Home
Deal of the day

iPhone 13 ಬೆಲೆ ಭಾರೀ ಇಳಿಕೆ: ಕೇವಲ 39,999 ರೂ.ಗೆ ಲಭ್ಯ! ಖರೀದಿ ಎಲ್ಲಿ?

iPhone 13 Price Drop: ಸ್ಮಾರ್ಟ್‌ಫೋನ್ ಪ್ರಿಯರು ಆಪಲ್‌ ಐಫೋನ್ (iPhone) ಖರೀದಿಸಲು ಇಷ್ಟಪಡುತ್ತಾರೆ. ಐಫೋನ್ ಬೆಲೆ ದುಬಾರಿ ಇದ್ದರೆ ಖಂಡಿತ ನಿರಾಶೆಗೊಳ್ಳುತ್ತಾರೆ. ಆದರೆ, ವರ್ಷಕ್ಕೊಮ್ಮೆ ಬರುವ ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್‌ನಲ್ಲಿ ಐಫೋನ್ 13 (iPhone 13) ಅತ್ಯಂತ ಅಗ್ಗದ ಬೆಲೆಗೆ ಲಭ್ಯವಿರುತ್ತದೆ. ಈ ಸೇಲ್‌ನಲ್ಲಿ ಆಪಲ್‌ ಐಫೋನ್ 13 ಅನ್ನು ಕೇವಲ 39,999 ರೂ. ಬೆಲೆಗೆ ಖರೀದಿಸಬಹುದು. ನೀವು, ಬರೋಬ್ಬರಿ 16,000 ರೂ.ಗಳ ವರೆಗೆ ರಿಯಾಯಿತಿ ಪಡೆಯಬಹುದು. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.

ಭಾರತದಲ್ಲಿ ಐಫೋನ್ 13 ಅನ್ನು 2022 ರಲ್ಲಿ ಬಿಡುಗಡೆಯಾಗಲಿದೆ. ಈ ಫೋನ್ 2028 ರವರೆಗೆ ಸಾಫ್ಟ್‌ವೇರ್ ನವೀಕರಣಗಳನ್ನು ಪಡೆಯುತ್ತದೆ. ಇದು ಹಳೆಯ ಫೋನ್ ಆಗಿದ್ದರೂ, ಹೊಸ ಐಒಎಸ್ ವೈಶಿಷ್ಟ್ಯಗಳು ಮತ್ತು ಭದ್ರತಾ ಪ್ಯಾಚ್‌ಗಳು ಮುಂದಿನ ಕೆಲವು ವರ್ಷಗಳವರೆಗೆ ಲಭ್ಯವಿರುತ್ತವೆ. ಇತ್ತೀಚಿನ ಐಫೋನ್ 16ಗೆ (iPhone 16) ಹೋಲಿಸಿದರೆ, ಐಫೋನ್ 13 ಪ್ರೊಸೆಸರ್ ಮತ್ತು ಕ್ಯಾಮೆರಾ ಕಡಿಮೆ ಶಕ್ತಿಯುತವಾಗಿದೆ. ಬ್ಯಾಟರಿ ಗಾತ್ರವು ತುಂಬಾ ಚಿಕ್ಕದಾಗಿದೆ. ನೀವು 50,000 ಕ್ಕಿಂತ ಕಡಿಮೆ ಬಜೆಟ್‌ನಲ್ಲಿ ಐಫೋನ್ ಬಯಸಿದರೆ, ಐಫೋನ್ 13 ಅತ್ಯುತ್ತಮ ಆಯ್ಕೆಯಾಗಿದೆ.

iPhone 13 ಬೆಲೆ ಭಾರೀ ಇಳಿಕೆ: ಕೇವಲ 39,999 ರೂ.ಗೆ ಲಭ್ಯ! ಖರೀದಿ ಹೇಗೆ?

ಐಫೋನ್ 13 ಬೆಲೆ ಮತ್ತು ಆಫರ್‌ಗಳು

ಪ್ರಸ್ತುತ, ಇ-ಕಾಮರ್ಸ್ ಪ್ಲಾಟ್‌ಫಾರ್ಮ್ ಅಮೇಜಾನ್‌ನಲ್ಲಿ ಐಫೋನ್ 13 ರಿಯಾಯಿತಿ ದರದಲ್ಲಿ ಲಭ್ಯವಿದೆ. ಇದರ 128GB ಸ್ಟೋರೇಜ್‌ನ ನೀಲಿ ಬಣ್ಣದ ರೂಪಾಂತರದ ಬೆಲೆ 48,900 ರೂ. ಆಗಿದೆ. ಈ ಫೋನ್‌ ಖರೀದಿಸಿದರೆ, 10,000 ರೂ. ಹೆಚ್ಚುವರಿ ರಿಯಾಯಿತಿ ಸಹ ಲಭ್ಯವಿದೆ. ಮಾರಾಟದಲ್ಲಿ ಈ ಬೆಲೆ 45,999 ರೂ. ಎಂದು ಪಟ್ಟಿಮಾಡಲಾಗಿದೆ.

ನೀವು ಎಸ್‌ಬಿಐ ಕಾರ್ಡ್‌ಗಳಿಂದ ಪಾವತಿಸಿದರೆ, ನಿಮಗೆ ರೂ.2,500 ವರೆಗೆ ರಿಯಾಯಿತಿ ಸಿಗುತ್ತದೆ. ಇದಲ್ಲದೇ ಹೆಚ್ಚುವರಿಯಾಗಿ 3,500 ರೂ.ಗಳ ಎಕ್ಸ್ ಚೇಂಜ್ ಆಫರ್‌ ಲಭ್ಯವಿದೆ. ಈ ಎಲ್ಲಾ ಆಫರ್‌ಗಳನ್ನು ಒಟ್ಟುಗೂಡಿಸಿದರೆ, ನೀವು 39,999 ರೂ.ಗಳ ಬೆಲೆಯಲ್ಲಿ ಐಫೋನ್ 13 ಅನ್ನು ಖರೀದಿಸಬಹುದು. ಈ ಬಜೆಟ್‌ನಲ್ಲಿ ನೀವು ಆಂಡ್ರಾಯ್ಡ್ ಫೋನ್ ಬಯಸಿದರೆ, ಸ್ಯಾಮ್‌ಸಂಗ್ ಗ್ಯಾಲಕ್ಸಿ S23 5G (Samsung Galaxy S23 5G) ಪ್ರಸ್ತುತ 50 ಸಾವಿರ ರೂ. ಅಡಿಯಲ್ಲಿ ಲಭ್ಯವಿದೆ.

ಐಫೋನ್ 13 ವೈಶಿಷ್ಟ್ಯಗಳು

ಡಿಸ್ಪ್ಲೇ: ಐಫೋನ್ 13 ಮೊಬೈಲ್ 6.1 ಇಂಚಿನ ಡಿಸ್ಪ್ಲೇಯನ್ನು ಹೊಂದಿದೆ. ಇದು 2532 x 1170 ಪಿಕ್ಸೆಲ್‌ಗಳ ರೆಸಲ್ಯೂಶನ್, OLED ಪ್ಯಾನೆಲ್, ಸೂಪರ್ ರೆಟಿನಾ XDR ಸ್ಕ್ರೀನ್, 460 ppi, 800 ನಿಟ್ಸ್‌ ಗರಿಷ್ಠ ಬ್ರೈಟ್‌ನೆಸ್‌ ಹೊಂದಿದೆ.

ಪ್ರೊಸೆಸರ್: ಐಫೋನ್ 13 ಸ್ಮಾರ್ಟ್‌ಫೋನ್‌ A15 ಬಯೋನಿಕ್ ಚಿಪ್‌ ಅನ್ನು ಹೊಂದಿದೆ. ಇದು 16-ಕೋರ್ ನ್ಯೂರಲ್ ಎಂಜಿನ್ ಪ್ರೊಸೆಸರ್ ಆಗಿದೆ. ಇದು 4 ಕೋರ್ ಜಿಪಿಯು ಮತ್ತು 6 ಕೋರ್ ಸಿಪಿಯು ಹೊಂದಿದೆ. ಈ ಐಫೋನ್ 13 ಮೊಬೈಲ್ 128GB ನಿಂದ 512GB ವರೆಗಿನ ಇಂಟರ್ನಲ್ ಸ್ಟೋರೇಜ್‌ ಅನ್ನು ಒಳಗೊಂಡಿದೆ.

ಕ್ಯಾಮೆರಾ: ಐಫೋನ್ 13 ಸ್ಮಾರ್ಟ್‌ಫೋನ್ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಹೊಂದಿದೆ. ಇದು 12 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಮತ್ತು ಹಿಂಭಾಗದ ಫಲಕದಲ್ಲಿ 12 ಮೆಗಾಪಿಕ್ಸೆಲ್ ಸೆಕೆಂಡರಿ ಲೆನ್ಸ್ ಅನ್ನು ಹೊಂದಿದೆ. ಹಿಂದಿನ ಫಲಕದಲ್ಲಿ ರಿಯಲ್ ಟೋನ್ ಫ್ಲ್ಯಾಷ್ ಅನ್ನು ಒದಗಿಸಲಾಗಿದೆ. ಈ ಫೋನ್ ಸೆಲ್ಫಿ ಮತ್ತು ವಿಡಿಯೋ ಕರೆಗಳಿಗಾಗಿ, 12 ಮೆಗಾಪಿಕ್ಸೆಲ್ ಟ್ರೂ ಡೆಪ್ತ್ ಕ್ಯಾಮೆರಾವನ್ನು ಹೊಂದಿದೆ. ಇದರ ಅಪರ್ಚರ್ f/2.2 ಆಗಿದೆ.

ಬ್ಯಾಟರಿ: ಕಂಪನಿಯು ಐಫೋನ್‌ 13 ಅನ್ನು 3,227mAh ಸಾಮರ್ಥ್ಯದ ಬ್ಯಾಟರಿಯೊಂದಿಗೆ ಪರಿಚಯಿಸಿದೆ. ಇದು 19 ಗಂಟೆಗಳ ವಿಡಿಯೋ ಪ್ಲೇಬ್ಯಾಕ್ ಮತ್ತು 75 ಗಂಟೆಗಳ ಆಡಿಯೋ ಪ್ಲೇಬ್ಯಾಕ್ ಅನ್ನು ನೀಡುತ್ತದೆ. ಈ ಫೋನ್ 20 ವ್ಯಾಟ್ ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಇದು 15W MagSafe ವೈರ್‌ಲೆಸ್ ಮತ್ತು 7.5W QI ವೈರ್‌ಲೆಸ್ ಚಾರ್ಜಿಂಗ್ ಅನ್ನು ಸಹ ಬೆಂಬಲಿಸುತ್ತದೆ.

Best Mobiles in India

English summary
iPhone 13 price drops before Amazon’s big sale: check availability, offers, specs and more
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+