Home
Deal of the day

18,000 ಬೆಲೆ ಕುಸಿತ! 64MP ಕ್ಯಾಮೆರಾ.. 4300mAh ಬ್ಯಾಟರಿ.. ಕಮ್ಮಿ ಬೆಲೆಗೆ Google ಫೋನ್

ಗೂಗಲ್ ಫೋನ್‌ಗಳಿಗೆ ಭಾರತ ಸೇರಿದಂತೆ ವಿಶ್ವದಲ್ಲಿ ಭಾರೀ ಬೇಡಿಕೆಯಿದೆ. ಈ ಮೂಲಕ ಟೆಕ್ ದೈತ್ಯ ಆಪಲ್‌ ಕಂಪನಿಗೆ ಟಕ್ಕರ್ ಕೊಡುತ್ತಿದೆ. ಹೌದು, ಟೆಕ್​ ದೈತ್ಯ ಗೂಗಲ್ ವಿಭಿನ್ನ ಶ್ರೇಣಿ ಮೊಬೈಲ್‌ಗಳ ಮೂಲಕ ಗ್ರಾಹಕರನ್ನು ಸೆಳೆಯುತ್ತಿದೆ. ಪ್ರಸ್ತುತ, ಗೂಗಲ್​ ಪಿಕ್ಸೆಲ್ 7 (Google Pixel 7a) ಫೋನಿನ ದರವನ್ನು ಕಡಿತಗೊಳಿಸಿದೆ. ನೀವು, ಈ ಮೊಬೈಲ್ ಖರೀದಿಸಿದರೆ ಬರೋಬ್ಬರಿ 18,000 ಉಳಿತಾಯ ಮಾಡಬಹುದು. ಬನ್ನಿ, ಈ ಫೋನಿನ ಹೊಸ ಬೆಲೆ, ಆಫರ್‌ಗಳು ಮತ್ತು ವಿಶೇಷತೆಗಳನ್ನು ತಿಳಿಯೋಣ.

ಜನಪ್ರಿಯ ಇ-ಕಾಮರ್ಸ್​ ವೆಬ್​ಸೈಟ್​ ಫ್ಲಿಪ್​ಕಾರ್ಟ್‌ ಗೂಗಲ್​ ಪಿಕ್ಸೆಲ್ 7 ಸ್ಮಾರ್ಟ್​​ಫೋನ್​ ಮೇಲೆ ಭರ್ಜರಿ ಆಫರ್‌ ಘೋಷಿಸಿದೆ. ಹೊಸ ಫೋನ್ ಖರೀದಿಸುವವರಿಗೆ ಇದು ಉತ್ತಮ ಆಯ್ಕೆಯಾಗಿದೆ. ಈ ಮೊಬೈಲ್ 64 ಮೆಗಾಪಿಕ್ಸೆಲ್ ಕ್ಯಾಮೆರಾ ಹೊಂದಿದೆ. ಇದು Tensor G2 ಪ್ರೊಸೆಸರ್‌ನಲ್ಲಿ ಕೆಲಸ ಮಾಡುತ್ತದೆ. ಫೋನಿನಲ್ಲಿ 6.1 ಇಂಚಿನ ಡಿಸ್ಪ್ಲೇ ಇದೆ. ಜೊತೆಗೆ 128GB ಸ್ಟೋರೇಜ್, 4300mAh ಬ್ಯಾಟರಿ ಮತ್ತು 18W ವೇಗದ ಚಾರ್ಜಿಂಗ್ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಒಳಗೊಂಡಿದೆ.

Google: 18000 ಬೆಲೆ ಇಳಿಕೆ.. 64MP ಕ್ಯಾಮೆರಾ.. 4300mAh ಬ್ಯಾಟರಿ; ಯಾವ ಫೋನ್‌?

ಗೂಗಲ್​ ಪಿಕ್ಸೆಲ್ 7 ಬೆಲೆ ಮತ್ತು ಆಫರ್‌ಗಳು

ಕಂಪನಿಯು ಕಳೆದ ವರ್ಷ ಗೂಗಲ್​ ಪಿಕ್ಸೆಲ್ 7 ಫೋನನ್ನು ಬಿಡುಗಡೆ ಮಾಡಿತ್ತು. ಫೋನಿನ 8GB RAM + 128GB ಸ್ಟೋರೇಜ್ ರೂಪಾಂತರದ ಬೆಲೆ 43,999 ರೂ. ಆಗಿದೆ. ಪ್ರಸ್ತುತ, ಫ್ಲಿಪ್‌ಕಾರ್ಟ್‌ನಲ್ಲಿ ಶೇ.36 ರಷ್ಟು ರಿಯಾಯಿತಿ ನೀಡಲಾಗುತ್ತಿದೆ. ಕೇವಲ 27,999 ರೂ.ಗೆ ಈ ಫೋನ್ ಮಾರಾಟವಾಗುತ್ತಿದೆ. ಜೊತೆಗೆ 2,000 ರೂ. ಬ್ಯಾಂಕ್ ಡಿಸ್ಕೌಂಟ್ ಲಭ್ಯವಿದೆ.

ಡಿಸ್ಕೌಂಟ್‌ ಬಳಿಕ ನೀವು 25,999 ರೂ.ಗೆ ಈ ಮೊಬೈಲ್ ಖರೀದಿಸಬಹುದು. ಈ ಮೂಲಕ 18,000 ರೂ. ಉಳಿತಾಯ ಮಾಡಬಹುದು. ಇಎಂಐ ಮೂಲಕ ಖರೀದಿಸಿದರೂ ಸಹ 2,000 ರೂ. ಡಿಸ್ಕೌಂಟ್ ಸಿಗುತ್ತದೆ. ಜೊತೆಗೆ 9,600 ರೂ. ಎಕ್ಸ್‌ಚೇಂಜ್ ಆಫರ್ ಸಹ ಲಭ್ಯವಿದೆ. ಹಾಗೆಯೇ ಫ್ಲಿಪ್‌ಕಾರ್ಟ್‌ ಆಕ್ಸೆಸ್ ಬ್ಯಾಂಕ್ ಕಾರ್ಡ್ ಬಳಸಿದರೆ, ಶೇ.5 ರಷ್ಟು ಕ್ಯಾಶ್‌ಬ್ಯಾಕ್‌ ಪಡೆಯಬಹುದು. ಈ ಫೋನ್ ಚಾರ್ಕೋಲ್‌, ಕೋರಲ್, ಸೀ ಹಾಗೂ ಸ್ನೋ ಬಣ್ಣಗಳಲ್ಲಿ ಖರೀದಿಗೆ ಲಭ್ಯವಿದೆ.

ಗೂಗಲ್​ ಪಿಕ್ಸೆಲ್ 7 ವೈಶಿಷ್ಟ್ಯಗಳು

ಡಿಸ್ಪ್ಲೇ ವಿವರ

ಗೂಗಲ್​ ಪಿಕ್ಸೆಲ್ 7 ಮೊಬೈಲ್ 6.1 ಇಂಚಿನ ಪೂರ್ಣ ಹೆಚ್‌ಡಿ ಪ್ಲಸ್ ಡಿಸ್ಪ್ಲೇ ಹೊಂದಿದೆ. ಇದು 2400 x 1080 ಪಿಕ್ಸೆಲ್‌ಗಳ ರೆಸಲ್ಯೂಶನ್ ಮತ್ತು 90Hz ರಿಫ್ರೆಶ್ ದರದೊಂದಿಗೆ ಬರುತ್ತದೆ. ಈ ಡಿಸ್ಲ್ಪೇಯು ಗೊರಿಲ್ಲಾ ಗ್ಲಾಸ್ 3 ರಕ್ಷಣೆಯನ್ನು ಹೊಂದಿದೆ.

ಪ್ರೊಸೆಸರ್ ಸಾಮರ್ಥ್ಯ

ಗೂಗಲ್​ ಪಿಕ್ಸೆಲ್ 7 ಫೋನ್‌ ಟೆನ್ಸರ್ G2 (Tensor G2) ಪ್ರೊಸೆಸರ್ ಹೊಂದಿದೆ. ಜೊತೆಗೆ ಟೈಟಾನ್ M2 ಪ್ರೊಸೆಸರ್ ಸಹ ಹೊಂದಿದೆ. ಈ ಸ್ಮಾರ್ಟ್‌ಫೋನ್ ಆಂಡ್ರಾಯ್ಡ್‌ 13 ಆಧಾರಿತ ಓಎಸ್‌ನಲ್ಲಿ ಕೆಲಸ ನಿರ್ವಹಿಸುತ್ತದೆ. ಇದು ಇತ್ತೀಚಿನ ಆಂಡ್ರಾಯ್ಡ್‌ 15 ಓಎಸ್‌ ಬೆಂಬಲ ಸಹ ಪಡೆದಿದೆ.

ಕ್ಯಾಮೆರಾ ಸೆಟಪ್

ಗೂಗಲ್​ ಪಿಕ್ಸೆಲ್ 7 ಸ್ಮಾರ್ಟ್‌ಫೋನ್ ಡ್ಯುಯಲ್ ಕ್ಯಾಮೆರಾ ಸೆಟಪ್ ಹೊಂದಿದೆ. ಫೋನಿನಲ್ಲಿ ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ (OIS) ಬೆಂಬಲದೊಂದಿಗೆ 64 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಲಭ್ಯವಿದೆ. ಜೊತೆಗೆ 13 ಮೆಗಾಪಿಕ್ಸೆಲ್ ದ್ವಿತೀಯ ಕ್ಯಾಮೆರಾ ಹೊಂದಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಳಿಗಾಗಿ, ಈ ಫೋನಿನಲ್ಲಿ 13 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಲಭ್ಯವಿದೆ.

ಬ್ಯಾಟರಿ ಮತ್ತು ಚಾರ್ಜಿಂಗ್

ಗೂಗಲ್​ ಪಿಕ್ಸೆಲ್ 7 ಮೊಬೈಲ್ 4300mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಈ ಬ್ಯಾಟರಿಯನ್ನು ಚಾರ್ಜ್‌ ಮಾಡಲು, 18W ವೇಗದ ಚಾರ್ಜಿಂಗ್ ಸೌಲಭ್ಯ ಒದಗಿಸಲಾಗಿದೆ.

ಇತರೆ ವೈಶಿಷ್ಟ್ಯಗಳು

ಗೂಗಲ್​ ಪಿಕ್ಸೆಲ್ 7 ಫೋನ್‌ ನೀರು ಮತ್ತು ಧೂಳಿನ ವಿರುದ್ಧ ರಕ್ಷಣೆಗಾಗಿ IP67 ರೇಟಿಂಗ್‌ ಪಡೆದಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ ಇದು ಬ್ಲೂಟೂತ್ 5.3, ವೈ-ಫೈ 6, ಎನ್‌ಎಫ್‌ಸಿ, ಯುಎಸ್‌ಬಿ ಟೈಪ್‌ ಸಿ ಚಾರ್ಜಿಂಗ್ ಪೋರ್ಟ್ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಒಳಗೊಂಡಿದೆ.

Best Mobiles in India

English summary
Google Pixel 7a with 8GB RAM price slashed on flipkart: check new price, offers, availability specs and more details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+