ಅಮೆಜಾನ್ ಫೆಸ್ಟಿವಲ್ ಸೇಲ್ 2025: ಐಫೋನ್ 15 ಬೆಲೆ ದಾಖಲೆ ಮಟ್ಟದಲ್ಲಿ ಇಳಿಕೆ!
ಇ-ಕಾಮರ್ಸ್ ದೈತ್ಯ ಅಮೆಜಾನ್ ತನ್ನ ಬಹುನಿರೀಕ್ಷಿತ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್ 2025 ಅನ್ನು ಘೋಷಿಸಿದೆ. ಈ ವರ್ಷದ ಅತಿದೊಡ್ಡ ಮಾರಾಟ ಮೇಳವು ಸೆಪ್ಟೆಂಬರ್ 23 ರಿಂದ ಪ್ರಾರಂಭವಾಗಲಿದ್ದು, ಈ ಬಾರಿ ಗ್ರಾಹಕರಿಗೆ ದೊಡ್ಡ ಮಟ್ಟದ ರಿಯಾಯಿತಿಗಳು ಲಭ್ಯವಾಗಲಿವೆ. ಪ್ರೈಮ್ ಸದಸ್ಯರಿಗೆ ಒಂದು ದಿನ ಮುಂಚಿತವಾಗಿ, ಅಂದರೆ, ಸೆಪ್ಟೆಂಬರ್ 22ರ ಮಧ್ಯರಾತ್ರಿಯಿಂದಲೇ ಈ ವಿಶೇಷ ಆಫರ್‌ಗಳ ಪ್ರವೇಶ ದೊರೆಯಲಿದೆ. ಈ ಸೇಲ್‌ನಲ್ಲಿ ಸ್ಮಾರ್ಟ್‌ಫೋನ್‌ಗಳು, ಎಲೆಕ್ಟ್ರಾನಿಕ್ಸ್, ಫ್ಯಾಷನ್, ಗೃಹೋಪಯೋಗಿ ವಸ್ತುಗಳು ಸೇರಿದಂತೆ ಹಲವು ಉತ್ಪನ್ನಗಳ ಮೇಲೆ ಭಾರೀ ರಿಯಾಯಿತಿಗಳು ಇರಲಿವೆ.
ಈ ಸೇಲ್‌ನಲ್ಲಿ ಸ್ಮಾರ್ಟ್‌ಫೋನ್‌ಗಳನ್ನು ಖರೀದಿಸಲು ಬಯಸುವವರಿಗೆ ಇದೊಂದು ಸುವರ್ಣಾವಕಾಶ. ಅದರಲ್ಲೂ ವಿಶೇಷವಾಗಿ, ಐಫೋನ್ ಪ್ರಿಯರಿಗೆ ಈ ಬಾರಿ ಅಮೆಜಾನ್ ದೊಡ್ಡ ಸರ್‌ಪ್ರೈಸ್ ನೀಡಿದೆ. 2023 ರಲ್ಲಿ ಬಿಡುಗಡೆಯಾದ ಐಫೋನ್ 15, ಆರಂಭದಲ್ಲಿ ₹79,900 ಬೆಲೆಯಲ್ಲಿ ಲಭ್ಯವಿತ್ತು. ಸದ್ಯ, ಅಮೆಜಾನ್‌ನಲ್ಲಿ ಈ ಫೋನ್ ₹59,990 ಕ್ಕೆ ಲಭ್ಯವಿದೆ. ಆದರೆ, ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್ ಸಮಯದಲ್ಲಿ ಇದರ ಬೆಲೆ ಇನ್ನಷ್ಟು ಕಡಿಮೆಯಾಗಲಿದೆ. ಎಷ್ಟು ಕಡಿಮೆ ಎಂದರೆ, ನೀವು ಈ ಫೋನ್ ಅನ್ನು ಕೇವಲ ₹43,749 ರೂ. ಬೆಲೆಗೆ ಖರೀದಿಸಲು ಸಾಧ್ಯವಾಗುತ್ತದೆ.
ಬ್ಯಾಂಕ್ ಮತ್ತು ಎಕ್ಸ್‌ಚೇಂಜ್ ಆಫರ್‌ಗಳು
ಈ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್‌ನಲ್ಲಿ ಎಸ್‌ಬಿಐ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ ಬಳಸಿ ಪಾವತಿಸುವವರಿಗೆ ಹೆಚ್ಚುವರಿ 10% ತಕ್ಷಣದ ರಿಯಾಯಿತಿ ದೊರೆಯಲಿದೆ. ಈ ಆಫರ್ ಅನ್ನು ಬಳಸಿಕೊಂಡರೆ, ಐಫೋನ್ 15 ಬೆಲೆ ನೇರವಾಗಿ 53991 ರೂ.ಗೆ ಇಳಿಕೆಯಾಗುತ್ತದೆ. ಇದರ ಜೊತೆಗೆ, ನಿಮ್ಮ ಹಳೆಯ ಫೋನ್‌ಗಳನ್ನು ಎಕ್ಸ್‌ಚೇಂಜ್ ಮಾಡುವ ಮೂಲಕ ಇನ್ನಷ್ಟು ಕಡಿತವನ್ನು ಪಡೆಯಬಹುದು. ನಿಮ್ಮ ಹಳೆಯ ಫೋನಿನ ಸ್ಥಿತಿ ಮತ್ತು ಮಾದರಿಯ ಆಧಾರದ ಮೇಲೆ ಎಕ್ಸ್‌ಚೇಂಜ್ ಬೆಲೆ ನಿರ್ಧಾರವಾಗುತ್ತದೆ. ಈ ಎಲ್ಲಾ ರಿಯಾಯಿತಿಗಳನ್ನು ಸೇರಿಸಿದರೆ, ಐಫೋನ್ 15 ಬೆಲೆ ಕೇವಲ ₹43,749 ಆಗಿ ಇಳಿಯುತ್ತದೆ.

ಇದು ಹೊಸ ಐಫೋನ್ ಖರೀದಿಸಲು ಅತ್ಯಂತ ಕಡಿಮೆ ಬೆಲೆಯಾಗಿದೆ. ಆದರೆ, ಒಂದೇ ಬಾರಿಗೆ ದೊಡ್ಡ ಮೊತ್ತವನ್ನು ಪಾವತಿಸಲು ಇಷ್ಟವಿಲ್ಲದವರಿಗೆ ಅಮೆಜಾನ್ ನೋ-ಕಾಸ್ಟ್ ಇಎಂಐ ಆಯ್ಕೆಯನ್ನು ನೀಡುತ್ತಿದೆ. ಇದರಿಂದಾಗಿ ಗ್ರಾಹಕರು ಸುಲಭ ಕಂತುಗಳಲ್ಲಿ ಫೋನ್ ಅನ್ನು ಖರೀದಿಸಬಹುದು. ಈ ಎಲ್ಲಾ ಆಫರ್‌ಗಳು ಸ್ಮಾರ್ಟ್‌ಫೋನ್ ಅಪ್‌ಗ್ರೇಡ್ ಮಾಡಲು ಯೋಜಿಸುತ್ತಿರುವವರಿಗೆ ಉತ್ತಮ ಅವಕಾಶವನ್ನು ಒದಗಿಸುತ್ತವೆ. ಆದ್ದರಿಂದ, ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್ 2025 ರ ಐಫೋನ್ 15 ಆಫರ್ ಅನ್ನು ತಪ್ಪಿಸಿಕೊಳ್ಳಬೇಡಿ. ಇದಕ್ಕೆ ಮತ್ತೊಂದು ಕಾರಣವೂ ಸಹ ಇದೆ.
ಪ್ರಸ್ತುತ ಐಫೋನ್ 15 ಅನ್ನು ಖರೀದಿಸಬಹುದೇ?
ಐಫೋನ್ 15 ಕಳೆದ ವರ್ಷ ಬಿಡುಗಡೆಯಾಗಿದ್ದರೂ, ಇದು ಇಂದಿಗೂ ಮಾರುಕಟ್ಟೆಯಲ್ಲಿನ ಅತ್ಯುತ್ತಮ ಸ್ಮಾರ್ಟ್‌ಫೋನ್‌ಗಳಲ್ಲಿ ಒಂದಾಗಿದೆ. ಈ ಫೋನ್ ಡೈನಾಮಿಕ್ ಐಲ್ಯಾಂಡ್ ಫೀಚರ್‌ನೊಂದಿಗೆ ಬಂದಿದ್ದು, ಇದು ಬಳಕೆದಾರರ ಅನುಭವವನ್ನು ಇನ್ನಷ್ಟು ಸುಧಾರಿಸುತ್ತದೆ. 48MP ಪ್ರಮುಖ ಕ್ಯಾಮೆರಾವು ಅತ್ಯುತ್ತಮ ಫೋಟೊಗಳನ್ನು ತೆಗೆಯುವ ಸಾಮರ್ಥ್ಯವನ್ನು ಹೊಂದಿದೆ. ಜೊತೆಗೆ, ಇದು USB-C ಚಾರ್ಜಿಂಗ್ ಪೋರ್ಟ್ ಅನ್ನು ಹೊಂದಿದೆ, ಇದು ಆಂಡ್ರಾಯ್ಡ್ ಸಾಧನಗಳ ಚಾರ್ಜರ್‌ಗಳೊಂದಿಗೆ ಹೊಂದಿಕೊಳ್ಳುವುದರಿಂದ ಬಳಕೆದಾರರಿಗೆ ಅನುಕೂಲವಾಗುತ್ತದೆ. ಶಕ್ತಿಯುತ A16 ಬಯೋನಿಕ್ ಚಿಪ್‌ಸೆಟ್ ಅನ್ನು ಹೊಂದಿರುವ ಈ ಫೋನ್, ಗೇಮಿಂಗ್ ಮತ್ತು ದೈನಂದಿನ ಕಾರ್ಯಗಳಿಗೆ ಉತ್ತಮ ಕಾರ್ಯಕ್ಷಮತೆಯನ್ನು ನೀಡುತ್ತದೆ. ಐಫೋನ್‌ನ ಸುರಕ್ಷತೆ ಮತ್ತು ದೀರ್ಘಕಾಲದ ತಂತ್ರಾಂಶ ಬೆಂಬಲದಿಂದಾಗಿ, ಇದು ಈಗಲೂ ಅತ್ಯುತ್ತಮ ಆಯ್ಕೆಯಾಗಿದೆ.


Click it and Unblock the Notifications








