Home
Deal of the day

iPhone 15 ಖರೀದಿಸಲು ಇದುವೇ ಬೆಸ್ಟ್‌ ಟೈಮ್; ಫ್ಲಿಪ್‌ಕಾರ್ಟ್‌ ಜೂನ್ ಬೊನಾಂಜಾ ಸೇಲ್‌ನಲ್ಲಿ ಭರ್ಜರಿ ರಿಯಾಯಿತಿ !

ಪ್ರಸ್ತುತ ದಿನಗಳಲ್ಲಿ ಗ್ರಾಹಕರನ್ನು ತನ್ನತ್ತ ಆಕರ್ಷಿಸುವ ಉದ್ದೇಶದಿಂದಾಗಿ ಇ ಕಾಮರ್ಸ್‌ ಸಂಸ್ಥೆಗಳು ರಿಯಾಯತಿ ದರದಲ್ಲಿ ಪ್ರಾಡಕ್ಟ್‌ಗಳನ್ನು ಮಾರಾಟ ಮಾಡುವುದನ್ನು ನೋಡಬಹುದು. ಇದೀಗ ಪ್ರಸಿದ್ದ ಇ ಕಾಮರ್ಸ್‌ ತಾಣವಾಗಿರುವ ಫ್ಲಿಪ್‌ಕಾರ್ಟ್‌ (Flipkart) ಸಂಸ್ಥೆ ಗ್ರಾಹಕರನ್ನು ಸೆಳೆಯಲು ಜೂನ್ ಮೆಗಾ ಬೊನಾಂಜಾ ಸೇಲ್ (Bonanza Sale) ಆರಂಭಿಸಿದೆ ಅದರ ಭಾಗವಾಗಿ Apple iPhone 15 ಸ್ಮಾರ್ಟ್‌ಫೋನ್‌ ಮೇಲೆ ಭರ್ಜರಿ ರಿಯಾಯಿತಿ ನೀಡಿದೆ. ನೀವೇನಾದರೂ Apple iPhone 15 ಅನ್ನು ಖರೀದಿಸುವ ಯೋಜನೆ ಹೊಂದಿದ್ದರೆ ಇದು ಸರಿಯಾದ ಸಮಯವಾಗಿದೆ. ಹಾಗಿದ್ರೆ ಫ್ಲಿಪ್‌ಕಾರ್ಟ್‌ iPhone 15 ಮೇಲೆ ಎಷ್ಟು ರಿಯಾಯಿತಿ ನೀಡಿದೆ ಎಂಬುದನ್ನು ಈ ಲೇಖನದಲ್ಲಿ ತಿಳಿಯೋಣ ಬನ್ನಿ.

ಫ್ಲಿಪ್‌ಕಾರ್ಟ್‌ ಬೊನಾಂಜಾ ಸೇಲ್‌ನ ಭಾಗವಾಗಿ ಭಾರತದಲ್ಲಿ Apple iPhone 15 ಸ್ಮಾರ್ಟ್‌ಫೋನ್‌ ಬೆಲೆಯನ್ನು ಇಳಿಸಿಲಾಗಿದೆ. ಈ ವಾರದ ಕೊನೆಯಲ್ಲಿ ಈ ಸೇಲ್ ಮುಕ್ತಾಯಗೊಳ್ಳಲಿದೆ. ಬೊನಾಂಜಾ ಮಾರಾಟದ ಸಮಯದಲ್ಲಿ ಗ್ರಾಹಕರು ಇ-ಕಾಮರ್ಸ್ ಪ್ಲಾಟ್‌ಫಾರ್ಮ್ ಫ್ಲಿಪ್‌ಕಾರ್ಟ್ ಮೂಲಕ ಹೆಚ್ಚುವರಿ ರಿಯಾಯಿತಿ ದರದಲ್ಲಿ Apple ನ ಇತ್ತೀಚಿನ ಐಫೋನ್ ಮಾದರಿಯನ್ನು ಖರೀದಿಸಬಹುದಾಗಿದೆ. ಇದು ಭಾರತದಲ್ಲಿ iPhone 15 ಮೇಲಿನ ಇಲ್ಲಿಯವರೆಗಿನ ಅತೀ ಹೆಚ್ಚು ಬೆಲೆ ಇಳಿಕೆಯಲ್ಲದಿದ್ದರೂ, ಆನ್‌ಲೈನ್ ರಿಯಾಯಿತಿ, ವಿನಿಮಯ ರಿಯಾಯಿತಿ ಮತ್ತು ಬ್ಯಾಂಕ್ ಕಾರ್ಡ್‌ಗಳ ಮೇಲೆ ಹೆಚ್ಚುವರಿ ರಿಯಾಯಿತಿಯನ್ನು ಪಡೆಯಬಹುದಾಗಿದೆ.

ಜೂನ್ ಬೊನಾಂಜಾ ಸೇಲ್‌ನಲ್ಲಿ iPhone 15 ಮೇಲೆ ಭರ್ಜರಿ ರಿಯಾಯಿತಿ

ಫ್ಲಿಪ್‌ಕಾರ್ಟ್‌ನ ಮೆಗಾ ಜೂನ್ ಬೊನಾಂಜಾ ಮಾರಾಟದ ಸಮಯದಲ್ಲಿ ಭಾರತದಲ್ಲಿ iPhone 15 ಬೆಲೆ:

iPhone 15ರ ಮೂಲ ವೇರಿಯಂಟ್‌ ಆಗಿರುವ 128GB ಸ್ಟೋರೆಜ್‌ ಸಾಮರ್ಥ್ಯದ ಬ್ಲಾಕ್, ಬ್ಲೂ, ಗ್ರೀನ್, ಗುಲಾಬಿ ಮತ್ತು ಹಳದಿ ಎಲ್ಲಾ ಕಲರ್‌ಗಳ ಬೆಲೆ ಸೆಪ್ಟೆಂಬರ್ 2023 ರಲ್ಲಿ 79,990 ರೂ. ಗಳಾಗಿತ್ತು, ನೀವು ಫ್ಲಿಪ್‌ಕಾರ್ಟ್‌ನ ಮೆಗಾ ಜೂನ್ ಬೊನಾಂಜಾ ಮಾರಾಟದ ಭಾಗವಾಗಿ ಈಗ ಖರೀದಿಸಿದರೆ ಎಲ್ಲಾ ಐದು ಬಣ್ಣಗಳ iPhone 15 ಸ್ಮಾರ್ಟ್‌ಫೋನ್‌ ಗಳಿಗೂ ರಿಯಾಯಿತಿ ಸಿಗಲಿದ್ದು, ಈ ಸಮಯದಲ್ಲಿ ಭಾರತದಲ್ಲಿ 67,999 ರೂ. ಗಳಿಗೆ ಗ್ರಾಹಕರು ಖರೀದಿಸಬಹುದಾಗಿದೆ.

ನಿಮ್ಮ ಬಳಿ ಈಗಾಗಲೇ ಇರುವ ಸ್ಮಾರ್ಟ್‌ಫೋನ್ ಅನ್ನು ಎಕ್ಸ್‌ಚೇಂಜ್ ಮಾಡಿಕೊಳ್ಳುವ ಅವಕಾಶವನ್ನು ಫ್ಲಿಪ್‌ಕಾರ್ಟ್‌ ನೀಡಿದೆ. ನೀವು ಉತ್ತಮ ಸ್ಥಿತಿಯ ಮೊಬೈಲ್‌ ಅನ್ನು ಎಕ್ಸ್‌ಚೇಂಜ್ ಮಾಡುವುದರಿಂದ ನೀವು iPhone 15 ಅನ್ನು ಇನ್ನಷ್ಟು ಕಡಿಮೆ ಬೆಲೆಗೆ ಖರೀದಿಸಬಹುದು. ಈ ಎಕ್ಸ್‌ಚೇಂಜ್ ಮೂಲಕ ಭಾರತದಲ್ಲಿ ಐಫೋನ್ 15 ಅನ್ನು ರೂ. 55,000 ದವರೆಗೆ ಕಡಿಮೆ ಮಾಡಬಹುದಾಗಿದೆ. ಇದರ ಜೊತೆಗೆ ನೀವು ಹೆಚ್ಚುವರಿ ರಿಯಾಯಿತಿ ಪಡೆಯಲು ಅರ್ಹ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ಗಳನ್ನು ಬಳಸಿಕೊಳ್ಳುವುದರಿಂದ EMI ಅಲ್ಲದ ವಹಿವಾಟುಗಳ ಮೇಲೆ ಹೆಚ್ಚವರಿಯಾಗಿ ರೂ. 1,000 ರಿಯಾಯಿತಿ ಪಡೆಯಬಹುದು. Google Pay UPI ವಹಿವಾಟುಗಳ ಮೇಲೆ 1,000 ರೂ. ಗಳ ಹೆಚ್ಚುವರಿ ರಿಯಾಯಿತಿ ಸಿಗಲಿದೆ.

iPhone 15 ವಿಶೇಷತೆಗಳು:

Apple ನ ಹೊಸ ಜೆನರೇಷನ್‌ನ ಈ ಸ್ಮಾರ್ಟ್‌ಫೋನ್ iOS 17 ನಲ್ಲಿ ಕಾರ್ಯನಿರ್ವಹಿಸುತ್ತಿದೆ, iPhone 15 ಸರಣಿಯಲ್ಲಿ ಕಂಪನಿಯ ಇತರ ಮೂರು ಹ್ಯಾಂಡ್‌ಸೆಟ್‌ಗಳಂತೆ. ಈ ಹ್ಯಾಂಡ್‌ಸೆಟ್ ಕೂಡ Apple ನ A16 ಬಯೋನಿಕ್ ಚಿಪ್‌ನಲ್ಲಿ ಕಾರ್ಯನಿರ್ವಹಿಸುತ್ತಿದೆ. ಇದು 2022 ರಲ್ಲಿ ಬಿಡುಗಡೆಯಾಗಿರುವ iPhone 14 Pro ಮಾಡೆಲ್‌ಗಳಿಂದ ಜಾರಿಯಲ್ಲಿದೆ. ಇದು 6.1 ಇಂಚಿನ ಸೂಪರ್ ರೆಟಿನಾ XDR OLED ಡಿಸ್‌ಪ್ಲೇ ಹೊಂದಿದೆ, ಇದು ಪ್ರೋ ಅಲ್ಲದ ಮಾದರಿಗೆ ಅಳವಡಿಸಿರುವ ಮೊದಲ ಡಿಸ್‌ಪ್ಲೇ ಆಗಿದೆ.

ಫೋಟೋಗ್ರಫಿಗಾಗಿ ಇದು f/1.6 ದ್ಯುತಿರಂಧ್ರದೊಂದಿಗೆ 48MP ಪ್ರಾಥಮಿಕ ಕ್ಯಾಮೆರಾ ಹೊಂದಿದೆ, ಜೊತೆಗೆ 12MP ಅಲ್ಟ್ರಾ ವೈಡ್ ಆಂಗಲ್ ಕ್ಯಾಮರಾ ಜೊತೆಗೆ f/2.4 ಅಪರ್ಚರ್ ಹೊಂದಿದೆ. ಮುಂಭಾಗದಲ್ಲಿ ಇದು 12MP ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ. ಈ ಫೋನ್ 3,349mAh ಬ್ಯಾಟರಿಯನ್ನು ಹೊಂದಿದೆ.

Best Mobiles in India

English summary
Apple iPhone 15 smartphone price has been reduced in India as part of Flipkart Bonanza sale. During the bonanza sale, customers can purchase Apple's latest iPhone model at an additional discount through e-commerce platform Flipkart.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+