Home
Deal of the day

Google Pixel 8 ಫೋನಿನ ಬೆಲೆಯಲ್ಲಿ ದಿಢೀರ್‌ ಇಳಿಕೆ! ಭಾರೀ ಡಿಸ್ಕೌಂಟ್‌!

Google Pixel 8 Price Drop: ಟೆಕ್ ದೈತ್ಯ ಗೂಗಲ್ ಶೀಘ್ರದಲ್ಲೇ ತನ್ನ ಹೊಸ ಪ್ರಮುಖ ಗೂಗಲ್ ಪಿಕ್ಸೆಲ್ 9 (Google Pixel 9) ಸರಣಿಯನ್ನು ಬಿಡುಗಡೆ ಮಾಡಲಿದೆ. ಇದೇ ಆಗಸ್ಟ್ 14 ರಂದು ಗೂಗಲ್‌ನ ಮುಂಬರುವ ಗೂಗಲ್ ಪಿಕ್ಸೆಲ್ 9 ಸರಣಿಯು ಲಾಂಚ್ ಆಗಲಿದೆ. ಹೊಸ ಸರಣಿಯ ಪ್ರಾರಂಭಕ್ಕೂ ಮೊದಲೇ, ಗೂಗಲ್ ಪಿಕ್ಸೆಲ್ 8 (Google Pixel 8) ಸರಣಿಯ ಸ್ಮಾರ್ಟ್‌ಫೋನ್‌ ಬೆಲೆಗಳಲ್ಲಿ ದಿಢೀರ್ ಕುಸಿತ ಕಂಡಿದೆ. ಹೌದು, ನೀವು ಹೊಸ ಸ್ಮಾರ್ಟ್‌ಫೋನ್‌ ಖರೀದಿಸುವ ಮನಸ್ಸು ಮಾಡಿದ್ದರೆ, ಗೂಗಲ್‌ನ ಈ ಜನಪ್ರಿಯ ಪಿಕ್ಸೆಲ್‌ ಫೋನನ್ನು ಕಡಿಮೆ ಬೆಲೆಗೆ ಕೊಳ್ಳುವ ಅವಕಾಶವನ್ನು ಕಳೆದುಕೊಳ್ಳಬೇಡಿ.

ಕಂಪನಿಯು ಗೂಗಲ್ ಪಿಕ್ಸೆಲ್ 8 ಸರಣಿಯಲ್ಲಿ Google Pixel 8 ಮತ್ತು Google Pixel 8 Pro ಸ್ಮಾರ್ಟ್‌ಫೋನಿನ ಮೇಲೆ ಸಾವಿರಾರು ರೂಪಾಯಿ ಡಿಸ್ಕೌಂಟ್‌ ಘೋಷಿಸಿದೆ. ನೀವು ಗೂಗಲ್ ಪಿಕ್ಸೆಲ್ 8 ಸರಣಿಯ ಫೋನನ್ನು ಖರೀದಿಸಲು ಬಯಸಿದರೆ, ಇದು ಫರ್ಪೆಕ್ಟ್ ಟೈಮ್ ಆಗಿದೆ. ಫ್ಲಿಪ್‌ಕಾರ್ಟ್‌ನಲ್ಲಿ ನೀವು ಗೂಗಲ್ ಪಿಕ್ಸೆಲ್ ಸರಣಿಯ ಫೋನನ್ನು ಮತ್ತಷ್ಟು ಅಗ್ಗದ ಬೆಲೆಯಲ್ಲಿ ಖರೀದಿಸಬಹುದು. ಹಾಗಿದ್ರೆ, ಈ ಫೋನಿನ ಲಭ್ಯತೆ, ಕಂಪನಿ ಘೋಷಿಸಿರುವ ಆಫರ್‌ ಮತ್ತು ಫೀಚರ್ಸ್‌ಗಳ ಸಂಪೂರ್ಣ ಮಾಹಿತಿಯನ್ನು ತಿಳಿಯೋಣ ಬನ್ನಿ.

Google Pixel 8 ಫೋನಿನ ಬೆಲೆಯಲ್ಲಿ ದಿಢೀರ್‌ ಇಳಿಕೆ! ಭಾರೀ ಡಿಸ್ಕೌಂಟ್‌!

ಗೂಗಲ್ ಪಿಕ್ಸೆಲ್ 8 ಸರಣಿಯ ಹೊಸ ಬೆಲೆ

ಕಂಪನಿಯು ಗೂಗಲ್ ಪಿಕ್ಸೆಲ್ 8ನ 128GB ಸ್ಟೋರೇಜ್ ರೂಪಾಂತರವನ್ನು 75,999 ರೂ. ಮತ್ತು 128GB ಸ್ಟೋರೇಜ್‌ ಮಾದರಿಯನ್ನು 1,06,999 ರೂ.ಗಳಿಗೆ ಬಿಡುಗಡೆ ಮಾಡಿದೆ. ಪ್ರಸ್ತುತ ನೀವು, ಫ್ಲಿಪ್‌ಕಾರ್ಟ್‌ನಿಂದ ಕಡಿಮೆ ಬೆಲೆಗೆ ಖರೀದಿಸಬಹುದು. ಗೂಗಲ್ ಪಿಕ್ಸೆಲ್ 9 ಸರಣಿಯ ಬಿಡುಗಡೆಯ ಮೊದಲು, ಪಿಕ್ಸೆಲ್ 8 ಫೋನಿನ 8GB ಮತ್ತು 128GB ಸ್ಟೋರೇಜ್‌ನ ಬೆಲೆ 62,999 ರೂ.ಗೆ ಇಳಿದಿದೆ. ಈ ಫೋನನ್ನು ಫ್ಲಿಪ್‌ಕಾರ್ಟ್‌ನಲ್ಲಿ 61,999 ರೂ.ಗಳ ಆರಂಭಿಕ ಬೆಲೆಯಲ್ಲಿ Hazel ಮತ್ತು Rose ಬಣ್ಣಗಳ ಆಯ್ಕೆಯಲ್ಲಿ ಖರೀದಿಸಬಹುದು.

8GB ಮತ್ತು 128GB ಸ್ಟೋರೇಜ್‌ ರೂಪಾಂತರವು 62,999 ರೂ. ಮತ್ತು 8GB ಮತ್ತು 256GB ರೂಪಾಂತರವನ್ನು 72,999 ರೂ.ಗಳಿಗೆ ಖರೀದಿಸಬಹುದು. ಇದು ಮಿಂಟ್ ಮತ್ತು ಅಬ್ಸಿಡಿಯನ್ ಬಣ್ಣಗಳಲ್ಲಿ ಖರೀದಿಗೆ ಲಭ್ಯವಿದೆ. ಇನ್ನೂ, ಗೂಗಲ್ ಪಿಕ್ಸೆಲ್ 8 ಪ್ರೊ ಸ್ಮಾರ್ಟ್‌ಫೋನಿನ 12GB ಮತ್ತು 128GB ರೂಪಾಂತರವನ್ನು 98,999 ರೂ.ಗೆ ಖರೀದಿಸಬಹುದು 12GB ಮತ್ತು 256GB ರೂಪಾಂತರವನ್ನು 1,05,999 ರೂ.ಗೆ ಖರೀದಿಸಬಹುದು.

ಗೂಗಲ್ ಪಿಕ್ಸೆಲ್ 8 ಸರಣಿಯ ವಿಶೇಷತೆಗಳು

ಡಿಸ್ಪ್ಲೇ: ಗೂಗಲ್ ಪಿಕ್ಸೆಲ್ 8 ಅನ್ನು 6.2 ಇಂಚಿನ FHD + OLED ಡಿಸ್ಪ್ಲೇಯೊಂದಿಗೆ ಪರಿಚಯಿಸಲಾಗಿದೆ. ಫೋನ್ 120Hz ರಿಫ್ರೆಶ್ ರೇಟ್ ಮತ್ತು 2,000 nits ಗರಿಷ್ಠ ಬ್ರೈಟ್‌ನೆಸ್‌ ಹೊಂದಿದೆ. ಇನ್ನೂ, ಗೂಗಲ್ ಪಿಕ್ಸೆಲ್ 8 ಪ್ರೋ 6.7 ಇಂಚಿನ OLED ಡಿಸ್ಪ್ಲೇಯನ್ನು ಹೊಂದಿದೆ. 2400 nits ವರೆಗೆ ಗರಿಷ್ಠ ಬ್ರೈಟ್‌ನೆಸ್ ಲಭ್ಯವಿದೆ.

ಪ್ರೊಸೆಸರ್: ಕಂಪನಿಯು ಗೂಗಲ್ ಪಿಕ್ಸೆಲ್ 8 ಸರಣಿಯನ್ನು ಟೆನ್ಸರ್ ಜಿ 3 ಚಿಪ್‌ಸೆಟ್‌ನೊಂದಿಗೆ (Tensor G3 ಚಿಪ್‌ಸೆಟ್‌) ನೀಡುತ್ತದೆ.

Google Pixel 8 ಫೋನಿನ ಬೆಲೆಯಲ್ಲಿ ದಿಢೀರ್‌ ಇಳಿಕೆ! ಭಾರೀ ಡಿಸ್ಕೌಂಟ್‌!

ಸ್ಟೋರೇಜ್‌: ಗೂಗಲ್ ಪಿಕ್ಸೆಲ್ 8 ಫೋನ್ 8GB RAM ಜೊತೆಗೆ 128GB, 256GB ಸ್ಟೋರೇಜ್ ಮತ್ತು ಗೂಗಲ್ ಪಿಕ್ಸೆಲ್ 8 Pro ಫೋನ್ 12GB RAM ಜೊತೆಗೆ 128GB, 256GB ಸ್ಟೋರೇಜ್‌ ಆಯ್ಕೆಗಳೊಂದಿಗೆ ಬರುತ್ತದೆ. ಗೂಗಲ್ ಪಿಕ್ಸೆಲ್ 8 ಸರಣಿಯ ಎರಡೂ ಫೋನ್‌ಗಳು Android 14 ಸಾಫ್ಟ್‌ವೇರ್‌ನಲ್ಲಿ ಕಾರ್ಯನಿರ್ವಹಿಸುತ್ತವೆ.

ಕ್ಯಾಮೆರಾ: ಗೂಗಲ್ ಪಿಕ್ಸೆಲ್ 8 ಫೋನ್ 50MP ಮುಖ್ಯ ಕ್ಯಾಮೆರಾ ಮತ್ತು 12MP ಅಲ್ಟ್ರಾ-ವೈಡ್ ಕ್ಯಾಮೆರಾವನ್ನು ಹೊಂದಿದೆ. ಇದರೊಂದಿಗೆ ಫೋನ್ 10.5MP ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ. ಗೂಗಲ್ ಪಿಕ್ಸೆಲ್ 8 ಪ್ರೊ 50MP + 48MP + 48MP ಜೊತೆಗೆ 10.5MP ಫ್ರಂಟ್‌ ಕ್ಯಾಮೆರಾ ಹೊಂದಿದೆ.

ಬ್ಯಾಟರಿ: ಗೂಗಲ್ ಪಿಕ್ಸೆಲ್ 8 ಫೋನ್‌ 4,575mAh ಬ್ಯಾಟರಿಯನ್ನು ಹೊಂದಿದೆ. ಗೂಗಲ್ ಪಿಕ್ಸೆಲ್ 8 ಪ್ರೊ 5050mAh ಬ್ಯಾಟರಿಯನ್ನು ಒಳಗೊಂಡಿದೆ.

Best Mobiles in India

English summary
Google Pixel 8 Series Prices Drop Before Launch of Google Pixel 9 Series: Check Discount Offer.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+