Home
Deal of the day

ಕ್ರೋಮಾ ಸೇಲ್ ಆರಂಭ: ಹೊಸ iPhone Air ಖರೀದಿಗೆ ಬಿಗ್ ಆಫರ್!

ಭಾರತದಲ್ಲಿ ಬ್ಲ್ಯಾಕ್ ಫ್ರೈಡೇ ಸೇಲ್‌ಗಳು ಆರಂಭವಾಗುತ್ತಿದ್ದು, ಸ್ಮಾರ್ಟ್‌ಫೋನ್ ಖರೀದಿಸಲು ಇದು ಅತ್ಯುತ್ತಮ ಸಮಯ. ಕ್ರೋಮಾ ಕೂಡ ಈ ಸೇಲ್‌ನಲ್ಲಿ ಭಾಗವಹಿಸಿದ್ದು, ನವೆಂಬರ್ 22ರಿಂದ ನವೆಂಬರ್ 30ರವರೆಗೆ ವಿವಿಧ ಉತ್ಪನ್ನಗಳ ವ್ಯಾಪಕ ಶ್ರೇಣಿಗೆ ಆಕರ್ಷಕ ರಿಯಾಯಿತಿಗಳನ್ನು ನೀಡುತ್ತಿದೆ. ವಿಶೇಷವಾಗಿ, ಹೊಸದಾಗಿ ಬಿಡುಗಡೆಯಾದ iPhone Air 256GB ಮಾದರಿಯ ಮೇಲೆ ಅಪರೂಪದ ಹಾಗೂ ಭಾರೀ ರಿಯಾಯಿತಿ ಲಭ್ಯವಿದೆ. ಹೆಚ್ಚುವರಿ ಬ್ಯಾಂಕ್ ಆಫರ್‌ಗಳೊಂದಿಗೆ, ಇದರ ಪರಿಣಾಮಕಾರಿ ಬೆಲೆ ಬಿಡುಗಡೆ ಬೆಲೆಯಿಗಿಂತ ಬಹಳ ಕಡಿಮೆಯಾಗಿ, ಇದು ಅಪ್‌ಗ್ರೇಡ್ ಮಾಡಲು ಸೂಕ್ತ ಅವಕಾಶವಾಗಿದೆ.

ಕ್ರೋಮಾ iPhone Air (256GB) ಮಾದರಿಯನ್ನು ಅದರ ಮೂಲ ಬೆಲೆ ₹1,19,900 ರಿಂದ ₹1,12,900 ಕ್ಕೆ ಇಳಿಸಿದೆ. ಅಂದರೆ ತಕ್ಷಣವೇ ₹7,000 ರಿಯಾಯಿತಿ ದೊರೆತಿದೆ. ಇದಕ್ಕೆ ಹೆಚ್ಚುವರಿಯಾಗಿ, ಕ್ರೋಮಾ ICICI, IDFC First Bank ಮತ್ತು SBI ಕ್ರೆಡಿಟ್ ಕಾರ್ಡ್‌ಗಳಿಗೆ ₹4,000 ತಕ್ಷಣದ ಬ್ಯಾಕ್ ಆಫರ್ ನೀಡುತ್ತಿದೆ. ಜೊತೆಗೆ 6 ತಿಂಗಳವರೆಗೆ ಕಡಿಮೆ-ವೆಚ್ಚದ EMI ಸೌಲಭ್ಯವೂ ಲಭ್ಯ. ಈ ಎಲ್ಲಾ ಆಫರ್‌ಗಳನ್ನು ಸೇರಿಸಿದಾಗ, ಒಟ್ಟು ಪರಿಣಾಮಕಾರಿ ರಿಯಾಯಿತಿ ₹11,000 ಆಗುತ್ತದೆ. ಸಾಮಾನ್ಯವಾಗಿ Apple ಉತ್ಪನ್ನಗಳು ಬಿಡುಗಡೆಯಾದ ತಕ್ಷಣ ಇಷ್ಟು ಬೆಲೆ ಇಳಿಕೆ ಕಾಣಿಸುವುದು ಅಪರೂಪದಲ್ಲಿ ಅಪರೂಪ.

Apple ಪರಿಚಯಿಸಿರುವ ಅತ್ಯಂತ ಸ್ಲಿಮ್ ಫೋನ್ iPhone Air. ಇದು ಕೇವಲ 5.6 mm ದಪ್ಪವಿದೆ. ಈ ಹೊಸ ಸಾಧನವು ಹೊಳಪುಳ್ಳ ಟೈಟಾನಿಯಂನಿಂದ ಮಾಡಿದ ಇದರ ವಿನ್ಯಾಸವು ಪ್ರೀಮಿಯಂ ಅನುಭವ ನೀಡುತ್ತದೆ ಮತ್ತು ಇದು ಉನ್ನತ ದರ್ಜೆಯ ತಂತ್ರಜ್ಞಾನ ಹಾಗೂ ವಿಶಿಷ್ಟ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಈ ಫೋನಿನ ಪ್ರಮುಖ ವೈಶಿಷ್ಟ್ಯಗಳು ಹೀಗಿವೆ,

ಕ್ರೋಮಾ ಸೇಲ್ ಆರಂಭ: ಹೊಸ iPhone Air ಖರೀದಿಗೆ ಬಿಗ್ ಆಫರ್!

iPhone Air ಒಂದು 6.5-ಇಂಚಿನ ProMotion OLED ಡಿಸ್‌ಪ್ಲೇಯನ್ನು ಹೊಂದಿದೆ, ಇದು 120 Hz ರಿಫ್ರೆಶ್ ರೇಟ್ ಮತ್ತು 3,000 nits ಗರಿಷ್ಠ ಪ್ರಕಾಶಮಾನತೆಯನ್ನು ಒದಗಿಸುತ್ತದೆ ಎಂದು ಆಪಲ್ ಹೇಳಿಕೊಂಡಿದೆ. ಇದರ ಮುಂಭಾಗ ಮತ್ತು ಹಿಂಭಾಗದಲ್ಲಿ, Ceramic Shield 2 ಗ್ಲಾಸ್ ಅನ್ನು ಬಳಸಲಾಗಿದ್ದು, ಇದು ಗೀರುಗಳಿಗೆ 4 ಪಟ್ಟು ಹೆಚ್ಚು ಪ್ರತಿರೋಧಕವಾಗಿದೆ ಮತ್ತು ಬೆಳಕಿನ ಪ್ರತಿಫಲನವನ್ನು ಕಡಿಮೆ ಮಾಡುವ ಕೋಟಿಂಗ್ ಅನ್ನು ಹೊಂದಿದೆ ಎಂದು ಕಂಪೆನಿ ತಿಳಿಸಿದೆ.

ಈ ಹೊಸ iPhone Air ಸಾಧನವು ಹೊಸ A19 Pro ಚಿಪ್‌ನಿಂದ ಕಾರ್ಯನಿರ್ವಹಿಸುತ್ತದೆ, ಇದು Apple Intelligence ಸೇರಿದಂತೆ ಅತ್ಯಾಧುನಿಕ AI ಕಾರ್ಯಗಳನ್ನು ನಿರ್ವಹಿಸಲು ಶಕ್ತಿಯನ್ನು ಒದಗಿಸುತ್ತದೆ. ಇದರ ಜೊತೆಗೆ, ವೇಗದ ಸಂಪರ್ಕಕ್ಕಾಗಿ C1x ಮೊಡೆಮ್ ಮತ್ತು N1 ಚಿಪ್ (Wi-Fi 7, Bluetooth 6, Thread) ಅನ್ನು ಒಳಗೊಂಡಿದೆ. ಸಾಫ್‌ವೇರ್ ವಿಭಾಗದಲ್ಲಿ, ಈ ಹೊಸ ಫೋನ್, iOS 26 ನೊಂದಿಗೆ ಬರುತ್ತದೆ, ಇದರಲ್ಲಿ ಹೊಸ Liquid Glass ವಿನ್ಯಾಸ ಭಾಷೆಯನ್ನು ಪರಿಚಯಿಸಲಾಗಿದೆ.

Apple ಇದರ ಬ್ಯಾಟರಿ ಬಾಳಿಕೆಯನ್ನು "ದಿನವಿಡೀ" ಎಂದು ಹೇಳುತ್ತದೆ ಮತ್ತು 40 ಗಂಟೆಗಳವರೆಗೆ ವೀಡಿಯೊ ಪ್ಲೇಬ್ಯಾಕ್ ನೀಡುತ್ತದೆ ಎಂದು ಹೇಳಿಕೊಂಡಿದೆ. ಹ್ಯಾಂಡ್‌ಸೆಟ್ ಅನ್ನು 30 ನಿಮಿಷಗಳಲ್ಲಿ ಶೇಕಡಾ 50 ರಷ್ಟು ಚಾರ್ಜ್ ಮಾಡಬಹುದು ಎಂದು ತಿಳಿಸಲಾಗಿದೆ. ಈ ಮಾದರಿಗಾಗಿ ವಿಶೇಷವಾಗಿ ವಿನ್ಯಾಸಗೊಳಿಸಲಾದ ತೆಳುವಾದ MagSafe ಬ್ಯಾಟರಿ ಪ್ಯಾಕ್ ಸಹ ಲಭ್ಯವಿದೆ. ಆದರೆ ಬ್ಯಾಟರಿ ಸಾಮರ್ಥ್ಯ ಎಷ್ಟು ಎಂಬ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. ಈ iPhone Air ಫೋನಿನಲ್ಲಿ eSIM ಮಾತ್ರ ಇದೆ. ಇದರಿಂದ ಇದರ ವಿನ್ಯಾಸ ಇನ್ನಷ್ಟು ತೆಳುವಾಗಿದೆ.

ಕ್ಯಾಮೆರಾ ವಿಭಾಗದಲ್ಲಿಯೂ ಸಗ iPhone Air ಪ್ರಭಾವಶಾಲಿ ವೈಶಿಷ್ಟ್ಯಗಳನ್ನು ಹೊಂದಿದೆ. ಇದು 48 MP ಮುಖ್ಯ ಕ್ಯಾಮೆರಾ ಮತ್ತು AI-ಆಧಾರಿತ 2x ಆಪ್ಟಿಕಲ್ ಗುಣಮಟ್ಟದ ಜೂಮ್‌ನೊಂದಿಗೆ 12 MP ಟೆಲಿಫೋಟೋ ಲೆನ್ಸ್ ಅನ್ನು ಒಳಗೊಂಡಿದೆ. ಮುಂಭಾಗದಲ್ಲಿ, ಸೆಂಟರ್ ಸ್ಟೇಜ್ ವೈಶಿಷ್ಟ್ಯದೊಂದಿಗೆ 18 MP ಸೆಲ್ಫಿ ಕ್ಯಾಮೆರಾ ಇದೆ. ಅತಿ ಸ್ಲಿಮ್ ವಿನ್ಯಾಸದ ಹೊರತಾಗಿಯೂ ಆಪಲ್ ಈ ಸಾಧನದಲ್ಲಿ ಉತ್ತಮ ಕ್ಯಾಮರಾವನ್ನು ಅಳವಡಿಸುವಲ್ಲಿ ಸಫಲವಾಗಿರುವಂತೆ ಕಾಣುತ್ತಿದೆ.

ಒಟ್ಟಾರೆಯಾಗಿ, iPhone Air ನವೀನ ವಿನ್ಯಾಸ ಮತ್ತು ಉನ್ನತ ತಂತ್ರಜ್ಞಾನದ ಸಂಯೋಜನೆಯಾಗಿದ್ದು, ಇದು Apple ನ iPhone ಶ್ರೇಣಿಯಲ್ಲಿ ಹೊಸ ಮಾನದಂಡಗಳನ್ನು ಸ್ಥಾಪಿಸಿದೆ. ಇದರ ಅತ್ಯಂತ ತೆಳುವಾದ ವಿನ್ಯಾಸ, ಪ್ರಬಲ A19 Pro ಚಿಪ್, ಸುಧಾರಿತ ಕ್ಯಾಮೆರಾ ವ್ಯವಸ್ಥೆ ಮತ್ತು ಸುದೀರ್ಘ ಬ್ಯಾಟರಿ ಬಾಳಿಕೆಯು ಗ್ರಾಹಕರನ್ನು ಆಕರ್ಷಿಸಿದೆ.

Best Mobiles in India

English summary
Croma’s Black Friday Sale (Nov 22–30) brings a big discount on the newly launched iPhone Air 256GB. The price has dropped from ₹1,19,900 to ₹1,12,900, giving an instant ₹7,000 off. With an additional ₹4,000 bank discount for ICICI, IDFC First Bank, and SBI cardholders, buyers can save a total of ₹11,000. Low-cost EMI options are also available, making this one of the best upgrade deals right now.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+