Home
Deal of the day

Flipkart Buy Buy 2025 ಸೇಲ್: Galaxy S25 Ultra ಭಾರೀ ರಿಯಾಯಿತಿಯಲ್ಲಿ!

ಇ-ಕಾಮರ್ಸ್ ದೈತ್ಯ ಫ್ಲಿಪ್‌ಕಾರ್ಟ್ ಆಯೋಜಿಸಿರುವ Buy Buy 2025 ಸೇಲ್ ಸದ್ದಿಲ್ಲದಂತೆ ನಡೆಯುತ್ತಿದೆ. ಈ ಸೇಲ್‌ನಲ್ಲಿ ಸ್ಮಾರ್ಟ್‌ಫೋನ್ ಖರೀದಿದಾರರಿಗೆ ಹಲವಾರು ಆಕರ್ಷಕ ಕೊಡುಗೆಗಳನ್ನು ಒದಗಿಸಲಾಗಿದೆ. ಅದರಲ್ಲೂ ಬ್ಯಾಂಕ್ ಕೊಡುಗೆಗಳು, ವಿನಿಮಯ ಬೋನಸ್‌ಗಳು ಮತ್ತು ಹೆಚ್ಚುವರಿ ಕ್ಯಾಶ್‌ಬ್ಯಾಕ್ ಒಳಗೊಂಡ ಒಟ್ಟು ರಿಯಾಯಿತಿಗಳೊಂದಿಗೆ ಪ್ರೀಮಿಯಂ ವಿಭಾಗದ ಫ್ಲಾಗ್‌ಶಿಪ್ ಫೋನ್‌ಗಳು ಎಲ್ಲರ ಗಮನಸೆಳೆಯುತ್ತಿದೆ. ಈ ರೀತಿಯಾಗಿ ನಮ್ಮ ಗಮನವನ್ನು ಹೆಚ್ಚು ಸೆಳೆದಿರುವುದು Samsung Galaxy S25 Ultra.!

ಹೌದು, Samsung Galaxy S25 Ultra ಮೇಲೆ ಕೊಟ್ಟಿರುವ ರಿಯಾಯಿತಿ ಈ ಬಾರಿ ಸೇಲ್‌ನ ಪ್ರಮುಖ ಆಕರ್ಷಣೆಯಾಗಿದೆ. ಪ್ರಾರಂಭದಲ್ಲಿ ₹1,29,999 ದರದಲ್ಲಿ ( 12GB RAM + 256GB ಬೇಸ್ ಮಾದರಿ) ಬಂದಿದ್ದ ಈ ಫ್ಲ್ಯಾಗ್‌ಶಿಪ್ ಫೋನ್‌ ಅನ್ನು ಫ್ಲಿಪ್‌ಕಾರ್ಟ್ ಈಗ ₹1,09,999ಕ್ಕೆ ಮಾರಾಟ ಮಾಡುತ್ತಿದೆ. ಜೊತೆಗೆ, ಹೆಚ್ಚುವರಿ ಬ್ಯಾಂಕ್ ಆಫರ್‌ಗಳು ಸಹ ಲಭ್ಯವಿದ್ದು, SBI ಹಾಗೂ Axis ಬ್ಯಾಂಕ್ ಕಾರ್ಡ್ ಮೂಲಕ ಖರೀದಿಸಿದರೆ ₹4,000 ಕ್ಯಾಶ್‌ಬ್ಯಾಕ್ ಸಿಗುತ್ತದೆ. ಇದರಿಂದ ಫೋನ್ ಬೆಲೆ ನೇರವಾಗಿ ₹1,05,000 ಕ್ಕೆ ಇಳಿಯುತ್ತದೆ.

ಮಿನಿಮಯ, EMI ಮತ್ತು ವಾರಂಟಿ ಆಯ್ಕೆಗಳು ಖರೀದಿದಾರರಿಗೆ ನೆರವು
ಇಷ್ಟೇ ಅಲ್ಲದೆ, ಈ ಪ್ರೀಮಿಯಂ ಫ್ಲಾಗ್‌ಶಿಪ್ ಸ್ಮಾರ್ಟ್‌ಫೋನ್ ಜೊತೆಗೆ ನಿಮ್ಮ ಹಳೆಯ ಫೋನ್ ಅನ್ನು ವಿನಿಮಯ ಮಾಡಿಕೊಳ್ಳುವ ಮೂಲಕ ಬೆಲೆಯನ್ನು ಇನ್ನಷ್ಟು ಇಳಿಯುವ ಸಾಧ್ಯತೆ ಇದೆ .ಒಮ್ಮೆಲೆ ಪಾವತಿಸಲು ಕಷ್ಟವಾಗುವವರಿಗೆ Flipkart ಸುಲಭ EMI ಯೋಜನೆಗಳನ್ನು ಕೂಡ ನೀಡುತ್ತಿದೆ. ತಿಂಗಳಿಗೆ EMI ಪಾವತಿಸಲು ಬಯಸುವವರಿಗೆ ಇದು ಉತ್ತಮ ಆಯ್ಕೆ. ಅದೇ ರೀತಿ, ದೀರ್ಘಾವಧಿ ಬಳಕೆಗಾಗಿ ವಿಸ್ತೃತ ವಾರಂಟಿ ಪ್ಲಾನ್‌ಗಳು ಲಭ್ಯವಿದ್ದು, ತಮ್ಮ ಫೋನ್‌ಗೆ ಹೆಚ್ಚುವರಿ ರಕ್ಷಣೆ ಬಯಸುವವರಿಗೆ ಉಪಯುಕ್ತವಾಗಿದೆ.

Flipkart Buy Buy 2025 ಸೇಲ್: Galaxy S25 Ultra ಭಾರೀ ರಿಯಾಯಿತಿಯಲ್ಲಿ!

Samsung Galaxy S25 Ultra: ಫ್ಲ್ಯಾಗ್‌ಶಿಪ್ ಅನುಭವ ನೀಡುವ ಪ್ರಮುಖ ವೈಶಿಷ್ಟ್ಯಗಳು
Samsung Galaxy S25 Ultra ಫೋನ್ ಕೇವಲ ಆಕರ್ಷಕ ಬೆಲೆಯಲ್ಲಿ ಮಾತ್ರವಲ್ಲ ಗಮನಸೆಳೆಯುವುದಿಲ್ಲ. ಬದಲಾಗಿ, ಅದರ ಪೀಚರ್ಸ್ ಕೂಡ ಅದೇ ಮಟ್ಟದಲ್ಲಿ ಪ್ರೀಮಿಯಂ ಆಗಿವೆ.ಈ ಫೋನ್ Snapdragon 8 Elite ಚಿಪ್‌ನಿಂದ ಚಾಲಿತವಾಗಿದ್ದು, ಸುಧಾರಿತ AI ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಇದು 6GB RAM ಮತ್ತು 1TB ವರೆಗಿನ ಸ್ಟೋರೇಜ್‌ ಆಯ್ಕೆಯನ್ನು ಹೊಂದಿದೆ. ಕ್ಯಾಮೆರಾ ವಿಭಾಗದಲ್ಲಿ ಇದು ನಿಜಕ್ಕೂ ಅಲ್ಟ್ರಾ ಪ್ರೀಮಿಯಂ ಆಗಿದ್ದು, 200MP ಮುಖ್ಯ ಕ್ಯಾಮೆರಾ, 50MP ಅಲ್ಟ್ರಾವೈಡ್, 50MP ಪೆರಿಸ್ಕೋಪ್ (10x ಝೂಮ್), ಮತ್ತು 10MP ಟೆಲಿಫೋಟೋ ಲೆನ್ಸ್ ಒಳಗೊಂಡಿದೆ.

ಈ Samsung Galaxy S25 Ultra ಫೋನಿನಲ್ಲಿ ಸೆಲ್ಫಿಗಳಿಗಾಗಿ 12MP ಮುಂಭಾಗದ ಕ್ಯಾಮೆರಾ ನೀಡಲಾಗಿದೆ. ಇದರಲ್ಲಿನ 6.9 ಇಂಚಿನ AMOLED 120Hz ಡಿಸ್ಪ್ಲೇ ಸ್ಪಷ್ಟವಾದ ಬಣ್ಣಗಳು, ಅತ್ಯಂತ ಬ್ರೈಟ್ ಮತ್ತು ಸ್ಮೂತ್ ಸ್ಕ್ರೋಲಿಂಗ್ ಅನುಭವ ನೀಡುತ್ತದೆ. S Pen ಸ್ಟೈಲಸ್ ಬೆಂಬಲದೊಂದಿಗೆ, ನೀವು ಕ್ರಿಯೇಟಿವಿಟಿ ಮತ್ತು ಪ್ರೊಡೆಕ್ಟಿವಿಟಿಯನ್ನು ಮತ್ತಷ್ಟು ಹೆಚ್ಚಿಸಬಹುದು. ಇದರ 5,000mAh ಬ್ಯಾಟರಿ ಮತ್ತು 45W ವೇಗದ ಚಾರ್ಜಿಂಗ್ ಸಹಿತ ದಿನವಿಡೀ ಪವರ್‌ಪ್ಯಾಕ್ ಪ್ರದರ್ಶನ ನೀಡಲು ಶಕ್ತವಾಗಿದೆ.

ಈ ದೀಪಾವಳಿಗೆ ಅಪ್‌ಗ್ರೇಡ್ ಸಮಯ!
ಒಟ್ಟಾರೆಯಾಗಿ, ಈ Buy Buy 2025 ಸೇಲ್ ನಿಮ್ಮ ಪ್ರೀಮಿಯಂ ಫೋನ್ ಕನಸನ್ನು ನಿಜಗೊಳಿಸಲು ಅತ್ಯುತ್ತಮ ಅವಕಾಶ ಎನ್ನಬಹುದು. ಆಕರ್ಷಕ ಕ್ಯಾಮೆರಾ, ವೇಗದ ಪ್ರೊಸೆಸರ್ ಮತ್ತು ರಾಯಲ್ ವಿನ್ಯಾಸ ಇವೆಲ್ಲವನ್ನು ಒಂದು ಪ್ಯಾಕೇಜ್‌ನಲ್ಲಿ ಪಡೆಯಲು Samsung Galaxy S25 Ultra ನಿಜಕ್ಕೂ ಸೂಕ್ತ ಆಯ್ಕೆ ಎಂಬುದು ನನ್ನ ಅಭಿಪ್ರಾಯ. ಅದರಲ್ಲೂ ನೀವು S24 Ultra ನಿಂದ ಅಪ್‌ಗ್ರೇಡ್ ಮಾಡುತ್ತಿದ್ದರೆ, ಹೊಸ AI ಕ್ಯಾಮೆರಾ ಮತ್ತು ಸುಧಾರಿತ ಪರ್ಫಾರ್ಮೆನ್ಸ್ ಕಡಿಮೆ ಬೆಲೆಗೆ ದೊರೆಯುವುದು ಖಂಡಿತ.

ಒಂದು ವೇಳೆ, Samsung Galaxy S25 Ultra ಆಗದಿದ್ದರೆ, ಈ ದೀಪಾವಳಿಗೆ ನೀವು ಯಾವ ಸ್ಮಾರ್ಟ್‌ಫೋನ್‌ಗೆ ಅಪ್‌ಗ್ರೇಡ್ ಮಾಡಲು ಯೋಚಿಸುತ್ತಿದ್ದೀರಿ? ಈ ಕೇಳಗೆ ಕಾಮೆಂಟ್ ಮಾಡಿ ತಿಳಿಸಿ.

Best Mobiles in India

English summary
Flipkart’s Buy Buy 2025 Sale is currently underway, bringing several exciting deals for smartphone buyers. Premium flagship models are grabbing attention with massive savings through combined bank offers, exchange bonuses and extra cashback. Among all the offers, the Samsung Galaxy S25 Ultra stands out as the biggest highlight of the sale.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+