Home
Deal of the day

ಇದಪ್ಪಾ ಲಾಟರಿ ಅಂದ್ರೆ! 36,491 ಬೆಲೆ ಇಳಿಕೆ.. ಅಗ್ಗದ ಬೆಲೆಗೆ iPhone 13 ಲಭ್ಯ.. ಖರೀದಿ ಎಲ್ಲಿ?

ಮಾರುಕಟ್ಟೆಗೆ ಯಾವುದೇ ಹೊಸ ಸ್ಮಾರ್ಟ್‌ಫೋನ್‌ ಬಂದರೂ ಐಫೋನ್ (iPhone) ಕ್ರೇಜ್ ಕಡಿಮೆ ಆಗಲ್ಲ. ಸ್ಮಾರ್ಟ್‌ಫೋನ್ ಪ್ರಿಯರು ಆಪಲ್‌ ಫೋನ್‌ಗಳನ್ನು ಮುಗಿಬಿದ್ದು ಖರೀದಿಸುತ್ತಾರೆ. ಅದರಲ್ಲೂ ಐಫೋನ್ ಮೇಲೆ ಆಫರ್‌ ಇದ್ದಾಗ, ಸುಮ್ಮನೆ ಇರ್ತಾರಾ? ಹೌದು, ನೀವು ಸಹ ಐಫೋನ್ ಖರೀದಿಸಲು ಬಯಸಿದರೆ, ಆಪಲ್‌ನ ಐಫೋನ್ 13 (iPhone 13) ರಿಯಾಯಿತಿ ದರದಲ್ಲಿ ಮಾರಾಟವಾಗುತ್ತಿದೆ. ಈ ಫೋನ್ ಅಮೆಜಾನ್‌ನಲ್ಲಿ ಬಿಡುಗಡೆ ಬೆಲೆಗಿಂತ 36,491 ರೂ. ಬೆಲೆಗೆ ಲಭ್ಯವಿದೆ. ಜೊತೆಗೆ, ಬ್ಯಾಂಕ್ ರಿಯಾಯಿತಿ, ನೋ ಕಾಸ್ಟ್ ಇಎಂಐ ಮತ್ತು ಎಕ್ಸ್‌ಚೇಂಜ್ ಆಫರ್‌ ಸಹ ಸಿಗುತ್ತದೆ.

ಐಫೋನ್ 13 ಭಾರತದಲ್ಲಿ ಸೆಪ್ಟೆಂಬರ್ 2021 ರಲ್ಲಿ ಬಿಡುಗಡೆ ಆಗಿದೆ. ನೀವು 40,000 ರೂ.ಗಿಂತ ಕಡಿಮೆ ಬಜೆಟ್‌ನಲ್ಲಿ ಹೊಸ ಐಫೋನ್ ಖರೀದಿಸಲು ಬಯಸಿದರೆ, ಐಫೋನ್ 13 ಉತ್ತಮ ಆಯ್ಕೆಯಾಗಿದೆ. ಐಫೋನ್ 16 (iPhone 16) ಫೋನಿಗೆ ಹೋಲಿಸಿದರೆ, ಐಫೋನ್ 13 ಪ್ರೊಸೆಸರ್ ಮತ್ತು ಕ್ಯಾಮೆರಾ ಸೆಟಪ್ ವಿಷಯದಲ್ಲಿ ಕಡಿಮೆ ಶಕ್ತಿಯುತವಾಗಿದೆ. ಬ್ಯಾಟರಿ ಗಾತ್ರವು ತುಂಬಾ ಚಿಕ್ಕದಾಗಿದೆ. ಈ ಫೋನಿನ ಹೊಸ ಬೆಲೆ, ಆಫರ್‌ಗಳು ಮತ್ತು ವಿಶೇಷತೆಗಳನ್ನು ತಿಳಿಯಲು ಮುಂದೆ ಓದಿ.

36,491 ಬೆಲೆ ಇಳಿಕೆ! ಅಗ್ಗದ ಬೆಲೆಗೆ iPhone 13 ಲಭ್ಯ.. ಖರೀದಿ ಎಲ್ಲಿ?

ಐಫೋನ್ 13 ರಿಯಾಯಿತಿ ಬೆಲೆ

ಪ್ರಸ್ತುತ, ಅಮೆಜಾನ್‌ನಲ್ಲಿ ಐಫೋನ್ 13 ಫೊನನ್ನು 43,499 ರೂ.ಗೆ ಮಾರಾಟ ಮಾಡಲಾಗುತ್ತಿದೆ. ಇದು ಫೋನಿನ 128GB ರೂಪಾಂತರದ ಬೆಲೆ ಆಗಿದೆ. ಇದನ್ನು 79,990 ರೂ. ಬೆಲೆಗೆ ಬಿಡುಗಡೆ ಮಾಡಲಾಗಿತ್ತು. ಪ್ರಸ್ತುತ, ಈ ಮೊಬೈಲ್ ಬಿಡುಗಡೆ ಬೆಲೆಗಿಂತ 36,491 ರೂ. ಕಡಿಮೆಗೆ ಮಾರಾಟವಾಗುತ್ತಿದೆ. ನೀವು, ನೋ ಕಾಸ್ಟ್‌ ಇಎಂಐ ಸೌಲಭ್ಯದೊಂದಿಗೆ ಈ ಸ್ಮಾರ್ಟ್‌ಫೋನ್ ಖರೀದಿಸಬಹುದು. ಜೊತೆಗ ಅಮೆಜಾನ್ ಪೇ, ಐಸಿಐಸಿಐ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಪಾವತಿ ಮೇಲೆ, ಶೇ.5 ರಷ್ಟು (ಪ್ರೈಮ್ ಸದಸ್ಯರಿಗೆ) ಕ್ಯಾಶ್‌ಬ್ಯಾಕ್ ಮತ್ತು ಶೇ.3 ರಷ್ಟು (ಪ್ರೈಮ್ ಸದಸ್ಯರಲ್ಲದವರಿಗೆ) ಕ್ಯಾಶ್‌ಬ್ಯಾಕ್ ಸಿಗುತ್ತದೆ.

ಐಫೋನ್ 13 ವೈಶಿಷ್ಟ್ಯಗಳು

ಡಿಸ್ಪ್ಲೇ ಹೇಗಿದೆ

ಐಫೋನ್ 13 ಸ್ಮಾರ್ಟ್‌ಫೋನ್ 6.1 ಇಂಚಿನ ಡಿಸ್ಪ್ಲೇ ಹೊಂದಿದೆ. ಈ ಡಿಸ್ಪ್ಲೇಯನ್ನು ಸೂಪರ್ ರೆಟಿನಾ XDR ಸ್ಕ್ರೀನ್, OLED ಪ್ಯಾನೆಲ್‌ನಲ್ಲಿ ತಯಾರಿಸಲಾಗಿದೆ. ಇದು 2532 x 1170 ಪಿಕ್ಸೆಲ್‌ಗಳ ರೆಸಲ್ಯೂಶನ್ ಸಾಮರ್ಥ್ಯ ಹೊಂದಿದೆ. ಹಾಗೆಯೇ ಟ್ರೂ ಟೋನ್, 460 ppi ಮತ್ತು 800 ನಿಟ್ಸ್‌ ಗರಿಷ್ಠ ಬ್ರೈಟ್‌ನೆಸ್‌ ಬೆಂಬಲ ಪಡೆದಿದೆ. ಈ ಫೋನಿನ ಮುಂಭಾಗವನ್ನು ಸೆರಾಮಿಕ್ ಶೀಲ್ಡ್‌ ಮತ್ತು ಹಿಂಭಾಗವು ಗಾಜಿನಿಂದ ನಿರ್ಮಿಸಲಾಗಿದೆ.

ಶಕ್ತಿಶಾಲಿ ಪ್ರೊಸೆಸರ್

ಆಪಲ್‌ನ ಐಫೋನ್ 13 ಮೊಬೈಲ್ A15 ಬಯೋನಿಕ್ ಪ್ರೊಸೆಸರ್ ಹೊಂದಿದೆ. ಇದು 16 ಕೋರ್ ನ್ಯೂರಲ್ ಎಂಜಿನ್ ಪ್ರೊಸೆಸರ್ ಆಗಿದೆ. 4 ಕೋರ್ ಜಿಪಿಯು ಮತ್ತು 6 ಕೋರ್ ಸಿಪಿಯು ಒಳಗೊಂಡಿದೆ. ಈ ಐಫೋನ್ 128GB ಸ್ಟೋರೇಜ್ ಮತ್ತು 512GB ಸ್ಟೋರೇಜ್‌ ಆಯ್ಕೆ ಹೊಂದಿದೆ.

36,491 ಬೆಲೆ ಇಳಿಕೆ! ಅಗ್ಗದ ಬೆಲೆಗೆ iPhone 13 ಲಭ್ಯ.. ಖರೀದಿ ಎಲ್ಲಿ?

ಡ್ಯುಯಲ್ ಕ್ಯಾಮೆರಾ ಸೆಟಪ್

ಐಫೋನ್ 13 ಫೋನ್ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಹೊಂದಿದೆ. ಈ ಫೋನಿನಲ್ಲಿ ಟ್ರೂ ಟೋನ್ ಫ್ಲ್ಯಾಷ್ ಲೈಟ್‌ನೊಂದಿಗೆ 12 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಲಭ್ಯವಿದೆ. ಜೊತೆಗೆ 12 ಮೆಗಾಪಿಕ್ಸೆಲ್ ದ್ವಿತೀಯ ಕ್ಯಾಮೆರಾ ಹೊಂದಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಳಿಗಾಗಿ, ಈ ಫೋನ್ 12 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಸಹ ಒಳಗೊಂಡಿದೆ.

ಅದ್ಭುತ ಬ್ಯಾಟರಿ ಬ್ಯಾಕಪ್

ಐಫೋನ್‌ 13 ಸ್ಮಾರ್ಟ್‌ಫೋನ್ 3,227mAh ಸಾಮರ್ಥ್ಯದ ಬ್ಯಾಟರಿಯೊಂದಿಗೆ ಬಿಡುಗಡೆಯಾಗಿದೆ. ಕಂಪನಿಯು ಪ್ರಕಾರ, ಈ ಐಫೋನ್ 19 ಗಂಟೆಗಳ ವಿಡಿಯೋ ಪ್ಲೇಬ್ಯಾಕ್ ಮತ್ತು 75 ಗಂಟೆಗಳ ಆಡಿಯೊ ಪ್ಲೇಬ್ಯಾಕ್ ಅನ್ನು ನೀಡುತ್ತದೆ. ಫೋನನ್ನು ಚಾರ್ಜ್ ಮಾಡಲು, 20W ವೇಗದ ಚಾರ್ಜಿಂಗ್ ಸೌಲಭ್ಯ ಒದಗಿಸಲಾಗಿದೆ. ಈ ಫೋನ್ 15W MagSafe ವೈರ್‌ಲೆಸ್ ಮತ್ತು 7.5W Qi ವೈರ್‌ಲೆಸ್ ಚಾರ್ಜಿಂಗ್ ಸಹ ಹೊಂದಿದೆ. ನೀವು 30 ನಿಮಿಷಗಳಲ್ಲಿ ಶೇ.50 ರಷ್ಟು ಚಾರ್ಜ್ ಮಾಡಬಹುದು.

Best Mobiles in India

English summary
iPhone 13 gets big price drop on amzon sale: Available for Just Rs 43,499
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+