Home
Deal of the day

Flipkart "ಬಿಗ್ ಬಚಾತ್ ಡೇಸ್" ಪ್ರಾರಂಭ: iPhone 15 ಬೆಲೆಯಲ್ಲಿ ಭರ್ಜರಿ ಇಳಿಕೆ!

ಇ-ಕಾಮರ್ಸ್‌ ಸಂಸ್ಥೆಗಳು ಗ್ರಾಹರನ್ನು ತಮ್ಮತ್ತ ಸೆಳೆಯಲು ಆಗಾಗ ಭರ್ಜರಿ ಡಿಸ್ಕೌಂಟ್‌ ನೀಡುತ್ತಾ ಬಂದಿವೆ. ಆ ಮೂಲಕ ಗ್ರಾಹಕರನ್ನು ತನ್ನತ್ತ ಸೆಳೆಯುವದರ ಜೊತೆಗೆ ಗ್ರಾಹಕರನ್ನು ಹಿಡಿದಿಟ್ಟುಕೊಳ್ಳಲು ಎಲ್ಲಾ ಇ ಕಾಮರ್ಸ್‌ ಸಂಸ್ಥೆಗಳು ಕೂಡ ಪ್ರಯತ್ನ ನಡೆಸುತ್ತಾ ಬಂದಿವೆ. ಇದೀಗ ಪ್ರಸಿದ್ದ ಇ ಕಾಮರ್ಸ್‌ ಸಂಸ್ಥೆಯಾಗಿರುವ ಫ್ಲಿಪ್‌ಕಾರ್ಟ್ (Flipkart) ಗ್ರಾಹಕರಿಗಾಗಿ ತನ್ನ Big bachat Days ಮಾರಾಟವನ್ನು ಆರಂಭಿಸಿದೆ. ಆ ಮೂಲಕ ಆಪಲ್ (Apple) ಸಾಧನಗಳು ಸೇರಿ ಅನೇಕ ವಸ್ತುಗಳ ಮೇಲೆ ಭರ್ಜರಿ ರಿಯಾಯಿತಿ ನೀಡಿದೆ. ಈ ಆಫರ್ ಈಗಾಗಲೆ ಪ್ರಾರಂಭವಾಗಿದ್ದು ಜುಲೈ 7ರ ವರೆಗೆ ಮುಂದುವರೆಯಲಿದೆ.

ಫ್ಲಿಪ್‌ಕಾರ್ಟ್‌ ಇ-ಕಾಮರ್ಸ್ ಸೈಟ್ ಐಫೋನ್‌ಗಳು, ಮ್ಯಾಕ್‌ಬುಕ್‌ಗಳು ಮತ್ತು ಇತರ Apple ಉತ್ಪನ್ನಗಳಂತಹ ವಿವಿಧ Apple ಗ್ಯಾಜೆಟ್‌ಗಳ ಮೇಲೆ ಕೆಲವು ಲಾಭದಾಯಕ ಡೀಲ್‌ಗಳು ಮತ್ತು ರಿಯಾಯಿತಿಗಳನ್ನು ನೀಡಲಿದೆ. ಹೊಸ Apple ಗ್ಯಾಜೆಟ್ ಖರೀದಿಸಲು ಬಯಸುವ ಜನರು Flipkart ನಲ್ಲಿ ಈ ಡೀಲ್‌ಗಳನ್ನು ನೋಡಲೇಬೇಕು.

Flipkart

ಮಾರಾಟದ ಸಮಯದಲ್ಲಿ Apple iPhone 15, iPhone 14 ಮತ್ತು iPhone 14 Plus ಖರೀದಿಯ ಮೇಲೆ ಭಾರಿ ರಿಯಾಯಿತಿಗಳನ್ನು ನೀಡುತ್ತಿದೆ. iPhone 15 ಖರೀದಿ ಮೇಲೆ ಶೇ. 18 ರಷ್ಟು ನೇರ ರಿಯಾಯಿತಿ ಪಡೆಯಬಹುದು. ಮಾರಾಟದ ಸಮಯದಲ್ಲಿ ಈ ಸ್ಮಾರ್ಟ್‌ಫೋನ್ ಅನ್ನು ರಿಯಾಯಿತಿ ಜೊತೆಗೆ 64,999 ರೂ. ಗಳಿಗೆ ಖರೀದಿಸಬಹುದು. iPhone 15 ಗಾಗಿ ಪಾವತಿ ಮಾಡುವಾಗ UPI ವಹಿವಾಟುಗಳನ್ನು ಮಾಡುವ ಗ್ರಾಹಕರು 1000 ರೂ.ಗಳ ಹೆಚ್ಚುವರಿ ಫ್ಲಾಟ್ ರಿಯಾಯಿತಿ ಸಹ ಪಡೆಯಬಹುದು. 58,999 ರೂ.ಗಳ ಮೂಲ ಬೆಲೆಯ iPhone 14 Flipkart ಬಿಗ್ ಬಚಾತ್ ಡೇಸ್ ಮಾರಾಟದ ರಿಯಾಯಿತಿಯ ಬಳಿಕ 55,999 ರೂ. ಗಳಿಗೆ ಕ್ಕೆ ಲಭ್ಯವಿದೆ.

ಹಳೆಯ Apple ಹ್ಯಾಂಡ್‌ಸೆಟ್‌ಗಳಲ್ಲಿ ಆಸಕ್ತಿ ಹೊಂದಿರುವ ಜನರು ಮಾರಾಟದ ಸಮಯದಲ್ಲಿ ತಮ್ಮ ಆದ್ಯತೆಯ ಹ್ಯಾಂಡ್‌ಸೆಟ್‌ಗಳನ್ನು ಸಹ ಖರೀದಿಸಬಹುದು. ಐಫೋನ್ 12 ಮೇಲೆ ಸುಮಾರು ಶೇ. 19ರಷ್ಟು ರಿಯಾಯಿತಿ ಹೊಂದಿದೆ. ಅಂದರೆ ಇದನ್ನು 39,999 ರೂ. ಗಳಲ್ಲಿ ಖರೀದಿಸಬಹುದು. ಐಫೋನ್ 13 ಮಾರಾಟದ ಮೇಲೆ ಸುಮಾರು ಶೇ. 13ರಷ್ಟು ಕಡಿತದ ಜೊತೆಗೆ 51,999 ರೂ. ಗಳಿಗೆ ಖರೀದಿಸಬಹುದು.

Apple MacBook Air M2 ಮೇಲೆ ಭರ್ಜರಿ ರಿಯಾಯಿತಿ:

ಹಿಂದಿನ ಜನರೇಷನ್‌ನ ರೂಪಾಂತರವಾದ ಮ್ಯಾಕ್‌ಬುಕ್ ಏರ್ ಎಂ2 ಅನ್ನು ಫ್ಲಿಪ್‌ಕಾರ್ಟ್ ಮಾರಾಟದಲ್ಲಿ 71,990 ರೂ. ಗಳಲ್ಲಿ ಖರೀದಿಸಬಹುದು. HDFC ಕ್ರೆಡಿಟ್ ಕಾರ್ಡ್‌ಗಳನ್ನು ಹೊಂದಿರುವ ಖರೀದಿದಾರರು ಈ ಮ್ಯಾಕ್‌ಬುಕ್‌ನ ಖರೀದಿಯ ಮೇಲೆ 750 ರೂಪಾಯಿಗಳ ಹೆಚ್ಚುವರಿ ರಿಯಾಯಿತಿಯನ್ನು ಪಡೆಯಬಹುದು.

Apple iPad:

Apple iPad 10 ನೇ ಜನರೇಷನ್‌ ಮಾರಾಟದ ಸಮಯದಲ್ಲಿ ರಿಯಾಯಿತಿ ಬಳಿಕ 34,990 ರೂ. ಗಳಿಗೆ ಲಭ್ಯವಿದೆ. ಎಚ್‌ಡಿಎಫ್‌ಸಿ ಪಾವತಿ ಕಾರ್ಡ್‌ಗಳನ್ನು ಹೊಂದಿರುವ ಜನರು ಈ ಆಪಲ್ ಐಪ್ಯಾಡ್‌ನ ಖರೀದಿಯ ಮೇಲೆ 1,500 ರೂ. ಗಳ ವಿಶೇಷ ರಿಯಾಯಿತಿಯನ್ನು ಸಹ ಪಡೆಯಬಹುದು.

Apple AirPods 2ನೇ ಜನರೇಷನ್‌ ಮೇಲೆ ರಿಯಾಯಿತಿ:

ಆಪಲ್ ತನ್ನ 2ನೇ ತಲೆಮಾರಿನ ಏರ್‌ಪಾಡ್‌ಗಳ ಮೇಲೆ ಫ್ಲಾಟ್ 34 ಶೇಕಡಾ ರಿಯಾಯಿತಿಯನ್ನು ನೀಡುತ್ತಿದೆ. ಬಿಗ್ ಬಚಾತ್ ಡೇಸ್ ಮಾರಾಟದ ಸಮಯದಲ್ಲಿ ಖರೀದಿದಾರರು Apple ನ AirPods 2ನೇ ಜನರೇಷನ್‌ ಅನ್ನು 8,499 ರೂಗಳಿಗೆ ಖರೀದಿಸಬಹುದು. ಆಸಕ್ತ ಗ್ರಾಹಕರು ಬ್ಯಾಂಕ್ ಕೊಡುಗೆಯಾಗಿ ಸುಮಾರು 10 ಪ್ರತಿಶತದಷ್ಟು ರಿಯಾಯಿತಿಯನ್ನು ಪಡೆಯಬಹುದು, ಇದು ಈ ಗ್ಯಾಜೆಟ್‌ನ ಬೆಲೆಯನ್ನು ರೂ 7,690 ಕ್ಕೆ ಇಳಿಸುತ್ತದೆ.

Best Mobiles in India

English summary
Famous e-commerce firm Flipkart has started its Big Bachat Days sale for its customers. Thereby Apple has given huge discounts on many items including devices.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+