MacBook Air (2025) ಈಗ ಹೆಚ್ಚು ಕೈಗೆಟುಕುವ ಆಯ್ಕೆ!
ಆಪಲ್ ತನ್ನ ಲ್ಯಾಪ್‌ಟಾಪ್ ಶ್ರೇಣಿಯಲ್ಲಿ ಹೊಸ ಅಧ್ಯಾಯವನ್ನೇ ಬರೆದ MacBook Air (2025) ಅನ್ನು ಈ ವರ್ಷದ ಮಾರ್ಚ್‌ನಲ್ಲಿ ಭಾರತದಲ್ಲಿ ಪರಿಚಯಿಸಿತ್ತು. ಆಪಲ್‌ನ ಶಕ್ತಿಶಾಲಿ M4 ಚಿಪ್ ಹೊಂದಿರುವ ಈ ಲ್ಯಾಪ್‌ಟಾಪ್, ಮುಂದಿನ M5 ಪ್ರೊಸೆಸರ್ ಬಿಡುಗಡೆಯಾಗುವವರೆಗೆ ಬಳಕೆದಾರರಿಗೆ ಪ್ರೀಮಿಯಂ ಕಾರ್ಯಕ್ಷಮತೆಯ ಅನುಭವ ನೀಡಲು ಸಿದ್ಧವಾಗಿದೆ. ಬಿಡುಗಡೆಗೊಂಡು ಕೆಲ ತಿಂಗಳುಗಳಾದ ಬಳಿಕ, ಇದೀಗ MacBook Air (2025) ಮೇಲೆ ಭಾರತದಲ್ಲಿ ಭರ್ಜರಿ ಬೆಲೆ ಇಳಿಕೆ ಲಭ್ಯವಾಗಿದೆ.!
ಹೌದು, ಇತ್ತೀಚೆಗೆ Amazonನಲ್ಲಿ MacBook Air (2025) 13-ಇಂಚಿನ ಬೇಸ್ ಮಾದರಿ (16GB RAM ಮತ್ತು 256GB ಸ್ಟೋರೇಜ್) ರೂ.90,900 ಆರಂಭಿಕ ದರದಲ್ಲಿ ಮಾರಾಟವಾಗುತ್ತಿದೆ. ಇದು ಲಾಂಚ್ ಸಮಯದ ರೂ.99,900 ಬೆಲೆಯೊಂದಿಗೆ ಹೋಲಿಸಿದರೆ ರೂ.10,000 ವರೆಗೆ ನೇರ ರಿಯಾಯಿತಿ ಆಗಿದೆ. ಈ ಬೆಲೆ ಕಳೆದ ಕೆಲವು ವಾರಗಳಲ್ಲಿ ಕಂಡ ಅತ್ಯಂತ ಕಡಿಮೆ ಬೆಲೆಯಾಗಿದ್ದು, ಇದರಿಂದ ಹೊಸ ಮ್ಯಾಕ್ ಖರೀದಿಗೆ ಇದು ಉತ್ತಮ ಸಮಯವಾಗಬಹುದು.
ಗಮನಿಸಬೇಕಾದ ವಿಷಯವೆಂದರೆ, ಈ ವಿಶೇಷ ದರವು Starlight ಬಣ್ಣದ ವೇರಿಯಂಟ್‌ಗೆ ಮಾತ್ರ ಅನ್ವಯಿಸುತ್ತದೆ. ಇತರ ಬಣ್ಣಗಳಾದ Sky Blue, Silver ಮತ್ತು Midnight ಆಯ್ಕೆಗಳು ಸ್ವಲ್ಪ ಹೆಚ್ಚಾದ ದರದಲ್ಲಿ ಲಭ್ಯವಿದ್ದು, ಅವುಗಳ ಬೆಲೆ ರೂ.92,900 ರಿಂದ ರೂ.94,990 ವರೆಗೆ ಇದೆ. ಹೆಚ್ಚಿನ ಸ್ಟೋರೇಜ್ ಬೇಕಾದವರಿಗೆ 16GB RAM ಮತ್ತು 512GB ಸ್ಟೋರೇಜ್ ಹೊಂದಿರುವ ಮಾದರಿ ಇದೀಗ ರೂ.1,11,900 ಕ್ಕೆ ಲಭ್ಯವಿದ್ದು, ಇದು ಅದರ ಮೂಲ ಬೆಲೆಗೆ ಹೋಲಿಸಿದರೆ ಗಮನಾರ್ಹ ಇಳಿಕೆ ಆಗಿದೆ.

ದರ ಇಳಿಕೆಯ ಜೊತೆಗೆ, Amazon ಕೆಲವು ಬ್ಯಾಂಕ್ ಆಫರ್‌ಗಳನ್ನೂ ನೀಡುತ್ತಿದೆ. ICICI ಮತ್ತು SBI ಕ್ರೆಡಿಟ್ ಕಾರ್ಡ್ ಬಳಕೆದಾರರಿಗೆ ರೂ.5,000 ತಕ್ಷಣದ ರಿಯಾಯಿತಿ ದೊರೆಯುವುದರಿಂದ ಒಟ್ಟು ಉಳಿತಾಯ ಇನ್ನಷ್ಟು ಹೆಚ್ಚಾಗುತ್ತದೆ. ಈ ಕಾರಣದಿಂದ ವಿದ್ಯಾರ್ಥಿಗಳು, ವೃತ್ತಿಪರರು ಮತ್ತು ಕ್ರಿಯೇಟಿವ್ ಬಳಕೆದಾರರಿಗೆ MacBook Air (2025) ಈಗ ಹೆಚ್ಚು ಕೈಗೆಟುಕುವ ಆಯ್ಕೆಯಾಗಿದೆ.
ಫೀಚರ್ಸ್‌ಗಳನ್ನು ನೋಡುವುದಾದರೆ, MacBook Air (2025) ನಲ್ಲಿ ಆಪಲ್‌ನ M4 ಪ್ರೊಸೆಸರ್ ಬಳಸಲಾಗಿದ್ದು, ಇದು 10-ಕೋರ್ CPU, 8-ಕೋರ್ GPU ಮತ್ತು 16-ಕೋರ್ Neural Engine ಅನ್ನು ಒಳಗೊಂಡಿದೆ. ಮಲ್ಟಿಟಾಸ್ಕಿಂಗ್, ಎಡಿಟಿಂಗ್‌ಗೂ ಈ ಚಿಪ್ ಉತ್ತಮವಾಗಿದೆ.

MacBook Air (2025) ನಲ್ಲಿ 13-ಇಂಚಿನ Super Retina ಡಿಸ್ಪ್ಲೇ ಇದ್ದು, 2,560×1,664 ಪಿಕ್ಸೆಲ್ ರೆಸಲ್ಯೂಷನ್ ಮತ್ತು 500 ನಿಟ್ಸ್ ಬ್ರೈಟ್‌ನೆಸ್ ಹೊಂದಿದೆ. ಜೊತೆಗೆ, 6K ಡಿಸ್ಪ್ಲೇಗಳನ್ನು ಒಂದೇ ಸಮಯದಲ್ಲಿ ಸಂಪರ್ಕಿಸುವ ಸೌಲಭ್ಯವೂ ಇದರಲ್ಲಿ ಇದೆ, ಇದು ಪ್ರೊಫೆಷನಲ್ ಬಳಕೆದಾರರಿಗೆ ವಿಶೇಷವಾಗಿದೆ.
ಆಡಿಯೋ ಮತ್ತು ಸಂಪರ್ಕ ಆಯ್ಕೆಗಳಲ್ಲಿಯೂ MacBook Air (2025) ಶಕ್ತಿಯುತ. ಕ್ವಾಡ್ ಸ್ಪೀಕರ್ ವ್ಯವಸ್ಥೆ, Spatial Audio ಬೆಂಬಲ, ಮೂರು ಮೈಕ್ರೋಫೋನ್ಸ್, Wi-Fi 6E, Bluetooth 5.3, USB 4 ಪೋರ್ಟ್‌ಗಳು, MagSafe 3 ಚಾರ್ಜಿಂಗ್ ಮತ್ತು Touch ID ಭದ್ರತಾ ವ್ಯವಸ್ಥೆಗಳಿವೆ.
ಬ್ಯಾಟರಿ ವಿಷಯಕ್ಕೆ ಬಂದರೆ, MacBook Air (2025) ನಲ್ಲಿ 53.8Wh ಬ್ಯಾಟರಿ ನೀಡಲಾಗಿದ್ದು, 70W ವೇಗದ ಚಾರ್ಜಿಂಗ್ ಬೆಂಬಲಿಸುತ್ತದೆ. ದೀರ್ಘ ಕಾಲ ಬಳಕೆಗೆ ಇದು ಸೂಕ್ತವಾಗಿದ್ದು, ಕೆಲಸ ಮತ್ತು ಮನರಂಜನೆ ಎರಡಕ್ಕೂ ನಂಬಿಕೆಯ ಸಾಧನವಾಗುತ್ತದೆ.
ಒಟ್ಟಾರೆಯಾಗ, ಇತ್ತೀಚಿನ ಬೆಲೆ ಇಳಿಕೆ ಮತ್ತು ಬ್ಯಾಂಕ್ ಆಫರ್‌ಗಳೊಂದಿಗೆ MacBook Air (2025) ಭಾರತದಲ್ಲಿ ಅತ್ಯುತ್ತಮ ಪ್ರೀಮಿಯಂ ಲ್ಯಾಪ್‌ಟಾಪ್ ಡೀಲ್‌ಗಳಲ್ಲೊಂದು ಎನ್ನಬಹುದು. ಹೊಸ ಮ್ಯಾಕ್ ಖರೀದಿಸಲು ಯೋಚಿಸುತ್ತಿರುವವರಿಗೆ ಇದು ಈಗ ಸೂಕ್ತ ಸಮಯವಾಗಿದೆ.


Click it and Unblock the Notifications








