iPhone 14 Plus ಮೇಲೆ ದೊಡ್ಡ ಕೊಡುಗೆ: 79,900 ರೂ.ನ ಫೋನ್ ಮತ್ತಷ್ಟು ಅಗ್ಗ!
ಐಫೋನ್ ಪ್ರಿಯರಿಗೆ ಹಬ್ಬ..! iPhone 14 Plus ಮತ್ತಷ್ಟು ಅಗ್ಗವಾಗಿದೆ. iPhone 14 ಗಿಂತ ಕಡಿಮೆ ಬೆಲೆಗೆ iPhone 14 Plus..! ನೀವು ಈ ಫೋನ್ ಮೇಲಿನ ಆಫರ್ ನೋಡಿದ್ರೆ, ಹೇಗಾದರೂ ಮಾಡಿ ಇದೇ ಫೋನ್ ಖರೀದಿಸುತ್ತೀರಿ. ಹೌದು, ಐಫೋನ್ ಪ್ರಿಯರಿಗೆ ಫ್ಲಿಪ್‌ಕಾರ್ಟ್ ಸಿಹಿ ಸುದ್ದಿಯೊಂದನ್ನು ನೀಡಿದೆ. ಫ್ಲಿಪ್‌ಕಾರ್ಟ್‌ನಲ್ಲಿ 'ಬ್ಯಾಕ್ ಟು ಕ್ಯಾಂಪಸ್ ಸೇಲ್-2024'ನಲ್ಲಿ (Flipkart Back to Campus Sale- 2024) ಐಫೋನ್ 14 ಪ್ಲಸ್ ಮೇಲೆ ಬಂಪರ್ ಆಫರ್ ಘೋಷಿಸಿದೆ. ವಿಶೇಷ ಪ್ರಚಾರದ ಭಾಗವಾಗಿ ಆಪಲ್ ಐಫೋನ್ 14 ಪ್ಲಸ್‌ಗೆ ಬ್ಯಾಂಕ್ ಡಿಸ್ಕೌಂಟ್ ಸಹ ಘೋಷಿಸಿದೆ.
ಇದು ಅಚ್ಚರಿ ಎನಿಸಿದರೂ ಸತ್ಯ. ದೇಶದ ಪ್ರಸಿದ್ಧ ಇ ಕಾಮರ್ಸ್ ಸಂಸ್ಥೆ ಫ್ಲಿಪ್‌ಕಾರ್ಟ್ ವಿಶೇಷ ಆಫರ್ ಸೇಲ್ ನಡೆಸುತ್ತಿದೆ. ಐಫೋನ್ 14 ಪ್ಲಸ್ ಮೇಲೆ 29% ಆಫರ್ ಘೋಸಿದೆ. ಅಂದರೆ, ಬರೋಬ್ಬರಿ 23,901 ರೂ. ರಿಯಾಯಿತಿ ನೀಡುತ್ತಿದೆ. ಅದರಂತೆ, 79,900 ಬೆಲೆಯ ಐಫೋನ್ 14 ಪ್ಲಸ್ ಇದೀಗ 55,000 ರೂ.ಗಿಂತ ಕಡಿಮೆ ಬೆಲೆಗೆ ಲಭ್ಯವಿದೆ. ಪ್ರಮುಖ ವಿಶೇಷವೆಂದರೆ, ಐಫೋನ್ 14 ಪ್ಲಸ್ ಐಫೋನ್ 14 ಗಿಂತ ಕಡಿಮೆ ಬೆಲೆಗೆ ನೀವು ಖರೀದಿಸಬಹುದು.

ಪ್ರಮುಖ ಅಂಶಗಳು
- ಫ್ಲಿಪ್‌ಕಾರ್ಟ್‌ನಲ್ಲಿ 'ಬ್ಯಾಕ್ ಟು ಕ್ಯಾಂಪಸ್ ಸೇಲ್-2024' ವಿಶೇಷ ಆಫರ್ ಸೇಲ್
- iPhone 14 Plus ಸ್ಮಾರ್ಟ್‌ಫೋನ್ ಮೇಲೆ ಭಾರೀ ರಿಯಾಯಿತಿ
- 79,900 ಬೆಲೆಯ iPhone 14 Plus 55,000 ರೂ.ಗಿಂತ ಕಡಿಮೆ ಬೆಲೆಗೆ ಲಭ್ಯವಿದೆ
- iPhone 14 ಗಿಂತ ಕಡಿಮೆ ಬೆಲೆಗೆ iPhone 14 Plus ಖರೀದಿಸುವ ಸುವರ್ಣಾವಕಾಶ
ಆರಂಭದಲ್ಲಿದ್ದ ಬೆಲೆ ಬರೋಬ್ಬರಿ 89,990 ರೂ.!
ಐಫೋನ್ 14 ಸರಣಿಯು 2022 ರಲ್ಲಿ ಭಾರತದಲ್ಲಿ ಬಿಡುಗಡೆಯಾಯಿತು. ಲಾಂಚ್ ವೇಳೆ iPhone 14 Plus ಸ್ಮಾರ್ಟ್‌ಫೋನ್‌ನ ಆರಂಭಿಕ ಬೆಲೆ 89,990 ರೂ. ಇತ್ತು. ಪ್ರಸ್ತುತ, ಈ ಫೋನ್ ಅನ್ನು ಜನಪ್ರಿಯ ಇ-ಕಾಮರ್ಸ್ ಪ್ಲಾಟ್‌ಫಾರ್ಮ್ ಫ್ಲಿಪ್‌ಕಾರ್ಟ್‌ನಲ್ಲಿ ರಿಯಾಯಿತಿ ದರದಲ್ಲಿ ಖರೀದಿಸಬಹುದು. ಇದು 128GB, 256GB ಮತ್ತು 512GB ಸ್ಟೋರೇಜ್ ರೂಪಾಂತರಗಳಲ್ಲಿ ಲಭ್ಯವಿದೆ. ಇದು Apple A15 ಬಯೋನಿಕ್ ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸುತ್ತದೆ.
ಮೂರು ವೇರಿಯಂಟ್ ಮತ್ತು ಆರು ಬಣ್ಣಗಳಲ್ಲಿ ಲಭ್ಯ
ಐಫೋನ್ 14 ಪ್ಲಸ್ ಮೊಬೈಲ್ ಪ್ರಸ್ತುತ ಫ್ಲಿಪ್‌ಕಾರ್ಟ್‌ನಲ್ಲಿ 128GB ಸ್ಟೋರೇಜ್ ವೇರಿಯಂಟ್ ಬೆಲೆ 55,999 ರೂ. ಇದೆ. ಅದೇ 256GB ರೂಪಾಂತರದ ಬೆಲೆ 65,999 ರೂ. ಮತ್ತು 512GB ರೂಪಾಂತರದ ಬೆಲೆ 85,999 ರೂ. ಇದೆ. ಈ ಫೋನ್ ಆರು ಬಣ್ಣಗಳಲ್ಲಿ ಲಭ್ಯವಿದೆ. ನೀಲಿ, ಕೆಂಪು, ಮಿಡ್ನೈಟ್, ನೇರಳೆ, ಸ್ಟಾರ್‌ಲೈಟ್ ಮತ್ತು ಹಳದಿ ಬಣ್ಣಗಳಲ್ಲಿ ಲಭ್ಯವಿದೆ. ಈ ಫೋನ್‌ನ ಪ್ರತಿಯೊಂದು ಮಾದರಿಯೂ ಎಲ್ಲಾ ಬಣ್ಣಗಳಲ್ಲಿ ಖರೀದಿಗೆ ಲಭ್ಯವಿಲ್ಲ.
4,000 + 1,000 + 750 ರೂ. ಭಾರೀ ಡಿಸ್ಕೌಂಟ್
ಆಪಲ್ ಕಂಪನಿ ಈ ಫೋನ್ ಮೇಲೆ ಬ್ಯಾಂಕ್ ಆಫರ್ ಕೂಡ ಘೋಷಿಸಿದೆ. HDFC ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ EMI ವಹಿವಾಟುಗಳ ಮೇಲೆ 4,000 ರೂ. ಡಿಸ್ಕೌಂಟ್ ಪಡೆಯಬಹುದು. ಬ್ಯಾಂಕ್ ಆಫ್ ಬರೋಡಾ ಕಾರ್ಡ್ ಸಹ ಕೊಡುಗೆಯನ್ನು ಹೊಂದಿದೆ. BOB ಕಾರ್ಡ್‌ಗಳ ವಹಿವಾಟುಗಳಲ್ಲಿ 3,000 ರೂ. ನಿಮ್ಮದಾಗಿಸಿಕೊಳ್ಳಬಹುದು. HDFC ನೆಟ್ ಬ್ಯಾಂಕಿಂಗ್ ಮೂಲಕ 1,000 ರಿಯಾಯಿತಿ ಇದೆ. ಜೊತೆಗೆ, ಫ್ಲಿಪ್‌ಕಾರ್ಟ್ UPI ನಲ್ಲಿ 750 ರೂ. ಡಿಸ್ಕೌಂಟ್ ಕೂಡ ಪಡೆಯಬಹುದು.

iPhone 14 Plusನ ವಿಶೇಷತೆಗಳು
ಐಫೋನ್ 14 ಪ್ಲಸ್ ದೊಡ್ಡ ಡಿಸ್‌ಪ್ಲೇ ಮತ್ತು ಬ್ಯಾಟರಿ ಬ್ಯಾಕಪ್ ಹೊರತುಪಡಿಸಿ ಐಫೋನ್ 14 ರೀತಿಯೇ ಫೀಚರ್ಸ್‌ಗಳನ್ನು ಒಳಗೊಂಡಿದೆ. ಈ ಫೋನ್ 6.7-ಇಂಚಿನ Super Retina XDR OLED ಡಿಸ್ಪ್ಲೇ ಜೊತೆಗೆ 1284*2778 ಪಿಕ್ಸೆಲ್‌ಗಳ ರೆಸಲ್ಯೂಶನ್‌ನೊಂದಿಗೆ ಲಭ್ಯವಿದೆ. ಇದು 1200 ನಿಟ್‌ಗಳ ಗರಿಷ್ಠ ಬ್ರೈಟ್‌ನೆಸ್ ಅನ್ನು ಹೊಂದಿದೆ. ಇದು A15 ಬಯೋನಿಕ್ SoC ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸುತ್ತದೆ. ಹೆಕ್ಸಾಕೋರ್ CPU ಮತ್ತು Apple GPU ಕೋರ್ ಗ್ರಾಫಿಕ್ಸ್‌ನೊಂದಿಗೆ ಸಂಯೋಜಿಸಲಾಗಿದೆ.
ಕ್ಯಾಮೆರಾ ಬಗ್ಗೆ ಎರಡನೇ ಮಾತಿಲ್ಲ
ಐಫೋನ್ 14 ಪ್ಲಸ್ ಮಾದರಿಯು ಹಿಂಭಾಗದಲ್ಲಿ ಡ್ಯುಯಲ್ 12MP ಕ್ಯಾಮೆರಾಗಳನ್ನು ಹೊಂದಿದೆ. ಇದು OIS (ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್) ವೈಶಿಷ್ಟ್ಯದೊಂದಿಗೆ 12MP ಮತ್ತು 12MP ಅಲ್ಟ್ರಾವೈಡ್ ಲೆನ್ಸ್ ಅನ್ನು ಹೊಂದಿದೆ. ಇದು ಡ್ಯುಯಲ್ LED ಫ್ಲ್ಯಾಶ್ ಲೈಟ್‌ನೊಂದಿಗೆ ಬರುತ್ತದೆ. ಇದು 12MP ಸೆಲ್ಫಿ ಕ್ಯಾಮೆರಾವನ್ನು ಸಹ ಹೊಂದಿದೆ.

ಒಂದೇ ಚಾರ್ಜ್‌ನಲ್ಲಿ 26 ಗಂಟೆ ಬ್ಯಾಟರಿ
ಈ ಐಫೋನ್ 14 ಪ್ಲಸ್ ಸ್ಮಾರ್ಟ್‌ಫೋನ್ 15W ಚಾರ್ಜಿಂಗ್ ಬೆಂಬಲದೊಂದಿಗೆ 4352mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಜೊತೆಗೆ, ಈ ಫೋನ್ IP68 ಧೂಳು ಮತ್ತು ನೀರಿನ ಪ್ರತಿರೋಧದೊಂದಿಗೆ ಬರುತ್ತದೆ. ಒಂದೇ ಚಾರ್ಜ್‌ನಲ್ಲಿ 26 ಗಂಟೆಗಳ ಬ್ಯಾಟರಿ ಸಮಯವನ್ನು Apple ದೃಢಪಡಿಸಿದೆ. ಇದಲ್ಲದೇ, ಈ ಫೋನ್ ಸ್ಟೀರಿಯೋ ಸ್ಪೀಕರ್‌ಗಳನ್ನು ಹೊಂದಿದೆ.
iPhone 15 ಮೇಲೆ ಶೇ.14 ರಷ್ಟು ಡಿಸ್ಕೌಂಟ್
ಈ iPhone 15 ಕಳೆದ ವರ್ಷ ಬಿಡುಗಡೆಯಾಯಿತು. ಬಿಡುಗಡೆಯ ಸಮಯದಲ್ಲಿ 128GB ಸ್ಟೋರೇಜ್ ವೇರಿಯಂಟ್‌ನ ಬೆಲೆ 79,900 ರೂ. ಇತ್ತು. ಪ್ರಸ್ತುತ ಶೇ.14 ರಷ್ಟು ರಿಯಾಯಿತಿಯಲ್ಲಿ ಲಭ್ಯವಿದೆ. ಫ್ಲಿಪ್‌ಕಾರ್ಟ್‌ನಲ್ಲಿ iPhone 15 ಬೆಲೆ 67,999 ರೂ. ಇದೆ. ಹೆಚ್ಚುವರಿಯಾಗಿ, ಆಯ್ದ ಬ್ಯಾಂಕ್ ಕಾರ್ಡ್‌ಗಳ ಮೂಲಕ ಮಾಡಿದ ಖರೀದಿಗಳ ಮೇಲೆ ನೀವು 1,000 ರೂ. ಹೆಚ್ಚುವರಿ ಡಿಸ್ಕೌಂಟ್ ಪಡೆಯಬಹುದು. ಇನ್ನೂ, ಬ್ಯಾಂಕ್ ಕಾರ್ಡ್ ಮೂಲಕ ಶೇ. 5 ರಷ್ಟು ಆಫರ್ ಕೂಡ ಲಭ್ಯವಿದೆ.

iPhone 15ನ ವಿಶೇಷತೆಗಳು
128GB, 256GB, 512GB ಇಂಟರ್ನಲ್ ಸ್ಟೋರೇಜ್ ರೂಪಾಂತರಗಳಲ್ಲಿ ಲಭ್ಯವಿದೆ. iPhone 15 ಮೊಬೈಲ್ 6.1-ಇಂಚಿನ ಸೂಪರ್ ರೆಟಿನಾ XDR ಡಿಸ್‌ಪ್ಲೇಯನ್ನು ಹೊಂದಿದೆ. 2000 nits ಗರಿಷ್ಠ ಬ್ರೈಟ್‌ನೆಸ್‌ನೊಂದಿಗೆ ಲಭ್ಯವಿದೆ. ಡಿಸ್ಪ್ಲೇ ರಕ್ಷಣೆಗೆ ಸೆರಾಮಿಕ್ ಗ್ಲಾಸ್ ಅನ್ನು ಹೊಂದಿದೆ. ಮತ್ತು ಡೈನಾಮಿಕ್ ದ್ವೀಪದ ವೈಶಿಷ್ಟ್ಯವನ್ನು ಒಳಗೊಂಡಿದೆ. ಈ ಫೋನ್ A16 ಬಯೋನಿಕ್ ಚಿಪ್‌ನಿಂದ ಚಾಲಿತವಾಗಿದೆ. ಇದು ಗುಲಾಬಿ, ಹಸಿರು, ನೀಲಿ, ಕಪ್ಪು ಮತ್ತು ಹಳದಿ ಬಣ್ಣಗಳಲ್ಲಿ ಖರೀದಿಗೆ ಲಭ್ಯವಿದೆ.
ಒಟ್ನಲ್ಲಿ, ಪ್ರಸ್ತುತ ಇರುವ ಮೊಬೈಲ್ ಬಿಟ್ಟು ಐಫೋನ್ ಖರೀದಿಸಲು ಬಯಸುವ ಗ್ರಾಹಕರಿಗೆ ಇದು ಸುವರ್ಣಾವಕಾಶ. ಇಷ್ಟು ಕಡಿಮೆ ಬೆಲೆಯಲ್ಲಿ ಇದೇ ಮೊದಲ ಬಾರಿಗೆ iPhone 14 Plus ಸ್ಮಾರ್ಟ್‌ಫೋನ್ ಖರೀದಿಗೆ ಲಭ್ಯವಾಗುತ್ತಿದೆ. ನಿಮ್ಮ ಜೇಬಿನ ಹೊರೆ ಕಡಿಮೆ ಮಾಡಲು ಇದು ಪರ್ಫೆಕ್ಟ್ ಟೈಮ್. ಹಾಗಿದ್ರೆ, ಇನ್ನೇಕೆ ತಡ.. ನೀವು ಐಫೋನ್ ಕೊಳ್ಳುವ ಬಯಕೆ ಹೊಂದಿದ್ದರೆ ಈಗಲೇ ಈ ಮೊಬೈಲ್ ಅನ್ನು ಬುಕ್ ಮಾಡಿ.


Click it and Unblock the Notifications








