Home
Deal of the day

ಫ್ಲಿಪ್‌ಕಾರ್ಟ್ ಸೇಲ್: ₹11,999 ಕ್ಕೆ 360° ಡ್ಯಾಮೇಜ್-ಪ್ರೂಫ್ Oppo 5G ಫೋನ್!

ಇತ್ತೀಚಿಗಷ್ಟೇ ಫ್ರೀಡಂ ಸೇಲ್ ಆಯೋಜಿಸಿ ಗ್ರಾಹಕರ ಗಮನ ಸೆಳೆದಿದ್ದ ಇ-ಕಾಮರ್ಸ್ ದೈತ್ಯ ಫ್ಲಿಪ್‌ಕಾರ್ಟ್, ಇಂದಿನಿಂದ ದೇಶದಲ್ಲಿ ಮತ್ತೊಮ್ಮೆ ಫ್ರೀಡಂ ಸೇಲ್‌ಗೆ ಚಾಲನೆ ನೀಡಿದೆ. ಆಗಸ್ಟ್ 13 ರಿಂದ ಆರಂಭವಾದ ಈ ಎರಡನೇ ಹಂತದ ಸೇಲ್‌ನಲ್ಲಿ ಸ್ಮಾರ್ಟ್‌ಫೋನ್‌ಗಳು, ಲ್ಯಾಪ್‌ಟಾಪ್‌ಗಳು, ಟ್ಯಾಬ್ಲೆಟ್‌ಗಳು ಹಾಗೂ ವಿವಿಧ ಗೃಹೋಪಯೋಗಿ ವಸ್ತುಗಳ ಮೇಲೆ ಭಾರೀ ರಿಯಾಯಿತಿಗಳು ಘೋಷಿಸಿದೆ. ವಿಶೇಷವಾಗಿ, ಈ ಸೇಲ್‌ನಲ್ಲಿ Oppo K13x 5G ಫೋನ್ ಮೇಲೆ ಆಕರ್ಷಕ ಆಫರ್ ಲಭ್ಯವಾಗಿದೆ.

ಕಳೆದ ಜೂನ್‌ನಲ್ಲಷ್ಟೇ ದೇಶದಲ್ಲಿ ಬಿಡುಗಡೆಯಾದ Oppo K13x 5G ಫೋನ್ ಈ ಮಾರಾಟದಲ್ಲಿ ಗಮನಾರ್ಹ ರಿಯಾಯಿತಿ ಪಡೆದಿರುವ ಸ್ಮಾರ್ಟ್‌ಫೋನ್‌ಗಳಲ್ಲಿ ಪ್ರಮುಖವಾಗಿದೆ. ಜೂನ್‌ನಲ್ಲಿ ಬಿಡುಗಡೆಯಾದಾಗ ₹15,999 ಬೆಲೆ ಹೊಂದಿದ್ದ ಈ ಫೋನ್‌ನ 4GB RAM ಮತ್ತು 128GB ಸ್ಟೋರೇಜ್ ಮಾದರಿಯು. ಈಗ ಸ್ವಾತಂತ್ರ್ಯ ದಿನಾಚರಣೆಯ ಮಾರಾಟದಲ್ಲಿ ಕೇವಲ ₹11,999 ಕ್ಕೆ ಲಭ್ಯವಿದೆ. ಇದು ಗ್ರಾಹಕರಿಗೆ ₹4,000 ರಷ್ಟು ನೇರ ರಿಯಾಯಿತಿಯನ್ನು ನೀಡಿದೆ. ಜೊತೆಗೆ ಬ್ಯಾಂಕ್ ಕೊಡುಗೆಗಳು ದೊರೆಯಲಿವೆ.

Oppo K13x 5G: ಹೇಗಿದೆ ಈ ಫೋನ್?
Oppo K13x 5G ಫೋನಿನ ಪ್ರಮುಖ ವಿಶೇಷತೆ ಅದರ ವಿನ್ಯಾಸ. 360-ಡಿಗ್ರಿ ಡ್ಯಾಮೇಜ್-ಪ್ರೂಫ್ ಆರ್ಮರ್ ಬಾಡಿ ಮತ್ತು MIL-STD 810-H ಶಾಕ್ ರೆಸಿಸ್ಟೆನ್ಸ್ ಪ್ರಮಾಣೀಕರಣವನ್ನು ಹೊಂದಿರುವ ಈ ಫೋನ್, ಸಮುದ್ರ ಸ್ಪಂಜುಗಳಿಂದ ಪ್ರೇರಿತವಾದ 'ಬಯೋಮಿಮೆಟಿಕ್ ಸ್ಪಾಂಜ್ ಶಾಕ್ ಅಬ್ಸಾರ್ಪ್ಷನ್ ಸಿಸ್ಟಮ್' ಅನ್ನು ಬಳಸುತ್ತದೆ. ಈ ತಂತ್ರಜ್ಞಾನವು ಫೋನ್‌ನ ಆಘಾತ ನಿರೋಧಕ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಇದರ ಜೊತೆಗೆ, ಇದು IP65 ಧೂಳು ಮತ್ತು ನೀರಿನ ಪ್ರತಿರೋಧ-ರೇಟಿಂಗ್ ಹೊಂದಿದ್ದು, ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 7i ರಕ್ಷಣೆಯನ್ನು ಒಳಗೊಂಡಿದೆ.

ಫ್ಲಿಪ್‌ಕಾರ್ಟ್ ಸೇಲ್: ₹11,999 ಕ್ಕೆ 360° ಡ್ಯಾಮೇಜ್-ಪ್ರೂಫ್ Oppo 5G ಫೋನ್!
Ai image

ಈ Oppo K13x 5G ಸ್ಮಾರ್ಟ್‌ಫೋನ್ 6.67-ಇಂಚಿನ LCD ಪರದೆಯನ್ನು ಹೊಂದಿದ್ದುಮ, ಇದು 120Hz ರಿಫ್ರೆಶ್ ರೇಟ್ ಮತ್ತು 1,000 ನಿಟ್ಸ್ ಪ್ರಖರತೆಯನ್ನು ನೀಡುತ್ತದೆ. ಇದು 'ಸ್ಪ್ಲಾಶ್ ಟಚ್' ಮತ್ತು 'ಗ್ಲೋವ್ ಟಚ್' ತಂತ್ರಜ್ಞಾನಗಳನ್ನು ಬೆಂಬಲಿಸುತ್ತದೆ. ಕಾರ್ಯಕ್ಷಮತೆಗಾಗಿ, ಈ ಫೋನ್ 6nm ಮೀಡಿಯಾಟೆಕ್ ಡೈಮೆನ್ಸಿಟಿ 6300 SoC ಪ್ರೊಸೆಸರ್‌ನಿಂದ ಚಾಲಿತವಾಗಿದ್ದು, 8GB ವರೆಗಿನ LPDDR4X RAM ಮತ್ತು 128GB ವರೆಗಿನ UFS 2.2 ಸಂಗ್ರಹಣೆಯನ್ನು ಹೊಂದಿದೆ. ಮತ್ತು ಆಂಡ್ರಾಯ್ಡ್ 15 ಆಧಾರಿತ ColorOS 15 ನಲ್ಲಿ ಕಾರ್ಯನಿರ್ವಹಿಸುತ್ತದೆ.

ಕ್ಯಾಮೆರಾ ವಿಭಾಗದಲ್ಲಿ, ಈ ಫೋನ್ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದರಲ್ಲಿ f/1.8 ಅಪರ್ಚರ್‌ನೊಂದಿಗೆ 50-ಮೆಗಾಪಿಕ್ಸೆಲ್ ಪ್ರೈಮರಿ ಸೆನ್ಸರ್ ಮತ್ತು f/2.4 ಅಪರ್ಚರ್‌ನೊಂದಿಗೆ 2-ಮೆಗಾಪಿಕ್ಸೆಲ್ ಡೆಪ್ತ್ ಸೆನ್ಸರ್ ಇದೆ. ಸೆಲ್ಫಿಗಾಗಿ 8-ಮೆಗಾಪಿಕ್ಸೆಲ್ ಮುಂಭಾಗದ ಕ್ಯಾಮೆರಾ ಸೆನ್ಸರ್ ಕೂಡ ಇದೆ.ಈ ಫೋನ್ ಡ್ಯುಯಲ್-ವ್ಯೂ ವಿಡಿಯೋ ರೆಕಾರ್ಡಿಂಗ್ ಮತ್ತು AI-ಬೆಂಬಲಿತ ಇಮೇಜಿಂಗ್ ವೈಶಿಷ್ಟ್ಯಗಳಾದ AI Unblur ಮತ್ತು AI Reflection Remover ಅನ್ನು ಸಹ ಹೊಂದಿದೆ. ಮತ್ತು ಹಲವಾರು ಹೊಸ AI ಫೀಚರ್‌ಗಳನ್ನು ಬೆಂಬಲಿಸುತ್ತದೆ.

ಈ Oppo K13x 5G ಫೋನಿನ ಪ್ರಮುಖ ಮತ್ತೊಂದು ವೈಶಿಷ್ಟ್ಯವೆಂದರೆ 45W ವೈರ್ಡ್ SuperVOOC ಚಾರ್ಜಿಂಗ್ ಬೆಂಬಲದೊಂದಿಗೆ ಶಕ್ತಿಯುತ 6,000mAh ಬ್ಯಾಟರಿ ಎನ್ನಬಹುದು. ಇನ್ನುಳಿದಂತೆ, ಸಂಪರ್ಕಕ್ಕಾಗಿ ಡ್ಯುಯಲ್ ಸಿಮ್, 5G, ವೈ-ಫೈ, ಬ್ಲೂಟೂತ್ 5.4, NFC, GPS ಮತ್ತು 3.5mm ಆಡಿಯೊ ಜ್ಯಾಕ್ ವೈಶಿಷ್ಟ್ಯಗಳಿವೆ. ಹೊಸ ಸ್ಮಾರ್ಟ್‌ಫೋನ್ ಖರೀದಿಸಲು ಬಯಸುವವರಿಗೆ 11,999 ರೂ. ಕೊಡುಗೆಯ ಬೆಲೆಯಲ್ಲಿ Oppo K13x 5G ಫೋನ್ ಒಂದು ಉತ್ತಮ ಆಯ್ಕೆಯಾಗಿ ಕಾಣುತ್ತಿದೆ. ಈ ಕುರಿತಂತೆ ನಿಮ್ಮ ಅನಿಸಿಕೆ ಏನು? ಎಂಬುದನ್ನು ಈ ಕೆಳಗೆ ಕಾಮೆಂಟ್ ಮಾಡಿ ತಿಳಿಸಿ.

Best Mobiles in India

English summary
During the Flipkart Freedom Sale, shoppers can grab the newly launched Oppo K13x 5G at just ₹11,999. This stylish 5G smartphone features a 360° damage-proof design for enhanced durability
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+