Home
Deal of the day

ಅಮೆಜಾನ್‌ ಸೇಲ್‌ನಲ್ಲಿ ಗೇಮಿಂಗ್‌ ಹೆಡ್‌ಫೋನ್‌ಗಳಿಗೆ ಬಿಗ್‌ ಡಿಸ್ಕೌಂಟ್‌!

ಆನ್‌ಲೈನ್‌ ಶಾಪಿಂಗ್‌ ಪ್ರಿಯರ ನೆಚ್ಚಿನ ತಾಣ ಅಮೆಜಾನ್‌ ವಿಶೇಷ ಸೇಲ್‌ಗಳನ್ನು ಆಯೋಜಿಸುತ್ತಲೇ ಬಂದಿದೆ. ವಿಕೆಂಡ್‌, ಮಂತ್‌ಎಂಡ್‌, ಜೊತೆಗೆ ಹಬ್ಬ ಹರಿದಿನಗಳಲ್ಲಿ ಡಿಸ್ಕೌಂಟ್‌ ಮೇಳಗಳನ್ನು ಆಯೋಜಿಸುತ್ತಾ ಬಂದಿದೆ. ಇದೀಗ ಅಮೆಜಾನ್‌ ಗ್ರೇಟ್‌ ಇಂಡಿಯನ್‌ ಫೆಸ್ಟಿವಲ್‌ 2021 ಸೇಲ್‌ ಆಯೋಜಿಸಿದೆ. ಈ ಸೇಲ್‌ ಆಕ್ಟೋಬರ್‌ 3ರಿಂದಲೇ ಪ್ರಾರಂಭವಾಗಿದ್ದು, ವಿಶೇಷ ಡಿಸ್ಕೌಂಟ್‌ ಮೂಲಕ ಗ್ರಾಹಕರನ್ನು ಆಕರ್ಷಿಸುತ್ತಿದೆ. ಅದರಲ್ಲೂ ಸ್ಮಾರ್ಟ್‌ಫೋನ್‌, ಲ್ಯಾಪ್‌ಟಾಪ್‌, ಆಡಿಯೋ ಆಕ್ಸಿಸರೀಸ್‌ಗಳ ಮೇಲೆ ಬಿಗ್‌ ಡಿಸ್ಕೌಂಟ್‌ ನೀಡುತ್ತಿದೆ.

ಅಮೆಜಾನ್‌ ಸೇಲ್‌ನಲ್ಲಿ ಗೇಮಿಂಗ್‌ ಹೆಡ್‌ಫೋನ್‌ಗಳಿಗೆ ಬಿಗ್‌ ಡಿಸ್ಕೌಂಟ್‌!

ಹೌದು, ಅಮೆಜಾನ್‌ ಸೇಲ್‌ನಲ್ಲಿ ಮ್ಯೂಸಿಕ್‌ ಪ್ರಿಯರಿಗೆ ಬಿಗ್‌ ಡಿಸ್ಕೌಂಟ್‌ ದೊರೆಯುತ್ತಿದೆ. ತಮ್ಮ ನೆಚ್ಚಿನ ಹೆಡ್‌ಫೋನ್‌ಗಳು, ಇಯರ್‌ಫೋನ್‌ಗಳನ್ನ ರಿಯಾಯಿತಿ ದರದಲ್ಲಿ ಖರಿದೀಸಲು ಇದೊಂದು ಸದಾವಕಾಶವಾಗಿದೆ. ಇನ್ನು ಗೇಮಿಂಗ್‌ ಅನುಭವವನ್ನು ಇನ್ನಷ್ಟು ರೋಚಕವಾಗಿಸುವ ಗೆಮಿಂಗ್‌ ಹೆಡ್‌ಫೋನ್‌ಗಳು ಕೂಡ ರಿಯಾಯಿತಿ ದರದಲ್ಲಿ ಲಭ್ಯವಾಗಲಿವೆ. ಕಡಿಮೆ ಲ್ಯಾಟೆನ್ಸಿ ಆಡಿಯೋ, ಸರೌಂಡ್ ಸೌಂಡ್ ಮತ್ತು ಹೆಚ್ಚುವರಿ ಫೀಚರ್ಸ್‌ಗಳನ್ನು ಹೊಂದಿರುವ ಗೇಮಿಂಗ್‌‌ ಫೋನ್‌ಗಳನ್ನು ಖರೀದಿಸುವುದಕ್ಕೆ ಉತ್ತಮ ಅವಕಾಶವಿದೆ. ಹಾಗಾದ್ರೆ ಅಮೆಜಾನ್‌ ಸೇಲ್‌ನಲ್ಲಿ ಡಿಸ್ಕೌಂಟ್‌ ಪಡೆದುಕೊಂಡಿರುವ ಗೇಮಿಂಗ್‌ ಹೆಡ್‌ಫೋನ್‌ಗಳ ಬಗ್ಗೆ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಅಮೆಜಾನ್‌ ಸೇಲ್‌ನಲ್ಲಿ ಗೇಮಿಂಗ್‌ ಹೆಡ್‌ಫೋನ್‌ಗಳಿಗೆ ಬಿಗ್‌ ಡಿಸ್ಕೌಂಟ್‌!

ಹೈಪರ್ ಎಕ್ಸ್ ಕ್ಲೌಡ್ ಆಲ್ಫಾ ಪ್ರೊ
ಅತ್ಯಂತ ಜನಪ್ರಿಯ ಗೇಮಿಂಗ್ ಹೆಡ್‌ಫೋನ್‌ಗಳಲ್ಲಿ ಹೈಪರ್‌ಎಕ್ಸ್ ಕ್ಲೌಡ್ ಆಲ್ಫಾ ಪ್ರೊ ಕೂಡ ಒಂದಾಗಿದೆ. ಈ ಹೆಡ್‌ಫೋನ್‌ ಪಿಸಿ, ಪ್ಲೇಸ್ಟೇಷನ್, ಎಕ್ಸ್‌ಬಾಕ್ಸ್ ಮತ್ತು ನಿಂಟೆಂಡೊ ಸ್ವಿಚ್‌ ಜೊತೆಗೆ ಸೆಟ್‌ ಆಗಲಿದೆ. ಇನ್ನು ಈ ಹೆಡ್‌ಫೋನ್‌ ಕಡಿಮೆ ಲೇಟೆನ್ಸಿಗಾಗಿ ಡ್ಯುಯಲ್-ಚೇಂಬರ್ ಆಡಿಯೋ ಡ್ರೈವರ್‌ಗಳನ್ನು ಹೊಂದಿದೆ. ಇದರಲ್ಲಿರುವ ಮೈಕ್ರೊಫೋನ್ ಅನಗತ್ಯ ಶಬ್ದವನ್ನು ರದ್ದುಗೊಳಿಸುವ ಕೆಲಸವನ್ನು ಮಾಡಲಿದೆ. ಇದು ಕೇಬಲ್ ಇನ್-ಲೈನ್ ಆಡಿಯೋ ಕಂಟ್ರೋಲ್‌ ಅನ್ನು ಕೂಡ ಹೊಂದಿದೆ. ಹೈಪರ್‌ಎಕ್ಸ್ ಕ್ಲೌಡ್ ಆಲ್ಫಾ ಪ್ರೊ ದೀರ್ಘ ಗೇಮಿಂಗ್ ಸೆಷನ್‌ಗಳಿಗೆ ಬಳಸಬಹುದಾದ ಹೆಡ್‌ಫೋನ್‌ ಆಗಿದೆ. ಸದ್ಯ ಅಮೆಜಾನ್‌ ಸೇಲ್‌ನಲ್ಲಿ 7,999 ರೂ.ಗಳ ರಿಯಾಯಿತಿ ದರದಲ್ಲಿ ಲಭ್ಯವಿದೆ.

ಸ್ಟೀಲ್ ಸೀರೀಸ್ ಆರ್ಕ್ಟಿಸ್ 1
ಸ್ಟೀಲ್‌ಸರೀಸ್ ಆರ್ಕ್ಟಿಸ್ 1 ಅತ್ಯುತ್ತಮವಾದ ಗೇಮಿಂಗ್ ಹೆಡ್‌ಫೋನ್‌ಗಳಲ್ಲಿ ಒಂದಾಗಿದೆ. ಇದು ಬಜೆಟ್‌ ಬೆಲೆಯಲ್ಲಿ ಲಭ್ಯವಾಗುವ ಹೆಡ್‌ಫೋನ್‌ ಆಗಿದ್ದು, ಇದು 40ಎಂಎಂ ಆಡಿಯೋ ಡ್ರೈವರ್‌ಗಳನ್ನು ಹೊಂದಿದೆ. ಜೊತೆಗೆ ಈ ಹೆಡ್‌ಫೋನ್‌ ಅತ್ಯುತ್ತಮವಾದ ಸೌಂಡ್‌ ಪ್ರೊಡಕ್ಷನ್‌ ಅನ್ನು ನೀಡಲಿದೆ. ಇದು ಡಿಟಿಎಸ್: ಎಕ್ಸ್ ವಿ 2.0 ಸರೌಂಡ್ ಸೌಂಡ್, ಫ್ರೀಡಂ ಗೇಮ್‌/ಚಾಟ್ ಆಡಿಯೋ ಸೆಟ್ಟಿಂಗ್ಸ್‌ ಫೀಚರ್ಸ್‌ ಹೊಂದಿದೆ. ಇನ್ನು ಈ ಹೆಡ್‌ಫೋನ್‌ ಡಿಟ್ಯಾಚೇಬಲ್ ಬೈಡೈರೆಕ್ಷನಲ್ ಮೈಕ್ ಹೊಂದಿದ್ದು, ನಾಯ್ಸ್‌ ಕ್ಯಾನ್ಸಲೇಶನ್‌ ಸಾಮರ್ಥ್ಯವನ್ನು ಹೊಂದಿದೆ. ಇದು ಅಮೆಜಾನ್‌ ಸೇಲ್‌ನಲ್ಲಿ ನಿಮಗೆ ಕೇವಲ 4,999 ರೂ.ಗಳಿಗೆ ಲಭ್ಯವಿದೆ.

ಕೊರ್ಸೇರ್ HS70 PRO
ಕೊರ್ಸೇರ್ ಎಚ್‌ಎಸ್ 70 ಪ್ರೊ ಹೆಡ್‌ಫೋನ್‌ ಕೂಡ ಅಮೆಜಾನ್‌ ಸೇಲ್‌ನಲ್ಲಿ ಬಿಗ್ ಡಿಸ್ಕೌಂಟ್‌ ಪಡೆದುಕೊಂಡಿದೆ. ಈ ಹೆಡ್‌ಫೋನ್‌ ಅನ್ನು ನೀವು ಅಮೆಜಾನ್‌ನಲ್ಲಿ ಕೇವಲ 9,999ರೂ.ಗಳಿಗೆ ಖರೀದಿಸಬಹುದಾಗಿದೆ. ಇನ್ನು ಈ ಹೆಡ್‌ಫೋನ್‌ 50 ಎಂಎಂ ಆಡಿಯೋ ಡ್ರೈವರ್‌ಗಳನ್ನು ಒಳಗೊಂಡಿದೆ. ಇದು 7.1 ಸರೌಂಡ್ ಸೌಂಡ್ ಅನ್ನು ಸಹ ನೀಡಲಿದೆ. ಇದನ್ನು ಕೊರ್ಸೇರ್‌ನ ಐಕ್ಯೂ ಸಾಫ್ಟ್‌ವೇರ್ ಮೂಲಕ ಕಸ್ಟಮೈಸ್ ಮಾಡಬಹುದು.

ರೇಜರ್ ಕ್ರಾಕನ್ x
ರೇಜರ್‌ ಕರೆನ್ x ಹೆಡ್‌ಫೋನ್‌ ಕೂಡ ಅತ್ಯುತ್ತಮ ಗೇಮಿಂಗ್‌ ಹೆಡ್‌ಫೋನ್‌ಗಳಲ್ಲಿ ಒಂದಾಗಿದೆ. ಸದ್ಯ ಇದರ ಬೆಲೆ 5,199 ರೂ.ಆಗಿದೆ. ಇನ್ನು ಈ ಹೆಡ್‌ಫೋನ್ 7.1 ಸರೌಂಡ್ ಸೌಂಡ್‌ ಅನ್ನು ಹೊಂದಿದೆ. ಇದು ಕಾರ್ಡಿಯೋಯಿಡ್ ಮೈಕ್‌ ಅನ್ನು ಒಳಗೊಂಡಿದ್ದು, ನಾಯ್ಸ್‌ ಕ್ಯಾನ್ಸಲೇಶನ್‌ ಅನ್ನು ನೀಡಲಿದೆ.

ಲಾಜಿಟೆಕ್ ಜಿ 431
ಲಾಜಿಟೆಕ್ ಜಿ 341 ಹೆಡ್‌ಫೋನ್‌ ಅತ್ಯುತ್ತಮವಾದ ಗೇಮಿಂಗ್‌ ಹೆಡ್‌ಫೋನ್‌ ಆಗಿದೆ. ಇದು ಅಮೆಜಾನ್‌ ಸೇಲ್‌ನಲ್ಲಿ 4,995ರೂ.ಗಳಿಗೆ ಲಭ್ಯವಿದೆ. ಇನ್ನು ಈ ಹೆಡ್‌ಫೋನ್ 50 ಎಂಎಂ ಡ್ರೈವರ್‌ಗಳು ಮತ್ತು 6 ಎಂಎಂ ಮೈಕ್‌ನೊಂದಿಗೆ ಫ್ಲಿಪ್ ಟು ಮ್ಯೂಟ್ ಫೀಚರ್ಸ್‌ ಒಳಗೊಂಡಿದೆ. ಇದು ಡಿಟಿಎಸ್ ಎಕ್ಸ್ 2.0 ಸರೌಂಡ್ ಸೌಂಡ್ ಅನ್ನು ಸಹ ನೀಡುತ್ತದೆ. ಇದನ್ನು ಲಾಜಿಟೆಕ್ ಜಿ ಹಬ್ ಗೇಮಿಂಗ್ ಸಾಫ್ಟ್‌ವೇರ್ ಮೂಲಕ ಕಂಟ್ರೋಲ್‌ ಮಾಡಬಹುದು.

English summary
The e-commerce giant is offering up to an 80 per cent discount on headphones.to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+