ಒಪ್ಪೋ ದೀಪಾವಳಿ ಆಫರ್! OPPO F27 5G ಮೇಲೆ ಭಾರೀ ಡಿಸ್ಕೌಂಟ್ ಲಭ್ಯ.. ಆಫರ್‌ಗಳ ಪಟ್ಟಿ ನೋಡಿ
ದೀಪಾವಳಿ ಪ್ರಯುಕ್ತ ಒಪ್ಪೋ (OPPO) ತನ್ನ ಗ್ರಾಹಕರಿಗೆ ಸಖತ್ ಆಫರ್‌ಗಳನ್ನು ಘೋಷಿಸಿದೆ. ಕಂಪನಿಯು, ಒಪ್ಪೋ F27 5G (OPPO F27 5G) ಫೋನನ್ನು ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದೆ. ಹೌದು, ಈ 5G ಮೊಬೈಲ್ ಖರೀದಿಸಿದರೆ ಶೇ.10 ರಷ್ಟು ತ್ವರಿತ ರಿಯಾಯಿತಿ ಪಡೆಯಬಹುದು. ಕಂಪನಿಯು, ದೀಪಾವಳಿ ಸೇಲ್ ಅಂಗವಾಗಿ ನೋ ಕಾಸ್ಟ್ ಇಎಂಐ, 10 ರೂ. ಗಿಫ್ಟ್ ಬಾಕ್ಸ್ ಖರೀದಿ ಮೇಲೆ 50 ಸಾವಿರ ಅಂಕಗಳು ಮತ್ತು ಸೂಪರ್ ಕೂಪನ್ ಸೇರಿದಂತೆ ಹಲವು ಆಫರ್‌ಗಳನ್ನು ನೀಡುತ್ತಿದೆ.
ಹೌದು, ಒಪ್ಪೋ ಅಧಿಕೃತ ವೆಬ್‌ಸೈಟ್ ಒಪ್ಪೋ ಸ್ಟೋರ್‌ನಲ್ಲಿ ಈ ಎಲ್ಲಾ ಆಫರ್‌ಗಳು ಲಭ್ಯವಿದೆ. ಕಂಪನಿಯು, ಒಪ್ಪೋ F27 5G ಅನ್ನು ಎರಡು ಸ್ಟೋರೇಜ್ ಆಯ್ಕೆಗಳಲ್ಲಿ ಮಾರಾಟ ಮಾಡುತ್ತಿದೆ. ನೀವು, ಎಮರಾಲ್ಡ್ ಗ್ರೀನ್ ಮತ್ತು ಅಂಬರ್ ಆರೆಂಜ್ ಬಣ್ಣಗಳಲ್ಲಿ ಫೋನನ್ನು ಕೊಳ್ಳಬಹುದು. ಈ ಮೊಬೈಲ್ ಮೀಡಿಯಾ ಟೆಕ್ ಡೈಮೆನ್ಸಿಟಿ 6300 ಪ್ರೊಸೆರ್ ಹೊಂದಿದೆ. 50 ಮೆಗಾಪಿಕ್ಸೆಲ್ ಕ್ಯಾಮೆರಾ, 5000mAh ಬ್ಯಾಟರಿ, 6.67 ಇಂಚಿನ ಡಿಸ್ಪ್ಲೇ ಮತ್ತು 6.67 ಇಂಚಿನ ಡಿಸ್ಪ್ಲೇಯನ್ನು ಹೊಂದಿದೆ.

ಒಪ್ಪೋ F27 5G ಹೊಸ ಬೆಲೆ ಮತ್ತು ಆಫರ್‌ಗಳು
ಕಂಪನಿಯು ಒಪ್ಪೋ F27 5G ಫೋನಿನ 8GB+128GB ಸ್ಟೋರೇಜ್ ರೂಪಾಂತರವನ್ನು 22,999 ರೂ.ಗೆ ಬಿಡುಗಡೆ ಮಾಡಿತ್ತು. 8GB+256GB ಸ್ಟೋರೇಜ್ ರೂಪಾಂತರವನ್ನು 24,999 ರೂ.ಗೆ ಪರಿಚಯಿಸಿತ್ತು. ಪ್ರಸ್ತುತ, ಒಪ್ಪೋ ಸ್ಟೋರ್‌ನಲ್ಲಿ ಕ್ರಮವಾಗಿ 20,999 ರೂ. ಮತ್ತು 22,999 ರೂ. ಇದೆ. ದೀಪಾವಳಿ ಪ್ರಯುಕ್ತ ಕಂಪನಿಯು, 128GB ಸ್ಟೋರೇಜ್ ರೂಪಾಂತರದ ಮೇಲೆ ಶೇ.10 ರಷ್ಟು ತ್ವರಿತ ರಿಯಾಯಿತಿ ಘೋಷಿಸಿದೆ.
ಫೆಡರಲ್, ಐಸಿಐಸಿಐ, ಬ್ಯಾಂಕ್ ಆಫ್ ಬರೋಡಾ, ಎಚ್‌ಡಿಎಫ್‌ಸಿ, ಒನ್‌ಕಾರ್ಡ್, ಎಸ್‌ಬಿಐ, ಆಕ್ಸಿಸ್, ಯೆಸ್ ಬ್ಯಾಂಕ್, ಐಡಿಎಫ್‌ಸಿ ಫಸ್ಟ್ ಬ್ಯಾಂಕ್, ಕೊಟಕ್ ಮಹೀಂದ್ರಾ ಬ್ಯಾಂಕ್, 128GB ಸ್ಟೋರೇಜ್ ರೂಪಾಂತರದ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್‌ಗಳಿಂದ ಮಾಡಿದ ಖರೀದಿಗಳಿಗೆ ಕಂಪನಿಯು 10 ಪ್ರತಿಶತ ತ್ವರಿತ ರಿಯಾಯಿತಿಯನ್ನು ನೀಡುತ್ತಿದೆ.
ಯಾವೆಲ್ಲಾ ಆಫರ್‌ಗಳನ್ನು ಪಡೆಯಬಹುದು?
ಫೋನಿನ 256GB ಸ್ಟೋರೇಜ್ ರೂಪಾಂತರಕ್ಕೆ 3,099 ರೂ. ಮತ್ತು 256GB ಸ್ಟೋರೇಜ್ ರೂಪಾಂತರಕ್ಕೆ 3,299 ರೂ. ನೀಡುತ್ತಿದೆ. ಶೇ.10 ರಷ್ಟು ತ್ವರಿತ ರಿಯಾಯಿತಿ ಪ್ರಕಾರ ಸುಮಾರು 2,100 ಮತ್ತು 2,300 ರೂ. ಉಳಿತಾಯ ಮಾಡಬಹುದು. ಮೊಬಿಕ್ವಿಕ್ (MobiKwik) ವಾಲೆಟ್ ಮೂಲಕ ಫೋನ್ ಖರೀದಿಸಿದರೆ, 1500 ರೂ. ವರೆಗೆ ಡಿಸ್ಕೌಂಟ್ ಸಿಗುತ್ತದೆ. ಇದಲ್ಲದೆ, ಮೊಬಿಕ್ವಿಕ್ ಯುಪಿಐ ಮೂಲಕ ಖರೀದಿಸಿದರೆ 150 ರೂ. ರಿಯಾಯಿತಿ ನೀಡುತ್ತಿದೆ. ಬಜಾಜ್ ನೋ ಕಾಸ್ಟ್ ಇಎಂಐ ಮೇಲೆ 500 ರೂ. ವರೆಗೆ ಕ್ಯಾಶ್‌ಬ್ಯಾಕ್ ಲಭ್ಯವಿದೆ.
ಕಂಪನಿಯು ನೋ ಕಾಸ್ಟ್ ಇಎಂಐ ಸೌಲಭ್ಯವನ್ನು ಸಹ ನೀಡುತ್ತಿದೆ. ಇದು ಮಾತ್ರವಲ್ಲದೆ, 10 ರೂ. ಮೌಲ್ಯದ ಗಿಫ್ಟ್ ಬಾಕ್ಸ್ ಖರೀದಿಸಿದರೆ, ನೀವು 50000 ಅಂಕಗಳನ್ನು ಮತ್ತು 1,700 ರೂ.ಗಳ ಕೂಪನ್ ಪಡೆಯಬಹುದು. ಒಪ್ಪೋ F27 5G ಫೋನನ್ನು ಒಪ್ಪೋ ಇಂಡಿಯಾ ವೆಬ್‌ಸೈಟ್, ಫ್ಲಿಪ್‌ಕಾರ್ಟ್, ಅಮೆಜಾನ್ ಮತ್ತು ಆಫ್‌ಲೈನ್ ಸ್ಟೋರ್‌ಗಳಿಂದ ಖರೀದಿಸಬಹುದು .
ಒಪ್ಪೋ F27 5G ವೈಶಿಷ್ಟ್ಯಗಳು
ಡಿಸ್ಪ್ಲೇ ವಿವರ
ಒಪ್ಪೋ F27 5G ಫೋನ್ 6.67 ಇಂಚಿನ ಪೂರ್ಣ ಎಚ್‌ಡಿ ಪ್ಲಸ್ ಓಎಲ್‌ಇಡಿ ಡಿಸ್ಪ್ಲೇಯನ್ನು ಹೊಂದಿದೆ. ಇದು 120Hz ರಿಫ್ರೆಶ್ ದರ, 1080 x 2400 ಪಿಕ್ಸೆಲ್‌ಗಳ ರೆಸಲ್ಯೂಶನ್, 240Hz ಟಚ್ ಸ್ಯಾಂಪ್ಲಿಂಗ್ ದರ, 2,100 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಮತ್ತು AGC-DT ಗ್ಲಾಸ್ ರಕ್ಷಣೆಯನ್ನು ಹೊಂದಿದೆ.
ಪ್ರೊಸೆಸರ್ ಸಾಮರ್ಥ್ಯ
ಒಪ್ಪೋ F27 5G ಸ್ಮಾರ್ಟ್‌ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 6300 ಪ್ರೊಸೆರ್‌ನೊಂದಿಗೆ ಕೆಲಸ ನಿರ್ವಹಿಸುತ್ತದೆ. ಇದು ಮಾಲಿ G57 MP2 ಜಿಪಿಯು ಹೊಂದಿದೆ. ಈ ಮೊಬೈಲ್ ಆಂಡ್ರಾಯ್ಡ್ 14 ಆಧಾರಿತ ColorOS 14 ಕಸ್ಟಮ್ ಸ್ಕಿನ್‌ನಲ್ಲಿ ಕಾರ್ಯನಿರ್ವಹಿಸುತ್ತದೆ.
ಸ್ಟೋರೇಜ್ ಆಯ್ಕೆ
ಈ ಒಪ್ಪೋ 5G ಮೊಬೈಲ್ 8GB RAM + 128GB ಹಾಗೂ 8GB + 256GB ಸ್ಟೋರೇಜ್ ಆಯ್ಕೆಗಳನ್ನು ಒಳಗೊಂಡಿದೆ. ಜೊತೆಗೆ, 2TB ವರೆಗೆ ವಿಸ್ತರಣೆಗೆ ಬೆಂಬಲದೊಂದಿಗೆ ಮೈಕ್ರೊ SD ಕಾರ್ಡ್ ಸ್ಲಾಟ್ ಆಯ್ಕೆ ಲಭ್ಯವಿದೆ.
ಕ್ಯಾಮೆರಾ ಸೆಟಪ್
ಒಪ್ಪೋ F27 5G ಫೋನ್ ಡ್ಯುಯಲ್ ಕ್ಯಾಮೆರಾ ಸೆಟಪ್ ಹೊಂದಿದೆ. ಇದರಲ್ಲಿ 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಲಭ್ಯವಿದೆ. ಜೊತೆಗೆ, 2 ಮೆಗಾಪಿಕ್ಸೆಲ್ ಕ್ಯಾಮೆರಾ ಲಭ್ಯವಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, ಈ ಫೋನ್ 32 ಮೆಗಾಪಿಕ್ಸೆಲ್ ಸೋನಿ ಫ್ರಂಟ್ ಕ್ಯಾಮೆರಾವನ್ನು ಹೊಂದಿದೆ.
ಬ್ಯಾಟರಿ ಮತ್ತು ಚಾರ್ಜಿಂಗ್
ಕಂಪನಿಯು ಒಪ್ಪೋ F27 5G ಅನ್ನು 5000mAh ಸಾಮರ್ಥ್ಯದ ಬ್ಯಾಟರಿಯೊಂದಿಗೆ ಬಿಡುಗಡೆ ಮಾಡಿದೆ. ಈ ಬ್ಯಾಟರಿಯನ್ನು ಚಾರ್ಜ್ ಮಾಡಲು, 45W SuperVOOC ಚಾರ್ಜಿಂಗ್ ಸೌಲಭ್ಯ ಒದಗಿಸಲಾಗಿದೆ.
ಇತರೆ ವೈಶಿಷ್ಟ್ಯಗಳು
ಈ ಮೊಬೈಲ್ ಧೂಳು ಮತ್ತು ನೀರಿನ ಪ್ರತಿರೋಧಕ್ಕಾಗಿ IP64 ರೇಟಿಂಗ್ ಪಡೆದಿದೆ. ಕನೆಕ್ಟಿವಿಟಿ ಸೌಲಭ್ಯಗಳಲ್ಲಿ ಈ ಫೋನ್ ಡ್ಯುಯಲ್ ಸಿಮ್, 5G, ವೈ ಫೈ 5, ಬ್ಲೂಟೂತ್ 5.3, ಯುಎಸ್‌ಬಿ ಟೈಪ್ ಸಿ ಪೋರ್ಟ್, ಜಿಪಿಎಸ್, ಗೆಲಿಲಿಯೋ ಸೇರಿದಂತೆ ಹಲವು ಸೌಲಭ್ಯಗಳನ್ನು ಹೊಂದಿದೆ.


Click it and Unblock the Notifications








