Home
Deal of the day

Honor 200 5G ಬೆಲೆ ಇಳಿಕೆ: 15,000 ಡಿಸ್ಕೌಂಟ್.. ಒಟ್ಟಾರೆ 23,748 ಉಳಿತಾಯ.. ಖರೀದಿ ಎಲ್ಲಿ?

ದೀಪಾವಳಿ ಹಬ್ಬದ ಪ್ರಯುಕ್ತ ಆನ್‌ಲೈನ್ ಶಾಪಿಂಗ್ ಸೈಟ್‌ಗಳಲ್ಲಿ ಮೊಬೈಲ್‌ಗಳ ಮೇಲೆ ಸಾಲು ಸಾಲು ನೀಡಲಾಗುತ್ತಿದೆ. ಈ ಪೈಕಿ ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್‌ ತನ್ನ ಗ್ರಾಹಕರನ್ನು ಸೆಳೆಯಲು ಹಲವು ಆಫರ್‌ಗಳನ್ನು ಘೋಷಿಸಿವೆ. ಹಾನರ್‌ ಕಂಪನಿಯು ಅಮೆಜಾನ್‌ನಲ್ಲಿ ತನ್ನ ಅಭಿಮಾನಿಗಳಿಗೆ 5G ಫೋನನ್ನು ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದೆ. ನೀವು, ಫ್ಲಾಟ್ ಡಿಸ್ಕೌಂಟ್ ಜೊತೆಗೆ ಬ್ಯಾಂಕ್ ಆಫರ್‌ ಸಹ ಪಡೆಯಬಹುದು. ಬನ್ನಿ, ಅದು ಯಾವ ಫೋನ್, ವಿಶೇಷತೆಗಳೇನು? ಮತ್ತು ಎಷ್ಟು ರಿಯಾಯಿತಿ ಲಭ್ಯವಿದೆ? ಎನ್ನುವುದನ್ನು ತಿಳಿಯೋಣ.

ಕಂಪನಿಯು ಹಾನರ್ 200 5G (Honor 200 5G) ಫೋನಿನ ಮೇಲೆ ಭಾರೀ ಡಿಸ್ಕೌಂಟ್ ಘೋಷಿಸಿದೆ. ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್‌ನಲ್ಲಿ (Amazon Great Indian Festival Sale 2024) ಫೋನಿನ 256GB ಸ್ಟೋರೇಜ್‌ ರೂಪಾಂತರವನ್ನು ಕಡಿಮೆ ಬೆಲೆಗೆ ಖರೀದಿಸುವ ಅವಕಾಶವಿದೆ. ಈ ಫೋನ್ ಆಕ್ಟಾ ಕೋರ್ ಸ್ನಾಪ್‌ಡ್ರಾಗನ್ 7 ಜೆನ್ 3 ಪ್ರೊಸೆಸರ್‌ ಹೊಂದಿದೆ. ಜೊತೆಗೆ 6.7 ಇಂಚಿನ ಡಿಸ್ಪ್ಲೇ, 50 ಮೆಗಾಪಿಕ್ಸೆಲ್ ಕ್ಯಾಮೆರಾ, 5200mAh ಬ್ಯಾಟರಿ ಹೊಂದಿದೆ.

Honor 200 5G ಬೆಲೆ ಇಳಿಕೆ: 15,000 ಡಿಸ್ಕೌಂಟ್.. 23,748 ಸೇವ್.. ಖರೀದಿ ಎಲ್ಲಿ?

ಹಾನರ್ 200 5G ಫೋನಿನ ಬೆಲೆ ಮತ್ತು ಆಫರ್‌ಗಳು

ಕಂಪನಿಯು ಹಾನರ್ 200 5G ಫೋನಿನ ​​256GB ಸ್ಟೋರೇಜ್‌ ರೂಪಾಂತರದ ಬೆಲೆ ಇಳಿಕೆ ಮಾಡಿದೆ. ಅಮೆಜಾನ್ ಸೇಲ್‌ನಲ್ಲಿ ಸ್ಮಾರ್ಟ್‌ಫೋನ್ ಅನ್ನು 39,999 ರೂ.ಗಳಲ್ಲಿ ಪಟ್ಟಿಮಾಡಲಾಗಿದೆ. ದೀಪಾವಳಿ ಹಬ್ಬದ ಆಫರ್‌ನಲ್ಲಿ ಕಡಿಮೆ ಬೆಲೆಗೆ ಖರೀದಿಸಬಹುದು. ಅಮೆಜಾನ್ ಸೇಲ್‌ನಲ್ಲಿ ಶೇ.38ರಷ್ಟು ಬೆಲೆ ಇಳಿಕೆಯಾಗಿದೆ. ನೀವು, ಆಫರ್‌ನೊಂದಿಗೆ ಈ ಫೋನನ್ನು ಕೇವಲ 24,998 ರೂ.ಗಳಲ್ಲಿ ಖರೀದಿಸಬಹುದು.

ಅಮೆಜಾನ್ ಸೇಲ್‌ನಲ್ಲಿ ಫ್ಲಾಟ್ ಡಿಸ್ಕೌಂಟ್ ಜೊತೆಗೆ ಬ್ಯಾಂಕ್ ಕಾರ್ಡ್‌ಗಳ ಮೇಲೆ 500 ರೂ.ಗಳ ರಿಯಾಯಿತಿ ಲಭ್ಯವಿದೆ. ಎಕ್ಸ್‌ಚೇಂಜ್ ಆಫರ್ ಅಡಿಯಲ್ಲಿ ನೀವು, 23,748 ರೂ. ವರೆಗೆ ಉಳಿತಾಯ ಮಾಡಬಹುದು. ಈ ಎಕ್ಸ್‌ಚೇಂಜ್ ಆಫರ್‌ ನಿಮ್ಮ ಹಳೆಯ ಫೋನಿನ ಸ್ಥಿತಿಯನ್ನು ಅವಲಂಬಿಸಿರುತ್ತದೆ. ಅಮೆಜಾನ್‌ನಲ್ಲಿ ಈ ಎಲ್ಲಾ ಆಫರ್‌ಗಳನ್ನು ಪಡೆಯಿರಿ.

ಹಾನರ್ 200 5G ಫೋನಿನ ವೈಶಿಷ್ಟ್ಯಗಳು

ಡಿಸ್ಪ್ಲೇ ವಿವರ

ಹಾನರ್ 200 5G ಫೋನ್ 6.7 ಇಂಚಿನ ಕರ್ವ್ ಓಎಲ್‌ಇಡಿ ಡಿಸ್ಪ್ಲೇಯನ್ನು ಹೊಂದಿದೆ. ಇದು 1200 x 2664 ರೆಸಲ್ಯೂಶನ್ ಪಿಕ್ಸೆಲ್‌ಗಳು, 120Hz ರಿಫ್ರೆಶ್ ದರ, 4000 ನಿಟ್ಸ್‌ ಗರಿಷ್ಠ ಬ್ರೈಟ್‌ನೆಸ್ ಬೆಂಬಲ ಹೊಂದಿದೆ. ಇದು ಫಿಂಗರ್‌ಪ್ರಿಂಟ್ ಡಿಸ್ಪ್ಲೇ ಸಹ ಹೊಂದಿದೆ. ಬಯೋಮೆಟ್ರಿಕ್ಸ್‌ಗಾಗಿ ಸ್ಕ್ಯಾನರ್ ಕೂಡ ಲಭ್ಯವಿದೆ.

ಪ್ರೊಸೆಸರ್ ಸಾಮರ್ಥ್ಯ

ಕಂಪನಿಯು ಈ ಫೋನನ್ನು ಸ್ನಾಪ್‌ಡ್ರಾಗನ್ 7 ಜೆನ್ 3 ಆಕ್ಟಾ ಕೋರ್ ಪ್ರೊಸೆಸರ್‌ನೊಂದಿಗೆ ಬಿಡುಗಡೆ ಮಾಡಿದೆ. ಇದು 12GB RAM ಮತ್ತು 512GB ವರೆಗಿನ ಇಂಟರ್ನಲ್ ಸ್ಟೋರೇಜ್ ಆಯ್ಕೆ ಹೊಂದಿದೆ. ಈ ಫೋನ್ ಆಂಡ್ರಾಯ್ಡ್‌ 14 ಆಧಾರಿತ MagicOS 8.0 ನಲ್ಲಿ ಕೆಲಸ ನಿರ್ವಹಿಸುತ್ತದೆ.

ಕ್ಯಾಮೆರಾ ಸೆಟಪ್

ಹಾನರ್ 200 5G ಮೊಬೈಲ್ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಹೊಂದಿದೆ. ಇದು OIS ಜೊತೆಗೆ 50 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ ಹೊಂದಿದೆ. ಜೊತೆಗೆ 12 ಮೆಗಾಪಿಕ್ಸೆಲ್ ಅಲ್ಟ್ರಾ ವೈಡ್ ಆಂಗಲ್ ಲೆನ್ಸ್‌ ಮತ್ತು 5 ಮೆಗಾಪಿಕ್ಸೆಲ್ ಟೆಲಿಫೋಟೋ ಕ್ಯಾಮೆರಾ ಮತ್ತು 2.5x ಆಪ್ಟಿಕಲ್ ಜೂಮ್ ಇದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, ಈ ಫೋನ್ 50 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಹೊಂದಿದೆ.

ಬ್ಯಾಟರಿ ಮತ್ತು ಚಾರ್ಜಿಂಗ್

ಕಂಪನಿಯು ಹಾನರ್ 200 5G ಫೋನನ್ನು 5200mAh ಸಾಮರ್ಥ್ಯದ ಬ್ಯಾಟರಿಯೊಂದಿಗೆ ಬಿಡುಗಡೆ ಮಾಡಿದೆ. ಇದು 100W ವೇಗದ ಚಾರ್ಜಿಂಗ್ ಮತ್ತು 100W ವೇಗದ ವೈರ್ಡ್ ಚಾರ್ಜಿಂಗ್ ಬೆಂಬಲದೊಂದಿಗೆ ಬರುತ್ತದೆ.

ಇತರೆ ವೈಶಿಷ್ಟ್ಯಗಳು

ಈ ಫೋನ್‌ ಕನೆಕ್ಟಿವಿಟಿ ಆಯ್ಕೆಗಳಲ್ಲಿ 5G, ವೈ-ಫೈ, ಎನ್‌ಎಫ್‌ಸಿ (NFC), ಬ್ಲೂಟೂತ್ v5.3 ಮತ್ತು ಯುಎಸ್‌ಬಿ ಟೈಪ್ ಸಿ ಮತ್ತು ಸ್ಟೀರಿಯೋ ಸ್ಪೀಕರ್ ಮತ್ತು ಐಆರ್ ಬ್ಲಾಸ್ಟರ್ ಸೇರಿದಂತೆ ಇನ್ನಿತರ ವೈಶಿಷ್ಟ್ಯಗಳನ್ನು ಒಳಗೊಂಡಿದೆ.

Best Mobiles in India

English summary
Diwali offer: Honor 200 5G available with 38 Discount: know offers, availability, specs and more details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+