Home
Deal of the day

9,000ಕ್ಕಿಂತ ಕಡಿಮೆ! ಜೊತೆಗೆ 2,500 ಡಿಸ್ಕೌಂಟ್.. ಅದ್ಭುತ ವೈಶಿಷ್ಟ್ಯಗಳು.. ಸಸ್ತಾ ಬೆಲೆಗೆ Infinix 5G ಫೋನ್ ಲಭ್ಯ

ಇನ್ಫಿನಿಕ್ಸ್‌ ತನ್ನ ಅಭಿಮಾನಿಗಳಿಗೆ ಸಂತೋಷದ ಸುದ್ದಿ ನೀಡಿದೆ. ಕಳೆದ ವರ್ಷ ಭಾರತದಲ್ಲಿ ಬಿಡುಗಡೆಯಾಗಿದ್ದ ಫೋನನ್ನು 9 ಸಾವಿರ ರೂ.ಗಿಂತ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದೆ. ಹೌದು, ಇನ್ಫಿನಿಕ್ಸ್ ಹಾಟ್ 50 5G (Infinix Hot 50 5G) ಪ್ರಸ್ತುತ ಫ್ಲಿಪ್‌ಕಾರ್ಟ್‌ನಲ್ಲಿ ಭಾರೀ ರಿಯಾಯಿತಿಯೊಂದಿಗೆ ಮಾರಾಟವಾಗುತ್ತಿದೆ. ಈ ಫೋನಿನ ಖರೀದಿ ಮೇಲೆ ಬ್ಯಾಂಕ್ ಆಫರ್‌, ಕ್ಯಾಶ್‌ಬ್ಯಾಕ್ ಸಹ ನೀಡಲಾಗುತ್ತಿದೆ. ನೀವು 9,000 ರೂ.ಗಿಂತ ಕಡಿಮೆ ಬೆಲೆಗೆ ಹೊಸ 5G ಮೊಬೈಲ್ ಖರೀದಿಸಲು ಬಯಸಿದರೆ, ಇದು ಉತ್ತಮ ಆಯ್ಕೆಯಾಗಲಿದೆ. ಈ ಫೋನಿನ ಬಿಡುಗಡೆ ಬೆಲೆ, ಆಫರ್ ಮತ್ತು ವಿಶೇಷತೆಗಳನ್ನು ತಿಳಿಯಲು ಮುಂದೆ ಓದಿ.

ಇನ್ಫಿನಿಕ್ಸ್‌ ಹಾಟ್‌ 50 5G ಫೋನ್ ಎರಡು ಸ್ಟೋರೇಜ್‌ ಆಯ್ಕೆಗಳಲ್ಲಿ ಮಾರಾಟವಾಗುತ್ತಿದೆ. ಈ ಫೋನಿನಲ್ಲಿ 48 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಲಭ್ಯವಿದೆ. ಇದು ಮೀಡಿಯಾ ಟೆಕ್ ಡೈಮೆನ್ಸಿಟಿ 6300 ಪ್ರೊಸೆಸರ್‌ನೊಂದಿಗೆ ಕೆಲಸ ನಿರ್ವಹಿಸಲಿದೆ. ಈ ಮೊಬೈಲ್ 120Hz ರಿಫ್ರೆಶ್ ದರದೊಂದಿಗೆ 6.7 ಇಂಚಿನ ಡಿಸ್ಪ್ಲೇ ಹೊಂದಿದೆ. ಜೊತೆಗೆ 8GB + 128GB ಸ್ಟೋರೇಜ್, 5000mAh ಬ್ಯಾಟರಿ ಮತ್ತು 18W ವೇಗದ ಚಾರ್ಜಿಂಗ್‌ ಸೇರಿದಂತೆ ಹಲವು ಉತ್ತಮ ಗುಣಮಟ್ಟದ ವೈಶಿಷ್ಟ್ಯಗಳನ್ನು ಒಳಗೊಂಡಿದೆ.

9,000ಕ್ಕಿಂತ ಕಡಿಮೆ! ಜೊತೆಗೆ 2,500 ಡಿಸ್ಕೌಂಟ್, ಮಸ್ತ್ ಫೀಚರ್ಸ್‌.. ಯಾವ ಫೋನ್?

ಇನ್ಫಿನಿಕ್ಸ್‌ ಹಾಟ್‌ 50 5G ಆಫರ್‌ಗಳು

ಇನ್ಫಿನಿಕ್ಸ್‌ ಹಾಟ್‌ 50 5G ಫೋನಿನ 4GB RAM + 128GB ಸ್ಟೋರೇಜ್‌ ರೂಪಾಂತರವನ್ನು 9,999 ರೂ.ಗೆ ಬಿಡುಗಡೆ ಮಾಡಲಾಗಿತ್ತು. ಹಾಗೆಯೇ 8GB RAM + 128 GB ಸ್ಟೋರೇಜ್‌ ವೇರಿಯಂಟ್ ಬೆಲೆ 10,999 ರೂ. ಆಗಿದೆ. ಫ್ಲಿಪ್‌ಕಾರ್ಟ್ ಸೈಟ್‌ನಲ್ಲಿ ಈ ಫೋನನ್ನು 2,250 ರೂ.ಗಳ ರಿಯಾಯಿತಿಯೊಂದಿಗೆ ಮಾರಾಟ ಮಾಡುತ್ತಿದೆ. ಎಚ್‌ಡಿಎಫ್‌ಸಿ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ನಲ್ಲಿ ಈ ರಿಯಾಯಿತಿ ಲಭ್ಯವಿದೆ. ಇದಲ್ಲದೆ, 6 ಅಥವಾ 9 ತಿಂಗಳ ಇಎಂಐ ಪ್ರಯೋಜನ ಸಹ ಪಡೆಯಬಹುದು.

ರಿಯಾಯಿತಿಯೊಂದಿಗೆ ಇನ್ಫಿನಿಕ್ಸ್‌ ಹಾಟ್‌ 50 5G ಮೊಬೈಲ್ ಜಸ್ಟ್ 8,749 ರೂ.ಗೆ ಲಭ್ಯವಿದೆ. ಹೆಚ್‌ಡಿಎಫ್‌ಸಿ ಬ್ಯಾಂಕ್ ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ಮೂಲಕ ಪೂರ್ಣ ಪಾವತಿ ಮಾಡಿದರೆ, ಕಂಪನಿಯು 1,500 ರೂ.ಗಳ ಡಿಸ್ಕೌಂಟ್ ಸಹ ನೀಡುತ್ತದೆ. ಈ ರಿಯಾಯಿತಿಯೊಂದಿಗೆ, ಈ ಅಗ್ಗದ 5G ಫೋನನ್ನು ಕೇವಲ 9,499 ರೂ.ಗೆ ನಿಮ್ಮದಾಗಿಸಿಕೊಳ್ಳಬಹುದು. ಎಚ್‌ಡಿಎಫ್‌ಸಿ ಬ್ಯಾಂಕ್ ಹೊಂದಿಲ್ಲದವರಿಗೂ ಸಹ 1,000 ರೂ.ಗಳ ರಿಯಾಯಿತಿ ನೀಡಲಾಗುತ್ತದೆ. ಈ ಮೊಬೈಲ್ ವೈಬ್ರೆಂಟ್ ಬ್ಲೂ, ಸ್ಲೀಕ್ ಬ್ಲಾಕ್, ಸೇಜ್ ಗ್ರೀನ್ ಮತ್ತು ಡ್ರೀಮಿ ಪರ್ಪಲ್ ಬಣ್ಣಗಳಲ್ಲಿ ಖರೀದಿಗೆ ಲಭ್ಯವಿದೆ.

ಇನ್ಫಿನಿಕ್ಸ್‌ ಹಾಟ್‌ 50 5G ವೈಶಿಷ್ಟ್ಯಗಳು

ಡಿಸ್ಪ್ಲೇ ಹೇಗಿದೆ

ಇನ್ಫಿನಿಕ್ಸ್‌ ಹಾಟ್‌ 50 5G ಸ್ಮಾರ್ಟ್‌ಫೋನ್ 6.7 ಇಂಚಿನ ಎಚ್‌ಡಿ ಪ್ಲಸ್ ಡಿಸ್ಪ್ಲೇ ಹೊಂದಿದೆ. ಇದು 1600 x 720 ಪಿಕ್ಸೆಲ್ ಡಿಸ್ಪ್ಲೇ, 120Hz ರಿಫ್ರೆಶ್ ದರದ ಬೆಂಬಲ ವನ್ನು ಬೆಂಬಲಿಸುತ್ತದೆ. ಜೊತೆಗೆ, ಅತ್ಯುತ್ತಮ ಭದ್ರತೆಯನ್ನು ಹೊಂದಿದೆ. ಡೈನಾಮಿಕ್ ಬಾರ್ ಇಂಟರಾಕ್ಟಿವ್ ಸ್ಕ್ರೀನ್ ಕೂಡ ಇದೆ.

ಪ್ರೊಸೆಸರ್‌ ಯಾವುದು

ಇನ್ಫಿನಿಕ್ಸ್‌ ಹಾಟ್‌ 50 5G ಫೋನ್ ಮೀಡಿಯಾಟೆಕ್ ಡೈಮೆನ್ಸಿಟಿ 6300 ಪ್ರೊಸೆಸರ್‌ ಹೊಂದಿದೆ. ಈ ಫೋನ್ XOS 14.5 ಆಧಾರಿತ ಆಂಡ್ರಾಯ್ಡ್ 14 ಓಎಸ್‌ನೊಂದಿಗೆ ಕೆಲಸ ಮಾಡುತ್ತದೆ. ಇದು 8GB ವರೆಗೆ ವಿಸ್ತೃತ RAMಗೆ ಬೆಂಬಲವನ್ನು ಸಹ ಒಳಗೊಂಡಿದೆ. ಇದರ ಸಹಾಯದಿಂದ 16GB ವರೆಗೆ ಬಳಸಬಹುದು. ಈ ಮೊಬೈಲ್ 4GB + 128GB ಮತ್ತು 8GB + 128GB ಸ್ಟೋರೇಜ್ ಆಯ್ಕೆ ಒಳಗೊಂಡಿದೆ.

ಅದ್ಭುತ ಕ್ಯಾಮೆರಾ ಸೆಟಪ್

ಇನ್ಫಿನಿಕ್ಸ್‌ ಹಾಟ್‌ 50 5G ಮೊಬೈಲ್ ಡ್ಯುಯಲ್ ಕ್ಯಾಮೆರಾ ಸೆಟಪ್ ಹೊಂದಿದೆ. ಈ ಫೋನಿನಲ್ಲಿ ಎಲ್‌ಇಡಿ ಫ್ಲ್ಯಾಷ್ ಲೈಟ್‌ನೊಂದಿಗೆ 48 ಮೆಗಾಪಿಕ್ಸೆಲ್ ಪ್ರಾಥಮಿಕ ಸೋನಿ ಕ್ಯಾಮೆರಾ ಲಭ್ಯವಿದೆ. ಜೊತೆಗೆ ಎಐ (AI) ಲೆನ್ಸ್ ಸಹ ಹೊಂದಿದೆ. ಈ ಫೋನಿನಲ್ಲಿ ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, 8 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಲಭ್ಯವಿದೆ. ಇದು ಎಲ್ಇಡಿ ಫ್ಲ್ಯಾಷ್‌ನೊಂದಿಗೆ ಬರುತ್ತದೆ.

ಬ್ಯಾಟರಿ ಬ್ಯಾಕಪ್ ಸೂಪರ್

ಇನ್ಫಿನಿಕ್ಸ್‌ ಹಾಟ್‌ 50 5G ಸ್ಮಾರ್ಟ್‌ಫೋನ್ 5000mAh ಸಾಮರ್ಥ್ಯದ ಬ್ಯಾಟರಿ ಹೊಂದಿದೆ. ಇದನ್ನು ಚಾರ್ಜ್‌ ಮಾಡಲು, 18W ವೇಗದ ಚಾರ್ಜಿಂಗ್ ತಂತ್ರಜ್ಞಾನ ಹೊಂದಿದೆ.

ಇತರೆ ವೈಶಿಷ್ಟ್ಯಗಳು

ಇನ್ಫಿನಿಕ್ಸ್‌ ಹಾಟ್‌ 50 5G ಮೊಬೈಲ್ ಎಐ ಚಾರ್ಜ್ ರಕ್ಷಣೆ, ಪವರ್ ಮ್ಯಾರಥಾನ್, ಸ್ಮಾರ್ಟ್ ಮೋಡ್, ಅಲ್ಟ್ರಾ ಪವರ್ ಸೇವಿಂಗ್ ಮೋಡ್‌ ಸೇರಿದಂತೆ ಹಲವು ಎಐ ವೈಶಿಷ್ಟ್ಯಗಳನ್ನು ಹೊಂದಿದೆ. ಹಾಗೆಯೇ ಸೈಡ್ ಮೌಂಟೆಡ್ ಫಿಂಗರ್‌ಪ್ರಿಂಟ್ ಸೆನ್ಸಾರ್, ಫೇಸ್ ಅನ್‌ಲಾಕ್ ಒಳಗೊಂಡಿದೆ. ಕನೆಕ್ಟಿವಿಟಿ ಸೌಲಭ್ಯಗಳಲ್ಲಿ ಈ ಫೋನ್ ಡ್ಯುಯಲ್ ಸಿಮ್, ವೈ-ಫೈ, ಬ್ಲೂಟೂತ್ ಸೇರಿದಂತೆ ಹಲವು ಸೌಲಭ್ಯಗಳನ್ನು ಹೊಂದಿದೆ.

Best Mobiles in India

English summary
Infinix Hot 50 5G with 4GB RAM buy under Rs 9,000 in flipkart sale: check new price, offers, specifications and more
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+