Home
Deal of the day

ದೀಪಾವಳಿ ಧಮಾಕಾ: ದಾಖಲೆಯ ಕಡಿಮೆ ಬೆಲೆಗೆ Galaxy S25 Ultra ಸೇಲ್!

ಭಾರತದಲ್ಲಿ ದೀಪಾವಳಿ ಹಬ್ಬ ಬಂದರೆ ಸಾಕು ಉತ್ಸಾಹ, ಉಡುಗೊರೆಗಳು, ಮತ್ತು ಖರೀದಿ ಸಂಭ್ರಮ ಮನೆಮಾಡುತ್ತದೆ. ಹೊಸ ಬಟ್ಟೆಗಳಿಂದ ಹಿಡಿದು ಮನೆಗೆ ಹೊಸ ವಸ್ತುಗಳ ಖರೀದಿವರೆಗೆ ಎಲ್ಲೆಡೆ ಹಬ್ಬದ ಜೋರು. ಇಂತಹ ಸಮಯದಲ್ಲಿ ಸ್ಮಾರ್ಟ್‌ಫೋನ್ ಕಂಪನಿಗಳು ಮತ್ತು ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳೂ ಸಹ ಗ್ರಾಹಕರನ್ನು ಸೆಳೆಯಲು ಭಾರೀ ಆಫರ್‌ಗಳನ್ನು ನೀಡುತ್ತವೆ. ಈ ಬಾರಿ ಇಂತಹ ಕೊಡುಗೆಗಳ ಕೇಂದ್ರಬಿಂದು ಎಂದರೆ Samsung Galaxy S25 Ultra.! ಮೊಬೈಲ್ ಮಾರುಕಟ್ಟೆಯ ಅತ್ಯಂತ ಫ್ಲಾಗ್‌ಶಿಪ್ ಫೋನ್‌ಗಳಲ್ಲಿ ಒಂದಾದ ಈ ಪ್ರೀಮಿಯಂ ಮಾದರಿಯು ಈಗ ದೀಪಾವಳಿ ವಿಶೇಷವಾಗಿ ₹1 ಲಕ್ಷಕ್ಕಿಂತ ಕಡಿಮೆ ಬೆಲೆಗೆ ಲಭ್ಯವಾಗಿದೆ. ಒಂದು ಅತ್ಯಂತ ಪ್ರೀಮಿಯಂ ಫ್ಲಾಗ್‌ಶಿಪ್ ಫೋನ್ ಖರೀದಿಸಲು ಕಾಯುತ್ತಿದ್ದವರಿಗೆ ಇದು ನಿಜವಾದ ಕೊಡುಗೆಯಾಗಿದೆ.

Samsung Galaxy S25 Ultra: ದಾಖಲೆ ಮಟ್ಟದ ಕಡಿಮೆ ಬೆಲೆ
Samsung Galaxy S25 Ultra ಫೋನ್ ಬೆಲೆ ಸಾಮಾನ್ಯವಾಗಿ ₹1,30,000 ಆಸುಪಾಸಿನಲ್ಲಿ ಇರುತ್ತಿತ್ತು. ಆದರೆ, ಈ ದೀಪಾವಳಿ ಹಬ್ಬದ ಸಮಯದಲ್ಲಿ Samsung Galaxy S25 Ultra ಈಗ Amazon ನಲ್ಲಿ ಕೇವಲ ₹99,200 ಕ್ಕೆ ಲಭ್ಯವಿದೆ. ಬ್ಯಾಂಕ್ ಆಫರ್ ಸೇರಿಸಿದರೆ HDFC ಕಾರ್ಡ್ ಬಳಸಿ ₹1,250 ರಿಯಾಯಿತಿ ಪಡೆಯಬಹುದು. ಅಂದರೆ ಫೋನ್ ಬೆಲೆ ₹98,000 ಕ್ಕಿಂತ ಕಡಿಮೆ. ಜೊತೆಗೆ EMI ಆಯ್ಕೆಗಳು ₹4,809 ರಿಂದ ಪ್ರಾರಂಭವಾಗುತ್ತವೆ ಮತ್ತು ಬಡ್ಡಿರಹಿತ EMI (No-Cost EMI) ಸೌಲಭ್ಯವೂ ಲಭ್ಯವಿದೆ. ಈ ಫೋನಿನೊಂದಿಗೆ ಹಳೆಯ ಫೋನ್‌ನ ವಿನಿಮಯ ಮೌಲ್ಯವೂ ಉತ್ತಮವಾಗಿದ್ದು, ₹58,000 ವರೆಗೆ ಪಡೆಯುವ ಸಾಧ್ಯತೆ ಇದೆ. ಹೀಗಾಗಿ ಅತ್ಯುನ್ನತ ಫ್ಲಾಗ್‌ಶಿಪ್ ಫೋನ್‌ನನ್ನು ಅಚ್ಚರಿ ಬೆಲೆಯಲ್ಲಿ ನಿಮ್ಮದಾಗಿಸಿಕೊಳ್ಳಬಹುದು.

ದೀಪಾವಳಿ ಧಮಾಕಾ: ದಾಖಲೆಯ ಕಡಿಮೆ ಬೆಲೆಗೆ Galaxy S25 Ultra ಸೇಲ್!

Samsung Galaxy S25 Ultra: ಏಕೆ ಇದು ಅಲ್ಟ್ರಾ ಫೋನ್?
Samsung Galaxy S25 Ultra ಫೋನ್ ಕೇವಲ ಆಕರ್ಷಕ ಬೆಲೆಯಲ್ಲಿ ಮಾತ್ರವಲ್ಲ ಗಮನಸೆಳೆಯುವುದಿಲ್ಲ. ಬದಲಾಗಿ, ಅದರ ಪೀಚರ್ಸ್ ಕೂಡ ಅದೇ ಮಟ್ಟದಲ್ಲಿ ಪ್ರೀಮಿಯಂ ಆಗಿವೆ.ಈ ಫೋನ್ Snapdragon 8 Elite ಚಿಪ್‌ನಿಂದ ಚಾಲಿತವಾಗಿದ್ದು, ಸುಧಾರಿತ AI ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಇದು 6GB RAM ಮತ್ತು 1TB ವರೆಗಿನ ಸ್ಟೋರೇಜ್‌ ಆಯ್ಕೆಯನ್ನು ಹೊಂದಿದೆ. ಕ್ಯಾಮೆರಾ ವಿಭಾಗದಲ್ಲಿ ಇದು ನಿಜಕ್ಕೂ ಅಲ್ಟ್ರಾ ಪ್ರೀಮಿಯಂ ಆಗಿದ್ದು, 200MP ಮುಖ್ಯ ಕ್ಯಾಮೆರಾ, 50MP ಅಲ್ಟ್ರಾವೈಡ್, 50MP ಪೆರಿಸ್ಕೋಪ್ (10x ಝೂಮ್), ಮತ್ತು 10MP ಟೆಲಿಫೋಟೋ ಲೆನ್ಸ್ ಒಳಗೊಂಡಿದೆ. ಸೆಲ್ಫಿಗಳಿಗಾಗಿ 12MP ಮುಂಭಾಗದ ಕ್ಯಾಮೆರಾ ನೀಡಲಾಗಿದೆ. ಇದರಲ್ಲಿನ 6.9 ಇಂಚಿನ AMOLED 120Hz ಡಿಸ್ಪ್ಲೇ ಸ್ಪಷ್ಟವಾದ ಬಣ್ಣಗಳು, ಉಜ್ವಲತೆ ಮತ್ತು ಸ್ಮೂತ್ ಸ್ಕ್ರೋಲಿಂಗ್ ಅನುಭವ ನೀಡುತ್ತದೆ. S Pen ಸ್ಟೈಲಸ್ ಬೆಂಬಲದೊಂದಿಗೆ, ನೀವು ಕ್ರಿಯೇಟಿವಿಟಿ ಮತ್ತು ಪ್ರೊಡೆಕ್ಟಿವಿಟಿಯನ್ನು ಮತ್ತಷ್ಟು ಹೆಚ್ಚಿಸಬಹುದು. ಇದರ 5,000mAh ಬ್ಯಾಟರಿ ಮತ್ತು 45W ವೇಗದ ಚಾರ್ಜಿಂಗ್ ಸಹಿತ ದಿನವಿಡೀ ಪವರ್‌ಪ್ಯಾಕ್ ಪ್ರದರ್ಶನ ನೀಡಲು ಶಕ್ತವಾಗಿದೆ.

ಈ ದೀಪಾವಳಿಗೆ ಅಪ್‌ಗ್ರೇಡ್ ಸಮಯ!
ಒಟ್ಟಾರೆಯಾಗಿ, ಈ ದೀಪಾವಳಿಯ ಆಫರ್ ನಿಮ್ಮ ಪ್ರೀಮಿಯಂ ಫೋನ್ ಕನಸನ್ನು ನಿಜಗೊಳಿಸಲು ಅತ್ಯುತ್ತಮ ಅವಕಾಶ ಎನ್ನಬಹುದು. ಆಕರ್ಷಕ ಕ್ಯಾಮೆರಾ, ವೇಗದ ಪ್ರೊಸೆಸರ್ ಮತ್ತು ರಾಯಲ್ ವಿನ್ಯಾಸ ಇವೆಲ್ಲವನ್ನು ಒಂದು ಪ್ಯಾಕೇಜ್‌ನಲ್ಲಿ ಪಡೆಯಲು Samsung Galaxy S25 Ultra ನಿಜಕ್ಕೂ ಸೂಕ್ತ ಆಯ್ಕೆ ಎಂಬುದು ನನ್ನ ಅಭಿಪ್ರಾಯ. ಅದರಲ್ಲೂ ನೀವು S24 Ultra ನಿಂದ ಅಪ್‌ಗ್ರೇಡ್ ಮಾಡುತ್ತಿದ್ದರೆ, ಹೊಸ AI ಕ್ಯಾಮೆರಾ ಮತ್ತು ಸುಧಾರಿತ ಪರ್ಫಾರ್ಮೆನ್ಸ್ ಕಡಿಮೆ ಬೆಲೆಗೆ ದೊರೆಯುವುದು ಖಂಡಿತ. ಒಂದು ವೇಳೆ, Samsung Galaxy S25 Ultra ಅಲ್ಲದಿದ್ದರೆ, ಈ ದೀಪಾವಳಿಗೆ ನೀವು ಯಾವ ಸ್ಮಾರ್ಟ್‌ಫೋನ್‌ಗೆ ಅಪ್‌ಗ್ರೇಡ್ ಮಾಡಲು ಯೋಚಿಸುತ್ತಿದ್ದೀರಿ? ಈ ಕೇಳಗೆ ಕಾಮೆಂಟ್ ಮಾಡಿ ತಿಳಿಸಿ. ಹಬ್ಬದ ಖರೀದಿಯ ಸಂಭ್ರಮವನ್ನು ಎಲ್ಲರೂ ಹಂಚಿಕೊಳ್ಳೋಣ!

Best Mobiles in India

English summary
Get the Samsung Galaxy S25 Ultra this Diwali at a record-low price under ₹1 lakh with exciting offers, exchange deals, and premium features like AI camera, 1TB storage, and 120Hz AMOLED display.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+