ಗೂಗಲ್ ಪಿಕ್ಸೆಲ್ 9a ಮೇಲೆ ಭರ್ಜರಿ ರಿಯಾಯಿತಿ: ಈಗ 40 ಸಾವಿರಕ್ಕಿಂತ ಕಡಿಮೆ!
ನೀವು ಹೊಸ ಸ್ಮಾರ್ಟ್‌ಫೋನ್ ಒಂದನ್ನು ಖರೀದಿಸಲು ಯೋಜಿಸಿದ್ದರೆ...ಅದರಲ್ಲೂ ಶುದ್ಧ ಆಂಡ್ರಾಯ್ಡ್ ಅನುಭವ ನೀಡುವ ಸ್ಮಾರ್ಟ್‌ಫೋನ್ ಹುಡುಕುತ್ತಿದ್ದರೆ ಈ ಸುದ್ದಿ ನಿಮಗಾಗಿ. ಏಕೆಂದರೆ, ಸರಳ, ವಿಶ್ವಾಸಾರ್ಹ ಮತ್ತು ಶುದ್ಧ ಆಂಡ್ರಾಯ್ಡ್ ಅನುಭವಕ್ಕೆ ಹೆಸರಾಗಿರುವ ಗೂಗಲ್‌ನ ಇತ್ತೀಚಿನ 'ಪಿಕ್ಸೆಲ್ 9a' (Google Pixel 9a)ಫೋನ್ ಇದೀಗ ಭರ್ಜರಿ ಆಫರ್ನೊಂದಿಗೆ ಲಭ್ಯವಿದೆ. ಮಧ್ಯಮ ಶ್ರೇಣಿಯ ವಿಭಾಗದಲ್ಲಿ ಅತ್ಯುತ್ತಮ ಮೌಲ್ಯವನ್ನು ನೀಡುವ ಈ ಸಾಧನವು ಈಗ 40 ಸಾವಿರಕ್ಕಿಂತ ಕಡಿಮೆ ಬೆಲೆಗೆ ದೊರೆಯುತ್ತಿದೆ.
ಗೂಗಲ್ ಪಿಕ್ಸೆಲ್ 9a ಪೋನಿನ ಮೂಲ ಬೆಲೆ ₹49,999 ಆಗಿದ್ದರೂ, ಫ್ಲಿಪ್‌ಕಾರ್ಟ್ ಇದೀಗ ಸೀಮಿತ ಅವಧಿಯ ರಿಯಾಯಿತಿಯೊಂದಿಗೆ ಫೋನ್ ಬೆಲೆಯನ್ನು ₹44,999 ಕ್ಕೆ ಇಳಿಸಿದೆ. ಇದರ ಜೊತೆಗೆ HDFC ಬ್ಯಾಂಕ್ ಕ್ರೆಡಿಟ್ ಕಾರ್ಡ್ ಗ್ರಾಹಕಕರು EMI ವ್ಯವಹಾರಗಳ ಮೂಲಕ ಖರೀದಿಸಿದರೆ ₹5,000 ರೂ. ಹೆಚ್ಚುವರಿ ರಿಯಾಯಿತಿಯನ್ನು ಪಡೆಯಬಹುದು. ಈ ಎರಡು ಕೊಡುಗೆಗಳಿಂದ ಗ್ರಾಹಕರಿಗೆ 10 ಸಾವಿರ ರೂ.ಗಳು ಉಳಿತಾಯವಾಗುತ್ತದೆ. ಅಂದರೆ, ಈ ಫೋನ್‌ನ ಪರಿಣಾಮಕಾರಿ ಬೆಲೆ ಕೇವಲ ₹39,999 ಆಗುತ್ತದೆ.

ಈ ಬೆಲೆಯಲ್ಲಿ ಗೂಗಲ್ ಪಿಕ್ಸೆಲ್ 9a ಸಾಧನವು ಅತ್ಯುತ್ತಮ ಆಯ್ಕೆ ಎಂದು ಹೇಳಬಹುದು. ಏಕೆಂದರೆ, ಈ ಪಿಕ್ಸೆಲ್ 9a ಫೋನ್ 6.3 ಇಂಚಿನ AMOLED ಡಿಸ್‌ಪ್ಲೇ ಹೊಂದಿದೆ. ಇದು 120Hz ರಿಫ್ರೆಶ್ ದರ ಮತ್ತು Full HD+ ರೆಸಲ್ಯೂಶನ್‌ನೊಂದಿಗೆ ಬರುತ್ತದೆ, HDR ವಿಷಯ ವೀಕ್ಷಿಸಲು ಗರಿಷ್ಠ 2700 ನಿಟ್ಸ್ ಬ್ರೈಟ್ನೆಸ್ ನೀಡುತ್ತದೆ. ಗೋರಿಲ್ಲಾ ಗ್ಲಾಸ್ 3 ರಕ್ಷಣೆ ಇದ್ದುದರಿಂದ ಸ್ಕ್ರಾಚ್‌ಗಳು ಮತ್ತು ದಿನನಿತ್ಯದ ಧಕ್ಕೆಯಿಂದ ಇದು ಸುರಕ್ಷಿತವಾಗಿರುತ್ತದೆ. ಫೋನ್‌ನ ವಿನ್ಯಾಸ ಸರಳವಾದರೂ ಶೈಲಿಯುತ ಹಾಗೂ ಹಗುರವಾಗಿದೆ.
ಕಾರ್ಯಕ್ಷಮತೆಗಾಗಿ, ಈ ಫೋನ್ ಗೂಗಲ್‌ನ Tensor G4 ಪ್ರೊಸೆಸರ್‌ನಿಂದ ಚಾಲಿತವಾಗಿದೆ. ದಇದು ಗೇಮಿಂಗ್‌ಗಾಗಿ ವಿನ್ಯಾಸಗೊಳಿಸಲ್ಪಟ್ಟ ಚಿಪ್ ಅಲ್ಲದಿದ್ದರೂ, ದಿನನಿತ್ಯದ ಬಳಕೆಗೆ ತುಂಬಾ ಸರಾಗ ಅನುಭವ ನೀಡುತ್ತದೆ. ಬ್ಯಾಟರಿ ವಿಭಾಗದಲ್ಲಿ, ಈ ಪೋನ್ 5100mAh ಬ್ಯಾಟರಿ ಒಂದು ದಿನದ ಸಂಪೂರ್ಣ ಬಳಕೆಗೆ ಸಾಕಾಗುತ್ತದೆ. ಜೊತೆಗೆ, ಗೂಗಲ್‌ನ AI ವೈಶಿಷ್ಟ್ಯಗಳಾದ ಲೈವ್ ಟ್ರಾನ್ಸ್‌ಲೆಷನ್, ಫೋಟೋ ಎನ್ಹ್ಯಾನ್ಸ್‌ಮೆಂಟ್‌ಗಳು ಹಾಗೂ ಸ್ಮಾರ್ಟ್ ಅಸಿಸ್ಟ್ ಎಲ್ಲ ವೈಶಿಷ್ಟ್ಯಗಳು ಫೋನನ್ನು ವೇಗವಾಗಿ ಕಾರ್ಯನಿರ್ವಹಿಸುತ್ತವೆ.
ಪಿಕ್ಸೆಲ್ ಸರಣಿಯು ಸದಾ ಕ್ಯಾಮೆರಾ ಗುಣಮಟ್ಟಕ್ಕಾಗಿ ಪ್ರಸಿದ್ಧವಾಗಿದೆ. ಈ ಪಿಕ್ಸೆಲ್ 9a ಪೋನಿನಲ್ಲಿ 48MP ಮುಖ್ಯ ಸೆನ್ಸರ್ ಮತ್ತು 13MP ಅಲ್ಟ್ರಾ-ವೈಡ್ ಲೆನ್ಸ್ ನೀಡಲಾಗಿದೆ. ಗೂಗಲ್‌ನ ಇಮೇಜ್ ಟ್ಯೂನಿಂಗ್ ತಂತ್ರಜ್ಞಾನವು ನೈಸರ್ಗಿಕ ಬಣ್ಣಗಳು ಮತ್ತು ನಿಖರವಾದ ಕಾನ್ಟ್ರಾಸ್ಟ್ ನೀಡುತ್ತದೆ. ಸೆಲ್ಫಿ ಮತ್ತು ವಿಡಿಯೋ ಕಾಲ್‌ಗಳಿಗಾಗಿ 13MP ಫ್ರಂಟ್ ಕ್ಯಾಮೆರಾ ಇದ್ದು, ಬಣ್ಣದ ಸಮತೋಲನ ಮತ್ತು ಸ್ಕಿನ್‌ನ ನೈಸರ್ಗಿಕ ಟೋನ್ ಕಾಪಾಡುತ್ತದೆ. ಮೊದಲೇ ಹೇಳಿದಂತೆ, ಇದು ಶುದ್ಧ ಆಂಡ್ರಾಯ್ಡ್ ಅನುಭವವನ್ನು ಒದಗಿಸುವ ಫೋನ್ ಆಗಿದೆ.
ಒಟ್ಟಾರೆಯಾಗಿ, ಗೂಗಲ್ ಪಿಕ್ಸೆಲ್ 9a ಫೋನ್ ಸರಳ ವಿನ್ಯಾಸ, ಶುದ್ಧ ಆಂಡ್ರಾಯ್ಡ್ ಮತ್ತು ಉತ್ತಮ ಕ್ಯಾಮೆರಾ ಅನುಭವ ಬಯಸುವವರಿಗೆ ಪರಿಪೂರ್ಣ ಫೋನ್ ಎಂಬುದು ನನ್ನ ಸ್ವಂತ ಅಭಿಪ್ರಾಯ. ಫ್ಲಿಪ್‌ಕಾರ್ಟ್‌ನ ಪ್ರಸ್ತುತ ರಿಯಾಯಿತಿಯೊಂದಿಗೆ ₹40,000 ಒಳಗಿನ ಅತ್ಯುತ್ತಮ ಫೋನ್‌ಗಳಲ್ಲಿ ಇದನ್ನು ಖಂಡಿತವಾಗಿ ಪರಿಗಣಿಸಬಹುದು. ಪ್ರೀಮಿಯಂ ವಿನ್ಯಾಸದ ಪ್ರಾಯೋಗಿಕ ಅನುಭವ ಬಯಸುವವರು ಈ ಫೋನ್ ಅನ್ನು ಮಿಸ್ ಮಾಡಬಾರದು. ಈ ಕುರಿತು ನಿಮ್ಮ ಅನಿಸಿಕೆ ಏನು? ಈ ಕೆಳಗೆ ಕಾಮೆಂಟ್ ಮಾಡಿ ತಿಳಿಸಿ.


Click it and Unblock the Notifications








