Home
Deal of the day

ಫ್ಲಿಪ್‌ಕಾರ್ಟ್ ಆಫರ್: ₹79,999 ಬೆಲೆಯ ಫ್ಲಾಗ್‌ಶಿಪ್ ಫೋನ್ ಕೇವಲ ₹34,999 ಕ್ಕೆ!

ನೀವು ಹೊಸ ಸ್ಮಾರ್ಟ್‌ಫೋನ್ ಒಂದನ್ನು ಖರೀದಿಸಲು ಯೋಚಿಸುತ್ತಿದ್ದರೆ, ಇದಕ್ಕಿಂತ ಅತ್ಯುತ್ತಮ ಸಮಯ ಬೇರೆ ಇಲ್ಲ! ಏಕೆಂದರೆ, ಈ ವರ್ಷದ ಫ್ಲಿಪ್‌ಕಾರ್ಟ್‌ನ ಬಹುನಿರೀಕ್ಷಿತ ಬಿಗ್ ಬಿಲಿಯನ್ ಡೇಸ್ (2025) ಮಾರಾಟದಲ್ಲಿ, ಗೂಗಲ್ Pixel 9 ಫೋನ್ ಅದರ ಮೂಲ ಬೆಲೆಯ ಅರ್ಧಕ್ಕಿಂತಲೂ ಕಡಿಮೆ ಬೆಲೆಗೆ ಸಿಗಲಿದೆ. ಕಳೆದ ವರ್ಷ ಆಗಸ್ಟ್‌ನಲ್ಲಿ ₹79,999 ಕ್ಕೆ ಬಿಡುಗಡೆಯಾದ ಈ ಫೋನ್ ಈಗ ಕೇವಲ ₹34,999 ರೂ.ಗಳ ಊಹಿಸಲಾಗದ ಬೆಲೆಗೆ ಲಭ್ಯವಾಗುತ್ತಿದೆದೆ. ಇದು ಪ್ರೀಮಿಯಂ ಫೋನ್ ಖರೀದಿಸುವ ಕನಸು ಕಂಡಿದ್ದ ಎಲ್ಲರಿಗೂ ಒಂದು ಭಾರಿ ಅವಕಾಶವಾಗಿದೆ.!

ಫ್ಲಿಪ್‌ಕಾರ್ಟ್‌ನ ಬಿಗ್ ಬಿಲಿಯನ್ ಡೇಸ್ ಮಾರಾಟವು ಇದೇ ಸೆಪ್ಟೆಂಬರ್ 22 ರಂದು ಫ್ಲಿಪ್‌ಕಾರ್ಟ್ ಪ್ಲಸ್ ಮತ್ತು ಬ್ಲ್ಯಾಕ್ ಸದಸ್ಯರಿಗೆ ಪ್ರಾರಂಭವಾಗಲಿದ್ದು, ಸೆಪ್ಟೆಂಬರ್ 23 ರಿಂದ ಎಲ್ಲರಿಗೂ ಲಭ್ಯವಾಗಲಿದೆ. ಪ್ರಸ್ತುತ, ಈ ಗೂಗಲ್ Pixel 9 ಫೋನ್ 64,999 ರೂಪಾಯಿಗೆ ಮಾರಾಟವಾಗುತ್ತಿದೆ. ಆದರೆ, ಈ ಮಾರಾಟದಲ್ಲಿ 12GB RAM ಮತ್ತು 256GB ಸಂಗ್ರಹಣೆಯ ಆವೃತ್ತಿಯ ಬೆಲೆ ಕೇವಲ 34,999 ರೂಪಾಯಿಯಿಂದ ಪ್ರಾರಂಭವಾಗಲಿದೆ ಎಂದು ಫ್ಲಿಪ್‌ಕಾರ್ಟ್ ತಿಳಿಸಿದೆ.

ಈ ಮಾರಾಟದ ಸಮಯದಲ್ಲಿ ಬ್ಯಾಂಕ್ ಕಾರ್ಡ್ ರಿಯಾಯಿತಿಗಳು, ಎಕ್ಸ್‌ಚೇಂಜ್ ಆಫರ್‌ಗಳು ಮತ್ತು ಇಎಂಐ ಸೌಲಭ್ಯಗಳೂ ದೊರೆಯಲಿವೆ. ಆದರೆ, ಈ ಡೀಲ್ನಲ್ಲಿ ಇದರ ಪೂರ್ಣ ಬೆಲೆ ವಿವರವನ್ನು ಹಂಚಿಕೊಳ್ಳಲಾಗಿಲ್ಲ. ಅಂದರೆ, Pixel 9 ಫೋನ್ ಮೇಲೆ ನೇರ ರಿಯಾಯಿತಿ ಇದೆಯಾ ಎಂಬ ಬಗ್ಗೆ ಮಾಹಿತಿ ಇಲ್ಲ. ಆದರೂ, ಇದು ಫೋನಿನ ಮೂಲ ಬೆಲೆ 79,999 ರೂಪಾಯಿಗಳಿಗೆ ಹೋಲಿಸಿದರೆ, ಇದು ಐತಿಹಾಸಿಕ ದೊಡ್ಡ ರಿಯಾಯಿತಿಯಾಗಲಿದೆ. ಕಳೆದ ವರ್ಷ ಆಗಸ್ಟ್‌ನಲ್ಲಿ ಟೆನ್ಸರ್ ಜಿ4 (Tensor G4) ಚಿಪ್‌ನೊಂದಿಗೆ ಬಿಡುಗಡೆಯಾದ ಗೂಗಲ್ Pixel 9 ಫೋನ್‌ ಹಲವಾರು ಪ್ರಮುಖ ವೈಶಿಷ್ಟ್ಯಗಳನ್ನು ಹೊಂದಿದೆ.

ಫ್ಲಿಪ್‌ಕಾರ್ಟ್ ಆಫರ್: ₹79,999 ಬೆಲೆಯ ಫ್ಲಾಗ್‌ಶಿಪ್ ಫೋನ್ ಕೇವಲ ₹34,999 ಕ್ಕೆ!
Photo credit: Flipkart

ಗೂಗಲ್ Pixel 9 ಫೋನ್‌: ಪ್ರಮುಖ ವೈಶಿಷ್ಟ್ಯಗಳು ಹೀಗಿವೆ
ಕ್ಯಾಮೆರಾ: ಅತ್ಯುತ್ತಮ ಚಿತ್ರಗಳನ್ನು ಸೆರೆಹಿಡಿಯಲು ಹಿಂಭಾಗದಲ್ಲಿ 50 MP ಮುಖ್ಯ ಕ್ಯಾಮೆರಾ ಮತ್ತು 10.5 MP ಸೆಲ್ಫಿ ಕ್ಯಾಮೆರಾ ಇದೆ.
ಪವರ್‌ಫುಲ್ ಪ್ರೊಸೆಸರ್: ಗೂಗಲ್‌ನ ಶಕ್ತಿಶಾಲಿ ಟೆನ್ಸರ್ ಜಿ4 (Tensor G4) ಚಿಪ್ ಮತ್ತು ಟೈಟನ್ ಎಂ2 (Titan M2) ಭದ್ರತಾ ಸಹ-ಪ್ರೊಸೆಸರ್‌ನಿಂದಾಗಿ ಫೋನ್ ಅತ್ಯುತ್ತಮ ಕಾರ್ಯಕ್ಷಮತೆ ನೀಡುತ್ತದೆ.
ಬ್ಯಾಟರಿ: 4,700mAh ಬ್ಯಾಟರಿ ಮತ್ತು 45W ಫಾಸ್ಟ್ ಚಾರ್ಜಿಂಗ್ ಬೆಂಬಲದೊಂದಿಗೆ ಇಡೀ ದಿನ ಫೋನ್ ಬಳಸಬಹುದು.
ವಿವಿಧ ಬಣ್ಣಗಳು: ಪಿಯೋನಿ, ಪೋರ್ಸೆಲೈನ್, ಒಬ್ಸಿಡಿಯನ್ ಮತ್ತು ವಿಂಟರ್‌ಗ್ರೀನ್ ಬಣ್ಣಗಳಲ್ಲಿ ಲಭ್ಯವಿದೆ.
ಇತರೆ ವೈಶಿಷ್ಟ್ಯಗಳು: ಫೋನ್ IP68 ನೀರು ಮತ್ತು ಧೂಳು ನಿರೋಧಕ ಸಾಮರ್ಥ್ಯವನ್ನು ಹೊಂದಿದೆ.

ಪ್ರೀಮಿಯಂ ಫೋನ್‌ಗಳು ಕೈಗೆಟಕುವ ಬೆಲೆಗೆ!
ಈ ರೀತಿಯ ಭಾರಿ ರಿಯಾಯಿತಿಗಳು ಭಾರತದ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ದೊಡ್ಡ ಬದಲಾವಣೆ ತರುವ ನಿರೀಕ್ಷೆ ಇದೆ. ₹70,000 ಕ್ಕಿಂತ ಹೆಚ್ಚು ಬೆಲೆಯ ಫೋನ್‌ಗಳನ್ನು ಖರೀದಿಸಲು ಹಿಂಜರಿಯುತ್ತಿದ್ದ ಗ್ರಾಹಕರಿಗೆ ಈ ಬೆಲೆ ಇಳಿಕೆಗಳು ಪ್ರೀಮಿಯಂ ಫೋನ್ ಅನ್ನು ಸುಲಭವಾಗಿ ಖರೀದಿಸುವ ಅವಕಾಶ ನೀಡುತ್ತವೆ. ಇದು ಆ್ಯಪಲ್, ಸ್ಯಾಮ್‌ಸಂಗ್, ಮತ್ತು ಮೊಟೊರೊಲಾದಂತಹ ಬ್ರ್ಯಾಂಡ್‌ಗಳ ನಡುವೆ ಸ್ಪರ್ಧೆ ಹೆಚ್ಚಿಸುವುದರ ಜೊತೆಗೆ, ಗ್ರಾಹಕರಿಗೆ ಹೆಚ್ಚಿನ ಆಯ್ಕೆಗಳನ್ನು ಒದಗಿಸುತ್ತದೆ. ಈ ಅವಕಾಶವನ್ನು ಬಳಸಿಕೊಂಡು ನಿಮ್ಮ ನೆಚ್ಚಿನ ಫೋನ್ ಖರೀದಿಸಲು ಸಿದ್ಧರಾಗಿ.!

ನೀವು ಕೂಡ ಗೂಗಲ್ Pixel 9 ಫೋನ್ ಖರೀದಿಸಲು ಬಯಸಿದ್ದೀರಾ?. ಹಾಗಾದರೆ, ಈ ಕೊಡುಗೆಯ ಕುರಿತು ನಿಮ್ಮ ಅನಿಸಿಕೆ ಏನು ಎಂಬುದನ್ನು ಈ ಕೆಳಗೆ ಕಾಮೆಂಟ್ ಮಾಡಿ ತಿಳಿಸಿ. ಮತ್ತು ನಿಖರ ಕೊಡುಗೆಯ ಮಾಹಿತಿಯನ್ನು ತಿಳಿಯಲು ಮಾರಾಟದ ಸಮಯದ ವೇಳೆ ಅಧಿಕೃತ ವೆಬ್‌ಸೈಟ್‌ ಪರಿಶೀಲಿಸಿ.

Best Mobiles in India

English summary
Flipkart’s BBD 2025 brings Google Pixel 9 at a record-low price of ₹34,999.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+