Home
Deal of the day

7300 mAh ಬ್ಯಾಟರಿ, 4K ಕ್ಯಾಮೆರಾದ ಈ ಫೋನ್ ಬೆಲೆ ಈಗ ₹20,998!

ಪ್ರಸ್ತುತ ನಡೆಯುತ್ತಿರುವ ಅಮೆಜಾನ್ ಸೇಲ್ ನಿಮ್ಮನ್ನು ಅತ್ಯುತ್ತಮ ರಿಯಾಯಿತಿಗಳೊಂದಿಗೆ ಸ್ವಾಗತಿಸುತ್ತಿದೆ.! ಹಬ್ಬದ ಸೀಸನ್ ಆರಂಭವಾಗಿರುವುದರಿಂದ, ನೀವು ಬೇಕಾದ ಎಲ್ಲಾ ಗ್ಯಾಜೆಟ್‌ಗಳು ಮತ್ತು ಎಲೆಕ್ಟ್ರಾನಿಕ್ಸ್ ಮೇಲೆ ಅದ್ಭುತ ಡೀಲ್‌ಗಳನ್ನು ಪಡೆಯಬಹುದು. ಅದರಲ್ಲೂ ಇತ್ತೀಚಿನ iQOO Z10 5G ಫೋನ್ ಖರೀದಿಸಲು ಇದು ಅತ್ಯುತ್ತಮ ಸಮಯ. 7300 mAh ಬ್ಯಾಟರಿ, 4K ವೀಡಿಯೊ ರೆಕಾರ್ಡಿಂಗ್ ವೈಶಿಷ್ಟ್ಯದಂತ ಹಪ್ರೀಮಿಯಂ ಫೀಚರ್ಸ್ ಹೊಂದಿರುವ ಈ ಫೋನ್ ಈಗ ₹20,998 ರೂ. ಆರಂಭಿಕ ಬೆಲೆಯಲ್ಲಿ ಲಭ್ಯವಿದೆ. ಜೊತೆಗೆ, ಬ್ಯಾಂಕ್ ಕಾರ್ಡ್‌ಗಳ ಮೇಲೆ ತ್ವರಿತ ರಿಯಾಯಿತಿ ಮತ್ತು ಯಾವುದೇ ವೆಚ್ಚವಿಲ್ಲದ EMI ಆಯ್ಕೆಗಳು ಸಹ ಇವೆ. ಆದ್ದರಿಂದ, ನೀವು ಅತಿ ಕಡಿಮೆ ಬೆಲೆಯಲ್ಲಿ ಈ ಪ್ರೀಮಿಯಂ ಸ್ಮಾರ್ಟ್‌ಫೋನ್ ಅನ್ನು ನಿಮ್ಮದಾಗಿಸಿಕೊಳ್ಳಬಹುದು. ಇದು ವರ್ಷದಲ್ಲಿ ಸಿಗುವ ಅತಿ ದೊಡ್ಡ ಆಫರ್ ಎನ್ನಬಹುದು, ಹಾಗಾಗಿ ಈ ಅವಕಾಶವನ್ನು ತಪ್ಪಿಸಿಕೊಳ್ಳಬೇಡಿ!

ಈ ವಿಭಾಗದಲ್ಲಿ ಇದು ಏಕೆ ಉತ್ತಮ?
iQOO Z10 5G ತನ್ನ ವಿಭಾಗದಲ್ಲಿ ಅತ್ಯುತ್ತಮ ಆಯ್ಕೆ ಎಂದು ಪರಿಗಣಿಸಬಹುದು. ಇದಕ್ಕೆ ಮುಖ್ಯ ಕಾರಣ, ಇದರ ಶಕ್ತಿಶಾಲಿ ಸ್ನಾಪ್‌ಡ್ರಾಗನ್ 7s Gen 3 ಪ್ರೊಸೆಸರ್, ಭಾರಿ ಗಾತ್ರದ 7300 mAh ಬ್ಯಾಟರಿ ಮತ್ತು ವೇಗದ 90W ಚಾರ್ಜಿಂಗ್. ಹೆಚ್ಚುವರಿಯಾಗಿ, 50MP OIS ಕ್ಯಾಮೆರಾ ಮತ್ತು 4K ವೀಡಿಯೊ ರೆಕಾರ್ಡಿಂಗ್‌ನಂತಹ ವೈಶಿಷ್ಟ್ಯಗಳು, ಸ್ಪಷ್ಟವಾದ ಮತ್ತು ಪ್ರಕಾಶಮಾನವಾದ AMOLED ಡಿಸ್ಪ್ಲೇಯೊಂದಿಗೆ ಸೇರಿಕೊಂಡು ಇದನ್ನು ಒಂದು ಸಮತೋಲಿತ ಪ್ರೀಮಿಯಂ ಸ್ಮಾರ್ಟ್‌ಫೋನ್ ಆಗಿ ಮಾಡಿದೆ. ನೀವು ಇದನ್ನು ಅಮೆಜಾನ್ ಮಾರಾಟದ ಸಮಯದಲ್ಲಿ ಆಕರ್ಷಕ ಬ್ಯಾಂಕ್ ಕೊಡುಗೆಗಳು ಮತ್ತು EMI ಆಯ್ಕೆಗಳೊಂದಿಗೆ ಖರೀದಿಸಬಹುದು.

7300 mAh ಬ್ಯಾಟರಿ, 4K ಕ್ಯಾಮೆರಾದ ಈ ಫೋನ್ ಬೆಲೆ ಈಗ ₹20,998!

iQOO Z10 5G : ಸಂಪೂರ್ಣ ವೈಶಿಷ್ಟ್ಯಗಳು
iQOO ನಿಂದ ಬಂದಿರುವ ಇತ್ತೀಚಿನ ಮಾದರಿಯಾದ iQOO Z10 5G ಸ್ಮಾರ್ಟ್‌ಫೋನ್ 120Hz ರಿಫ್ರೆಶ್ ದರವನ್ನು ಹೊಂದಿರುವ 6.77 ಇಂಚಿನ ದೊಡ್ಡ AMOLED ಡಿಸ್ಪ್ಲೇಯನ್ನು ಹೊಂದಿದೆ. ಈ ಡಿಸ್ಪ್ಲೇಯು 5000 ನಿಟ್ಸ್ ಗರಿಷ್ಠ (Peak) ಪ್ರಕಾಶಮಾನತೆಯೊಂದಿಗೆ ಬರುತ್ತದೆ. ಇದು ಪ್ರಕಾಶಮಾನವಾದ ಸೂರ್ಯನ ಬೆಳಕಿನಲ್ಲಿಯೂ ಅತ್ಯಂತ ಸ್ಪಷ್ಟ ನೋಟವನ್ನು ಒದಗಿಸುತ್ತದೆ. ಕ್ಯಾಮೆರಾ ಪ್ರಿಯರಿಗಾಗಿ, ಇದು 50MP OIS (ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್) ಮುಖ್ಯ ಕ್ಯಾಮೆರಾ ಮತ್ತು 2MP ಡೆಪ್ತ್ ಸೆನ್ಸರ್ ಅನ್ನು ಹೊಂದಿದೆ. ಹಿಂಬದಿಯ ಮತ್ತು ಮುಂಬದಿಯ ಕ್ಯಾಮೆರಾಗಳಲ್ಲಿ 4K ವೀಡಿಯೊ ರೆಕಾರ್ಡಿಂಗ್ ವೈಶಿಷ್ಟ್ಯವಿದ್ದು, ವೀಡಿಯೊಗ್ರಾಫಿಗೂ ಇದು ಅತ್ಯುತ್ತಮ ಆಯ್ಕೆಯಾಗಿದೆ. ಸೆಲ್ಫಿಗಾಗಿ, ಇದು 32MP ಮುಂಭಾಗದ ಕ್ಯಾಮೆರಾವನ್ನು ಒಳಗೊಂಡಿದೆ.

ಈ iQOO Z10 5G ಫೋನ್ ವೇಗದ ಮತ್ತು ಸುಗಮ ಕಾರ್ಯಕ್ಷಮತೆಗಾಗಿ ಶಕ್ತಿಶಾಲಿ ಸ್ನಾಪ್‌ಡ್ರಾಗನ್ 7s Gen 3 ಮೊಬೈಲ್ ಪ್ಲಾಟ್‌ಫಾರ್ಮ್ ಪ್ರೊಸೆಸರ್‌ನೊಂದಿಗೆ ಬರುತ್ತದೆ. ಇದರ ಜೊತೆಗೆ, ಇದು 8GB ಮತ್ತು 12GB RAM ಆಯ್ಕೆಗಳಲ್ಲಿ ಲಭ್ಯವಿದ್ದು, ಬಹುಕಾರ್ಯಗಳನ್ನು ಸುಲಭವಾಗಿ ನಿರ್ವಹಿಸುತ್ತದೆ. ಬ್ಯಾಟರಿ ವಿಭಾಗದಲ್ಲಿ, ಈ ಪೋನ್ ಅತಿ ದೊಡ್ಡದಾದ 7300 mAh ಬ್ಯಾಟರಿಯನ್ನು ಹೊಂದಿದೆ. ಇದು ದೀರ್ಘಕಾಲದ ಬ್ಯಾಕಪ್ ನೀಡಲು ಸಹಾಯಕವಾಗಿದೆ. ಇದರೊಂದಿಗೆ, ಇದು 90W ಫ್ಲ್ಯಾಶ್‌ಚಾರ್ಜ್ (FlashCharge) ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ, ಇದು ಕಡಿಮೆ ಸಮಯದಲ್ಲಿ ಫೋನ್ ಅನ್ನು ಸಂಪೂರ್ಣವಾಗಿ ಚಾರ್ಜ್ ಮಾಡುತ್ತದೆ. ಕೇವಲ 33 ನಿಮಿಷಗಳಲ್ಲಿ 1% ರಿಂದ 50% ರಷ್ಟು ಚಾರ್ಜ್ ಮಾಡಬಹುದು ಎಂದು ಕಂಪನಿ ಹೇಳಿದೆ.

7300 mAh ಬ್ಯಾಟರಿ, 4K ಕ್ಯಾಮೆರಾದ ಈ ಫೋನ್ ಬೆಲೆ ಈಗ ₹20,998!

ಇನ್ನು ಈ iQOO Z10 5G ಫೋನ್ ಆಂಡ್ರಾಯ್ಡ್ 15 ಆಧಾರಿತ Funtouch OS 15 ನಲ್ಲಿ ಕಾರ್ಯನಿರ್ವಹಿಸುತ್ತದೆ. ಇದು 8GB RAM + 128GB ಸಂಗ್ರಹಣೆ, ಮತ್ತು 8GB RAM + 256GB ಸಂಗ್ರಹಣೆ ಸೇರಿದಂತೆ ವಿವಿಧ ಮಾದರಿಗಳಲ್ಲಿ ಲಭ್ಯವಿದೆ. ಅಮೆಜಾನ್‌ನಲ್ಲಿ ಇದರ ಪ್ರಾರಂಭಿಕ ಬೆಲೆ 8GB RAM, 128GB ಮಾದರಿಗೆ ₹20,998 ಮತ್ತು 8GB RAM, 256GB ಮಾದರಿಗೆ ₹22,998 ಆಗಿದೆ. ಈ ಬೆಲೆಯಲ್ಲಿ iQOO Z10 5G ಫೋನ್ ಖರೀದಿಯು ಯೋಗ್ಯವಾಗಿದೆ ಎಂದು ನಿಮಗೆ ಅನಿಸುತ್ತಿದೆಯೇ?..ಈ ಕೆಳಗೆ ಕಾಮೆಂಟ್ ಮಾಡಿ ತಿಳಿಸಿ.

Best Mobiles in India

English summary
The iQOO Z10 5G, a mid-range champion known for its colossal 7300mAh battery and smooth 120Hz AMOLED display, has hit its lowest price point. With the festive sale in full swing, combine the incredible flat discount with instant bank card offers and No-Cost EMI options to unlock maximum savings.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+