Home
Deal of the day

ಇಂದಿನಿಂದ Infinix GT 30 5G+ ಸೇಲ್: ಖರೀದಿಸುವ ಮೊದಲು ಇಲ್ಲಿ ನೋಡಿ!

ಗೇಮಿಂಗ್ ಮತ್ತು ಯುವ ಬಳಕೆದಾರರನ್ನು ಗಮನದಲ್ಲಿಟ್ಟುಕೊಂಡು Infinix ಪರಿಚಯಿಸಿರುವ ಹೊಸ 'Infinix GT 30 5G+' ಫೋನ್ ಇಂದಿನಿಂದ (ಆಗಸ್ಟ್ 14,) ಮೊದಲ ಬಾರಿಗೆ ಮಾರಾಟಕ್ಕೆ ಬರುತ್ತಿದೆ. ಇಂದು ಮಧ್ಯಾಹ್ನ 12 ಗಂಟೆಯಿಂದ ಫ್ಲಿಪ್‌ಕಾರ್ಟ್ ಮೂಲಕ ಈ ಫೋನ್ ಖರೀದಿಗೆ ಲಭ್ಯವಿರಲಿದ್ದು, ಗ್ರಾಹಕರು ಬ್ಯಾಂಕ್ ಕೊಡುಗೆಗಳ ಜೊತೆಗೆ 17,999 ರೂ.ಗಳ ಆರಂಭಿಕ ಬೆಲೆಯಲ್ಲಿ ಫೋನನ್ನು ಖರೀದಿಸಬಹುದು ಎಂದು ಕಂಪೆನಿ ತಿಳಿಸಿದೆ. ವಿಶಿಷ್ಟ ಸೈಬರ್ ಮೆಚಾ ಡಿಸೈನ್ 2.0, ಹಿಂಭಾಗದಲ್ಲಿ LED ಲೈಟಿಂಗ್ ಮತ್ತು ಗೇಮಿಂಗ್‌ಗಾಗಿ ವಿಶೇಷವಾಗಿ ವಿನ್ಯಾಸಗೊಳಿಸಲಾದ GT ಶೋಲ್ಡರ್ ಟ್ರಿಗ್ಗರ್‌ಗಳಿಂದ ಈ ಹೊಸ Infinix GT 30 5G+ ಫೋನ್ ಗಮನ ಸೆಳೆಯುತ್ತಿದೆ. ಹಾಗಾದರೆ, ಈ ಫೋನ್‌ನ ಸಂಪೂರ್ಣ ವೈಶಿಷ್ಟ್ಯಗಳು ಯಾವುವು ಮತ್ತು ಬೆಲೆಗಳು ಎಷ್ಟು ಎಂಬುದನ್ನು ನೋಡೋಣ ಬನ್ನಿ.!

Infinix GT 30 5G+: ಪ್ರಮುಖ ವೈಶಿಷ್ಟ್ಯಗಳು
ಹೊಸ Infinix GT 30 5G+ ಫೋನ್ 6.78-ಇಂಚಿನ 1.5K AMOLED ಡಿಸ್‌ಪ್ಲೇಯನ್ನು ಹೊಂದಿದ್ದು, ಇದು 144Hz ರಿಫ್ರೆಶ್ ರೇಟ್ ನೀಡುತ್ತದೆ. ಗೇಮಿಂಗ್ ಅನುಭವವನ್ನು ಉತ್ತಮಗೊಳಿಸಲು ಇದು 2,160Hz ಇನ್‌ಸ್ಟಂಟ್ ಟಚ್ ಸ್ಯಾಂಪ್ಲಿಂಗ್ ರೇಟ್ ಮತ್ತು 4,500 ನಿಟ್ಸ್ ಪೀಕ್ ಬ್ರೈಟ್‌ನೆಸ್ ಹೊಂದಿದೆ. ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 7i ರಕ್ಷಣೆ ಇದೆ. ಮತ್ತು ಇದರಲ್ಲಿರುವ TÜV ರೈನ್‌ಲ್ಯಾಂಡ್ ಐ ಕೇರ್ ಪ್ರಮಾಣೀಕರಣದೊಂದಿಗೆ ಕಣ್ಣಿಗೆ ಹಾನಿಯಾಗದಂತೆ ನೋಡಿಕೊಳ್ಳಲು ಇದು ಸಹಕಾರಿಯಾಗಿದೆ.

ಇಂದಿನಿಂದ Infinix GT 30 5G+ ಸೇಲ್: ಖರೀದಿಸುವ ಮೊದಲು ಇಲ್ಲಿ ನೋಡಿ!

ಕಾರ್ಯಕ್ಷಮತೆಗಾಗಿ, ಈ ಫೋನ್‌ನಲ್ಲಿ ಮೀಡಿಯಾ ಟೆಕ್ ಡೈಮೆನ್ಸಿಟಿ 7400 ಚಿಪ್‌ಸೆಟ್ ಇದೆ, ಇದು 8GB LPDDR5X RAM ಮತ್ತು 256GB ವರೆಗಿನ UFS 2.2 ಸಂಗ್ರಹಣೆಯೊಂದಿಗೆ ಉತ್ತಮ ಕಾರ್ಯಕ್ಷಮತೆ ನೀಡುತ್ತದೆ. ಇದು ಆಂಡ್ರಾಯ್ಡ್ 15 ಆಧಾರಿತ XOS 15 ಆಪರೇಟಿಂಗ್ ಸಿಸ್ಟಮ್‌ನೊಂದಿಗೆ ಕಾರ್ಯನಿರ್ವಹಿಸುತ್ತದೆ ಮತ್ತು ಎರಡು ಪ್ರಮುಖ ಆಪರೇಟಿಂಗ್ ಸಿಸ್ಟಮ್ ಅಪ್‌ಗ್ರೇಡ್‌ಗಳನ್ನು ಮತ್ತು ಮೂರು ವರ್ಷಗಳ ಭದ್ರತಾ ಪ್ಯಾಚ್ ನವೀಕರಣಗಳನ್ನು ಪಡೆಯುತ್ತದೆ. ಫೋಲಾಕ್ಸ್ AI ವಾಯ್ಸ್ ಅಸಿಸ್ಟೆಂಟ್ ಮತ್ತು ಗೂಗಲ್‌ನ ಸರ್ಕಲ್ ಟು ಸರ್ಚ್‌ನಂತಹ ನವೀನ AI ವೈಶಿಷ್ಟ್ಯಗಳು ಇದರಲ್ಲಿ ಲಭ್ಯವಿದೆ.

ಗೇಮರ್‌ಗಳಿಗಾಗಿ, ಫೋನಿನ ಬಲ ಅಂಚಿನಲ್ಲಿರುವ ಕೆಪ್ಯಾಸಿಟಿವ್ GT ಶೋಲ್ಡರ್ ಟ್ರಿಗ್ಗರ್‌ಗಳು ಉತ್ತಮ ಸ್ಪರ್ಶ ಅನುಭವವನ್ನು ನೀಡುತ್ತವೆ. ಈ ಬಟನ್‌ಗಳನ್ನು ಗೇಮಿಂಗ್ ಅಲ್ಲದೆ, ಕ್ಯಾಮರಾ ಮತ್ತು ವಿಡಿಯೋ ಕಂಟ್ರೋಲ್‌ಗಳಿಗಾಗಿ ಕೂಡ ಬಳಸಬಹುದು. ಕಂಪನಿಯ ಪ್ರಕಾರ, ಇದು 90fps ವರೆಗೆ BGMI ಗೇಮ್‌ಪ್ಲೇ ಅನ್ನು ಬೆಂಬಲಿಸುತ್ತದೆ. ಇದರ ಜೊತೆಗೆ, 6-ಲೇಯರ್ 3D ವೇಪರ್ ಚೇಂಬರ್ ಕೂಲಿಂಗ್ ಸಿಸ್ಟಮ್ ಫೋನ್ ಬಿಸಿಯಾಗದಂತೆ ನೋಡಿಕೊಳ್ಳುತ್ತದೆ ಎಂದು ಕಂಪೆನಿ ತಿಳಿಸಿದೆ.

ಇಂದಿನಿಂದ Infinix GT 30 5G+ ಸೇಲ್: ಖರೀದಿಸುವ ಮೊದಲು ಇಲ್ಲಿ ನೋಡಿ!

ಫೋಟೋಗ್ರಫಿ ವಿಭಾಗದಲ್ಲಿ, ಈ ಫೋನ್ ಡ್ಯುಯಲ್ ರಿಯರ್ ಕ್ಯಾಮರಾ ಸೆಟಪ್ ಹೊಂದಿದೆ. ಇದರಲ್ಲಿ 64-ಮೆಗಾಪಿಕ್ಸೆಲ್ ಸೋನಿ IMX682 ಮುಖ್ಯ ಸಂವೇದಕ ಮತ್ತು 8-ಮೆಗಾಪಿಕ್ಸೆಲ್ ಅಲ್ಟ್ರಾವೈಡ್ ಶೂಟರ್ ಇವೆ. ಸೆಲ್ಫಿಗಾಗಿ 13-ಮೆಗಾಪಿಕ್ಸೆಲ್ ಸೆನ್ಸರ್ ಅನ್ನು ಮುಂಭಾಗದಲ್ಲಿ ನೀಡಲಾಗಿದೆ. ಹಿಂಭಾಗದ ಫಲಕದಲ್ಲಿರುವ ಕಸ್ಟಮೈಸ್ ಮಾಡಬಹುದಾದ ಮೆಕಾ ಲೈಟ್ LED ಯು 10 ಕ್ಕೂ ಹೆಚ್ಚು ಬೆಳಕಿನ ಮಾದರಿಗಳನ್ನು ಹೊಂದಿದೆ, ಇದು ಫೋನ್‌ನ ನೋಟವನ್ನು ಮತ್ತಷ್ಟು ಹೆಚ್ಚಿಸುತ್ತದೆ.

ಬ್ಯಾಟರಿ ವಿಭಾಗದಲ್ಲಿ, Infinix GT 30 5G+ ಫೋನ್ 5,500mAh ಬ್ಯಾಟರಿಯನ್ನು ಹೊಂದಿದೆ, ಇದು 45W ವೇಗದ ಚಾರ್ಜಿಂಗ್ ಬೆಂಬಲವನ್ನು ಪಡೆಯುತ್ತದೆ. ಇದರ ಜೊತೆಗೆ, ಇದು ಬೈಪಾಸ್ ಚಾರ್ಜಿಂಗ್ ಮತ್ತು 10W ರಿವರ್ಸ್ ವೈರ್ಡ್ ಚಾರ್ಜಿಂಗ್ ಅನ್ನು ಸಹ ಬೆಂಬಲಿಸುತ್ತದೆ. ಸುರಕ್ಷತೆಗಾಗಿ, ಇನ್-ಡಿಸ್‌ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸರ್ ಇದ್ದು, ಇದು ಫೋನ್ ಅನ್ನು ವೇಗವಾಗಿ ಅನ್‌ಲಾಕ್ ಮಾಡಲು ಸಹಾಯ ಮಾಡುತ್ತದೆ. ಈ ಫೋನ್ IP64 ರೇಟಿಂಗ್ ಹೊಂದಿದ್ದು, ಧೂಳು ಮತ್ತು ನೀರಿನ ಹನಿಗಳಿಂದ ರಕ್ಷಣೆ ನೀಡುತ್ತದೆ.

ಭಾರತದಲ್ಲಿ ಬೆಲೆ ಮತ್ತು ಲಭ್ಯತೆ
ಭಾರತದಲ್ಲಿ Infinix GT 30 5G+ ಎರಡು ಮಾದರಿಗಳಲ್ಲಿ ಬಂದಿದ್ದು, ಇದರ 8GB RAM + 128GB ಮೆಮೊರಿ ಮಾದರಿಯ ಬೆಲೆ ₹19,499 ಗಳಾಗಿವೆ. ಹಾಗೂ, ಇದರ 8GB RAM + 256GB ಮೆಮೊರಿ ಮಾದರಿಯ ಬೆಲೆ ₹20,999 ಗಳಾಗಿವೆ. ಬ್ಯಾಂಕ್ ಕೊಡುಗೆಗಳ ಜೊತೆಗೆ ರೂ.1,500 ರಿಯಾಯಿತಿ ಇದ್ದು, 17,999 ರೂ.ಗಳ ಆರಂಭಿಕ ಬೆಲೆಯಲ್ಲಿ ಖರೀದಿಸಬಹುದು. ಗ್ರಾಹಕರುವ ಬ್ಲೇಡ್ ವೈಟ್ (Blade White), ಸೈಬರ್ ಗ್ರೀನ್ (Cyber Green), ಮತ್ತು ಪಲ್ಸ್ ಬ್ಲೂ (Pulse Blue) ಮೂರು ಆಕರ್ಷಕ ಬಣ್ಣಗಳಲ್ಲಿ ಲಭ್ಯವಿರಲಿದೆ.

Best Mobiles in India

English summary
The Infinix GT 30 5G+ has officially gone on sale in India, offering gamers a powerful yet affordable option. Packed with a fast processor, smooth display, and 5G connectivity, it promises lag-free gaming and all-day performance at a competitive price.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+