Home
Deal of the day

15,000 ರಿಯಾಯಿತಿ! 64MP ಕ್ಯಾಮೆರಾ.. AI ಫೀಚರ್ಸ್‌.. Google Pixel 8a ಬೆಲೆ ದೊಡ್ಡ ಕುಸಿತ

ನೀವು ಅದ್ಭುತ ವೈಶಿಷ್ಟ್ಯಗಳೊಂದಿಗೆ ಬಜೆಟ್ ಫೋನ್‌ ಖರೀದಿಸಲು ಬಯಸಿದರೆ, ನಿಮಗಾಗಿ ಒಂದು ಒಳ್ಳೆಯ ಸುದ್ದಿ ಇದೆ. ಕಡಿಮೆ ಬೆಲೆಯಲ್ಲಿ ಬೊಂಬಾಟ್ ಕ್ಯಾಮೆರಾ ಹೊಂದಿರುವ ಸ್ಮಾರ್ಟ್‌ಫೋನ್ ಖರೀದಿಸಲು ಇದು ಉತ್ತಮ ಸಮಯವಾಗಿದೆ. ಹೌದು, ಗೂಗಲ್ ಸ್ಮಾರ್ಟ್‌ಫೋನ್‌ಗಳ ಬಗ್ಗೆ ಬಳಕೆದಾರರಿಗೆ ಬಹುತೇಕರಿಗೆ ಕ್ರೇಜ್ ಇದೆ. ಈ ಫೋನ್‌ಗಳು ಪ್ರೀಮಿಯಂ ವಿಭಾಗದಲ್ಲಿ ಬರುತ್ತವೆ. ಸಾಮಾನ್ಯ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳಿಗೆ ಹೋಲಿಸಿದರೆ ಈ ಫೋನಿನ ವೈಶಿಷ್ಟ್ಯಗಳು ಸ್ವಲ್ಪ ವಿಭಿನ್ನವಾಗಿವೆ. ಇವುಗಳ ಬೆಲೆ ಸಹ ಬಹಳ ವ್ಯತ್ಯಾಸವಿದೆ. ಆದರೆ, ನೀವು ಪ್ರಸ್ತುತ ಈ ಗೂಗಲ್‌ ಫೋನ್‌ ಖರೀದಿಸಿದರೆ 15,000 ರೂ.ಗಳ ದೊಡ್ಡ ಉಳಿತಾಯ ಮಾಡಬಹುದು.

ಗೂಗಲ್ ಪಿಕ್ಸೆಲ್ ಮೊಬೈಲ್ ತುಂಬಾ ದುಬಾರಿಯಾಗಿದೆ. ಈ ಕಾರಣದಿಂದ ಅನೇಕ ಜನರು ಈ ಫೋನನ್ನು ಖರೀದಿಸಲು ಬಯಸುವುದಿಲ್ಲ. ಆದರೆ, ಪ್ರಸ್ತುತ ಫ್ಲಿಪ್‌ಕಾರ್ಟ್‌ನಲ್ಲಿ ಗೂಗಲ್ ಪಿಕ್ಸೆಲ್ 8a (Google Pixel 8a) ಮೊಬೈಲ್ ಭಾರೀ ರಿಯಾಯಿತಿಯೊಂದಿಗೆ ಮಾರಾಟವಾಗುತ್ತಿದೆ. ಈ ಸ್ಮಾರ್ಟ್‌ಫೋನ್ ಕಳೆದ ವರ್ಷ ಮೇ ತಿಂಗಳಲ್ಲಿ ಬಿಡುಗಡೆ ಆಗಿತ್ತು. ಇದು 64 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಹೊಂದಿದೆ. ಜೊತೆಗೆ ಎಐ (ಕೃತಕ ಬುದ್ಧಿಮತ್ತೆ) ಸೇರಿದಂತೆ ಹಲವಾರು ಪ್ರಮುಖ ವೈಶಿಷ್ಟ್ಯಗಳನ್ನು ಹೊಂದಿದೆ. ಪ್ರಸ್ತುತ, ಬಿಡುಗಡೆ ಬೆಲೆಗಿಂತ ಕಡಿಮೆಗೆ ಲಭ್ಯವಿದೆ.

15000 ಅಗ್ಗ! 64MP ಕ್ಯಾಮೆರಾ, AI ಫೀಚರ್ಸ್‌.. Google Pixel 8a ಬೆಲೆ ಇಳಿಕೆ

ಗೂಗಲ್ ಪಿಕ್ಸೆಲ್ 8a ಹೊಸ ಬೆಲೆ ಮತ್ತು ಆಫರ್‌ಗಳು

ಗೂಗಲ್ ಪಿಕ್ಸೆಲ್ 8a ಸ್ಮಾರ್ಟ್‌ಫೋನ್ ಎರಡು ಸ್ಟೋರೇಜ್ ಆಯ್ಕೆಗಳಲ್ಲಿ ಮಾರಾಟವಾಗುತ್ತಿದೆ. ಈ ಫೋನಿನ 8GB RAM + 128GB ಸ್ಟೋರೇಜ್‌ ರೂಪಾಂತರವು 52,999 ರೂ.ಗೆ ಬಿಡುಗಡೆ ಆಗಿತ್ತು. ಹಾಗೆಯೇ 8GB RAM + 256GB ಸ್ಟೋರೇಜ್ ರೂಪಾಂತರದ ಬೆಲೆ 59,999 ರೂ. ಆಗಿದೆ. ಪ್ರಸ್ತುತ, ಫ್ಲಿಪ್‌ಕಾರ್ಟ್‌ನಲ್ಲಿ 128GB ಸ್ಟೋರೇಜ್ ರೂಪಾಂತರವು 37,999 ರೂ.ಗೆ ಲಭ್ಯವಿದೆ. ಅಂದರೆ ನೀವು 15,000 ರೂ. ರಿಯಾಯಿತಿಯ ಲಾಭ ಪಡೆಯಬಹುದು.

ಗೂಗಲ್ ಪಿಕ್ಸೆಲ್ 8a ಫೋನಿನ 256GB ಸ್ಟೋರೇಜ್‌ ರೂಪಾಂತರವು 44,999 ರೂ.ಗೆ ಮಾರಾಟವಾಗುತ್ತಿದೆ. ಈ ರೂಪಾಂತರದ ಮೇಲೆ 8,000 ರೂ. ರಿಯಾಯಿತಿ ನೀಡಲಾಗುತ್ತಿದೆ. ಈ ಮೊಬೈಲ್ ಅಲೋ, ಬೇ, ಪಾರ್ಸಿಲಿಯನ್ ಮತ್ತು ಅಬ್ಸಿಡಿಯನ್ ಬಣ್ಣಗಳಲ್ಲಿ ಖರೀದಿಗೆ ಲಭ್ಯವಿದೆ. ನೀವು ಫ್ಲಿಪ್‌ಕಾರ್ಟ್‌ನಲ್ಲಿ ಈ ಎಲ್ಲಾ ಆಫರ್‌ಗಳ ಲಾಭ ಪಡೆಯಬಹುದು.

15000 ಅಗ್ಗ! 64MP ಕ್ಯಾಮೆರಾ, AI ಫೀಚರ್ಸ್‌.. Google Pixel 8a ಬೆಲೆ ಇಳಿಕೆ

ಗೂಗಲ್ ಪಿಕ್ಸೆಲ್ 8a ವೈಶಿಷ್ಟ್ಯಗಳು

ಡಿಸ್ಪ್ಲೇ ಹೇಗಿದೆ

ಗೂಗಲ್ ಪಿಕ್ಸೆಲ್ 8a ಸ್ಮಾರ್ಟ್‌ಫೋನ್ 6.1 ಇಂಚಿನ ಪುರ್ಣ ಎಚ್‌ಡಿ ಪ್ಲಸ್ ಡಿಸ್ಪ್ಲೇ ಹೊಂದಿದೆ. ಇದು 120Hz ರಿಫ್ರೆಶ್ ದರ, 2000 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಮತ್ತು HDR ಸಪೋರ್ಟ್‌ ಹೊಂದಿದೆ. ಈ ಡಿಸ್ಪ್ಲೇಯು ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ರಕ್ಷಣೆ ಪಡೆದಿದೆ.

ಪ್ರೊಸೆಸರ್ ಯಾವುದು?

ಗೂಗಲ್ ಪಿಕ್ಸೆಲ್ 8a ಮೊಬೈಲ್ Google Tensor G3 ಪ್ರೊಸೆಸರ್ ಮತ್ತು ಟೈಟಾನ್ M2 ಭದ್ರತಾ ಪ್ರೊಸೆಸರ್ ಹೊಂದಿದೆ. ಇದು ಆಂಡ್ರಾಯ್ಡ್‌ 14 ಆಧಾರಿತ ಓಎಸ್‌ನಲ್ಲಿ ಕೆಲಸ ನಿರ್ವಹಿಸುತ್ತದೆ. ಈ ಫೋನ್ 7 ವರ್ಷಗಳ ಆಂಡ್ರಾಯ್ಡ್ ಓಎಸ್ ನವೀಕರಣಗಳನ್ನು ಪಡೆದಿದೆ.

ಕ್ಯಾಮೆರಾ ಸೆಟಪ್

ಗೂಗಲ್ ಪಿಕ್ಸೆಲ್ 8a ಫೋನ್ ಡ್ಯುಯಲ್ ಕ್ಯಾಮೆರಾ ಸೆಟಪ್ ಹೊಂದಿದೆ. ಈ ಫೋನಿನಲ್ಲಿ 64 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಮತ್ತು 13 ಮೆಗಾಪಿಕ್ಸೆಲ್ ದ್ವಿತೀಯ ಕ್ಯಾಮೆರಾ ಲಭ್ಯವಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಳಿಗಾಗಿ, 13 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಹೊಂದಿದೆ. ಈ ಕ್ಯಾಮೆರಾಗಳು ಹಲವು ಕೃತಕ ಬುದ್ಧಿಮತ್ತೆ (AI) ಫೀಚರ್ ಹೊಂದಿವೆ.

ಎಐ ವೈಶಿಷ್ಟ್ಯಗಳು

ಗೂಗಲ್ ಪಿಕ್ಸೆಲ್ 8a ಮೊಬೈಲ್ ಅನೇಕ ಎಐ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಮ್ಯಾಜಿಕ್ ಎಡಿಟರ್, ಬೆಸ್ಟ್ ಟೇಕ್, ಮ್ಯಾಜಿಕ್ ಎರೇಸರ್, ಫೋಟೋ ಅನ್‌ಬ್ಲರ್, ರಿಯಲ್ ಟೋನ್, ಫೇಸ್ ಅನ್‌ಬ್ಲರ್, ಮ್ಯಾನುಯಲ್ ವೈಟ್, ಪನೋರಮಾ, ಲಾಕ್ ಮಾಡಿದ ಫೋಲ್ಡರ್, ನೈಟ್ ಸೈಟ್, ಟ್ಯಾಪ್ ಶಾಟ್, ಪೋರ್ಟ್ರೇಟ್ ಮೋಡ್, ಮೋಷನ್ ಆಟೋಫೋಕಸ್, ಲೈವ್ HDR+, ಅಲ್ಟ್ರಾ HDR ಕ್ಯಾಮೆರಾ ಹೊಂದಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ ಈ ಫೋನ್ 5G, 4G LTE, ಬ್ಲೂಟೂತ್ 5.3, ವೈ-ಫೈ 6 ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ.

Best Mobiles in India

English summary
Google Pixel 8a gets massive price drop on flipkart sale: check new price, offers, availability specs and more
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+