16,000 ಬಿಗ್ ಡಿಸ್ಕೌಂಟ್! 34,999 ಬೆಲೆಯ ಫೋನ್.. ಕೇವಲ 18,998 ರೂ.ಗೆ ಸೇಲ್.. ಖರೀದಿ ಎಲ್ಲಿ?
ವಾವ್..! ಅಚ್ಚರಿಯಾದರೂ ಇದು ಸತ್ಯ. ಬರೋಬ್ಬರಿ 16,000 ರೂ.ಗಳ ರಿಯಾಯಿತಿಯೊಂದಿಗೆ ಹಾನರ್ 5G ಸ್ಮಾರ್ಟ್‌ಫೋನ್ ಸೇಲ್. ಹೌದು, ಸ್ಮಾರ್ಟ್‌ಫೋನ್ ಪ್ರಿಯರಿಗೆ ಇಷ್ಟು ಸಾಕು! ಹಾನರ್ 200 5G (Honor 200 5G) ಮೊಬೈಲ್ ಪ್ರಸ್ತುತ ಭಾರತದಲ್ಲಿ 16,000 ರೂ.ಗಳ ಭಾರೀ ಡಿಸ್ಕೌಂಟ್‌ನೊಂದಿಗೆ ಮಾರಾಟವಾಗುತ್ತಿದೆ. ಕಡಿಮೆ ಬೆಲೆಗೆ ಅತ್ಯುತ್ತಮ ವೈಶಿಷ್ಟ್ಯಗಳನ್ನು ಹೊಂದಿರುವ ಸ್ಮಾರ್ಟ್‌ಫೋನ್ ಖರೀದಿಸಲು ಬಯಸಿದರೆ, ಈ ಆಫರ್ ಮಿಸ್ ಮಾಡಿಕೊಳ್ಳಬೇಡಿ. ಬನ್ನಿ, ಈ ಫೋನಿನ ಬಿಡುಗಡೆ ಬೆಲೆ, ಆಫರ್ ಬೆಲೆ ಮತ್ತು ವಿಶೇಷತೆಗಳನ್ನು ತಿಳಿಯೋಣ.
ಕಳೆದ ವರ್ಷ ಜುಲೈನಲ್ಲಿ ಹಾನರ್ 200 5G ಸ್ಮಾರ್ಟ್‌ಫೋನ್ ಬಿಡುಗಡೆಯಾಗಿತ್ತು. ಇದು ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 7 ಜೆನ್ 3 ಪ್ರೊಸೆಸರ್‌ನೊಂದಿಗೆ ಕೆಲಸ ಮಾಡುತ್ತದೆ. ಈ ಫೋನಿನಲ್ಲಿ 50 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಲಭ್ಯವಿದೆ. ಇದು ಟ್ರಿಪಲ್ ಕ್ಯಾಮೆರಾ ಸೆಟಪ್ ಹೊಂದಿದೆ. ಈ ಮೊಬೈಲ್ 6.7 ಡಿಸ್ಪ್ಲೇ ಸಹ ಹೊಂದಿದೆ. ಹಾಗೆಯೇ 12GB RAM + 512GB ಸ್ಟೋರೇಜ್, 5200mAh ಬ್ಯಾಟರಿ ಮತ್ತು 100W ಫಾಸ್ಟ್ ಚಾರ್ಜಿಂಗ್ ಒಳಗೊಂಡಿದೆ. ನೀವು ಈ ಮೊಬೈಲ್ ಖರೀದಿ ಮೇಲೆ 16,000 ರೂ.ಗಳ ದೊಡ್ಡ ಉಳಿತಾಯ ಮಾಡಬಹುದು.

ಹಾನರ್ 200 5G ಮೇಲೆ ಸೂಪರ್ ಆಫರ್
ಹಾನರ್ 200 5G ಫೋನಿನ 8GB + 256GB ಸ್ಟೋರೇಜ್ ರೂಪಾಂತರವನ್ನು 34,999 ರೂ.ಗೆ ಬಿಡುಗಡೆ ಮಾಡಲಾಗಿದೆ. ಪ್ರಸ್ತುತ ಅಮೆಜಾನ್‌ನಲ್ಲಿ ಕೇವಲ 24,998 ರೂ.ಗಳಿಗೆ ಲಭ್ಯವಿದೆ. ಇದರ ಜೊತೆಗೆ 3,000 ರೂ.ಗಳ ಕೂಪನ್ ರಿಯಾಯಿತಿ ಸಹ ನೀಡಲಾಗುತ್ತಿದೆ. ಮತ್ತೊಂದೆಡೆ, ಬ್ಯಾಂಕ್ ಆಫ್ ಬರೋಡಾ, ಎಚ್‌ಎಸ್‌ಬಿಸಿ, ಫೆಡರಲ್ ಬ್ಯಾಂಕ್ ಮತ್ತು ಅಮೆಜಾನ್ ಪೇ ಐಸಿಐಸಿಐ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ಗಳ ಪಾವತಿ ಮೇಲೆ 3,000 ರೂ.ಗಳ ಹೆಚ್ಚುವರಿ ಡಿಸ್ಕೌಂಟ್ ಪಡೆಯಬಹುದು.
ಈ ಎಲ್ಲಾ ರಿಯಾಯಿತಿಗಳೊಂದಿಗೆ ನೀವು ಕೇವಲ 18,998 ರೂ.ಗೆ ಹಾನರ್ 200 5G ಫೋನನ್ನು ಖರೀದಿಸಬಹುದು. ಇದು ಎರಡು ಬಣ್ಣಗಳ ಆಯ್ಕೆಯಲ್ಲಿ ಬರುತ್ತದೆ. ನೀವು ಕಪ್ಪು ಮತ್ತು ಮೂನ್‌ಲೈಟ್ ವೈಟ್ ಬಣ್ಣದಲ್ಲಿ ಈ ಫೋನನ್ನು ಆರ್ಡರ್ ಮಾಡಬಹುದು. ಅಮೆಜಾನ್‌ನಲ್ಲಿ ಈ ಎಲ್ಲಾ ಆಫರ್‌ಗಳ ಲಾಭ ಪಡೆಯಬಹುದು.
ಹಾನರ್ 200 5G ವೈಶಿಷ್ಟ್ಯಗಳು
ಡಿಸ್ಪ್ಲೇ ಹೇಗಿದೆ
ಹಾನರ್ 200 5G ಮೊಬೈಲ್ 6.7 ಇಂಚಿನ 1.5K ಕರ್ವ್ ಓಎಲ್‌ಇಡಿ ಡಿಸ್ಪ್ಲೇಯನ್ನು ಹೊಂದಿದೆ. ಇದು 1200 x 2664 ಪಿಕ್ಸೆಲ್ ರೆಸಲ್ಯೂಶನ್‌ನೊಂದಿಗೆ ಬರುತ್ತದೆ. ಹಾಗೆಯೇ 120Hz ರಿಫ್ರೆಶ್ ದರ, 4000 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಬೆಂಬಲ ಪಡೆದಿದೆ. ಈ ಡಿಸ್ಪ್ಲೇಯು ಫಿಂಗರ್‌ಪ್ರಿಂಟ್ ಡಿಸ್ಪ್ಲೇ ಸಹ ಹೊಂದಿದೆ. ಬಯೋಮೆಟ್ರಿಕ್ಸ್‌ಗಾಗಿ ಸ್ಕ್ಯಾನರ್ ಕೂಡ ಲಭ್ಯವಿದೆ.
ಸ್ನಾಪ್‌ಡ್ರಾಗನ್ ಪ್ರೊಸೆಸರ್
ಹಾನರ್ 200 5G ಸ್ಮಾರ್ಟ್‌ಫೋನ್ ಸ್ನಾಪ್‌ಡ್ರಾಗನ್ 7 ಜೆನ್ 3 ಪ್ರೊಸೆಸರ್ ಹೊಂದಿದೆ. ಈ ಪ್ರೊಸೆಸರ್ ಅನ್ನು 4 ನ್ಯಾನೋಮೀಟರ್ ಫ್ಯಾಬ್ರಿಕೇಶನ್‌ಗಳಲ್ಲಿ ತಯಾರಿಸಲಾಗಿದೆ. ಈ ಸ್ಮಾರ್ಟ್‌ಫೋನ್ ಆಂಡ್ರಾಯ್ಡ್ 14 ಆಧಾರಿತ ಮ್ಯಾಜಿಕ್ ಓಎಸ್ 8.0 ಜೊತೆಗೆ ಕೆಲಸ ಮಾಡುತ್ತದೆ. ಗ್ರಾಫಿಕ್ಸ್‌ಗಾಗಿ, ಈ ಮೊಬೈಲ್ ಅಡ್ರಿನೊ 720 ಜಿಪಿಯು ಸಹ ಹೊಂದಿದೆ. ನೀವು 12GB RAM ಮತ್ತು 512GB ಸ್ಟೋರೇಜ್ ಆಯ್ಕೆಯಲ್ಲಿ ಖರೀದಿಸಬಹುದು.

50 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ
ಹಾನರ್ 200 5G ಫೋನ್ ಟ್ರಿಪಲ್ ಕ್ಯಾಮೆರಾ ಸೆಟಪ್ ಹೊಂದಿದೆ. ಈ ಫೋನ್ ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, 50 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಹೊಂದಿದೆ. ಹಾಗೆಯೇ OIS ಜೊತೆಗೆ 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಲಭ್ಯವಿದೆ. ಜೊತೆಗೆ 12 ಮೆಗಾಪಿಕ್ಸೆಲ್ ದ್ವಿತೀಯ ಕ್ಯಾಮೆರಾ ಮತ್ತು 2.5x ಆಪ್ಟಿಕಲ್ ಜೂಮ್‌ನೊಂದಿಗೆ 5 ಮೆಗಾಪಿಕ್ಸೆಲ್ ತೃತೀಯ ಕ್ಯಾಮೆರಾ ಒಳಗೊಂಡಿದೆ.
ಸೂಪರ್ ಬ್ಯಾಟರಿ
ಹಾನರ್ 200 5G ಮೊಬೈಲ್ 5200mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದನ್ನು ಚಾರ್ಜ್ ಮಾಡಲು 100W ವೇಗದ ಚಾರ್ಜಿಂಗ್ ಮತ್ತು 100W ವೇಗದ ವೈರ್ಡ್ ಚಾರ್ಜಿಂಗ್ ಸೌಲಭ್ಯ ಒದಗಿಸಲಾಗಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ ಈ ಫೋನ್ 5G, ವೈ-ಫೈ, ಎನ್‌ಎಫ್‌ಸಿ, ಬ್ಲೂಟೂತ್ v5.3, ಯುಎಸ್‌ಬಿ ಟೈಪ್ ಸಿ, ಸ್ಟೀರಿಯೋ ಸ್ಪೀಕರ್ ಮತ್ತು ಐಆರ್ ಬ್ಲಾಸ್ಟರ್ ಸೇರಿದಂತೆ ಹಲವು ಸೌಲಭ್ಯಗಳನ್ನು ಹೊಂದಿದೆ.


Click it and Unblock the Notifications








