Amazon sale: ಎಕ್ಸ್‌ಚೇಂಜ್ ಆಫರ್‌ನಲ್ಲಿ ಸ್ಮಾರ್ಟ್ ಟಿವಿಗಳಿಗೆ 65% ಡಿಸ್ಕೌಂಟ್!
ಇ-ಕಾಮರ್ಸ್ ದೈತ್ಯ ಅಮೆಜಾನ್ ಆಯೋಜಿಸಿರುವ ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್ ಈಗಾಗಲೇ ಲೈವ್ ಆಗಿದೆ. ಎಂದಿನಂತೆ ಈ ಬಾರಿಯ ಸೇಲ್‌ನಲ್ಲೂ ಸ್ಮಾರ್ಟ್‌ಫೋನ್‌ಗಳು, ಸ್ಮಾರ್ಟ್‌ಟಿವಿ, ಲ್ಯಾಪ್‌ಟಾಪ್‌ಗಳ ಮೇಲೆ ಬಿಗ್ ಡಿಸ್ಕೌಂಟ್ ಸಿಗುತ್ತಿದೆ. ಅದರಲ್ಲೂ ಸ್ಮಾರ್ಟ್‌ಟಿವಿಗಳ ಮೇಲೆ 65% ರಿಯಾಯಿತಿಯನ್ನು ನೀಡುತ್ತಿದ್ದು, ಸ್ಮಾರ್ಟ್‌ಟಿವಿ ಖರೀದಿಸುವವರಿಗೆ ಇದು ಉತ್ತಮ ಅವಕಾಶವಾಗಿದೆ. ನೆಚ್ಚಿನ ಸ್ಮಾರ್ಟ್‌ಟಿವಿಗಳನ್ನ ಡಿಸ್ಕೌಂಟ್‌ನಲ್ಲಿ ಖರೀದಿಸಬಹುದಾಗಿದೆ.

ಹೌದು, ಅಮೆಜಾನ್ ಗ್ರೇಟ್ ಇಂಡಿಯನ್ ಸೇಲ್ ಈಗಾಗಲೇ ಲೈವ್ ಆಗಿದೆ. ಈ ಸೇಲ್‌ನಲ್ಲಿ 4K ಸ್ಮಾರ್ಟ್‌ಟಿವಿಗಳಿಗೆ ಹೆಚ್ಚಿನ ಡಿಸ್ಕೌಂಟ್ ಘೋಷಿಸಿದೆ. ನೋ ಕಾಸ್ಟ್ ಇಎಂಐ ಆಯ್ಕೆಯನ್ನು ಸಹ ನೀಡಲಾಗಿದ್ದು,3,000ರೂ ಗಳಿಂದ ಶುರುವಾಗಲಿದೆ. ಇದಲ್ಲದೆ ಹೆಚ್‌ಡಿಎಫ್‌ಸಿ ಕಾರ್ಡ್ ಮೂಲಕ ಖರೀದಿ ಮಾಡುವವರಿಗೆ 1,500ರೂ.ಗಳ ಕ್ಯಾಶ್‌ಬ್ಯಾಕ್ ಕೂಡ ದೊರೆಯಲಿದೆ. ಹಾಗಾದ್ರೆ ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್‌ನಲ್ಲಿ ನೀವು ಡಿಸ್ಕೌಂಟ್‌ನಲ್ಲಿ ಖರೀದಿಸಬಹುದಾದ ಸ್ಮಾರ್ಟ್‌ಟಿವಿಗಳ ಬಗ್ಗೆ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.
ಮಿ 4K ಅಲ್ಟ್ರಾ ಹೆಚ್‌ಡಿ ಆಂಡ್ರಾಯ್ಡ್ ಸ್ಮಾರ್ಟ್ ಎಲ್ಇಡಿ ಟಿವಿ
ಮಿ 4K ಅಲ್ಟ್ರಾ ಹೆಚ್‌ಡಿ ಆಂಡ್ರಾಯ್ಡ್ ಸ್ಮಾರ್ಟ್ ಎಲ್ಇಡಿ ಟಿವಿ ಅಮೆಜಾನ್ ಸೇಲ್‌ನಲ್ಲಿ 7% ಡಿಸ್ಕೌಂಟ್ ಪಡೆದುಕೊಂಡಿದೆ. ಈ ಸ್ಮಾರ್ಟ್‌ಟಿವಿ ಮೂಲಬೆಲೆ 29,999ರೂ.ಆಗಿದ್ದು, ರಿಯಾಯಿತಿ ದರದಲ್ಲಿ 27,999ರೂ,ಗಳಿಗೆ ಖರೀದಿಸಬಹುದಾಗಿದೆ. ಇನ್ನು ಈ ಸ್ಮಾರ್ಟ್‌ಟಿವಿ 3840x2160 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ 4K ಅಲ್ಟ್ರಾ HD ಸಾಮರ್ಥ್ಯ ಹೊಂದಿದೆ. ಈ ಸ್ಮಾರ್ಟ್‌ಟಿವಿ ಸ್ಪೀಕರ್‌ಗಳು ಅಥವಾ ಗೇಮಿಂಗ್ ಕನ್ಸೋಲ್ ಅನ್ನು ಸಂಪರ್ಕಿಸಲು 3 HDMI ಪೋರ್ಟ್ ಹೊಂದಿದೆ. ಇದರಲ್ಲಿ ಹಾರ್ಡ್ ಡ್ರೈವ್‌ಗಳು ಅಥವಾ ಇತರ ಯುಎಸ್‌ಬಿ ಸಾಧನಗಳನ್ನು ಸಂಪರ್ಕಿಸಲು 2 ಯುಎಸ್‌ಬಿ ಪೋರ್ಟ್‌ಗಳನ್ನು ನೀಡಲಾಗಿದೆ.ಇದು ಇಂಟರ್‌ಬಿಲ್ಟ್ ವೈ-ಫೈ, ಹೊಂದಿದ್ದು, ನೆಟ್ಫ್ಲಿಕ್ಸ್, ಪ್ರೈಮ್ ವೀಡಿಯೊ, ಡಿಸ್ನಿ+ಹಾಟ್‌ಸ್ಟಾರ್ ಅಪ್ಲಿಕೇಶನ್‌ಗೆ ಪ್ರವೇಶವನ್ನು ನೀಡಲಿದೆ.
ಐಫಾಲ್ಕಾನ್ 4K ಅಲ್ಟ್ರಾ ಹೆಚ್‌ಡಿ ಸರ್ಟಿಫೈಡ್ ಆಂಡ್ರಾಯ್ಡ್ ಸ್ಮಾರ್ಟ್ ಟಿವಿ
ಅಮೆಜಾನ್ ಸೇಲ್‌ನಲ್ಲಿ ಈ ಸ್ಮಾರ್ಟ್‌ಟಿವಿ 51% ಡಿಸ್ಕೌಂಟ್ ಪಡೆದುಕೊಂಡಿದೆ. ಇದು ನಿಮಗೆ ಕೇವಲ 51,999ರೂ.ಬೆಲೆಯಲ್ಲಿ ಲಭ್ಯವಾಗಲಿದೆ. ಇನ್ನು ಈ ಸ್ಮಾರ್ಟ್‌ಟಿವಿ 3840 x 2160 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯ ಹೊಂದಿದೆ. ಇದು ಸೆಟ್ ಟಾಪ್ ಬಾಕ್ಸ್ ಸಂಪರ್ಕಿಸಲು 3 HDMI ಪೋರ್ಟ್‌ಗಳನ್ನು ಹೊಂದಿದೆ. ಜೊತೆಗೆ 2 USB ಪೋರ್ಟ್‌ಗಳು ಹಾರ್ಡ್ ಡ್ರೈವ್‌ಗಳನ್ನು ಹೊಂದಿದೆ. ಈ ಸ್ಮಾರ್ಟ್‌ಟಿವಿ ಗೂಗಲ್ ಅಸಿಸ್ಟೆಂಟ್ ಅನ್ನು ಬೆಂಬಲಿಸಲಿದೆ. ಇದು ಬ್ಲೂಟೂತ್ 5.0 ಬೆಂಬಲಿಸಲಿದೆ.
ಸ್ಯಾಮ್‌ಸಂಗ್ ಕ್ರಿಸ್ಟಲ್ 4K ಪ್ರೊ ಸರಣಿ
ಸ್ಯಾಮ್‌ಸಂಗ್ ಕ್ರಿಸ್ಟಲ್ 4K ಪ್ರೊ ಸರಣಿಯ ಅಲ್ಟ್ರಾ ಹೆಚ್‌ಡಿ ಸ್ಮಾರ್ಟ್ ಎಲ್‌ಇಡಿ ಸ್ಮಾರ್ಟ್‌ಟಿವಿ 29% ಡಿಸ್ಕೌಂಟ್ ಪಡೆದುಕೊಂಡಿದೆ. ಇದು ರಿಯಾಯಿತಿ ದರದಲ್ಲಿ 38,990ರೂ.ಗಳಿಗೆ ಲಭ್ಯವಾಗಲಿದೆ. ಇನ್ನು ಈ ಸ್ಮಾರ್ಟ್‌ಟಿವಿ ಗೇಮಿಂಗ್ ಕನ್ಸೋಲ್ ಅನ್ನು ಸಂಪರ್ಕಿಸಲು 3 HDMI ಪೋರ್ಟ್ ಅನ್ನು ಬೆಂಬಲಿಸಲಿದೆ. ಈ ಸ್ಮಾರ್ಟ್ ಟಿವಿ ಪ್ರೈಮ್ ವಿಡಿಯೋ, ಹಾಟ್‌ಸ್ಟಾರ್, ನೆಟ್‌ಫ್ಲಿಕ್ಸ್, ಜೀ 5 ಅಪ್ಲಿಕೇಶನ್‌ಗಳಿಗೆ ಪ್ರವೇಶವನ್ನು ನೀಡಲಿದೆ.
LG 4K ಅಲ್ಟ್ರಾ ಹೆಚ್‌ಡಿ ಸ್ಮಾರ್ಟ್ ಎಲ್ಇಡಿ ಟಿವಿ
LG 4K ಅಲ್ಟ್ರಾ ಹೆಚ್‌ಡಿ ಸ್ಮಾರ್ಟ್ ಎಲ್ಇಡಿ ಟಿವಿ ಅಮೆಜಾನ್ ಸೇಲ್‌ನಲ್ಲಿ 37% ಡಿಸ್ಕೌಂಟ್ ದೊರೆಯಲಿದೆ. ಇದರಿಂದ ರಿಯಾಯಿತಿ ದರದಲ್ಲಿ ನಿಮಗೆ 37,499ರೂ. ಬೆಲೆಗೆ ಲಭ್ಯವಾಗಲಿದೆ. ಇನ್ನು ಈ ಸ್ಮಾರ್ಟ್‌ಟಿವಿ 4K ಅಲ್ಟ್ರಾ HD ರೆಸಲ್ಯೂಶನ್ ಹೊಂದಿದೆ. ಇದರಲ್ಲಿ ಸೆಟ್ ಟಾಪ್ ಬಾಕ್ಸ್ ಕನೆಕ್ಟ್ ಮಾಡಲು 2 HDMI ಪೋರ್ಟ್, ಗೇಮಿಂಗ್ ಕನ್ಸೋಲ್ ಅನ್ನು ಬೆಂಬಲಿಸಲಿದೆ. ಇದು WebOS ಸ್ಮಾರ್ಟ್ ಟಿವಿ, AI ThinQ ಬೆಂಬಲಿಸಲಿದೆ. ಇದು ಇಂಟರ್‌ಬಿಲ್ಟ್ ಗೂಗಲ್ ಅಸಿಸ್ಟೆಂಟ್ ಮತ್ತು ಅಲೆಕ್ಸಾವನ್ನು ಹೊಂದಿದೆ. ಇದಲ್ಲದೆ ನೆಟ್‌ಫ್ಲಿಕ್ಸ್, ಪ್ರೈಮ್ ವಿಡಿಯೋ, ಡಿಸ್ನಿ+ ಹಾಟ್‌ಸ್ಟಾರ್, ಆಪಲ್ ಟಿವಿ, ಸೋನಿಲೈವ್, ಡಿಸ್ಕವರಿ+, ಜೀ 5, ವೂಟ್, ಅಪ್ಲಿಕೇಶನ್‌ಗಳಿಗೆ ಪ್ರವೇಶವನ್ನು ನೀಡಲಿದೆ. ಇದಲ್ಲದೆ YuppTV, Youtube, Eros Now ಅನ್ನು ಕೂಡ ಬೆಂಬಲಿಸಲಿದೆ.


Click it and Unblock the Notifications