Home
Deal of the day

ಫ್ಲಿಪ್‌ಕಾರ್ಟ್ ಸೇಲ್: ಈ ಜನಪ್ರಿಯ Poco 5G ಫೋನ್‌ ಬೆಲೆ ಈಗ ₹14,999!

ಪ್ರಸ್ತುತ ಒಂದು ಉತ್ತಮ ಸ್ಮಾರ್ಟ್‌ಫೋನ್ ಖರೀದಿಸಬೇಕು ಮತ್ತು ಅದು ಬಜೆಟ್ ಬೆಲೆಯಲ್ಲಿ ಇರಬೇಕು ಎಂದರೆ ನಿಮಗಿದು ಸಿಹಿಸುದ್ದಿ. ಫ್ಲಿಪ್‌ಕಾರ್ಟ್‌ನಲ್ಲಿ ನಡೆಯುತ್ತಿರುವ ಫ್ರೀಡಂ ಸೇಲ್ ಹಬ್ಬದ ಸಂದರ್ಭದಲ್ಲಿ. ಇತ್ತೀಚೆಗೆ ಬಿಡುಗಡೆಯಾದ Poco X7 5G (Poco X7 5G) ಸ್ಮಾರ್ಟ್‌ಫೋನ್ ಈಗ ಬೃಹತ್ ರಿಯಾಯಿತಿಯಲ್ಲಿ ಲಭ್ಯವಿದೆ. ಇದು ಹೊಸ ಫೋನ್ ಖರೀದಿಸಲು ಯೋಜಿಸುತ್ತಿರುವವರಿಗೆ ಉತ್ತಮ ಅವಕಾಶವಾಗಿದೆ.

ಜನವರಿಯಲ್ಲಿ ಬಿಡುಗಡೆಯಾದಾಗ, Poco X7 5G ಫೋನಿನ 8GB/128GB ಮಾದರಿಯ ಮೂಲ ಬೆಲೆ ₹19,999 ಆಗಿತ್ತು. ಆದರೆ ಫ್ಲಿಪ್‌ಕಾರ್ಟ್ ಫ್ರೀಡಂ ಸೇಲ್‌ನಲ್ಲಿ, ಈ ಮಾದರಿ ಈಗ ಕೇವಲ ₹15,999 ರಿಯಾಯಿತಿ ಬೆಲೆಯಲ್ಲಿ ಲಭ್ಯವಿದೆ. ಇದರ ಜೊತೆಗೆ, ಕೆಲವು ಪ್ರಮುಖ ಬ್ಯಾಂಕ್‌ಗಳ ಕಾರ್ಡ್‌ಗಳನ್ನು ಬಳಸಿ ಖರೀದಿಸಿದರೆ ಹೆಚ್ಚುವರಿ ₹1,000 ರಿಯಾಯಿತಿ ಲಭ್ಯವಿದ್ದು, ಇದರಿಂದ ಫೋನ್‌ನ ಬೆಲೆ ಕೇವಲ ₹14,999 ಆಗುತ್ತದೆ.

ಇನ್ನು, 8GB/8GB ಟಾಪ್-ಎಂಡ್ ಮಾದರಿಯು ₹21,999 ಬೆಲೆಗೆ ಬಿಡುಗಡೆಯಾಗಿತ್ತು, ಆದರೆ ಈಗ ಅದು ₹17,999 ರಿಯಾಯಿತಿ ಬೆಲೆಯಲ್ಲಿ ಲಭ್ಯವಿದೆ. ಈ ಬೆಲೆ ಇಳಿಕೆಯು, ಪ್ರೀಮಿಯಂ ಫೀಚರ್‌ಗಳನ್ನು ಕಡಿಮೆ ಬೆಲೆಗೆ ಬಯಸುವ ಗ್ರಾಹಕರಿಗೆ ಉತ್ತಮ ಆಯ್ಕೆಯಾಗಿದೆ.
Poco X7 5G: ಪ್ರಮುಖ ವೈಶಿಷ್ಟ್ಯಗಳು

ಡಿಸ್ಪ್ಲೇ: Poco X7 5G ಫೋನ್ 6.67-ಇಂಚಿನ OLED ಡಿಸ್ಪ್ಲೇಯನ್ನು ಹೊಂದಿದೆ. ಇದು 2712×1220 ಪಿಕ್ಸೆಲ್‌ಗಳ ರೆಸಲ್ಯೂಶನ್ ಮತ್ತು 120Hz ರಿಫ್ರೆಶ್ ರೇಟ್‌ನೊಂದಿಗೆ ಅಲ್ಟ್ರಾ-ಸ್ಮೂತ್ ಅನುಭವ ನೀಡುತ್ತದೆ. ಡಿಸ್ಪ್ಲೇಯಲ್ಲಿರುವ ಡಾಲ್ಬಿ ವಿಷನ್ ಮತ್ತು HDR10+ ತಂತ್ರಜ್ಞಾನಗಳು ವಿಡಿಯೋ ವೀಕ್ಷಣೆಯನ್ನು ಇನ್ನಷ್ಟು ಆಕರ್ಷಕವಾಗಿಸುತ್ತವೆ. ಇದರ ಗರಿಷ್ಠ ಬ್ರೈಟ್‌ನೆಸ್ 3000 ನಿಟ್ಸ್ ಇದ್ದು, ಬಿಸಿಲಿನಲ್ಲಿಯೂ ಸ್ಪಷ್ಟವಾಗಿ ಕಾಣುತ್ತದೆ. ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ವಿಕ್ಟಸ್ 2 ರಕ್ಷಣೆ ನೀಡುವುದರಿಂದ ಸ್ಕ್ರೀನ್ ಸುರಕ್ಷಿತವಾಗಿದೆ.

ಪ್ರೊಸೆಸರ್: Poco X7 5G ಯಲ್ಲಿ ಆಕ್ಟಾ-ಕೋರ್ ಮೀಡಿಯಾ ಟೆಕ್ ಡೈಮೆನ್ಸಿಟಿ 7300 ಅಲ್ಟ್ರಾ ಪ್ರೊಸೆಸರ್ ಇದೆ. ಇದು 2.5GHz ವೇಗದಲ್ಲಿ ಕಾರ್ಯನಿರ್ವಹಿಸುವುದರಿಂದ ಮಲ್ಟಿಟಾಸ್ಕಿಂಗ್ ಮತ್ತು ಗೇಮಿಂಗ್‌ಗೆ ಇದು ಸೂಕ್ತವಾಗಿದೆ. ಮಾಲಿ-G615 MC2 GPU ಗ್ರಾಫಿಕ್ಸ್ ಅನ್ನು ನಿರ್ವಹಿಸುತ್ತದೆ. ಈ ಸಾಧನವು 128ಜಿಬಿ ಅಥವಾ 256ಜಿಬಿ UFS 2.2 ಸ್ಟೋರೇಜ್ ಆಯ್ಕೆಗಳೊಂದಿಗೆ ಲಭ್ಯವಿದೆ. ಇದು ಆಂಡ್ರಾಯ್ಡ್ 15 ಆಧಾರಿತ ಶಿಯೋಮಿ ಹೈಪರ್ ಓಎಸ್‌ನಲ್ಲಿ ಕಾರ್ಯನಿರ್ವಹಿಸುತ್ತದೆ.

ಕ್ಯಾಮೆರಾ: ಈ ಫೋನ್‌ನ ಹಿಂಭಾಗದಲ್ಲಿ ಟ್ರಿಪಲ್ ಕ್ಯಾಮೆರಾ ಸೆಟಪ್ ಇದೆ. ಇದರಲ್ಲಿ 50MP ಸೋನಿ LYT-600 ಸೆನ್ಸರ್ ಮುಖ್ಯ ಕ್ಯಾಮೆರಾ, 8MP ಅಲ್ಟ್ರಾ-ವೈಡ್-ಆಂಗಲ್ ಕ್ಯಾಮೆರಾ ಮತ್ತು 2MP ಮ್ಯಾಕ್ರೋ ಕ್ಯಾಮೆರಾ ಸೇರಿವೆ. ಸೆಲ್ಫಿಗಾಗಿ 20MP ಮುಂಭಾಗದ ಕ್ಯಾಮೆರಾ ನೀಡಲಾಗಿದೆ.

ಫ್ಲಿಪ್‌ಕಾರ್ಟ್ ಸೇಲ್: ಈ ಜನಪ್ರಿಯ Poco 5G ಫೋನ್‌ ಬೆಲೆ ಈಗ ₹14,999!

ಬ್ಯಾಟರಿ ಮತ್ತು ಸ್ಪೀಕರ್: ಈ ಫೋನ್ 5500mAh ಬ್ಯಾಟರಿ ಸಾಮರ್ಥ್ಯವನ್ನು ಹೊಂದಿದೆ, ಇದು ದೀರ್ಘಕಾಲದ ಬಳಕೆಯನ್ನು ಖಚಿತಪಡಿಸುತ್ತದೆ. 45W ವೇಗದ ಚಾರ್ಜಿಂಗ್ ಬೆಂಬಲದಿಂದ ಫೋನ್ ಅನ್ನು ಶೀಘ್ರವಾಗಿ ಚಾರ್ಜ್ ಮಾಡಬಹುದು. ಇದರಲ್ಲಿನ ಸ್ಟೀರಿಯೊ ಸ್ಪೀಕರ್‌ಗಳು ಡಾಲ್ಬಿ ಅಟ್ಮಾಸ್‌ನೊಂದಿಗೆ ಆಡಿಯೊ ಅನುಭವವನ್ನು ಹೆಚ್ಚಿಸುತ್ತವೆ.

ಇತರ ವೈಶಿಷ್ಟ್ಯಗಳು: ಈ ಫೋನ್ ಭದ್ರತೆಗಾಗಿ ಇನ್-ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸರ್ ಹೊಂದಿದೆ. IP66, IP68 ಮತ್ತು IP69 ರೇಟಿಂಗ್‌ಗಳನ್ನು ಹೊಂದಿದ್ದು, ಧೂಳು ಮತ್ತು ನೀರಿನಿಂದ ಸುರಕ್ಷಿತವಾಗಿದೆ ಇದರ ತೂಕ ಸುಮಾರು 190 ಗ್ರಾಂ ಇರುವುದರಿಂದ ಹಿಡಿದುಕೊಳ್ಳಲು ಆರಾಮದಾಯಕವಾಗಿದೆ.

ಈ ಎಲ್ಲಾ ವೈಶಿಷ್ಟ್ಯಗಳೊಂದಿಗೆ Poco X7 5G ಪೋನ್ ರಿಯಾಯಿತಿ ಬೆಲೆಯಲ್ಲಿ ಸ್ಮಾರ್ಟ್‌ಫೋನ್ ಖರೀದಿಸಲು ಬಯಸುವವರಿಗೆ ಒಂದು ಉತ್ತಮ ಆಯ್ಕೆಯಾಗಿದೆ. ಈ ಆಫರ್ ಸೀಮಿತ ಅವಧಿಗೆ ಮಾತ್ರ ಲಭ್ಯವಿರುವುದರಿಂದ, ಆಸಕ್ತ ಗ್ರಾಹಕರು ಬೇಗನೆ ಇದರ ಲಾಭ ಪಡೆಯಬಹುದು.

Best Mobiles in India

English summary
The Poco X7 5G is currently available at a significant discount as part of the Flipkart Freedom Sale.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+