Samsung ಫೋಲ್ಡೆಬಲ್ ಫೋನ್ Galaxy Z Flip 7 FE ಬೆಲೆಯಲ್ಲಿ ಭಾರೀ ಇಳಿಕೆ!
ಕಳೆದ ಜುಲೈ (ಜುಲೈ 09) ತಿಂಗಳಿನಲ್ಲಿ ಭಾರತದಲ್ಲಿ ಬಿಡುಗಡೆಯಾಗಿದ್ದ Samsung ಕಂಪೆನಿಯ ಪ್ರೀಮಿಯಂ ಅಲ್ಲದ ಫೋಲ್ಡೆಬಲ್ ಫೋನ್ 'Galaxy Z Flip 7 FE' ಬೆಲೆ ಮೊದಲ ಬಾರಿಗೆ ಇಳಿಕೆಯಾಗಿದೆ. ಇದೀಗ ಗ್ರಾಹಕರು ಮೂಲ ಬೆಲೆಗಿಂತ 16 ಸಾವಿರದಷ್ಟು ಕಡಿಮೆ ಬೆಲೆಗೆ ಈ ಪೋಲ್ಡೆಬಲ್ ಫೋನ್ ಅನ್ನು ಖರೀದಿಸಬಹುದು. Exynos 2400 ಚಿಪ್‌ಸೆಟ್, 3.4-ಇಂಚಿನ ಸೂಪರ್ AMOLED ಕವರ್ ಸ್ಕ್ರೀನ್ ಡ್ಯುಯಲ್ ರಿಯರ್ ಕ್ಯಾಮೆರಾ ಯೂನಿಟ್ ಮತ್ತು Galaxy AI ವೈಶಿಷ್ಟ್ಯಗಳನ್ನು ಒಳಗೊಂಡಿರುವ ಈ Samsung Galaxy Z Flip 7 FE ಫೋನ್, ಪ್ರಸ್ತುತ ಹೊಂದಿರುವ ಕೊಡುಗೆಗಳು ಯಾವುವು? ಫೋನಿನ ಫೀಚರ್ಸ್ ಹೇಗಿವೆ?, ಎಂಬುದನ್ನು ನೋಡೋಣ ಬನ್ನಿ.
Samsung Galaxy Z Flip 7 FE: ಎಷ್ಟು ಬೆಲೆ ಇಳಿಕೆ.
ಭಾರತದಲ್ಲಿ Samsung Galaxy Z Flip 7 FE ಫೋನ್ 8GB RAM + 128GB ಮತ್ತು 8GB RAM + 256GB ಎರಡು ಮಾದರಿಗಳಲ್ಲಿ ಲಭ್ಯವಿದೆ. 256GB ಆನ್‌ಬೋರ್ಡ್ ಸ್ಟೋರೇಜ್‌ನೊಂದಿಗೆ ಬಂದಿದ್ದ ಈ ಪೋನ್ ಬಿಡುಗಡೆಯಾದಾಗ 95,999 ರೂ. ಬೆಲೆ ಹೊಂದಿತ್ತು. ಇದೀಗ ಅಮೆಜಾನ್‌ನಲ್ಲಿ, ಈ ಮಾದರಿಯನ್ನು ಪ್ರಸ್ತುತ 89,999 ರೂ. ಗೆ ಪಟ್ಟಿ ಮಾಡಲಾಗಿದೆ. ಅಂದರೆ, ಗ್ರಾಹಕರಿಗೆ ನೇರವಾಗಿ 6,000 ರೂ. ಫ್ಲಾಟ್ ರಿಯಾಯಿತಿ ದೊರೆಯುತ್ತಿದೆ. ಅಲ್ಲದೆ, HDFC ಬ್ಯಾಂಕ್ ಕ್ರೆಡಿಟ್ ಕಾರ್ಡ್ ಬಳಸಿ ಪಾವತಿ ಮಾಡಿದರೆ, ಗ್ರಾಹಕರು 10,000 ರೂ. ಹೆಚ್ಚುವರಿ ರಿಯಾಯಿತಿಯನ್ನು ಪಡೆಯಬಹುದು. ಇಷ್ಟೇ ಅಲ್ಲದೆ, ನಿಮ್ಮ ಹಳೆಯ ಸ್ಮಾರ್ಟ್‌ಫೋನ್ ವಿನಮಯದ ಮೂಲಕ ನೀವು ಮತ್ತಷ್ಟು ಲಾಭವನ್ನು ಪಡೆಯಬಹುದು.
Samsung Galaxy Z Flip 7 FE ವೈಶಿಷ್ಟ್ಯಗಳು
ಕ್ಲಾಮ್‌ಶೆಲ್-ಶೈಲಿಯ Samsung Galaxy Z Flip 7 FE ಫೋನ್ 6.7-ಇಂಚಿನ ಡೈನಾಮಿಕ್ AMOLED 2X ಮುಖ್ಯ ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೆಯು ವೇರಿಯಬಲ್ 1-120Hz ರಿಫ್ರೆಶ್ ರೇಟ್ ಮತ್ತು 2,600 ನಿಟ್ಸ್ ಪೀಕ್ ಬ್ರೈಟ್‌ನೆಸ್ ಅನ್ನು ನೀಡುತ್ತಿದೆ. ಹಾಗೆಯೇ, ಈ ಫೋಮ್ 3.4-ಇಂಚಿನ ಸೂಪರ್ AMOLED ಕವರ್ ಡಿಸ್ಪ್ಲೇಯನ್ನು ಹೊಂದಿದೆ. ಈ ಎರಡನೆಯ ಡಿಸ್‌ಪ್ಲೇ ಕಸ್ಟಮೈಸ್ ಮಾಡಬಹುದಾದ ವಾಲ್‌ಪೇಪರ್‌ಗಳು ಮತ್ತು ಸಂವಾದಾತ್ಮಕ ಹವಾಮಾನ ಮತ್ತು ಗ್ಯಾಲರಿ ವಿಜೆಟ್‌ಗಳೊಂದಿಗೆ ಬಂದಿದೆ.

ಹುಡ್ ಅಡಿಯಲ್ಲಿ, Samsung Galaxy Z Flip 7 FE ಫೋನ್ ಕಂಪೆನಿಯ Exynos 2400 ಚಿಪ್‌ಸೆಟ್‌ನಿಂದ ಚಾಲಿತವಾಗಿದ್ದು,8GB RAM ಮತ್ತು 256GB ವರೆಗಿನ ಆನ್‌ಬೋರ್ಡ್ ಸಂಗ್ರಹಣೆಯೊಂದಿಗೆ ಜೋಡಿಯಾಗಿದೆ.(ಇದೇ ಚಿಪ್‌ಸೆಟ್ ಅನ್ನು ಆಯ್ದ ಮಾರುಕಟ್ಟೆಗಳಲ್ಲಿ ಕಳೆದ ವರ್ಷದ ಪ್ರಮುಖ Galaxy S24 ಮತ್ತು Galaxy S24+ ಫೋನ್‌ಗಳೊಂದಿಗೆ ನೀಡಲಾಗಿತ್ತು).ಸಾಫ್ಟ್‌ವೇರ್ ವಿಬಾಗದಲ್ಲಿ ಡ್ಯುಯಲ್-ಸಿಮ್ (ನ್ಯಾನೋ + ನ್ಯಾನೋ) ಬೆಂಬಲಿರುವ ಈ Samsung Galaxy Z Flip 7 FE ಆಂಡ್ರಾಯ್ಡ್ 16 ಆಧಾರಿತ ಒನ್ UI 8 ನೊಂದಿಗೆ ಕಾರ್ಯನಿರ್ವಹಿಸಲಿದೆ.
ಈ Samsung Galaxy Z Flip 7 FE ಪೋನ್ ಗ್ಯಾಲಕ್ಸಿ AI ವೈಶಿಷ್ಟ್ಯಗಳಿಗೆ ಬೆಂಬಲ ಹೊಂದಿದೆ. ಇದರಲ್ಲಿ ಜೆಮಿನಿ ಲೈವ್, ನೌ ಬ್ರೀಫ್, ನೌ ಬಾರ್, ಎಐ ಸೆಲೆಕ್ಟ್, ನ್ಯಾಚುರಲ್ ಲ್ಯಾಂಗ್ವೇಜ್ ಸರ್ಚ್, ರೈಟಿಂಗ್ ಅಸಿಸ್ಟ್, ಸರ್ಕಲ್-ಟು-ಸರ್ಚ್, ನೋಟ್ ಅಸಿಸ್ಟ್, ಬ್ರೌಸಿಂಗ್ ಅಸಿಸ್ಟ್ ಮತ್ತು ಟ್ರಾನ್ಸ್‌ಸ್ಕ್ರಿಪ್ಟ್ ಅಸಿಸ್ಟ್‌ನಂತಹ ಸೇರ್ಪಡೆಗಳು ಸೇರಿವೆ. ಇದಲ್ಲದೆ, ಆಡಿಯೋ ಎರೇಸರ್, ಫೋಟೋ ಅಸಿಸ್ಟ್, ಡ್ರಾಯಿಂಗ್ ಅಸಿಸ್ಟ್, ಪೋರ್ಟ್ರೇಟ್ ಸ್ಟುಡಿಯೋ ಮತ್ತು ಸ್ಕೆಚ್-ಟು-ಇಮೇಜ್‌ನಂತಹ ಅಸ್ತಿತ್ವದಲ್ಲಿರುವ ವೈಶಿಷ್ಟ್ಯಗಳಿಗಳನ್ನು ಎನಾನ್ಸ್ ಮಾಡಲು ಅವಕಾಶವನ್ನು ಕಲ್ಪಿಸಲಾಗಿದೆ.
ಕ್ಯಾಮೆರಾ ವಿಭಾಗದಲ್ಲಿ, Samsung Galaxy Z Flip 7 FE ಫೋನ್ ಹೊರಭಾಗದಲ್ಲಿ 2x ಆಪ್ಟಿಕಲ್ ಜೂಮ್ ಮತ್ತು 12-ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಆಂಗಲ್ ಲೆನ್ಸ್‌ನೊಂದಿಗೆ 50-ಮೆಗಾಪಿಕ್ಸೆಲ್ ವೈಡ್-ಆಂಗಲ್ ಕ್ಯಾಮೆರಾವನ್ನು ಹೊಂದಿದೆ. ಇದೇ ಸಮಯದಲ್ಲಿ, ಇದು ಸೆಲ್ಫಿಗಳು ಮತ್ತು ವೀಡಿಯೊ ಕರೆಗಳಿಗಾಗಿ ಒಳ ಪರದೆಯಲ್ಲಿ 10-ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ಸಹ ಹೊಂದಿದೆ. ಇದರ ಆಪ್ಟಿಕ್ಸ್ ಸಿಸ್ಟಮ್ ಸ್ಯಾಮ್‌ಸಂಗ್‌ನ ಪ್ರೊವಿಶುವಲ್ ಎಂಜಿನ್‌ನಿಂದ ಚಾಲಿತವಾಗಿದೆ ಮತ್ತು ನೈಟೋಗ್ರಫಿ ಮತ್ತು ಡ್ಯುಯಲ್ ಪ್ರಿವ್ಯೂನಂತಹ ವೈಶಿಷ್ಟ್ಯಗಳೊಂದಿಗೆ ಬರುತ್ತದೆ.
ಗೌಪ್ಯತೆ ಮತ್ತು ಸುರಕ್ಷತೆಗಾಗಿ, Galaxy Z Flip 7 FE ಫೋನ್ ವೈಯಕ್ತಿಕ ಡೇಟಾ ಎಂಜಿನ್‌ನೊಂದಿಗೆ ಬರುತ್ತದೆ, ಇದು ನಿಮ್ಮ ಡೇಟಾವನ್ನು ಸಂಗ್ರಹಿಸಿ ಎನ್‌ಕ್ರಿಪ್ಟ್ ಮಾಡುತ್ತದೆ, ನಂತರ ಅದನ್ನು ನಾಕ್ಸ್ ವಾಲ್ಟ್‌ನಲ್ಲಿ ಸಂಗ್ರಹಿಸಲಾಗುತ್ತದೆ. Galaxy Z Flip 5 ಗೆ ಹೋಲಿಸಿದರೆ ಫೋನ್‌ನ ವಿನ್ಯಾಸವನ್ನು ಪರಿಷ್ಕರಿಸಲಾಗಿದೆ ಎಂದು ಹೇಳಲಾಗುತ್ತದೆ. ಇದು 6.9mm (ಬಿಚ್ಚಿದ) ಮತ್ತು 14.9mm ದಪ್ಪವನ್ನು ಹೊಂದಿದೆ.ಬಾಳಿಕೆಗಾಗಿ, ಇದು ಆರ್ಮರ್ ಅಲ್ಯೂಮಿನಿಯಂ ಫ್ರೇಮ್ ಮತ್ತು ಧೂಳು ಮತ್ತು ನೀರಿನ ಒಳಹರಿವಿನ ವಿರುದ್ಧ IP48 ರೇಟಿಂಗ್ ಅನ್ನು ಹೊಂದಿದೆ.
ಬ್ಯಾಟರಿ ವಿಭಾಗದಲ್ಲಿ, ಈ Samsung Galaxy Z Flip 7 FE ಫೋನ್ 25W ವೈರ್ಡ್ ಫಾಸ್ಟ್ ಚಾರ್ಜಿಂಗ್‌ಗೆ ಬೆಂಬಲದೊಂದಿಗೆ 4,000mAh ಬ್ಯಾಟರಿಯನ್ನು ಪ್ಯಾಕ್ ಮಾಡುತ್ತದೆ.ಕೊನೆಯದಾಗಿ, ಸ್ಯಾಮ್‌ಸಂಗ್ ಲೈವ್ ಟ್ರಾನ್ಸ್‌ಲೇಟ್ ವೈಶಿಷ್ಟ್ಯಕ್ಕಾಗಿ ಮೂರನೇ ವ್ಯಕ್ತಿಯ ಅಪ್ಲಿಕೇಶನ್ ಬೆಂಬಲವನ್ನು ಪರಿಚಯಿಸಿದೆ. ಹಾಗೂ Samsung Galaxy Z Flip 7 FE ಫೋನ್‌ನಲ್ಲಿ ಕಾಲ್ ಅಸಿಸ್ಟ್, ಕಾಲ್ ಟ್ರಾನ್ಸ್‌ಸ್ಕ್ರಿಪ್ಟ್ ಮತ್ತು ಇಂಟರ್‌ಪ್ರಿಟರ್ ವೈಶಿಷ್ಟ್ಯಗಳು ಸಹ ಇವೆ.


Click it and Unblock the Notifications








