Home
Deal of the day

ಸ್ವಾತಂತ್ರ್ಯೋತ್ಸವದ ಗಿಫ್ಟ್..! POCO X6 5G ಫೋನಿನ ಬೆಲೆ ಇಳಿಕೆ.. ಸಸ್ತಾ ಬೆಲೆಗೆ ಲಭ್ಯ!

ಇ ಕಾಮರ್ಸ್ ವೆಬ್‌ಸೈಟ್ ಅಮೇಜಾನ್‌ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ 'ಅಮೆಜಾನ್ ಗ್ರೇಟ್ ಫ್ರೀಡಮ್ ಫೆಸ್ಟಿವಲ್ ಸೇಲ್ 2024' (Amazon Great Freedom Festival Sale) ಪ್ರಾರಂಭಿಸಿದೆ. ಈ ವಿಶೇಷ ಸೇಲ್‌ನಲ್ಲಿ ಹಲವು ಪ್ರಮುಖ ಸಂಸ್ಥೆಗಳ ಮೊಬೈಲ್‌ಗಳ ಮೇಲೆ ಬಂಪರ್ ಆಫರ್‌ ಘೋಷಿಸಲಾಗಿದೆ. ಅದರಂತೆ, ಪೊಕೋ ಕಂಪನಿಯ ಪೊಕೊ X6 (POCO X6) ಫೋನ್‌ ಭಾರೀ ಡಿಸ್ಕೌಂಟ್‌ನೊಂದಿಗೆ ಖರೀದಿಗೆ ಲಭ್ಯವಿದೆ. ಈ ಪೊಕೋ ಫೋನಿನ ಹೊಸ ಬೆಲೆ, ಯಾವೆಲ್ಲಾ ಆಫರ್‌ಗಳಿವೆ ಮತ್ತು ಈ ಫೋನಿನ ವಿಶೇಷತೆಗಳನ್ನು ತಿಳಿಯಲು ಮುಂದೆ ಓದಿ.

ಹೌದು, ಪ್ರಸ್ತುತ ಅಮೇಜಾನ್‌ನಲ್ಲಿ ಪೊಕೊ X6 (POCO X6) ಫೋನ್ ಖರೀದಿ ಮೇಲೆ ಡಿಸ್ಕೌಂಟ್‌ ನೀಡಲಾಗುತ್ತಿದೆ. ಇದು ಮಿರರ್ ಬ್ಲಾಕ್ ಮತ್ತು ಸ್ನೋಸ್ಟಾರ್ಮ್ ವೈಟ್ ಬಣ್ಣಗಳಲ್ಲಿ ಲಭ್ಯವಿದೆ. ಪೊಕೊ X6 ಫೋನಿನ 8GB RAM + 128GB ಸ್ಟೋರೇಜ್ ವೇರಿಯಂಟ್ ಬೆಲೆ 21,999 ರೂ. ಇದೆ. ಪ್ರಸ್ತುತ ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್‌ನಲ್ಲಿ ಕೇವಲ 18,999 ರೂ.ಗಳ ಬಜೆಟ್ ಬೆಲೆಗೆ ಲಭ್ಯವಿದೆ.

ಸ್ವಾತಂತ್ರ್ಯೋತ್ಸವದ ಗಿಫ್ಟ್.. POCO X6 5G ಫೋನಿನ ಬೆಲೆ ಇಳಿಕೆ!

ಇದಲ್ಲದೆ, ಎಸ್‌ಬಿಐ ಕ್ರೆಡಿಟ್ ಕಾರ್ಡ್‌ ಬಳಸಿ ಈ ಫೋನ್ ಖರೀದಿಸಿದರೆ 1,750 ರೂ.ಗಳ ಡಿಸ್ಕೌಂಟ್ ಪಡೆಯಬಹುದು. ಅದೇ ರೀತಿ 18,000 ರೂ.ಗಳ ಎಕ್ಸ್‌ಚೇಂಜ್ ಬೋನಸ್ ಲಭ್ಯವಿದೆ. ಒಟ್ಟಾರೆಯಾಗಿ, ಡಿಸ್ಕೌಂಟ್‌ ಬಳಿಕ ನೀವು ಈ ಪೊಕೊ X6 ಫೋನ್ ಅನ್ನು 17,249 ರೂ.ಗಳ ಬಜೆಟ್‌ನಲ್ಲಿ ಖರೀದಿಸಬಹುದು.

POCO X6 ಫೋನಿನ ಫೀಚರ್ಸ್‌

ಪೊಕೊ X6 (POCO X6) ಫೋನ್ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ವಿಕ್ಟಸ್ ರಕ್ಷಣೆಯೊಂದಿಗೆ 6.67 ಇಂಚಿನ (2712 x 1220 ಪಿಕ್ಸೆಲ್‌ಗಳು) AMOLED ಡಿಸ್ಪ್ಲೇಯನ್ನು ಹೊಂದಿದೆ. ಇದು 1.5K ರೆಸಲ್ಯೂಶನ್, 120Hz ರಿಫ್ರೆಶ್ ರೇಟ್, 240Hz ಟಚ್ ಸ್ಯಾಂಪ್ಲಿಂಗ್ ದರದೊಂದಿಗೆ ಬರುತ್ತದೆ. ಅಲ್ಲದೆ, 1800 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಮತ್ತು HDR10+ ಬೆಂಬಲವಿದೆ. ಈ ಫೋನ್ 5100mAh ಬ್ಯಾಟರಿಯನ್ನು ಹೊಂದಿದೆ. ಇದು 67W ವೇಗದ ಚಾರ್ಜಿಂಗ್‌ ಸಪೋರ್ಟ್‌ನೊಂದಿಗೆ ಬರುತ್ತದೆ.

ಪೊಕೊ X6 ಫೋನ್ ಆಕ್ಟಾ ಕೋರ್ ಸ್ನಾಪ್‌ಡ್ರಾಗನ್ 7S Gen 2 4nm ಚಿಪ್‌ಸೆಟ್ ಹೊಂದಿದೆ. ಜೊತೆಗೆ, Android 13 OS ನೊಂದಿಗೆ ಬರುತ್ತದೆ. ಇದು ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್‌ ಅನ್ನು ಹೊಂದಿದೆ. ಇದರಲ್ಲಿ 64 MP ಮುಖ್ಯ ಕ್ಯಾಮೆರಾ, 8MP ಅಲ್ಟ್ರಾ ವೈಡ್ ಆಂಗಲ್ ಕ್ಯಾಮೆರಾ ಮತ್ತು 2MP ಮ್ಯಾಕ್ರೋ ಕ್ಯಾಮೆರಾ ಬರುತ್ತದೆ. ಇನ್ನೂ, ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ 16MP ಫ್ರಂಟ್ ಕ್ಯಾಮೆರಾ ಸಹ ಇದೆ.

ಪೊಕೊ X6 ನಿಯೋ ಹೊಸ ಬೆಲೆ ಮತ್ತು ಆಫರ್‌ಗಳು

ಪೊಕೊ X6 ಫೋನಿನ ಜೊತೆಗೆ ಪೊಕೊ X6 ನಿಯೋ (POCO X6 Neo) ಫೋನ್ ಖರೀದಿ ಮೇಲೆಯೂ ಡಿಸ್ಕೌಂಟ್‌ ಲಭ್ಯವಿದೆ. ಈ ಫೋನಿನ 8GB RAM + 128GB ಸ್ಟೋರೇಜ್ ವೇರಿಯಂಟ್ ಬೆಲೆ 15,999 ರೂ. ಇದೆ. ಆದರೆ, ಪ್ರಸ್ತುತ ಅಮೇಜಾನ್‌ನಲ್ಲಿ 14,499 ರೂ.ಗಳ ಬೆಲೆಗೆ ಲಭ್ಯವಿದೆ. ಅಲ್ಲದೆ, ಎಸ್‌ಬಿಐ ಕ್ರೆಡಿಟ್ ಕಾರ್ಡ್‌ ಮೇಲೆ 1,250 ರೂ.ಗಳ ಡಿಸ್ಕೌಂಟ್ ಲಭ್ಯವಿದೆ. ಈ ಫೋನನ್ನು ಆಸ್ಟ್ರಲ್ ಬ್ಲ್ಯಾಕ್, ಹಾರಿಜಾನ್ ಬ್ಲೂ ಮತ್ತು ಮಾರ್ಟಿಯನ್ ಆರೆಂಜ್ ಬಣ್ಣಗಳಲ್ಲಿ ಖರೀದಿಸಬಹುದು.

ಸ್ವಾತಂತ್ರ್ಯೋತ್ಸವದ ಗಿಫ್ಟ್.. POCO X6 5G ಫೋನಿನ ಬೆಲೆ ಇಳಿಕೆ!

ಪೊಕೊ X6 ನಿಯೋ ಫೋನಿನ ಫೀಚರ್ಸ್‌

ಪೊಕೊ X6 ನಿಯೋ ಫೋನ್ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 5 ರಕ್ಷಣೆಯೊಂದಿಗೆ 6.67 ಇಂಚಿನ (1080×2400 ಪಿಕ್ಸೆಲ್‌ಗಳು) ಡಿಸ್‌ಪ್ಲೇಯೊಂದಿಗೆ ಬರುತ್ತದೆ. ಇದು ಸೂಪರ್ AMOLED ಡಿಸ್ಪ್ಲೇ ಮಾದರಿಯಾಗಿದೆ. ಇದು FullHD+ (FHD+) ರೆಸಲ್ಯೂಶನ್, 120Hz ರಿಫ್ರೆಶ್ ರೇಟ್, 240Hz ಟಚ್ ಸ್ಯಾಂಪ್ಲಿಂಗ್ ರೇಟ್ ಮತ್ತು 1000 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್‌ನೊಂದಿಗೆ ಬರುತ್ತದೆ.

ಈ ಫೋನ್ ಆಕ್ಟಾ ಕೋರ್ ಮೀಡಿಯಾ ಟೆಕ್ ಡೈಮೆನ್ಸಿಟಿ 6080 6nm ಚಿಪ್‌ಸೆಟ್ ಹೊಂದಿದೆ. ಜೊತೆಗೆ Android 13 OS ಅನ್ನು ಒಳಗೊಂಡಿದೆ. ಇದು 108MP ಮುಖ್ಯ ಕ್ಯಾಮೆರಾ, 2MP ಡೆಪ್ತ್ ಕ್ಯಾಮೆರಾ ಮತ್ತು 16MP ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ. ಇದು 5000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. 33W ವೇಗದ ಚಾರ್ಜಿಂಗ್‌ನೊಂದಿಗೆ ಬರುತ್ತದೆ.

Best Mobiles in India

English summary
Amazon Great Freedom Festival Sale: POCO X6 gets 28 percent discount: Check Price, offers, specifications and more
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+