Home
Deal of the day

ವಾವ್..! 8,500 ಉಳಿತಾಯ.. ಈ iPhone ಬೆಲೆ ಭಾರೀ ಕುಸಿತ.. ಅಗ್ಗದ ಬೆಲೆಗೆ ಸಿಗುತ್ತೆ

ಐಫೋನ್ ಪ್ರಿಯರಿಗೆ ಇಲ್ಲಿದೆ ಗುಡ್ ನ್ಯೂಸ್! ರಿಲಯನ್ಸ್ ಡಿಜಿಟಲ್ (Reliance Digital) ಇ-ಕಾಮರ್ಸ್ ಐಫೋನ್ 14 (iPhone 14) ಮೇಲೆ ಭಾರಿ ರಿಯಾಯಿತಿ ಘೋಷಿಸಿದೆ. ಹೌದು, ಐಫೋನ್ 14 ಪ್ರಸ್ತುತ ರಿಯಾಯಿತಿಯೊಂದಿಗೆ 48,000 ರೂ.ಗೆ ಮಾರಾಟವಾಗುತ್ತಿದೆ. ಈ ಆಫರ್‌ ಜೊತೆಗೆ ಬ್ಯಾಂಕ್ ಮತ್ತು ಕ್ರೆಡಿಟ್ ಕಾರ್ಡ್ ಡಿಸ್ಕೌಂಟ್‌ ಸಹ ನೀಡಲಾಗುತ್ತದೆ. ಇದರೊಂದಿಗೆ ಈ ಫೋನಿನ ಬೆಲೆ ಮತ್ತಷ್ಟು ಕಡಿಮೆಯಾಗಲಿದೆ. ನೀವು, ಈ ಮೊಬೈಲ್ ಖರೀದಿಸಿದರೆ ದೊಡ್ಡ ಉಳಿತಾಯ ಮಾಡಬಹುದು. ಬನ್ನಿ, ಈ ಫೋನಿನ ಆಫರ್‌ಗಳು ಮತ್ತು ವಿಶೇಷತೆಗಳನ್ನು ತಿಳಿಯೋಣ.

ಆಪಲ್ (Apple) ಕಂಪನಿಯು 2022 ರಲ್ಲಿ ಐಫೋನ್ 14 ಅನ್ನು ಬಿಡುಗಡೆ ಮಾಡಿತ್ತು. ಐಫೋನ್‌ಗಳು ದುಬಾರಿ ಬೆಲೆ ಹೊಂದಿದ್ದರೂ, ಸಹ ಗ್ರಾಹಕರು ಖರೀದಿಗೆ ಹಿಂದೇಟು ಹಾಕುವುದಿಲ್ಲ. ಕಾರಣ, ಈ ಫೋನ್‌ಗಳ ಫೀಚರ್ಸ್, ಕಾರ್ಯಕ್ಷಮತೆ ಹಾಗೂ ಇನ್ನಿತರೆ ಸೌಲಭ್ಯಗಳು ಮೊಬೈಲ್ ಪ್ರಿಯರನ್ನು ಹೆಚ್ಚು ಆಕರ್ಷಿಸುತ್ತವೆ. ಈ ಮಧ್ಯೆಯೇ ನೀವು ಊಹಿಸದ ನಿರೀಕ್ಷಿಸದ ಬೆಲೆಗೆ ಐಫೋನ್‌ 14 ಫೋನನ್ನು ಖರೀದಿಸಬಹುದಾಗಿದೆ. ನೀವು ಬಿಡುಗಡೆ ಬೆಲೆಗಿಂತ ಕಡಿಮೆಗೆ ಐಫೋನ್ 14 ಅನ್ನು ಮನೆಗೆ ಕೊಂಡೊಯ್ಯಬಹುದು.

ವಾವ್..! 8,500 ಉಳಿತಾಯ.. ಈ iPhone ಬೆಲೆ ಭಾರೀ ಕುಸಿತ; ಅಗ್ಗದ ಬೆಲೆಗೆ ಸಿಗುತ್ತೆ

ಐಫೋನ್‌ 14 ಬೆಲೆ ಮತ್ತು ಆಫರ್‌ಗಳು

ಐಫೋನ್‌ 14 ಅನ್ನು 54,900 ರೂ. ಬೆಲೆಗೆ ಬಿಡುಗಡೆ ಮಾಡಲಾಗಿತ್ತು. ಪ್ರಸ್ತುತ 6,500 ರೂ. ನೇರ ರಿಯಾಯಿತಿ ಪಡೆಯಬಹುದು. ಈ ಡಿಸ್ಕೌಂಟ್‌ನೊಂದಿಗೆ ನೀವು 48,000 ರೂ.ಗೆ ಈ ಐಫೋನ್ ಖರೀದಿಸಬಹುದು. ಈ ಆಫರ್‌ ಹೊರತಾಗಿಯೂ, ಬ್ಯಾಂಕ್ ಮತ್ತು ಕ್ರೆಡಿಟ್ ಕಾರ್ಡ್ ರಿಯಾಯಿತಿಯೊಂದಿಗೆ ಇನ್ನಷ್ಟು ಕಡಿಮೆ ಬೆಲೆಗೆ ಕೊಳ್ಳಬಹುದು. ಈ ರಿಯಾಯಿತಿಗಳೊಂದಿಗೆ, ಐಫೋನ್ 14 ಬೆಲೆ 47,400 ರೂ.ಗೆ ಇಳಿಕೆಯಾಗುತ್ತದೆ. ನೀವು HSBC ಕ್ರೆಡಿಟ್ ಕಾರ್ಡ್ ಹೊಂದಿದ್ದರೆ, ಶೇ.5 ರಷ್ಟು (2,000 ರೂ.) ಹೆಚ್ಚುವರಿ ರಿಯಾಯಿತಿ ಪಡೆಯಬಹುದು. ಈ ಮೂಲಕ ಈ ಫೋನನ್ನು ಕೇವಲ 46,400 ರೂ.ಗೆ ಮಾರಾಟ ಮಾಡಲಾಗುತ್ತಿದೆ. ಅಂದರೆ, ನೀವು 8,500 ರೂ. ಉಳಿತಾಯ ಮಾಡಬಹುದು.

ಐಫೋನ್ 14 ವೈಶಿಷ್ಟ್ಯಗಳು

ಡಿಸ್ಪ್ಲೇ ಹೇಗಿದೆ

ಐಫೋನ್ 14 ಫೋನ್‌ 6.1 ಇಂಚಿನ ಸೂಪರ್‌ ರೆಟಿನಾ XDR OLED ಡಿಸ್ಪ್ಲೇ ಹೊಂದಿದೆ. ಇದು 800 ನಿಟ್ಸ್‌ ಕನಿಷ್ಠ ಹಾಗೂ 1200 ನಿಟ್ಸ್‌ ಗರಿಷ್ಠ ಬ್ರೈಟ್‌ನೆಸ್‌ ಆಯ್ಕೆ ಪಡೆದಿದೆ. ಈ ಡಿಸ್ಪ್ಲೇಯು 1170 x 2532 ಪಿಕ್ಸೆಲ್‌ ರೆಸಲ್ಯೂಶನ್‌ ಸಾಮರ್ಥ್ಯ ಹೊಂದಿದೆ.

ಪ್ರೊಸೆಸರ್ ಯಾವುದು?

ಐಫೋನ್ 14 ಮೊಬೈಲ್ ಆಪಲ್‌ನ A15 ಬಯೋನಿಕ್ ಪ್ರೊಸೆಸರ್‌ ಹೊಂದಿದೆ. ಇದು iOS 16 ಜೊತೆಗೆ ಕೆಲಸ ಮಾಡುತ್ತದೆ. ಜೊತೆಗೆ iOS 16.4.1ಗೆ ಅಪ್‌ಗ್ರೇಡ್ ಸಹ ಮಾಡಬಹುದು. ಈ ಸ್ಮಾರ್ಟ್‌ಫೋನ್ 6GB RAM + 128GB ಸ್ಟೋರೇಜ್‌, 6GB RAM + 256GB ಸ್ಟೋರೇಜ್‌ ಮತ್ತು 6GB RAM + 512GB ಸ್ಟೋರೇಜ್‌ ಆಯ್ಕೆ ಹೊಂದಿದೆ.

ಡ್ಯುಯಲ್‌ ಕ್ಯಾಮೆರಾ ಸೆಟಪ್

ಐಫೋನ್ 14 ಸ್ಮಾರ್ಟ್‌ಫೋನ್ ಡ್ಯುಯಲ್‌ ಕ್ಯಾಮೆರಾ ಸೆಟಪ್ ಹೊಂದಿದೆ. ಈ ಫೋನಿನಲ್ಲಿ OIS ಜೊತೆಗೆ 12 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ ಹಾಗೂ 12 ಮೆಗಾಪಿಕ್ಸೆಲ್ ದ್ವಿತೀಯ ದ್ವಿತೀಯ ಕ್ಯಾಮೆರಾ ಹೊಂದಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, ಈ ಫೋನ್ 12 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಇದೆ. ಇದರಲ್ಲಿ ಹೆಚ್‌ಡಿಆರ್‌, ಸಿನಿಮಾಟಿಕ್ ಮೋಡ್, 4K ವಿಡಿಯೋಗಳನ್ನು ಸೆರೆಹಿಡಿಯಬಹುದು.

ಅದ್ಭುತ ಬ್ಯಾಟರಿ ಬ್ಯಾಕಪ್

ಐಫೋನ್ 14 ಫೋನ್‌ 3279mAh ಸಾಮರ್ಥ್ಯದ ಬ್ಯಾಟರಿ ಹೊಂದಿದೆ. ಇದನ್ನು ಚಾರ್ಜ್ ಮಾಡಲು, 15W ಹಾಗೂ 7.5W ವೇಗದ ಚಾರ್ಜಿಂಗ್‌ ಸೌಲಭ್ಯ ಒದಗಿಸಲಾಗಿದೆ. ನೀವು ಅರ್ಧ ಗಂಟೆಯಲ್ಲಿ ಶೇ.50 ರಷ್ಟು ಚಾರ್ಜಿಂಗ್‌ ಮಾಡಬಹುದು.

ಇತರೆ ವೈಶಿಷ್ಟ್ಯಗಳು

ಐಫೋನ್ 14 ಸ್ಮಾರ್ಟ್‌ಫೋನ್ ಸ್ಟೀರಿಯೋ ಸ್ಪೀಕರ್‌ ಸೌಲಭ್ಯ, 3.5 ಎಂಎಂ ಜ್ಯಾಕ್ ಹೊಂದಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ ಇದು 5G, ವೈ-ಫೈ, ಡ್ಯುಯಲ್ ಸಿಮ್, ಬ್ಲೂಟೂತ್, ಜಿಪಿಎಸ್ ಮತ್ತು ಲೈಟ್ನಿಂಗ್ ಚಾರ್ಜಿಂಗ್ ಪೋರ್ಟ್ ಸಹ ಒಳಗೊಂಡಿದೆ.

Best Mobiles in India

English summary
iPhone 14 Available With Rs 8,500 massive discount in Reliance Digital: check new price, offers, availability, specs and more details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+