Home
Deal of the day

Sankranti Offer: 5800 ಉಳಿತಾಯ! ಜಬರ್ದಸ್ತ್ ಫೀಚರ್ಸ್‌.. ಫುಲ್ ಡಿಮ್ಯಾಂಡ್.. ಯಾವ ಫೋನ್?

ರಿಯಲ್‌ಮಿ ಸಂಕ್ರಾಂತಿ ಪ್ರಯುಕ್ತ ಬಂಪರ್ ಆಫರ್‌ ಘೋಷಿಸಿದೆ. ಬರೋಬ್ಬರಿ 5,800 ರೂ. ರಿಯಾಯಿತಿಯೊಂದಿಗೆ ರಿಯಲ್‌ಮಿ 5G ಮೊಬೈಲ್ ಖರೀದಿಸಬಹುದು. ಹೌದು, ಕಂಪನಿಯು ರಿಯಲ್‌ಮಿ 13 ಪ್ರೊ+ 5G (Realme 13 Pro+ 5G) ಫೋನಿನ ಬೆಲೆಯನ್ನು ಭಾರೀ ಇಳಿಕೆ ಮಾಡಿದೆ. ನೀವು ಹೊಸ ರಿಯಲ್‌ಮಿ ಸ್ಮಾರ್ಟ್‌ಫೋನ್ ಕೊಳ್ಳಲು ಬಯಸಿದರೆ, ಈ ದೊಡ್ಡ ರಿಯಾಯಿತಿಯ ಲಾಭ ಪಡೆಯಬಹುದು. ಬನ್ನಿ ಈ ಫೋನಿನ ಹೊಸ ಬೆಲೆ ಮತ್ತು ವಿಶೇಷತೆಗಳನ್ನು ತಿಳಿಯೋಣ.

ರಿಯಲ್‌ಮಿ 13 ಪ್ರೊ+ 5G ಫೋನ್ 50 ಮೆಗಾಪಿಕ್ಸೆಲ್ ಟ್ರಿಪಲ್ ಕ್ಯಾಮೆರಾ ಹೊಂದಿದೆ. ಇದರಲ್ಲಿ 32 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಲಭ್ಯವಿದೆ. ಈ ಫೋನ್ 6.7 ಇಂಚಿನ ಡಿಸ್ಪ್ಲೇ ಹೊಂದಿದೆ. ಇದು ಸ್ನಾಪ್‌ಡ್ರಾಗನ್ 7S ಜೆನ್ 2 ಪ್ರೊಸೆಸರ್‌ನಲ್ಲಿ ಕೆಲಸ ಮಾಡುತ್ತದೆ. ಹಾಗೆಯೇ 12GB RAM + 512GB ಸ್ಟೋರೇಜ್, 5200mAh ಬ್ಯಾಟರಿ ಮತ್ತು 80W ಸ್ಪೀಡ್ ಚಾರ್ಜಿಂಗ್ ಒಳಗೊಂಡಿದೆ. ಪ್ರಸ್ತುತ, ಕಂಪನಿಯು ಫೋನಿನ ಮೂರು ಸ್ಟೋರೇಜ್‌ ರೂಪಾಂತರಗಳ ದರ ಕಡಿತಗೊಳಿಸಿದೆ. ನೀವು ಕಡಿಮೆ ಬೆಲೆಗೆ ಖರೀದಿಸಬಹುದು.

Realme 13 Pro+ ಬೆಲೆ ಇಳಿಕೆ; 5800 ಉಳಿತಾಯ.. ಜಬರ್ದಸ್ತ್ ಫೀಚರ್ಸ್‌!

ರಿಯಲ್‌ಮಿ 13 ಪ್ರೊ+ 5G ವೈಶಿಷ್ಟ್ಯಗಳು

ಡಿಸ್ಪ್ಲೇ ಹೇಗಿದೆ

ರಿಯಲ್‌ಮಿ 13 ಪ್ರೊ+ 5G ಸ್ಮಾರ್ಟ್‌ಫೋನ್ 6.7 ಇಂಚಿನ ಅಮೋಲೆಡ್ ಡಿಸ್ಪ್ಲೇ ಹೊಂದಿದೆ. ಇದು 2412 x 1080 ಪಿಕ್ಸೆಲ್ ರೆಸಲ್ಯೂಶನ್, 120Hz ರಿಫ್ರೆಶ್ ದರ ಮತ್ತು 2,000 ನಿಟ್ಸ್‌ ಗರಿಷ್ಠ ಬ್ರೈಟ್‌ನೆಸ್ ಬೆಂಬಲ ಪಡೆದಿದೆ. ಈ ಡಿಸ್ಪ್ಲೇಯು ಇನ್ ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸಂವೇದಕ ಮತ್ತು ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 7i ರಕ್ಷಣೆಯನ್ನು ಹೊಂದಿದೆ.

ಪ್ರೊಸೆಸರ್ ಯಾವುದು?

ರಿಯಲ್‌ಮಿ 13 ಪ್ರೊ+ 5G ಮೊಬೈಲ್ ಕ್ವಾಲ್ಕಾಮ್‌ನ ಸ್ನಾಪ್‌ಡ್ರಾಗನ್ 7S ಜೆನ್ 2 ಪ್ರೊಸೆಸರ್ ಹೊಂದಿದೆ. ಇದನ್ನು 4 ನ್ಯಾನೋಮೀಟರ್ ಫ್ಯಾಬ್ರಿಕೇಶನ್‌ಗಳಲ್ಲಿ ತಯಾರಿಸಲಾಗಿದೆ. ಇದು ಗ್ರಾಫಿಕ್ಸ್‌ಗಾಗಿ, ಅಡ್ರಿನೊ 710 ಜಿಪಿಯು ಹೊಂದಿದೆ. ಈ ಮೊಬೈಲ್ ಆಂಡ್ರಾಯ್ಡ್‌ 14 ಆಧಾರಿತ ರಿಯಲ್‌ಮಿ ಯುಐ 5.0 ಓಎಸ್‌ನಲ್ಲಿ ಕೆಲಸ ನಿರ್ವಹಿಸುತ್ತದೆ.

ಟ್ರಿಪಲ್ ಕ್ಯಾಮೆರಾ ಸೆಟಪ್

ರಿಯಲ್‌ಮಿ 13 ಪ್ರೊ+ 5G ಸ್ಮಾರ್ಟ್‌ಫೋನ್ ಟ್ರಿಪಲ್ ಕ್ಯಾಮೆರಾ ಸೆಟಪ್ ಹೊಂದಿದೆ. ಇದು ಹೈಪರ್‌ ಇಮೇಜ್ + ತಂತ್ರಜ್ಞಾನ ಹೊಂದಿದೆ. ಈ ಫೋನಿನಲ್ಲಿ 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಲಭ್ಯವಿದೆ. ಜೊತೆಗೆ 50 ಮೆಗಾಪಿಕ್ಸೆಲ್ ದ್ವಿತೀಯ ಕ್ಯಾಮೆರಾ ಮತ್ತು 8 ಮೆಗಾಪಿಕ್ಸೆಲ್ ತೃತೀಯ ಕ್ಯಾಮೆರಾ ಹೊಂದಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, ಈ ಫೋನಿನಲ್ಲಿ 32 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಇದೆ.

Realme 13 Pro+ ಬೆಲೆ ಇಳಿಕೆ; 5800 ಉಳಿತಾಯ.. ಜಬರ್ದಸ್ತ್ ಫೀಚರ್ಸ್‌!

ಬೊಂಬಾಟ್ ಬ್ಯಾಟರಿ

ರಿಯಲ್‌ಮಿ 13 ಪ್ರೊ+ 5G ಫೋನ್ 5200mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಈ ಬ್ಯಾಟರಿಯನ್ನು ಚಾರ್ಜ್ ಮಾಡಲು, 80W ಸೂಪರ್‌ವೂಕ್ ವೇಗದ ಚಾರ್ಜಿಂಗ್ ಸೌಲಭ್ಯ ಒದಗಿಸಲಾಗಿದೆ.

ಇತರೆ ವೈಶಿಷ್ಟ್ಯಗಳು

ರಿಯಲ್‌ಮಿ 13 ಪ್ರೊ+ 5G ಮೊಬೈಲ್ ನೀರು ಮತ್ತು ಧೂಳಿನ ವಿರುದ್ಧ ರಕ್ಷಣೆಗಾಗಿ IP65 ರೇಟಿಂಗ್ ಪಡೆದಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ ಇದು 3.5 ಎಂಎಂ ಆಡಿಯೊ ಜಾಕ್, ಸ್ಟಿರಿಯೊ ಸ್ಪೀಕರ್‌ಗಳು, 5G, ಡ್ಯುಯಲ್ 4G VoLTE, ವೈ-ಫೈ 6, ಬ್ಲೂಟೂತ್ 5.4, ಜಿಪಿಎಸ್, ಯುಎಸ್‌ಬಿ ಟೈಪ್ ಸಿ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಒಳಗೊಂಡಿದೆ.

ರಿಯಲ್‌ಮಿ 13 ಪ್ರೊ+ 5G ಬೆಲೆ ಮತ್ತು ಆಫರ್‌

ರಿಯಲ್‌ಮಿ 13 ಪ್ರೊ+ 5G ಫೋನ್ ಮೂರು ಸ್ಟೋರೇಜ್‌ ಆಯ್ಕೆಗಳಲ್ಲಿ ಮಾರಾಟವಾಗುತ್ತಿದೆ. ಕಂಪನಿಯು ಎಲ್ಲಾ ರೂಪಾಂತರಗಳ ಮೇಲೆ 4,000 ರೂ. ರಿಯಾಯಿತಿ ಘೋಷಿಸಿದೆ. ಈ ಫೋನನ್ನು ಆಫ್‌ಲೈನ್ ಅಂಗಡಿಗಳಿಂದ ಖರೀದಿಸಿದರೆ, 1600 ರೂ.ನಿಂದ 1800 ರೂ. ವರೆಗೆ ಹೆಚ್ಚುವರಿ ರಿಯಾಯಿತಿ ಪಡೆಯಬಹುದು. ಒಟ್ಟಾರೆ 5,800 ರೂ. ವರೆಗೆ ಡಿಸ್ಕೌಂಟ್ ಸಿಗುತ್ತದೆ. ಈ ಆಫರ್‌ ಇಂದಿನಿಂದ (ಜನವರಿ 13) ಜನವರಿ 19 ರವರೆಗೆ ಮಾತ್ರ ಇರುತ್ತದೆ.

ಫೋನಿನ 8GB RAM + 256GB ಸ್ಟೋರೇಜ್‌ ಬೆಲೆ 30,999 ರೂ. ಆಗಿದೆ. ಪ್ರಸ್ತುತ ನೀವು 26,999 ರೂ.ಗೆ ಖರೀದಿಸಬಹುದು. 12GB RAM + 256GB ಸ್ಟೋರೇಜ್ ವೇರಿಯಂಟ್ ಬೆಲೆ 32,999 ಇದೆ. ನೀವು ರಿಯಾಯಿತಿಯೊಂದಿಗೆ 28,999 ರೂ.ಗೆ ಕೊಳ್ಳಬಹುದು. ಹಾಗೆಯೇ 12GB RAM + 512GB ಸ್ಟೋರೇಜ್‌ ರೂಪಾಂತರವನ್ನು 30,999 ರೂ.ಗೆ ಮಾರಾಟ ಮಾಡಲಾಗುತ್ತಿದೆ. ಇದನ್ನು 34,999 ರೂ.ಗೆ ಬಿಡುಗಡೆ ಮಾಡಲಾಗಿತ್ತು. ಈ ಫೋನ್‌ಗಳನ್ನು ಒಂದು ವಾರದವರೆಗೆ ಅಗ್ಗದ ದರದಲ್ಲಿ ಖರೀದಿಸಬಹುದು.

Best Mobiles in India

English summary
Huge Discount on Realme 13 Pro+ 5G: Check New Price and Offer Details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+