Black Friday Sale 2025: ಪ್ರೀಮಿಯಂ ಫೋನ್ ಖರೀದಿಸಲು ಇದು ಸಕಾಲ!
ಭಾರತದಲ್ಲಿನ ಸ್ಮಾರ್ಟ್‌ಫೋನ್ ಖರೀದಿದಾರರು Black Friday Sale 2025 ರ ಆರಂಭಕ್ಕಾಗಿ ಅತ್ಯಂತ ಕಾತರದಿಂದ ಕಾಯುತ್ತಿದ್ದರು. ಈಗ ಈ ಬಹುನಿರೀಕ್ಷಿತ ಸೇಲ್ Amazon, Croma, Vijay Sales, ಮತ್ತು Reliance Digital ನಂತಹ ಪ್ರಮುಖ ರಿಟೇಲ್ ಮತ್ತು ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಆರಂಭಗೊಂಡಿದೆ. ಈ ವರ್ಷದ ಡೀಲ್‌ಗಳು ಹಿಂದೆಂದಿಗಿಂತಲೂ ಜೋರಾಗಿದ್ದು, ವಿಶೇಷವಾಗಿ ಪ್ರೀಮಿಯಂ ಸ್ಮಾರ್ಟ್‌ಫೋನ್‌ಗಳ ಮೇಲೆ ಗಮನಾರ್ಹ ರಿಯಾಯಿತಿಗಳು ಘೋಷಣೆಯಾಗಿವೆ. Apple ಕಂಪನಿಯಿಂದಲೂ ಬೆಲೆ ಇಳಿಕೆ ಘೋಷಣೆಯಾಗಿರುವುದರಿಂದ, ಹೊಸ ಐಫೋನ್‌ಗೆ ಅಥವಾ ಫ್ಲಾಗ್‌ಶಿಪ್ ಆಂಡ್ರಾಯ್ಡ್ ಫೋನ್‌ಗೆ ಬದಲಾಯಿಸಲು ಇದು ಸುವರ್ಣಾವಕಾಶವಾಗಿದೆ. ಹಾಗಾದರೆ, ಪ್ರಸ್ತುತ iPhone ಮತ್ತು ಫ್ಲಾಗ್‌ಶಿಪ್ Android ಫೋನ್‌ಗಳ ಮೇಲಿರುವ ಅತ್ಯುತ್ತಮ ಡೀಲ್‌ಗಳು ಯಾವುವು ಎಂಬುದನ್ನು ನೋಡೊಣ ಬನ್ನಿ.
ಪ್ರೀಮಿಯಂ iPhone ವಿಭಾಗದಲ್ಲಿ, ಶಕ್ತಿಶಾಲಿ iPhone 16 Pro Max ಅನ್ನು Reliance Digital ನಲ್ಲಿ ಮೂಲ ಬೆಲೆಗಿಂತ ₹10,000 ಕಡಿತಗೊಂಡು ₹1,34,900 ಕ್ಕೆ ಖರೀದಿಸಬಹುದು. ಬ್ಯಾಂಕ್ ಕೊಡುಗೆಗಳೊಂದಿಗೆ ನೀವು ಬೆಲೆಯನ್ನು ಮತ್ತಷ್ಟು ಕಡಿಮೆ ಮಾಡಬಹುದಾಗಿದ್ದು, Axis Bank ಕಾರ್ಡ್ ಹೊಂದಿರುವ ಗ್ರಾಹಕರಿಗೆ ₹6,000 ಹೆಚ್ಚುವರಿ ರಿಯಾಯಿತಿ ಲಭ್ಯವಿದೆ. ಇದರಿಂದ iPhone 16 Pro Max ಪೋನಿನ ಪರಿಣಾಮಕಾರಿ ಬೆಲೆ ಕೇವಲ ₹1,28,900 ಕ್ಕೆ ಇಳಿಯುತ್ತದೆ.
ಇದೇ ರೀತಿ, ಲೈಫ್‌ಸ್ಟೈಲ್-ಫಸ್ಟ್ ಬಳಕೆದಾರರಿಗಾಗಿ ವಿನ್ಯಾಸಗೊಳಿಸಸಲಾದ ಇತ್ತೀಚಿನ ಲೈಟ್ ಮತ್ತು ಸ್ಟೈಲಿಷ್ iPhone Air ಕೂಡ ಡೀಲ್‌ಗಳಲ್ಲಿ ಗಮನ ಸೆಳೆದಿದೆ. ಬ್ಲ್ಯಾಕ್ ಫ್ರೈಡೇ ಸೇಲ್ ಸಮಯದಲ್ಲಿ, Croma ಮತ್ತು Vijay Sales ನಲ್ಲಿ ಇದರ ಬೆಲೆ ಕ್ರಮವಾಗಿ ₹1,12,900 ಮತ್ತು ₹1,12,690 ಕ್ಕೆ ಇಳಿಕೆಯಾಗಿದೆ. ಗ್ರಾಹಕರು ICICI ಮತ್ತು SBI ಕಾರ್ಡ್‌ಗಳನ್ನು ಬಳಸಿಕೊಂಡು ಈ ಫೋನ್ ಮೇಲೆ ₹4,000 ರಿಯಾಯಿತಿಯನ್ನು ಪಡೆಯಬಹುದು.
ಇನ್ನು ಹೊಸದಾಗಿ ಬಿಡುಗಡೆಯಾದ ಬೇಸಿಕ್ iPhone 17 ಮಾದರಿ ಮೇಲೆ ಯಾವುದೇ ಬೆಲೆ ಬದಲಾವಣೆ ಆಗಿಲ್ಲ. ಆದರೆ, ಗ್ರಾಹಕರು HSBC ಮತ್ತು HDFC ಕಾರ್ಡ್‌ಗಳ ಮೂಲಕ ₹4,500 ವರೆಗೆ ರಿಯಾಯಿತಿ ಪಡೆಯಲು ಅವಕಾಶವಿದೆ. ಬಿಡುಗಡೆಯಾದ ಕೇವಲ ಮೂರು ತಿಂಗಳಲ್ಲಿ iPhone 17 ಬೆಲೆ ಇಳಿಕೆಯನ್ನು ನಾವು ಎದುರು ನೊಡಲು ಸಾಧ್ಯವಿಲ್ಲ. ಹಾಗಾಗಿ, ತುರ್ತು ಅಗತ್ಯವಿಲ್ಲದವರು ಹೊಸ ವರ್ಷದ ನಂತರ ಹೆಚ್ಚಿನ ಬೆಲೆ ಇಳಿಕೆ ಕಾಣುವ ನಿರೀಕ್ಷೆಯಲ್ಲಿರಬಹುದು.

ಇ್ನನು ಬಜೆಟ್‌ನಲ್ಲಿ iPhone ಬೇಕಾದವರಿಗೆ ಈ ಸೇಲ್‌ನಲ್ಲಿ ಸಿಗುವ ಅತ್ಯುತ್ತಮ ವ್ಯಾಲ್ಯೂ ಡೀಲ್ ಎಂದರೆ iPhone 15.! ನೀವು ಈಗ Amazon ನಲ್ಲಿ ಗ್ರೀನ್ ಬಣ್ಣದ ಮಾದರಿಯನ್ನು ಕೇವಲ ₹50,990 ಕ್ಕೆ ಖರೀದಿಸಬಹುದು, ಇದು ಇತ್ತೀಚಿನ ದಿನಗಳಲ್ಲಿ ಲಭ್ಯವಿರುವ ಅತ್ಯಂತ ಕಡಿಮೆ ಬೆಲೆಯಾಗಿದೆ. Croma ಮತ್ತು Vijay Sales ಕೂಡ ₹55,000 ಒಳಗೆ ಈ ಫೋನನ್ನು ಮಾರುತ್ತಿವೆ. ಆಪಲ್ ಐಫೋನ್ ಅತ್ಯಂತ ಕಡಿಮೆ ಬೆಲೆಗೆ ಬೇಕು ಎಂದಾದಾರೆ ನೀವು ಈ ಹಂದಿನ ಪೀಳಿಗೆ ಫೋನ್ ಅನ್ನು ಆಯ್ದುಕೊಳ್ಳಬಹುದು.
ಇದರ ಜೊತೆಗೆ, ಪ್ರೀಮಿಯಂ Android ಖರೀದಿಸಲು ಬಯಸುವವರಿಗೆ Black Friday Sale ಉತ್ತಮ ಅವಕಾಶ ನೀಡಿದೆ. Samsung Galaxy S24 Ultra ನೇರ ಕಡಿತದೊಂದಿಗೆ ₹84,999 ಕ್ಕೆ ಲಭ್ಯವಾದರೆ, Amazon ನಲ್ಲಿ OnePlus 15 ಬ್ಯಾಂಕ್ ಆಫರ್‌ಗಳ ನಂತರ ₹69,499 ಕ್ಕೆ ಸಿಗಲಿದೆ. ಇನ್ನು OnePlus 13 ಹೊಸ ಕಡಿತದ ನಂತರ ₹65,999 ಕ್ಕೆ, Realme GT 7 Pro ₹50,998 ಕ್ಕೆ ಲಭ್ಯವಿದೆ. ಅತ್ಯುತ್ತಮ ಮಿಡ್-ರೇಂಜ್ ಆಯ್ಕೆಯಾದ iQOO Neo 10R ಕಾರ್ಡ್ ಆಫರ್‌ಗಳೊಂದಿಗೆ ₹23,999 ಕ್ಕೆ ಸಿಗುತ್ತಿದೆ.
ಒಟ್ಟಾರೆಯಾಗಿ ಹೇಳುವುದಾದರೆ, ಈ ವರ್ಷದ Black Friday Sale ನಲ್ಲಿ iPhone ಹಾಗೂ Android ಎರಡೂ ವಿಭಾಗಗಳು ಸ್ಮಾರ್ಟ್‌ಫೋನ್ ಖರೀದಿಗೆ ಅತ್ಯುತ್ತಮ ಅವಕಾಶ ನೀಡುತ್ತಿವೆ. ಈ ಬೆಲೆಗಳು ನಿಮ್ಮ ಬಜೆಟ್‌ಗೆ ತಕ್ಕಂತೆ ಇರುವ ಸಾಧ್ಯತೆ ಹೆಚ್ಚಾಗಿದೆ. iPhone 15 ಮತ್ತು OnePlus 15 ಮಾದರಿಗಳು ತಮ್ಮ ಬೆಲೆ ಮತ್ತು ಕಾರ್ಯಕ್ಷಮತೆಯ ಅನುಪಾತದಲ್ಲಿ ಈ ಸೇಲ್‌ನ ಅತ್ಯುತ್ತಮ ಡೀಲ್‌ಗಳಾಗಿ ಗುರುತಿಸಿಕೊಂಡಿವೆ. ನಿಮ್ಮ ಅಗತ್ಯತೆಗಳನ್ನು ಮತ್ತು ಬಜೆಟ್ ಅನ್ನು ಪರಿಗಣಿಸಿ ಈ ಸೇಲ್‌ನಲ್ಲೇ ಹೊಸ ಫೋನ್‌ಗೆ ಅಪ್‌ಗ್ರೇಡ್ ಮಾಡಲು ಯೋಜಿಸಬಹುದು.


Click it and Unblock the Notifications








