Home
Deal of the day

iPhone 16 Pro: ವಿಜಯ್ ಸೇಲ್ಸ್‌ನಲ್ಲಿ ಈಗ ಭರ್ಜರಿ ರಿಯಾಯಿತಿಯೊಂದಿಗೆ ಲಭ್ಯ!

ನೀವು ಈಗ ಹೊಸ ಪ್ರೀಮಿಯಂ ಐಫೋನ್ ಖರೀದಿಸಲು ಎದುರು ನೋಡುತ್ತಿದ್ದರೆ, ಇದೊಂದು ನಿಮಗೆ ಸುವರ್ಣಾವಕಾಶ. ಏಕೆಂದರೆ, ಪ್ರತಿಷ್ಠಿತ ಎಲೆಕ್ಟ್ರಾನಿಕ್ಸ್ ಮಾರಾಟಗಾರರಾದ 'ವಿಜಯ್ ಸೇಲ್ಸ್' ಇದೀಗ Apple ನ ಇತ್ತೀಚಿನ iPhone 16 Pro ಮೇಲೆ ಆಕರ್ಷಕ ರಿಯಾಯಿತಿಯನ್ನು ನೀಡುತ್ತಿದೆ. ಗ್ರಾಹಕರು ಇದೀಗ ಬರೋಬ್ಬರಿ ರೂ. 14,500 ಕ್ಕಿಂತಲೂ ಹೆಚ್ಚಿನ ಉಳಿತಾಯದೊಂದಿಗೆ ಈ ಪ್ರೀಮಿಯಂ iPhone 16 Pro ಸ್ಮಾರ್ಟ್‌ಫೋನ್ ಅನ್ನು ತಮ್ಮದಾಗಿಸಿಕೊಳ್ಳಬಹುದು. ಆದರೆ ಗಮನಿಸಬೇಕಾದ ಅಂಶವೆಂದರೆ, ಈ ರಿಯಾಯಿತಿಯು ನೇರ ಬೆಲೆ ಕಡಿತ ಮತ್ತು ಬ್ಯಾಂಕ್ ಕೊಡುಗೆಗಳ ಸಂಯೋಜನೆಯಾಗಿದೆ. ಈ ಕುರಿತ ಸಂಪೂರ್ಣ ಮಾಹಿತಿಯನ್ನು ನೋಡೋಣ ಬನ್ನಿ.

ಭಾರತದಲ್ಲಿ 1,19,900 ರೂ.ಗಳ ಆರಂಭಿಕ ಬೆಲೆಗೆ ಬಿಡುಗಡೆ ಮಾಡಲಾಗಿತ್ತು. ಆದರೆ, ವಿಜಯ್ ಸೇಲ್ಸ್‌ನ ವೆಬ್‌ಸೈಟ್‌ನಲ್ಲಿ ಪ್ರಸ್ತುತ iPhone 16 Pro ಸ್ಮಾರ್ಟ್‌ಫೋನನ್ನು ಪ್ರಸ್ತುತ ರೂ. 1,09,500 ಕ್ಕೆ ಪಟ್ಟಿ ಮಾಡಲಾಗಿದೆ. ಇದರರ್ಥ ನೇರವಾಗಿ ರೂ. 10,400 ರಷ್ಟು ಬೆಲೆ ಇಳಿಕೆ ಲಭ್ಯವಿದೆ. ಈ ಬೆಲೆಯ ಜೊತೆಗೆ, ನೀವು ನಿರ್ದಿಷ್ಟ ಬ್ಯಾಂಕ್ ಕೊಡುಗೆಗಳನ್ನು ಬಳಸಿಕೊಂಡು ಮತ್ತಷ್ಟು ಉಳಿತಾಯವನ್ನು ಪಡೆಯಬಹುದು.ICICI ಬ್ಯಾಂಕ್, AXIS ಬ್ಯಾಂಕ್ ಮತ್ತು KOTAK ಬ್ಯಾಂಕ್‌ನ ಕ್ರೆಡಿಟ್ ಕಾರ್ಡ್‌ಗಳ ಮೂಲಕ ವಹಿವಾಟು ನಡೆಸಿದರೆ, ನೀವು ಹೆಚ್ಚುವರಿಯಾಗಿ ರೂ. 3,000 ರಿಯಾಯಿತಿಯನ್ನು ಪಡೆಯಬಹುದು. ಅದೇ ರೀತಿ, HDFC ಬ್ಯಾಂಕ್‌ನ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಹೊಂದಿರುವವರು ಮತ್ತು EMI ಆಯ್ಕೆಯನ್ನು ಆರಿಸಿಕೊಂಡರೆ ರೂ. 4,500 ರಷ್ಟು ರಿಯಾಯಿತಿಯನ್ನು ಪಡೆಯಲು ಅರ್ಹರಾಗಿರುತ್ತಾರೆ. RBL ಬ್ಯಾಂಕ್‌ನ ಕ್ರೆಡಿಟ್ ಕಾರ್ಡ್ ಬಳಕೆದಾರರು ಸಹ EMI ವಹಿವಾಟುಗಳ ಮೇಲೆ ಇದೇ ರೀತಿಯ ರಿಯಾಯಿತಿಯನ್ನು ಪಡೆಯಬಹುದು. ಈ ಎಲ್ಲಾ ಕೊಡುಗೆಗಳನ್ನು ಒಟ್ಟುಗೂಡಿಸಿದರೆ, ನೀವು ಗರಿಷ್ಠ ರೂ. 14,900 (ರೂ. 10,400 + ರೂ. 4,500) ವರೆಗೆ ಉಳಿತಾಯ ಮಾಡಬಹುದು.

iPhone 16 Pro: ವಿಜಯ್ ಸೇಲ್ಸ್‌ನಲ್ಲಿ ಈಗ ಭರ್ಜರಿ ರಿಯಾಯಿತಿಯೊಂದಿಗೆ ಲಭ್ಯ!

iPhone 16 Pro ಸ್ಮಾರ್ಟ್‌ಫೋನ್ ಅತ್ಯಾಧುನಿಕ ವೈಶಿಷ್ಟ್ಯಗಳು ಮತ್ತು ತಾಂತ್ರಿಕ ವಿಶೇಷಣಗಳಿಂದ ಕೂಡಿದೆ. ಇದು 120Hz ವರೆಗಿನ ರಿಫ್ರೆಶ್ ದರವನ್ನು ಹೊಂದಿರುವ 6.3-ಇಂಚಿನ LTPO OLED ಡಿಸ್ಪ್ಲೇಯನ್ನು ಒಳಗೊಂಡಿದೆ. ಈ ಡಿಸ್ಪ್ಲೇ HDR10 ಮತ್ತು ಡಾಲ್ಬಿ ವಿಷನ್‌ನಂತಹ ತಂತ್ರಜ್ಞಾನಗಳನ್ನು ಬೆಂಬಲಿಸುತ್ತದೆ, ಇದು ಅದ್ಭುತವಾದ ದೃಶ್ಯ ಅನುಭವವನ್ನು ನೀಡುತ್ತದೆ. ಅಲ್ಲದೆ, ಇದು 2000 nits ನ ಗರಿಷ್ಠ ಹೊಳಪನ್ನು ಹೊಂದಿದೆ, ಅಂದರೆ ನೇರ ಸೂರ್ಯನ ಬೆಳಕಿನಲ್ಲಿಯೂ ಸ್ಪಷ್ಟವಾದ ವೀಕ್ಷಣೆಯನ್ನು ಖಚಿತಪಡಿಸುತ್ತದೆ. ಕಾರ್ಯಕ್ಷಮತೆಯ ವಿಷಯಕ್ಕೆ ಬಂದರೆ, iPhone 16 Pro ಫೋನ್ Apple ನ ಶಕ್ತಿಯುತ A18 Pro ಚಿಪ್‌ಸೆಟ್‌ನಿಂದ ಚಾಲಿತವಾಗಿದೆ. ಇದು 8GB RAM ಮತ್ತು 1TB ವರೆಗಿನ ಶೇಖರಣಾ ಆಯ್ಕೆಗಳೊಂದಿಗೆ ಲಭ್ಯವಿದೆ, ಇದು ಯಾವುದೇ ಅಡೆತಡೆಯಿಲ್ಲದೆ ಬಹುಕಾರ್ಯ ನಿರ್ವಹಣೆ ಮತ್ತು ಸಾಕಷ್ಟು ಡೇಟಾ ಸಂಗ್ರಹಣೆಗೆ ಅವಕಾಶ ನೀಡುತ್ತದೆ.

iPhone 16 Pro ಸ್ಮಾರ್ಟ್‌ಫೋನಿನ ಹಿಂಭಾಗದಲ್ಲಿ ಟ್ರಿಪಲ್-ಕ್ಯಾಮೆರಾ ಸೆಟಪ್ ಇದೆ, ಇದರಲ್ಲಿ 48MP ಮುಖ್ಯ ಕ್ಯಾಮೆರಾ, 12MP ಪೆರಿಸ್ಕೋಪ್ ಟೆಲಿಫೋಟೋ ಲೆನ್ಸ್ ಮತ್ತು 48MP ಅಲ್ಟ್ರಾವೈಡ್ ಲೆನ್ಸ್ ಸೇರಿವೆ. ಈ ಸುಧಾರಿತ ಕ್ಯಾಮೆರಾ ವ್ಯವಸ್ಥೆಯು ಯಾವುದೇ ಬೆಳಕಿನ ಪರಿಸ್ಥಿತಿಯಲ್ಲಿಯೂ ಉತ್ತಮ ಗುಣಮಟ್ಟದ ಫೋಟೋಗಳು ಮತ್ತು ವೀಡಿಯೊಗಳನ್ನು ಸೆರೆಹಿಡಿಯಲು ನಿಮಗೆ ಸಹಾಯ ಮಾಡುತ್ತದೆ. ಸೆಲ್ಫಿಗಳು ಮತ್ತು ವೀಡಿಯೊ ಕರೆಗಳಿಗಾಗಿ, ಮುಂಭಾಗದಲ್ಲಿ 12MP ಕ್ಯಾಮೆರಾವನ್ನು ನೀಡಲಾಗಿದೆ. ಬ್ಯಾಟರಿ ವಿಭಾಗದಲ್ಲಿ iPhone 16 Pro ಫೋನ್ 3582mAh ಬ್ಯಾಟರಿಯನ್ನು ಹೊಂದಿದೆ, ಇದು ದಿನವಿಡೀ ಬಾಳಿಕೆ ಬರುವ ಶಕ್ತಿಯನ್ನು ಒದಗಿಸುತ್ತದೆ. ಇದು 25W ವೈರ್ಡ್ ಚಾರ್ಜಿಂಗ್, 15W ವೈರ್‌ಲೆಸ್ ಚಾರ್ಜಿಂಗ್ ಮತ್ತು 4.5W ರಿವರ್ಸ್ ವೈರ್ಡ್ ಚಾರ್ಜಿಂಗ್ ಅನ್ನು ಸಹ ಬೆಂಬಲಿಸುತ್ತದೆ. ತಕ್ಷಣವೇ ವಿಜಯ್ ಸೇಲ್ಸ್‌ನ ವೆಬ್‌ಸೈಟ್‌ಗೆ ಭೇಟಿ ನೀಡಿ ಅಥವಾ ನಿಮ್ಮ ಹತ್ತಿರದ ಮಳಿಗೆಗೆ ತೆರಳಿ ಈ ಆಫರ್‌ನ ಲಾಭ ಪಡೆಯಿರಿ!

Best Mobiles in India

English summary
The iPhone 16 Pro was introduced in India with a starting price of Rs 1,19,900. It is currently available for Rs 1,09,500 on the Vijay Sales website.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+