Home
Deal of the day

ಅಮೆಜಾನ್‌ ಸೇಲ್‌ನಲ್ಲಿ ಮಾನಿಟರ್‌ಗಳ ಮೇಲೆ 50% ಆಫರ್‌!

ಇ-ಕಾಮರ್ಸ್‌ ದೈತ್ಯ ಅಮೆಜಾನ್‌ ವಿಶೇಷ ದಿನಗಳಲ್ಲಿ ರಿಯಾಯಿತಿ ಮೇಳಗಳನ್ನು ನಡೆಸುತ್ತಲೇ ಬಂದಿದೆ. ಇದೀಗ ಅಮೆಜಾನ್‌ ಗ್ರೇಟ್‌ ಇಂಡಿಯನ್‌ ಫೆಸ್ಟಿವಲ್‌ ಸೇಲ್‌ ಮೂಲಕ ಮತ್ತೆ ಬಂದಿದೆ. ಈ ಸೇಲ್‌ ಆಕ್ಟೋಬರ್‌ 3 ರಿಂದ ಪ್ರಾರಂಭವಾಗಲಿದೆ. ಇನ್ನು ಎಂದಿನಂತೆ ಈ ಬಾರಿಯ ಸೇಲ್‌ನಲ್ಲಿ ಆಯ್ದ ಉತ್ಪನ್ನಗಳ ಮೇಲೆ ಬಿಗ್‌ ಡಿಸ್ಕೌಂಟ್‌ ಘೋಷಿಸಲಾಗಿದೆ. ಈ ಸೇಲ್‌ನಲ್ಲಿ ಸ್ಮಾರ್ಟ್‌ಫೋನ್‌, ಲ್ಯಾಪ್‌ಟಾಪ್‌, ಸ್ಮಾರ್ಟ್‌ ವಾಚ್‌, ಸೇರಿದಂತೆ ಅನೇಕ ಗ್ಯಾಜೆಟ್ಸ್‌ಗಳ ಮೇಲೆ ಹೆಚ್ಚಿನ ರಿಯಾಯಿತಿ ದೊರೆಯಲಿದೆ.

ಅಮೆಜಾನ್‌ ಸೇಲ್‌ನಲ್ಲಿ ಮಾನಿಟರ್‌ಗಳ ಮೇಲೆ 50% ಆಫರ್‌!

ಹೌದು, ಅಮೆಜಾನ್‌ ಗ್ರೇಟ್‌ ಇಂಡಿಯನ್‌ ಫೇಸ್ಟಿವಲ್‌ ಸೇಲ್‌ ಆಕ್ಟೋಬರ್‌ 3 ರಿಂದ ಪ್ರಾರಂಭವಾಗಲಿದೆ. ಅಲ್ಲದೆ ಪ್ರೈಮ್‌ ಸದಸ್ಯರಿಗೆ ಇಂದಿನಿಂದಲೇ ಪ್ರವೇಶ ಕೂಡ ಸಿಗಲಿದೆ. ನಿಮ್ಮ ನೆಚ್ಚಿನ ಪ್ರಾಡಕ್ಟ್‌ಗಳನ್ನು ಕಡಿಮೆ ಬೆಲೆಯಲ್ಲಿ ಖರೀದಿಸುವುದಕ್ಕೆ ಇದು ಉತ್ತಮ ಸಮಯವಾಗಿದೆ. ಈ ಪೈಕಿ ಮಾನಿಟರ್‌ಗಳನ್ನು ಖರೀದಿಸಲು ಬಯಸುವವರಿಗೆ ಈ ಸೇಲ್‌ ಭರ್ಜರಿ ಡಿಸ್ಕೌಂಟ್‌ ಅನ್ನು ಹೊತ್ತು ತಂದಿದೆ. ಹಾಗಾದ್ರೆ ಅಮೆಜಾನ್‌ ಗ್ರೇಟ್‌ ಇಂಡಿಯನ್‌ ಫೆಸ್ಟಿವಲ್‌ ಸೇಲ್‌ನಲ್ಲಿ ರಿಯಾಯಿತಿ ದರದಲ್ಲಿ ಲಭ್ಯವಾಗುವ ಮಾನಿಟರ್‌ಗಳ ಬಗ್ಗೆ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಏಸರ್ ಆಪೆನ್ ಎಲ್ಇಡಿ ಮಾನಿಟರ್

ಅಮೆಜಾನ್‌ ಗ್ರೇಟ್‌ ಇಂಡಿಯನ್‌ ಫೆಸ್ಟಿವಲ್‌ ಸೇಲ್‌ನಲ್ಲಿ ಏಸರ್ ಆಪೆನ್ ಎಲ್ಇಡಿ ಮಾನಿಟರ್ ಡಿಸ್ಕೌಂಟ್‌ ದರದಲ್ಲಿ ಲಭ್ಯವಾಗಲಿದೆ. ಇದು ‎1920 x 1080 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಹೊಂದಿರುವ 21.5 ಇಂಚಿನ ಎಲ್ಇಡಿ ಮಾನಿಟರ್ ಟಿಎನ್ ಡಿಸ್‌ಪ್ಲೇ ಹೊಂದಿದೆ. ಈ ಡಿಸ್‌ಪ್ಲೇ 60 Hz ರಿಫ್ರೇಶ್‌ ರೇಟ್‌ ಹೊಂದಿದ್ದು, 200 ನಿಟ್ಸ್ ಬ್ರೈಟ್ ನೆಸ್ ಅನ್ನು ಒಳಗೊಂಡಿದೆ. ಈ ಮಾಟನಿರ್‌ HDMI ಮತ್ತು VGA ಪೋರ್ಟ್‌ಗಳನ್ನು ಬೆಂಬಲಿಸಲಿದೆ. ಈ ಮಾನಿಟರ್‌ ಮೇಲೆ 37% ಡಿಸ್ಕೌಂಟ್‌ ಹೊದಿದ್ದು, ನಿಮಗೆ ಕೇವಲ 7,999ರೂ ಬೆಲೆಯಲ್ಲಿ ಲಭ್ಯವಾಗಲಿದೆ.

ಸ್ಯಾಮ್‌ಸಂಗ್ 27 M5 ಸ್ಮಾರ್ಟ್ ಮಾನಿಟರ್
ಸ್ಯಾಮ್‌ಸಂಗ್ 27 M5 ಸ್ಮಾರ್ಟ್ ಮಾನಿಟರ್ 1,920x1,080 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್ ಹೊಂದಿದೆ. ಇದು HDR 10 ಬೆಂಬಲವನ್ನು ಒಳಗೊಂಡಿದೆ. ಇನ್ನು ಈ ಮಾನಿಟರ್‌ ವಾಯರ್‌ಲೆಸ್‌ ಡೆಕ್ಸ್ ಫುಲ್‌ ಪಿಸಿ ಅನುಭವವನ್ನು ಅನ್ಲಾಕ್ ಮಾಡುತ್ತದೆ. ಇದರಲ್ಲಿ ನಿಮ್ಮ ಮಾನಿಟರ್ ಮತ್ತು ಫೋನ್ ಮೂಲಕ ವಿಡಿಯೋ ಕಾನ್ಫರೆನ್ಸಿಂಗ್ ಅನ್ನು ಸಹ ಮಾಡಬಹುದಾಗಿದೆ. ಇದಲ್ಲದೆ ಈ ಮಾನಿಟರ್‌ Netflix, YouTube, ಮತ್ತು HBO ನಂತಹ ಮನರಂಜನಾ ಅಪ್ಲಿಕೇಶನ್‌ಗಳಿಗೆ ಪ್ರವೇಶವನ್ನು ಸಹ ನೀಡಲಿದೆ. ಇನ್ನು ಈ ಮಾನಿಟರ್‌ 25% ರಿಯಾಯಿತಿ ಪಡೆದುಕೊಂಡಿದ್ದು, 20,999ರೂ ಬೆಲೆಯಲ್ಲಿ ಖರೀದಿಸಬಹುದಾಗಿದೆ.

ಬೆನ್‌ಕ್ಯೂ
ಅಮೆಜಾನ್‌ ಸೇಲ್‌ನಲ್ಲಿ ಬೆನ್‌ಕ್ಯೂ ಮಾನಿಟರ್‌ 17% ಡಿಸ್ಕೌಂಟ್‌ ಅನ್ನು ಪಡೆದುಕೊಂಡಿದೆ. ಇನ್ನು ಈ ಮಾನಿಟರ್‌ 1920 X 1080 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 27 ಇಂಚಿನ ಫುಲ್‌ ಹೆಚ್‌ಡಿ ಡಿಸ್‌ಪ್ಲೇ ಹೊಂದಿದೆ. ಇದು ಎಡ್ಜ್ ಟು ಎಡ್ಜ್ ಸ್ಲಿಮ್ ಬೆಜೆಲ್ IPS ಪ್ಯಾನೆಲ್ ಅನ್ನು ಹೊಂದಿದೆ. ಈ ಮಾನಿಟರ್‌ 1 VGA ಪೋರ್ಟ್, 1 HDMI ಪೋರ್ಟ್, 1 ಡಿಸ್‌ಪ್ಲೇ ಪೋರ್ಟ್, 1 ಆಡಿಯೋ-ಇನ್ ಪೋರ್ಟ್, 2 ಸ್ಪೀಕರ್‌ಗಳನ್ನು ಬೆಂಬಲಿಸಲಿದೆ. ಜೊತೆಗೆ ಈ ಮಾನಿಟರ್‌ ಲೋ ಬ್ಲೂ ಲೈಟ್ ಟೆಕ್ನಾಲಜಿಯನ್ನು ಹೊಂದಿದೆ. ಇದನ್ನು ನೀವು ಕೇವಲ 14,989ರೂ ಗಳಿಗೆ ಖರೀದಿಸಬಹುದಾಗಿದೆ.

Samsung ಕರ್ವ್ಡ್ LC27F390FHWXXL ಮಾನಿಟರ್
Samsung ಕರ್ವ್ಡ್ LC27F390FHWXXL ಮಾನಿಟರ್ ಕೂಡ ಅಮೆಜಾನ್‌ ಸೇಲ್‌ನಲ್ಲಿ 16% ರಿಯಾಯಿತಿ ಪಡೆದುಕೊಂಡಿದೆ. ಇದು ನಿಮಗೆ ರಿಯಾಯಿತಿ ದರದಲ್ಲಿ ಕೇವಲ 12,498ರೂ.ಗಳಿಗೆ ಲಭ್ಯವಾಗಲಿದೆ. ಇನ್ನು ಈ ಮಾನಿಟರ್‌ 23.5 ಇಂಚಿನ ಡಿಸ್‌ಪ್ಲೇ ಹೊಂದಿದೆ. ಇದು ಫುಲ್‌ ಹೆಚ್‌ಡಿ ಡಿಪ್ಲೇ ಆಗಿದ್ದು, 1920 x 1080 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಹೊಂದಿದೆ. ಇದು ವಿಜಿಎ ಪೋರ್ಟ್, 1 ಎಚ್‌ಡಿಎಂಐ ಪೋರ್ಟ್, 1 ಹೆಡ್‌ಫೋನ್ ಪೋರ್ಟ್ ಅನ್ನು ಬೆಂಬಲಿಸಲಿದೆ.

Lenovo L- ಸರಣಿ
ಈ ಮಾನಿಟರ್‌ 21.5 ಇಂಚಿನ ಫುಲ್‌ ಹೆಚ್‌ಡಿ IPS ಡಿಸ್‌ಪ್ಲೇ ಹೊಂದಿದೆ. ಇದು ಅಲ್ಟ್ರಾಸ್ಲಿಮ್ ಮಾನಿಟರ್ ಆಗಿದ್ದು, 75Hz ರಿಫ್ರೇಶ್‌ ರೇಟ್‌ ಹೊಂದಿದೆ. ಜೊತೆಗೆ AMD ಫ್ರೀಸಿಂಕ್ ಹೊಂದಿದ್ದು, HDMI, VGA, TUV ಲೋ ಬ್ಲೂ ಲೈಟ್ ಮತ್ತು ಫ್ಲಿಕರ್-ಫ್ರೀ ಒಳಗೊಂಡಿದೆ. ಇನ್ನು ಈ ಮಾನಿಟರ್‌ ಅಮೆಜಾನ್‌ ಸೇಲ್‌ನಲ್ಲಿ 34% ರಿಯಾಯಿತಿ ಪಡೆದುಕೊಂಡಿದ್ದು, ಇದು ಕೇವಲ 10,998 ರೂ ಬೆಲೆಗೆ ಲಭ್ಯವಾಗಲಿದೆ.

ಏಸರ್ B227Q
ಈ ಮಾನಿಟರ್‌ 21.5 ಇಂಚಿನ ಫುಲ್‌ HD ಡಿಸ್‌ಪ್ಲೇ ಹೊಂದಿದ್ದು, ಇದು LED ಮಾನಿಟರ್ ಹೊಂದಿದೆ. ಇನ್ನು ಈ ಮಾನಿಟರ್‌ ವಿಂಡೋಸ್ ಹಲೋ ಪ್ರಮಾಣೀಕರಣದೊಂದಿಗೆ ಫುಲ್‌ ಹೆಚ್‌ಡಿ ಹೊಂದಾಣಿಕೆ ವೆಬ್‌ಯಾಮ್ ಹೊಂದಿದೆ. ಈ ಮಾನಿಟರ್ ಬ್ಲೂ ಲೈಟ್ ಶೀಲ್ಡ್ ಮತ್ತು ವಿಷನ್ ಕೇರ್ ತಂತ್ರಜ್ಞಾನವನ್ನು ಹೊಂದಿದ್ದು, ನೀಲಿ ಬೆಳಕನ್ನು ಕಡಿಮೆ ಮಾಡುತ್ತದೆ. ಇನ್ನು ಕನೆಕ್ಟಿವಿಟಿ ಪೋರ್ಟುಗಳಲ್ಲಿ 1 X VGA, 1 X HDMI, 1 X DP, USB3.0 HUB ಇನ್ಬಾಕ್ಸ್ HDMI ಮತ್ತು USB 3.0 ಕೇಬಲ್‌ಗಳನ್ನು ಬೆಂಬಲಿಸಲಿದೆ. ಇದರ ಮೂಲ ಬೆಲೆ 22,500ರೂ ಆಗಿದ್ದು, 33% ರಿಯಾಯಿತಿ ದರದಲ್ಲಿ 14,999ರೂ ಬೆಲೆಗೆ ಲಭ್ಯವಾಗಲಿದೆ.

English summary
Amazon Great Indian Festival 2021 Edition is all set to begin at midnight tonight for Prime members.to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+