Home
Deal of the day

Google Pixel 9 Pro Fold ಬೆಲೆಯಲ್ಲಿ ಭಾರಿ ಇಳಿಕೆ: ಈಗ ಅರ್ಧಕ್ಕಿಂತ ಕಡಿಮೆ!

ಫೋಲ್ಡೇಬಲ್ ಸ್ಮಾರ್ಟ್‌ಫೋನ್ ಒಂದನ್ನು ಖರೀದಿಸುವ ಕನಸು ಬಹುಜನರಿಗೆ ಇದ್ದರೂ, ಹೆಚ್ಚಿನ ಬೆಲೆ ದೊಡ್ಡ ಅಡ್ಡಿಯಾಗಿದೆ ಎನ್ನಬಹುದು. ಆದರೆ ಈಗ ಜನಪ್ರಿಯ ಫ್ಲಾಗ್‌ಶಿಪ್ ಪ್ರೀಮಿಯಂ Google Pixel 9 Pro Fold ವಿಷಯದಲ್ಲಿ ಪರಿಸ್ಥಿತಿ ಬದಲಾಗಿದೆ. ಬುಕ್-ಸ್ಟೈಲ್ ಫೋಲ್ಡಿಂಗ್ ಡಿಸೈನ್ ಹೊಂದಿರುವ ಈ ಪ್ರೀಮಿಯಂ ಗೂಗಲ್ ಫೋನ್, ಬಿಡುಗಡೆ ನಂತರದ ಇದೀಗ ಅತ್ಯಂತ ಕಡಿಮೆ ದರದಲ್ಲಿ ಲಭ್ಯವಾಗಿದ್ದು, ಬಜೆಟ್‌ನೊಳಗೆ ಫೋಲ್ಡೇಬಲ್ ಅನುಭವ ಬೇಕೆನ್ನುವವರಿಗೆ ಹೊಸ ಅವಕಾಶವನ್ನು ತೆರೆದಿದೆ.! ಈ ಕುರಿತ ಸಂಪೂರ್ಣ ಮಾಹಿತಿಯು ಈ ಕೆಳಕಂಡಂತಿದೆ.

Google Pixel 9 Pro Fold: ಅರ್ಧಕ್ಕಿಂತ ಕಡಿಮೆ ಬೆಲೆಗೆ ಲಭ್ಯ!
ಭಾರತದಲ್ಲಿ Google Pixel 9 aPro Fold ಫೋನ್ ಅನ್ನು ಮೊದಲಿಗೆ ಸುಮಾರು ರೂ. 1,72,999 ದರದಲ್ಲಿ ಪರಿಚಯಿಸಲಾಗಿತ್ತು. ಆದರೆ, Flipkart ನಲ್ಲಿ ಪ್ರಸ್ತುತ ಈ ಫೋನ್ ಅನ್ನು ಸುಮಾರು ರೂ. 99,999 ದರದಲ್ಲಿ ಲಿಸ್ಟ್ ಮಾಡಲಾಗಿದೆ. ಈಗ ಬ್ಯಾಂಕ್ ಆಫರ್ ಮತ್ತು ಹೆಚ್ಚುವರಿ ಬೋನಸ್ ಅನ್ನು ಸೇರಿಸಿಕೊಂಡರೆ, ಇದರ ಪರಿಣಾಮಕಾರಿ ಬೆಲೆ ರೂ. 90,000 ಹತ್ತಿರಕ್ಕೆ ಇಳಿಯುತ್ತದೆ. ಈ ದರದಲ್ಲಿ ಗೂಗಲ್‌ನ ಫ್ಲಾಗ್‌ಶಿಪ್ ಫೋಲ್ಡೇಬಲ್ ಖರೀದಿಸಲು ಸಿಗುವುದು, ಇದುವರೆಗೆ ಕಂಡ ಅತ್ಯುತ್ತಮ ಡೀಲ್‌ಗಳಲ್ಲಿ ಒಂದೆಂದೇ ಹೇಳಬಹುದು.

Google Pixel 9 Pro Fold ಫೋನ್ ಖರೀದಿಗೆ Flipkart Axis Bank ಅಥವಾ SBI ಕ್ರೆಡಿಟ್ ಕಾರ್ಡ್ ಬಳಸಿ ಪಾವತಿಸಿದರೆ ರೂ. 4,000 ಇನ್‌ಸ್ಟಂಟ್ ಡಿಸ್ಕೌಂಟ್ ಸಿಗುತ್ತದೆ. ಇದರಿಂದ ಫೋನ್‌ನ ಬೆಲೆ ರೂ. 95,999 ಆಗುತ್ತದೆ. ಜೊತೆಗೆ ಹಳೆಯ ಸ್ಮಾರ್ಟ್‌ಫೋನ್ ಅನ್ನು ಎಕ್ಸ್ಚೇಂಜ್ ಮಾಡಿದರೆ ರೂ. 5,000 ಹೆಚ್ಚುವರಿ ಬೋನಸ್ ದೊರೆಯಲಿದೆ ಮತ್ತು ನಿಮ್ಮ ಡಿವೈಸ್‌ನ ಮೌಲ್ಯವೂ ಲಭ್ಯವಾಗುತ್ತದೆ. ನಿಮ್ಮ ಹಳೆಯ ಫೋನ್‌ನ ಸ್ಥಿತಿ ಮತ್ತು ಮಾದರಿಯನ್ನು ಅವಲಂಬಿಸಿ, ಅಂತಿಮ ಬೆಲೆ ಇನ್ನಷ್ಟು ಕಡಿಮೆಯಾಗುವ ಸಾಧ್ಯತೆಯೂ ಇದೆ.

ಇನ್ನು ಹೆಚ್ಚಿನ ಮೊತ್ತವನ್ನು ಒಮ್ಮೆಲೇ ಪಾವತಿಸಲು ಸಾಧ್ಯವಾಗದವರಿಗೆ, ಈ ಫೋನ್ EMI ಆಯ್ಕೆಯಲ್ಲೂ ಲಭ್ಯವಿದ್ದು, ತಿಂಗಳಿಗೆ ಸುಮಾರು ರೂ. 3,516 ರಿಂದ ಕಂತುಗಳು ಆರಂಭವಾಗುತ್ತವೆ. ಜೊತೆಗೆ ಎಕ್ಸ್ಟೆಂಡೆಡ್ ವಾರಂಟಿ, ಮೊಬೈಲ್ ಪ್ರೊಟೆಕ್ಷನ್ ಮುಂತಾದ ಹೆಚ್ಚುವರಿ ಸೇವೆಗಳನ್ನೂ ಆಯ್ಕೆ ಮಾಡಿಕೊಳ್ಳಬಹುದು.

Google Pixel 9 Pro Fold ಬೆಲೆಯಲ್ಲಿ ಭಾರಿ ಇಳಿಕೆ: ಈಗ ಅರ್ಧಕ್ಕಿಂತ ಕಡಿಮೆ!

Google Pixel 9 Pro Fold: ಪ್ರಸ್ತುತ ಖರೀದಿಸಲು ಯೋಗ್ಯವಾಗಿದೆಯೇ?
ಕಾರ್ಯಕ್ಷಮತೆಯ ವಿಷಯದಲ್ಲಿ Pixel 9 Pro Fold ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ. ಇದರಲ್ಲಿ ಬಳಸಿರುವ Google Tensor G4 ಪ್ರೊಸೆಸರ್ ಗೂಗಲ್‌ನ AI ಆಧಾರಿತ ಫೀಚರ್‌ಗಳಿಗೆ ವಿಶೇಷವಾಗಿ ಹೊಂದಿಕೆಯಾಗಿದ್ದು, ದಿನನಿತ್ಯದ ಬಳಕೆ ಮತ್ತು ಮಲ್ಟಿಟಾಸ್ಕಿಂಗ್ ಅನ್ನು ಸರಾಗಗೊಳಿಸುತ್ತದೆ. Titan M2 ಸೆಕ್ಯುರಿಟಿ ಚಿಪ್ ಹೆಚ್ಚುವರಿ ಭದ್ರತೆಯನ್ನು ಒದಗಿಸುತ್ತದೆ. ಫೋನ್‌ನಲ್ಲಿ 16GB LPDDR5X RAM ಮತ್ತು 256GB ಅಥವಾ 512GB ಸ್ಟೋರೇಜ್ ಆಯ್ಕೆಗಳು ಲಭ್ಯವಿದ್ದು, ದೀರ್ಘಾವಧಿ ಬಳಕೆಗೆ ಇದು ಸೂಕ್ತವಾಗಿದೆ. ಈ ಡಿವೈಸ್ Android 14 ಆಧಾರಿತವಾಗಿದ್ದು, ಗೂಗಲ್ ನೀಡುವ 7 ವರ್ಷಗಳ OS ಮತ್ತು ಸೆಕ್ಯುರಿಟಿ ಅಪ್‌ಡೇಟ್‌ಗಳ ಭರವಸೆ ಇದೆ. ಇತರ ಅನೇಕ ಫೋಲ್ಡೇಬಲ್ ಫೋನ್‌ಗಳಿಗಿಂತ ಇದು ದೊಡ್ಡ ಲಾಭ, ಏಕೆಂದರೆ ದೀರ್ಘಕಾಲ ಸಾಫ್ಟ್‌ವೇರ್ ಬೆಂಬಲ ಇರುವುದರಿಂದ ಫೋನ್ ಮೌಲ್ಯ ಕಾಪಾಡಿಕೊಳ್ಳುತ್ತದೆ.

ಡಿಸ್ಪ್ಲೇ ವಿಚಾರದಲ್ಲಿ Pixel 9 Pro Fold ತನ್ನದೇ ಆದ ಗುರುತು ಮೂಡಿಸಿದೆ. ಒಳಭಾಗದಲ್ಲಿರುವ 8 ಇಂಚಿನ Super Actua Flex LTPO OLED ಫೋಲ್ಡಿಂಗ್ ಸ್ಕ್ರೀನ್ 120Hz ರಿಫ್ರೆಶ್ ರೇಟ್ ಮತ್ತು ಗರಿಷ್ಠ 2,700 ನಿಟ್ಸ್ ಬ್ರೈಟ್‌ನೆಸ್ ನೀಡುತ್ತದೆ. ಇದರಿಂದ ಮಲ್ಟಿಟಾಸ್ಕಿಂಗ್, ವೀಡಿಯೋ ವೀಕ್ಷಣೆ ಮತ್ತು ಓದು ಅನುಭವ ಮತ್ತಷ್ಟು ಉತ್ತಮವಾಗುತ್ತದೆ. ಹೊರಭಾಗದಲ್ಲಿರುವ 6.3 ಇಂಚಿನ Actua OLED ಕವರ್ ಡಿಸ್ಪ್ಲೇ Gorilla Glass Victus 2 ರಕ್ಷಣೆಯೊಂದಿಗೆ ಬರುತ್ತದೆ ಮತ್ತು ನೇರ ಸೂರ್ಯರಶ್ಮಿಯಲ್ಲೂ ಸ್ಪಷ್ಟವಾಗಿ ಕಾಣುತ್ತದೆ.

ಕ್ಯಾಮೆರಾ ವಿಭಾಗದಲ್ಲಿ ಪಿಕ್ಸೆಲ್ ಫೋನ್‌ಗಳ ನಂಬಿಕೆ ಇಲ್ಲಿಯೂ ಮುಂದುವರಿಯುತ್ತದೆ. 48MP ವೈಡ್ ಕ್ಯಾಮೆರಾ, 10.5MP ಅಲ್ಟ್ರಾ ವೈಡ್ (ಮ್ಯಾಕ್ರೋ ಫೋಕಸ್ ಸಹಿತ) ಮತ್ತು 10.8MP ಟೆಲಿಫೋಟೋ ಲೆನ್ಸ್ (5x ಆಪ್ಟಿಕಲ್ ಜೂಮ್) ಒಳಗೊಂಡ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟ್‌ಅಪ್ ಇದರಲ್ಲಿ ಇದೆ. ಒಳ ಮತ್ತು ಹೊರ ಡಿಸ್ಪ್ಲೇ ಎರಡಕ್ಕೂ 10MP ಫ್ರಂಟ್ ಕ್ಯಾಮೆರಾ ನೀಡಲಾಗಿದೆ. 4K ವೀಡಿಯೋ ರೆಕಾರ್ಡಿಂಗ್, Video Boost ಮತ್ತು Audio Magic Eraser ಮುಂತಾದ AI ಫೀಚರ್‌ಗಳು ಕಂಟೆಂಟ್ ಕ್ರಿಯೇಟರ್‌ಗಳಿಗೆ ಇದು ಉತ್ತಮ ಆಯ್ಕೆಯಾಗುವಂತೆ ಮಾಡುತ್ತವೆ.

ಬ್ಯಾಟರಿಯ ವಿಚಾರದಲ್ಲಿ Pixel 9 Pro Fold ನಲ್ಲಿ 4,650mAh ಬ್ಯಾಟರಿ ನೀಡಲಾಗಿದ್ದು, ವೈರ್ಡ್ ಫಾಸ್ಟ್ ಚಾರ್ಜಿಂಗ್ ಹಾಗೂ ವೈರ್‌ಲೆಸ್ ಚಾರ್ಜಿಂಗ್ ಬೆಂಬಲವಿದೆ. IPX8 ವಾಟರ್ ರೆಸಿಸ್ಟೆನ್ಸ್ ಇರುವುದರಿಂದ ದಿನನಿತ್ಯದ ಬಳಕೆಯಲ್ಲಿ ಹೆಚ್ಚುವರಿ ಭದ್ರತೆಯೂ ಸಿಗುತ್ತದೆ. Wi-Fi 7, 5G, Bluetooth 5.3, NFC ಮತ್ತು Ultra-Wideband ಚಿಪ್ ಸೇರಿದಂತೆ ಅತ್ಯಾಧುನಿಕ ಕನೆಕ್ಟಿವಿಟಿ ಆಯ್ಕೆಗಳು ಇದನ್ನು ಭವಿಷ್ಯಕ್ಕೆ ಸಿದ್ಧವಾಗಿರುವ ಫೋನ್ ಆಗಿ ಮಾಡುತ್ತವೆ.

ಇಷ್ಟೆಲ್ಲದರ ನಡುವೆ, ಈಗಲೇ Pixel 9 Pro Fold ಖರೀದಿಸಲು ಇದು ಅತ್ಯುತ್ತಮ ಸಮಯ ಎನ್ನಲು ಪ್ರಮುಖ ಕಾರಣ ಅದರ ದರ. ಲಾಂಚ್ ಬೆಲೆಯ ಅರ್ಧದಷ್ಟು ದರದಲ್ಲಿ, ಫ್ಲಾಗ್‌ಶಿಪ್ ಫೋಲ್ಡೇಬಲ್ ಡಿಸೈನ್, ಟಾಪ್-ಕ್ಲಾಸ್ ಕ್ಯಾಮೆರಾ, ಶುದ್ಧ Android ಅನುಭವ ಮತ್ತು 7 ವರ್ಷಗಳ ಅಪ್‌ಡೇಟ್ ಭರವಸೆ ಸಿಗುತ್ತಿದೆ. ಸಾಮಾನ್ಯ ಫ್ಲಾಗ್‌ಶಿಪ್ ಫೋನ್‌ಗಳ ಬೆಲೆಗೆ ಹತ್ತಿರವಾಗಿರುವ ಈ ಡೀಲ್, ಫೋಲ್ಡೇಬಲ್ ಸೆಗ್ಮೆಂಟ್‌ನಲ್ಲಿ ಅಪರೂಪದ ಅವಕಾಶವಾಗಿದೆ.ಒಟ್ಟಿನಲ್ಲಿ, ಪ್ರೀಮಿಯಂ ಅನುಭವವನ್ನು ಕಡಿಮೆ ದರದಲ್ಲಿ ಪಡೆಯಲು ಬಯಸುವವರು ಮತ್ತು ಫೋಲ್ಡೇಬಲ್ ಫೋನ್‌ಗೆ ಅಪ್‌ಗ್ರೇಡ್ ಆಗಲು ಯೋಚಿಸುತ್ತಿರುವವರಿಗೆ, Google Pixel 9 Pro Fold ಇದೀಗ ಅತ್ಯುತ್ತಮ ಆಯ್ಕೆಯಾಗಿ ಹೊರಹೊಮ್ಮಿದೆ. ಈ ಕುರಿತಂತೆ ನಿಮ್ಮ ಅನಿಸಿಕೆ ಏನು ಎಂಬುದನ್ನು ಈ ಕೆಳಗೆ ಕಾಮೆಂಟ್ ಮಾಡಿ ತಿಳಿಸಿ.

Best Mobiles in India

English summary
The Google Pixel 9 Pro Fold is now available at its lowest price ever, making the premium foldable experience more affordable than before. With its sleek book-style design and flagship features, it’s a great chance to own a foldable without stretching your budget.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+