Google Pixel 7 ಫೋನ್‌ಗಳ ಬೆಲೆ ದಿಢೀರ್ ಕುಸಿತ! ಸಸ್ತಾ ಬೆಲೆಗೆ ಲಭ್ಯ
ಟೆಕ್ ದೈತ್ಯ ಗೂಗಲ್ (Google) ತನ್ನ ಗ್ರಾಹಕರಿಗೆ ಎರಡು ಖುಷಿ ಸುದ್ದಿಯೊಂದನ್ನು ನೀಡಿದೆ. ಈ ವಾರ ತನ್ನ ಹೊಸ ಗೂಗಲ್ ಪಿಕ್ಸೆಲ್ 9 ಸರಣಿಯನ್ನು ಬಿಡುಗಡೆ ಮಾಡಲಿದೆ. ಆಗಸ್ಟ್ 14 ರಂದು ಪಿಕ್ಸೆಲ್ 9 ಸರಣಿಯ ಫೋನ್‌ಗಳನ್ನು ಅನಾವರಣಗೊಳಿಸಲಾಗುತ್ತದೆ. ಆನ್‌ಲೈನ್ ಶಾಪಿಂಗ್ ವೆಬ್‌ಸೈಟ್ ಫ್ಲಿಪ್‌ಕಾರ್ಟ್‌ನಲ್ಲಿ ಕಂಪನಿಯು ಈ ಫೋನಿನ ಲ್ಯಾಂಡಿಂಗ್ ಲೇಜ್ ಸಿದ್ಧಪಡಿಸಿದೆ. ಪಿಕ್ಸೆಲ್ 9 ಸರಣಿಯ ಮೊದಲು, ಗೂಗಲ್ ಪಿಕ್ಸೆಲ್ 7 ಮತ್ತು ಪಿಕ್ಸೆಲ್ ಪ್ರೊ ಮೊಬೈಲ್ ಬೆಲೆ ಇಳಿಕೆ ಮಾಡಿದೆ.
ಹೌದು, ನೀವು 33 ಸಾವಿರಕ್ಕಿಂತ ಕಡಿಮೆ ಆರಂಭಿಕ ಬೆಲೆಯಲ್ಲಿ ಪಿಕ್ಸೆಲ್ 7 ಸರಣಿಯ ಸ್ಮಾರ್ಟ್‌ಫೋನ್ ಖರೀದಿಸಬಹುದು. ಪ್ರಸ್ತುತ, ನೀವು ಫ್ಲಿಪ್‌ಕಾರ್ಟ್‌ನಿಂದ ಈ ಎರಡೂ ಫೋನ್‌ಗಳನ್ನು ಭರ್ಜರಿ ಡಿಸ್ಕೌಂಟ್‌ನೊಂದಿಗೆ ಖರೀದಿಸಬಹುದು. ಪ್ರಸ್ತುತ ಪಿಕ್ಸೆಲ್ 7 ಅನ್ನು 32,000 ರೂ.ಗಿಂತ ಕಡಿಮೆ ಮತ್ತು ಪಿಕ್ಸೆಲ್ 7 ಪ್ರೊ ಅನ್ನು 43,000 ರೂ.ಗಿಂತ ಕಡಿಮೆ ಬೆಲೆಗೆ ಬೆಲೆಗೆ ಮಾರಾಟ ಮಾಡಲಾಗುತ್ತಿದೆ. ಬನ್ನಿ, ಈ ಫೋನ್‌ಗಳ ಹೊಸ ಬೆಲೆ, ಆಫರ್‌ಗಳು ಮತ್ತು ಡಿಸ್ಕೌಂಟ್ ಬಗ್ಗೆ ತಿಳಿಯೋಣ.

ಗೂಗಲ್ ಪಿಕ್ಸೆಲ್ 7 ಸರಣಿಯ ಹೊಸ ಬೆಲೆ ಮತ್ತು ಡಿಸ್ಕೌಂಟ್
ಗೂಗಲ್ ಪಿಕ್ಸೆಲ್ 7 ಸರಣಿಯಲ್ಲಿ, ನೀವು ಗೂಗಲ್ ಪಿಕ್ಸೆಲ್ 7 ಮತ್ತು ಗೂಗಲ್ ಪಿಕ್ಸೆಲ್ 7 ಪ್ರೊ ಫೋನನ್ನು ಖರೀದಿಸಬಹುದು. ಗೂಗಲ್ ಪಿಕ್ಸೆಲ್ 7 ಬೆಲೆ 32,999 ರೂ. ಇದೆ. ಗೂಗಲ್ ಪಿಕ್ಸೆಲ್ 7 ಪ್ರೊ ಬೆಲೆ 44,999 ರೂ. ಆಗಿದೆ. ಬ್ಯಾಂಕ್ ಆಫರ್‌ನೊಂದಿಗೆ ಎರಡೂ ಫೋನ್‌ಗಳಲ್ಲಿ 1,000 ರೂ.ಗಳ ವರೆಗೆ ಡಿಸ್ಕೌಂಟ್ ಲಭ್ಯವಿದೆ. ನೀವು EMI ನಲ್ಲಿ ಎರಡೂ ಫೋನ್‌ಗಳನ್ನು ಖರೀದಿಸಿದರೆ, 1,500 ರೂ.ಗಳ ವರೆಗೆ ರಿಯಾಯಿತಿಯನ್ನು ಪಡೆಯಬಹುದು.
ಗೂಗಲ್ ಪಿಕ್ಸೆಲ್ 7 ಮತ್ತು ಗೂಗಲ್ ಪಿಕ್ಸೆಲ್ 7 ಪ್ರೊ ಫೀಚರ್ಸ್
ಗೂಗಲ್ ಪಿಕ್ಸೆಲ್ 7 ಪ್ರೊ 6.7 ಇಂಚಿನ Quad HD + AMOLED ಡಿಸ್ಪ್ಲೇ ಹೊಂದಿದೆ. ಇದು 120Hz ರಿಫ್ರೆಶ್ ರೇಟ್ ಮತ್ತು ಗೊರಿಲ್ಲಾ ಗ್ಲಾಸ್ ವಿಕ್ಟಸ್ ರಕ್ಷಣೆಯನ್ನು ಹೊಂದಿದೆ. ಉತ್ತಮ ಕಾರ್ಯಕ್ಷಮತೆಗಾಗಿ, Google Tensor G2 ಪ್ರೊಸೆಸರ್ ಅನ್ನು ಗೂಗಲ್ ಪಿಕ್ಸೆಲ್ 7 ಪ್ರೊನಲ್ಲಿ ಅಳವಡಿಸಲಾಗಿದೆ. ಇದು 12GB ಜೊತೆಗೆ 128GB, 256GB ಅಥವಾ 512GB ಸ್ಟೋರೇಜ್ ಆಯ್ಕೆಗಳೊಂದಿಗೆ ಬರುತ್ತದೆ.
ಗೂಗಲ್ ಪಿಕ್ಸೆಲ್ 7 ಪ್ರೊ ಮೊಬೈಲ್ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಆಂಡ್ರಾಯ್ಡ್ 13 ಚಾಲನೆಯಲ್ಲಿರುವ ಪಿಕ್ಸೆಲ್ 7 ಪ್ರೊ ಟೈಟಾನ್ ಎಂ 2 ಭದ್ರತಾ ಚಿಪ್ ಮತ್ತು ಉತ್ತಮ ಭದ್ರತೆಗಾಗಿ ಇನ್-ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸಂವೇದಕವನ್ನು ಒಳಗೊಂಡಿದೆ.

ಗೂಗಲ್ ಪಿಕ್ಸೆಲ್ 7 ಸ್ಮಾರ್ಟ್‌ಫೋನ್ 90Hz ರಿಫ್ರೆಶ್ ದರದೊಂದಿಗೆ 6.3 ಇಂಚಿನ FHD+ AMOLED ಡಿಸ್ಪ್ಲೇಯನ್ನು ಹೊಂದಿದೆ. ಇದು Google Tensor G2 ಪ್ರೊಸೆಸರ್‌ನೊಂದಿಗೆ ಕೆಲಸ ಮಾಡುತ್ತದೆ. ಈ ಫೋನ್ 8GB RAM ಮತ್ತು 128GB ಅಥವಾ 256GB ಸ್ಟೋರೇಜ್ ಆಯ್ಕೆಗಳೊಂದಿಗೆ ಬರುತ್ತದೆ.
50MP ಕ್ಯಾಮೆರಾ, 4700mAh ಬ್ಯಾಟರಿ
ಇದು 50MP ಪ್ರಾಥಮಿಕ ಕ್ಯಾಮೆರಾ, 12MP ಅಲ್ಟ್ರಾ-ವೈಡ್ ಲೆನ್ಸ್ ಮತ್ತು 11MP ಫ್ರಂಟ್ ಕ್ಯಾಮೆರಾವನ್ನು ಹೊಂದಿದೆ. ಈ ಫೊನ್ 4,700mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು 30W ವೇಗದ ಚಾರ್ಜಿಂಗ್ ಮತ್ತು ವೈರ್‌ಲೆಸ್ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. Android 13 ನಲ್ಲಿ ಚಾಲನೆಯಲ್ಲಿರುವ ಈ ಫೋನ್ ಟೈಟಾನ್ ಭದ್ರತಾ ಚಿಪ್ ಮತ್ತು ಭದ್ರತೆಗಾಗಿ ಇನ್-ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸಂವೇದಕವನ್ನು ಹೊಂದಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ 5G, 4G LTE, ಬ್ಲೂಟೂತ್, GPS ಮತ್ತು USB ಟೈಪ್-C ಪೋರ್ಟ್ ನಂತಹ ಸೌಲಭ್ಯ ಒಳಗೊಂಡಿದೆ.


Click it and Unblock the Notifications








