ಜೂನ್ ಬೊನಾಂಜಾ ಸೇಲ್ ಆರಂಭಿಸಿದ Flipkart; ಬ್ರಾಡೆಂಡ್ ಸ್ಮಾರ್ಟ್‌ಫೋನ್‌ಗಳ ಮೇಲೆ ಭಾರೀ ರಿಯಾಯಿತಿ !
ಪ್ರಸಿದ್ದ ಇ-ಕಾಮರ್ಸ್ ತಾಣವಾಗಿರುವ ಫ್ಲಿಪ್‌ಕಾರ್ಟ್ ತನ್ನ ಗ್ರಾಹಕರಿಗಾಗಿ ಆಗಾಗ ರಿಯಾಯಿತಿ ಮಾರಾಟದ ಆಫರ್ ನೀಡುತ್ತಾ ಬಂದಿದೆ. ಇದೀಗ ಇಂದಿನಿಂದ ಅಂದರೆ ಜೂನ್ 13 ರಿಂದ ಫ್ಲಿಪ್‌ಕಾರ್ಟ್ ತನ್ನ ಮೆಗಾ ಜೂನ್ ಬೊನಾಂಜಾ ಮಾರಾಟ (Bonanza sale) ಆರಂಭಿಸಿದೆ. ಇದು ಜೂನ್ 19 ರವರೆಗೆ ಇರಲಿದೆ. ಮಾರಾಟದ ಸಮಯದಲ್ಲಿ ಹಲವಾರು ಸ್ಮಾರ್ಟ್‌ಫೋನ್‌ಗಳ ಮೇಲೆ ಭಾರೀ ರಿಯಾಯಿತಿ ದೊರೆಯಲಿದೆ. ನೀವು ಹೊಸ ಸ್ಮಾರ್ಟ್‌ಫೋನ್ ಖರೀದಿಸಲು ಯೋಜನೆ ಮಾಡಿದ್ದರೆ ಇದು ಸರಿಯಾದ ಸಮಯ ಆಗಿದೆ. iPhone 15, Motorola Edge 50 Pro, realme 12x 5G ಸೇರಿದಂತೆ ಇನ್ನೂ ಅನೇಕ ಸ್ಮಾರ್ಟ್‌ಫೋನ್‌ಗಳನ್ನು ಹೆಚ್ಚಿನ ರಿಯಾಯಿತಿಯಲ್ಲಿ ಖರೀದಿಸಬಹುದಾಗಿದೆ. ಈ ಬೊನಾನ್ಜಾ ಮಾರಾಟದ ಸಮಯದಲ್ಲಿ ಲಭ್ಯವಿರುವ ಟಾಪ್ 5 ಸ್ಮಾರ್ಟ್‌ಫೋನ್‌ಗಳನ್ನು ಈ ಲೇಖನದಲ್ಲಿ ನೋಡಿ.
1. iPhone 15: ಈ ಸ್ಮಾರ್ಟ್‌ಫೋನ್‌ನ ಮೂಲ ಬೆಲೆ 79,900 ರೂ. ಗಳಿಂದ ಪ್ರಾರಂಭವಾಗುತ್ತದೆ. ಆದರೆ, ಫ್ಲಿಪ್‌ಕಾರ್ಟ್ ಬೊನಾಂಜಾ ಮಾರಾಟದ ಸಮಯದಲ್ಲಿ 19 % ರಷ್ಟು ನೇರ ರಿಯಾಯಿತಿ ನೀಡಲಾಗುತ್ತಿದ್ದು, ಇದ್ನು 63,999 ರೂ. ಗಳಲ್ಲಿ ಖರೀದಿಸಬಹುದಾಗಿದೆ ಹಾಗೂ ಇದರ ಜೊತೆಗೆ ಹಲವಾರು ಇತರೆ ಬ್ಯಾಂಕ್ ಕೊಡುಗೆಗಳನ್ನು ಸಹ ಪಡೆಯುವುದರಿಂದ ಬೆಲೆ ಇನ್ನಷ್ಟು ಕಡಿಮೆಯಾಗಲಿದೆ. ಬೆಲೆಯನ್ನು ಇನ್ನಷ್ಟು ಕಡಿಮೆಗೊಳಿಸಬಹುದು.
ಫೀಚರ್ಸ್: ಈ ಫೋನ್ 6.1-ಇಂಚಿನ ಸೂಪರ್ ರೆಟಿನಾ XDR ಡಿಸ್‌ಪ್ಕೇ, A16 ಬಯೋನಿಕ್ ಚಿಪ್‌ಸೆಟ್‌ನಿಂದ ಚಾಲಿತವಾಗಿದೆ ಮತ್ತು 48 ಮೆಗಾಪಿಕ್ಸೆಲ್ ಬ್ಯಾಕ್ ಕ್ಯಾಮೆರಾ, 12 ಮೆಗಾಪಿಕ್ಸೆಲ್ ಕ್ಯಾಮೆರಾದೊಂದಿಗೆ ಜೋಡಿಸಲಾಗಿದೆ. ಮುಂಭಾಗದಲ್ಲಿ ಇದು 12 ಮೆಗಾಪಿಕ್ಸೆಲ್ ಕ್ಯಾಮೆರಾ ಹೊಂದಿದೆ.

2. Realme 12x 5G: ಈ ಸ್ಮಾರ್ಟ್‌ಫೋನ್ 17,999 ರೂ. ಮೂಲ ಬೆಲೆ ಹೊಂದಿದ್ದು, ಸದ್ಯ ಫ್ಲಿಪ್‌ಕಾರ್ಟ್ (Flipkart) ಬೊನಾಂಜಾ ಸೇಲ್ ನಲ್ಲಿ ಖರೀದಿಸಿದರೆ 12,999 ರೂ. ಗಳಲ್ಲಿ ಗ್ರಾಹಕರ ಕೈ ಸೇರಲಿದೆ. ಇದರ ಜೊತೆಗೆ ಆಯ್ದ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್‌ಗಳ ಮೇಲೆ ಬಳಕೆದಾರರು ರೂ 1,000 ಹೆಚ್ಚುವರಿ ರಿಯಾಯಿತಿ ಪಡೆಯಬಹುದು.
ಫೀಚರ್ಸ್: ಇದು 6.72 ಇಂಚಿನ ಫುಲ್ HD+ ಡಿಸ್‌ಪ್ಲೇ ಹೊಂದಿದೆ. 6GB RAM ಮತ್ತು 128GB ಸ್ಟೋರೆಜ್ ಹೊಂದಿದೆ. ಇದರ ಡೈಮೆನ್ಸಿಟಿ 6100+ ಚಿಪ್‌ಸೆಟ್‌ನಿಂದ ಚಾಲಿತವಾಗಿದೆ. ಕ್ಯಾಮೆರಾದ ವಿಷಯದಲ್ಲಿ ಫೋನ್ 50 ಮೆಗಾಪಿಕ್ಸೆಲ್ ಮತ್ತು 2 ಮೆಗಾಪಿಕ್ಸೆಲ್ ಹಿಂಬದಿಯ ಕ್ಯಾಮೆರಾ ಸೆಟಪ್ ಜೊತೆಗೆ 8 ಮೆಗಾಪಿಕ್ಸೆಲ್ ಫ್ರಂಟ್ ಶೂಟರ್ ಹೊಂದಿದೆ.
3. Realme P1 5G: ಈ 5G ಸ್ಮಾರ್ಟ್‌ಫೋನ್ 23 ಶೇಕಡಾ ನೇರ ರಿಯಾಯಿತಿಯಲ್ಲಿ ಲಭ್ಯವಿದೆ. ಈ ಫೋನ್‌ನ 20,999 ರೂ. ಮೂಲ ಬೆಲೆ ಹೊಂದಿದ್ದು, 15,999 ರೂ. ಗಳಲ್ಲಿ ಗ್ರಾಹಕರಿಗೆ ಸಿಗಲಿದೆ. ಆಯ್ದ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ ಬಳಕೆದಾರರಿಗೆ ಹೆಚ್ಚುವರಿಯಾರಿ 1,000 ರೂ. ಡಿಸ್ಕೌಂಟ್ ದೊರೆಯಲಿದೆ.
ಫೀಚರ್ಸ್: 6.67 ಇಂಚಿನ ಫುಲ್ HD+ ಡಿಸ್‌ಪ್ಲೇ ಮತ್ತು ಡೈಮೆನ್ಸಿಟಿ 7050 ಚಿಪ್‌ಸೆಟ್‌ನೊಂದಿಗೆ ಬರುತ್ತದೆ. ಇದು 50 ಮೆಗಾಪಿಕ್ಸೆಲ್ + 2 ಮೆಗಾಪಿಕ್ಸೆಲ್ ಹಿಂಬದಿಯ ಕ್ಯಾಮೆರಾ ಸೆಟಪ್ ಮತ್ತು 16 ಮೆಗಾಪಿಕ್ಸೆಲ್ ಮುಂಭಾಗದ ಕ್ಯಾಮೆರಾವನ್ನು ಹೊಂದಿದೆ. ಫೋನ್ 5,000 mAh ಬ್ಯಾಟರಿ ಹೊಂದಿದೆ.
4. Motorola Edge 50 Pro: ಸದ್ಯ ಫ್ಲಿಪ್‌ಕಾರ್ಟ್ (Flipkart) ಬೊನಾಂಜಾ ಸೇಲ್ ನಲ್ಲಿ ಖರೀದಿಸಿದರೆ ರೂ 29,999 ಬೆಲೆಯಲ್ಲಿ ಲಭ್ಯವಿದೆ. ಇದು 36,999 ರೂ. ಮೂಲ ಬೆಲೆ ಹೊಂದಿದೆ. ಜೊತೆಗೆ HDFC ಕ್ರೆಡಿಟ್ ಕಾರ್ಡ್ ಬಳಕೆದಾರರು EMI ಅಲ್ಲದ ವಹಿವಾಟುಗಳ ಮೇಲೆ 2,000 ರೂ. ಗಳ ಬ್ಯಾಂಕ್ ಡಿಸ್ಕೌಂಟ್ ಪಡೆಯಬಹುದು. ಕೆಲವು ಇತರೆ ಆಫರ್‌ಗಳೂ ಕೂಡ ಲಭ್ಯವಿದೆ.
ಫೀಚರ್ಸ್: 6.7 ಇಂಚಿನ ಡಿಸ್‌ಪ್ಲೇ, 4,500 mAh ಬ್ಯಾಟರಿ ಮತ್ತು Snapdragon 7 Gen 3 ಚಿಪ್‌ಸೆಟ್ ಹೊಂದಿದೆ. ಇದು 50 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ, 13 ಮೆಗಾಪಿಕ್ಸೆಲ್ ಮತ್ತು 10 ಮೆಗಾಪಿಕ್ಸೆಲ್ ಲೆನ್ಸ್‌ನೊಂದಿಗೆ ಜೋಡಿಸಲಾಗಿದೆ. ಸೆಲ್ಫಿಗಾಗಿ ಮತ್ತು ವೀಡಿಯೊಗಳಿಗಾಗಿ 50 ಮೆಗಾಪಿಕ್ಸೆಲ್ ಕ್ಯಾಮೆರಾ ಹೊಂದಿದೆ.
5. Vivo T3x 5G: ಈ ಸ್ಮಾರ್ಟ್‌ಫೋನ್ ತನ್ನ ಮೂಲ ಬೆಲೆಗಿಂತ ಶೇ. 22 ರಷ್ಟು ನೇರ ರಿಯಾಯಿತಿ ಪಡೆಯಲಿದೆ. ಅಂದರೆ ಫೋನಿನ ಬೆಲೆ ರೂ.17,499 ರಿಂದ ರೂ.13,499ಕ್ಕೆ ಇಳಿದಿದೆ. ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಬಳಕೆದಾರರು ಖರೀದಿಯ ಮೇಲೆ ಹೆಚ್ಚುವರಿ 1,000 ರೂ. ಸೇರಿ ಇನ್ನೂ ಕೆಲವು ಡೀಲ್‌ಗಳು ಲಭ್ಯವಿವೆ.
ಫೀಚರ್ಸ್: ಫೋನ್ 6.72 ಇಂಚಿನ ಫುಲ್ HD+ ಡಿಸ್‌ಪ್ಲೇ, 6,000 mAh ಬ್ಯಾಟರಿ ಮತ್ತು Snapdragon 6 Gen 1 ಪ್ರೊಸೆಸರ್‌ನೊಂದಿಗೆ ಬರುತ್ತದೆ. ಇದು 50 ಮೆಗಾಪಿಕ್ಸೆಲ್ + 2 ಮೆಗಾಪಿಕ್ಸೆಲ್ ಹಿಂಬದಿಯ ಕ್ಯಾಮೆರಾ ಮತ್ತು 8 ಮೆಗಾಪಿಕ್ಸೆಲ್ ಮುಂಭಾಗದ ಕ್ಯಾಮೆರಾವನ್ನು ಹೊಂದಿದೆ.


Click it and Unblock the Notifications








