್‌ ಗೇಮಿಂಗ್ F15 ಲ್ಯಾಪ್‌ಟಾಪ್
ಆಸುಸ್‌ ಟಫ್‌ ಗೇಮಿಂಗ್ F15 ಲ್ಯಾಪ್‌ಟಾಪ್ 15.6 ಇಂಚಿನ ಫುಲ್‌ಹೆಚ್‌ಡಿ ಡಿಸ್‌ಪ್ಲೇ ಹೊಂದಿದೆ. ಇನ್ನು ಈ ಡಿಸ್‌ಪ್ಲೇ 45% NTSC ಜೊತೆಗೆ ಆಂಟಿ-ಗ್ಲೇರ್ IPS-ಲೆವೆಲ್ ಪ್ಯಾನಲ್ ಹೊಂದಿದ್ದು, 144Hz ರಿಫ್ರೆಶ್‌ ರೇಟ್‌ ಅನ್ನು ಒಳಗೊಂಡಿದೆ. ಇದು ಇಂಟೆಲ್ ಕೋರ್ i5-10300H ಪ್ರೊಸೆಸರ್‌ ಬಲವನ್ನು ಪಡೆದಿದೆ. ಈ ಲ್ಯಾಪ್‌ಟಾಪ್‌ ಜಿಪೋರ್ಸ್‌ GTX 1650 4GB GDDR6 ಗ್ರಾಫಿಕ್ಸ್ ಅನ್ನು ಒಳಗೊಂಡಿದೆ. ಹಾಗೆಯೇ 8GB RAM ಮತ್ತು 512GB ಇಂಟರ್‌ ಸ್ಟೋರೇಜ್‌ ಅನ್ನು ಹೊಂದಿದೆ.

MSI GF75 ಥಿನ್ ಲ್ಯಾಪ್‌ಟಾಪ್‌
MSI GF75 ಥಿನ್ ಲ್ಯಾಪ್‌ಟಾಪ್‌ ಅಮೆಜಾನ್‌ ಪ್ಲಾಟ್‌ಫಾರ್ಮ್‌ನಲ್ಲಿ ವಿಶೇಷ ರಿಯಾಯಿತಿ ಪಡೆದುಕೊಂಡಿದೆ. ಇದು 17.3 ಇಂಚಿನ ಫುಲ್‌ ಹೆಚ್‌ಡಿ IPS ಲೆವೆಲ್ ಡಿಸ್‌ಪ್ಲೇ ಹೊಂದಿದೆ. ಈ ಡಿಸ್‌ಪ್ಲೇ 144Hz ರಿಪ್ರೇಶ್‌ ರೇಟ್‌ ಹೊಂದಿದೆ. ಇನ್ನು ಈ ಲ್ಯಾಪ್‌ಟಾಪ್ ಇಂಟೆಲ್‌ i5-10300H ಪ್ರೊಸೆಸರ್‌ ಹೊಂದಿದ್ದು, ವಿಂಡೋಸ್‌ 10 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಹಾಗೆಯೇ 8GB ಮತ್ತು 512GB ಇಂಟರ್‌ ಸ್ಟೋರೇಜ್‌ ಬಲವನ್ನು ಪಡೆದುಕೊಂಡಿದೆ. ಇದು ಟೈಪ್-C USB3.2 Gen1, 3x ಟೈಪ್-A USB3.2 Gen1, HDMI ಪೋರ್ಟ್‌ಗಳನ್ನು ಒಳಗೊಂಡಿದೆ. ಇನ್ನು ಈ ಲ್ಯಾಪ್‌ಟಾಪ್ MSI ನಿಂದ 2 ವರ್ಷಗಳ ಕ್ಯಾರಿ-ಇನ್ ವಾರಂಟಿಯೊಂದಿಗೆ ಬರುತ್ತದೆ.

ಲೆನೊವೊ ಲೀಜನ್‌ 5 AMD ರೈಜೆನ್‌ 5 4600H
ಈ ಲ್ಯಾಪ್‌ಟಾಪ್‌ 15.6 ಇಂಚಿನ ಫುಲ್‌ ಹೆಚ್‌ಡಿ ಗೇಮಿಂಗ್ ಲ್ಯಾಪ್‌ಟಾಪ್ ಆಗಿದೆ. ಇದು ಅಮೆಜಾನ್‌ ಗ್ರ್ಯಾಂಡ್‌ ಗೇಮಿಂಗ್‌ ಸೇಲ್‌ 2022 ರಲ್ಲಿ 31% ರಿಯಾಯಿತಿಯಲ್ಲಿ ಲಭ್ಯವಿದೆ. ಈ ಲ್ಯಾಪ್‌ಟಾಪ್‌ 4ನೇ ತಲೆಮಾರಿನ AMD ರೈಜೆನ್ 5 (4600H) ಪ್ರೊಸೆಸರ್‌ ವೇಗವನ್ನು ಹೊಂದಿದ್ದು, ವಿಂಡೋಸ್‌ 10 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಹಾಗೆಯೇ 8GB RAM ಮತ್ತು 16GB ಇಂಟರ್‌ ಸ್ಟೋರೇಜ್‌ ಹೊಂದಿದೆ.

English summary
Amazon Grand Gaming Days Sale 2022: best Offers On Gaming laptops
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+