Home
Deal of the day

iPhone 14 Plus ಬೆಲೆ ದಿಢೀರ್‌ ಕುಸಿತ! ಬರೋಬ್ಬರಿ 46,900 ಅಗ್ಗ.. 53,350 ಆಫರ್!

ನಿಮಗೆ ಐಫೋನ್ ಖರೀದಿಸುವ ಬಯಕೆ ಹೊಂದಿದ್ದೀರಾ? ಇಲ್ಲಿದೆ ನಿಮಗೆ ಒಳ್ಳೆಯ ಅವಕಾಶ. ಇದೀಗ ಫ್ಲಿಪ್‌ಕಾರ್ಟ್‌ನಲ್ಲಿ 1,19,900 ರೂ. ಬೆಲೆಯ ಐಫೋನ್ 14 ಪ್ಲಸ್ (iPhone 14 Plus) 72,999 ರೂ.ಗೆ ಲಭ್ಯವಿದೆ. ಜೊತೆಗೆ, ಎಕ್ಸ್‌ಚೇಂಜ್ ಆಫರ್‌, ಬ್ಯಾಂಕ್ ಡಿಸ್ಕೌಂಟ್‌ ಮತ್ತು ಹೆಚ್ಚುವರಿ ರಿಯಾಯಿತಿಗಳನ್ನು ಸಹ ಪಡೆಯಬಹುದು. ಈ ಫೋನನ್ನು 128GB, 256GB ಮತ್ತು 512GB ಸ್ಟೋರೇಜ್ ರೂಪಾಂತರದಲ್ಲಿ ಮಾರಾಟ ಮಾಡಲಾಗುತ್ತಿದೆ. ಈ ಫೋನಿನ ಬೆಲೆ, ಲಭ್ಯತೆ ಮತ್ತು ಆಫರ್‌ಗಳನ್ನು ತಿಳಿಯೋಣ ಬನ್ನಿ.

ಪ್ರಸಿದ್ಧ ಟೆಕ್ ದೈತ್ಯ ಆಪಲ್ 2022ರ ಸೆಪ್ಟೆಂಬರ್‌ನಲ್ಲಿ ಐಫೋನ್ 14 ಪ್ಲಸ್ ಅನ್ನು ಬಿಡುಗಡೆ ಮಾಡಿತ್ತು. ಬಿಡುಗಡೆಯ ಸಮಯದಲ್ಲಿ ಈ ಫೋನಿನ 512GB ಸ್ಟೋರೇಜ್ ರೂಪಾಂತರದ ಬೆಲೆ 1,19,900 ರೂ. ಆಗಿತ್ತು. ಪ್ರಸ್ತುತ, ಈ ಸ್ಮಾರ್ಟ್‌ಫೋನ್ ಅನ್ನು ಜನಪ್ರಿಯ ಇ ಕಾಮರ್ಸ್ ಕಂಪನಿ ಫ್ಲಿಪ್‌ಕಾರ್ಟ್‌ನಲ್ಲಿ ಭಾರಿ ರಿಯಾಯಿತಿಯಲ್ಲಿ ಖರೀದಿಸಬಹುದು. ಇದರ ಹೊರತಾಗಿ, ನೀವು ಬ್ಯಾಂಕ್ ಮತ್ತು ಇತರ ಕೊಡುಗೆಗಳ ಮೂಲಕ ಹೆಚ್ಚು ರಿಯಾಯಿತಿ ಬೆಲೆಯಲ್ಲಿ ಇದನ್ನು ಕೊಳ್ಳಬಹುದು.

iPhone 14 Plus ಬೆಲೆ ಕುಸಿತ! ಬರೋಬ್ಬರಿ 46,900 ಅಗ್ಗ.. 53,350 ಆಫರ್!

ಐಫೋನ್ 14 ಪ್ಲಸ್ ಫೋನಿನ ಬೆಲೆ ಮತ್ತು ಆಫರ್‌ಗಳು

128GB ಸ್ಟೋರೇಜ್ ಬೆಲೆ 58,999 ರೂ.
256GB ಸ್ಟೋರೇಜ್ ಬೆಲೆ 69,999 ರೂ.
512GB ಸ್ಟೋರೇಜ್ ಬೆಲೆ 72,999 ರೂ.

ಫ್ಲಿಪ್‌ಕಾರ್ಟ್‌ನಲ್ಲಿ ಐಫೋನ್ 14 ಪ್ಲಸ್ ಫೋನಿನ 128GB ಸ್ಟೋರೇಜ್ ರೂಪಾಂತರದ ಬೆಲೆ 58,999 ರೂ. ಇದೆ. 256GB ರೂಪಾಂತರದ ಬೆಲೆ 69,999 ರೂ ಆಗಿದೆ. 512GB ಸ್ಟೋರೇಜ್ ರೂಪಾಂತರದ ಬೆಲೆ 72,999 ರೂ.ಗೆ ಮಾರಾಟವಾಗುತ್ತಿದೆ. ಬ್ಯಾಂಕ್ ಆಫರ್‌ಗಳೊಂದಿಗೆ 1,500 ರೂ. ಡಿಸ್ಕೌಂಟ್‌ ಪಡೆಯಬಹುದು. ಯುಪಿಐ (UPI) ಪಾವತಿ ಮೇಲೆ 1,000 ರೂ. ರಿಯಾಯಿತಿ ಲಭ್ಯವಿದೆ. ಫ್ಲಿಪ್‌ಕಾರ್ಟ್ ಆಕ್ಸೆಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಮೇಲೆ ಶೇ.5 ರಷ್ಟು ರಿಯಾಯಿತಿಯನ್ನು ಪಡೆಯಬಹುದು.

ಐಫೋನ್ 14 ಪ್ಲಸ್ ಫೋನಿನ 128GB ಸ್ಟೋರೇಜ್ ರೂಪಾಂತರವು ನೀಲಿ ಮತ್ತು ಕಪ್ಪು ಬಣ್ಣಗಳಲ್ಲಿ ಲಭ್ಯವಿದೆ. ಅದೇ 256GB ಸ್ಟೋರೇಜ್ ರೂಪಾಂತರವು ನೀಲಿ ಬಣ್ಣದಲ್ಲಿ ಮಾತ್ರ ಲಭ್ಯವಿದೆ. 512GB ಸ್ಟೋರೇಜ್‌ ರೂಪಾಂತರವು ಕೆಂಪು, ಮಿಡ್‌ನೈಟ್, ನೇರಳೆ ಮತ್ತು ಹಳದಿ ಬಣ್ಣಗಳಲ್ಲಿ ಲಭ್ಯವಿದೆ. ಈ ರೂಪಾಂತರಗಳನ್ನು ಎಕ್ಸ್‌ಚೇಂಜ್‌ ಮಾಡಿಕೊಳ್ಳುವ ಮೂಲಕ 53,350 ರೂ.ಗಳ ವರೆಗೆ ಲಾಭವನ್ನು ಪಡೆಯಬಹುದು.

iPhone 14 Plus ಬೆಲೆ ಕುಸಿತ! ಬರೋಬ್ಬರಿ 46,900 ಅಗ್ಗ.. 53,350 ಆಫರ್!

ಐಫೋನ್ 14 ಪ್ಲಸ್ ಫೋನಿನ ವೈಶಿಷ್ಟ್ಯಗಳು

ಡಿಸ್ಲ್ಪೇ: ಐಫೋನ್ 14 ಪ್ಲಸ್ ಫೋನ್ ದೊಡ್ಡ ಡಿಸ್ಲ್ಪೇ ಮತ್ತು ಬ್ಯಾಟರಿ ಬ್ಯಾಕಪ್ ಹೊರತುಪಡಿಸಿ ಐಫೋನ್ 14 ರೀತಿಯೇ ಫೀಚರ್ಸ್‌ಗಳನ್ನು ಒಳಗೊಂಡಿದೆ. ಈ ಫೋನ್ 6.7 ಇಂಚಿನ Super Retina XDR OLED ಡಿಸ್ಪ್ಲೇ ಹೊಂದಿದೆ. ಜೊತೆಗೆ, 1284 × 2778 ಪಿಕ್ಸೆಲ್‌ಗಳ ರೆಸಲ್ಯೂಶನ್‌ನೊಂದಿಗೆ ಲಭ್ಯವಿದೆ. ಇದು 1200 ನಿಟ್‌ಗಳ ಗರಿಷ್ಠ ಬ್ರೈಟ್‌ನೆಸ್‌ ಅನ್ನು ಹೊಂದಿದೆ.

ಪ್ರೊಸೆಸರ್‌: ಐಫೋನ್ 14 ಪ್ಲಸ್ ಮೊಬೈಲ್ A15 ಬಯೋನಿಕ್ SoC ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸುತ್ತದೆ. ಹೆಕ್ಸಾಕೋರ್ CPU ಮತ್ತು Apple GPU ಕೋರ್ ಗ್ರಾಫಿಕ್ಸ್‌ನೊಂದಿಗೆ ಸಂಯೋಜಿಸಲಾಗಿದೆ.

ಕ್ಯಾಮೆರಾ: ಐಫೋನ್ 14 ಪ್ಲಸ್ ಸ್ಮಾರ್ಟ್‌ಫೋನ್ ಹಿಂಭಾಗದಲ್ಲಿ ಡ್ಯುಯಲ್ 12 ಮೆಗಾಪಿಕ್ಸೆಲ್ ಕ್ಯಾಮೆರಾಗಳನ್ನು ಹೊಂದಿದೆ. ಇದು OIS (ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್) ವೈಶಿಷ್ಟ್ಯದೊಂದಿಗೆ 12 ಮೆಗಾಪಿಕ್ಸೆಲ್ ಮತ್ತು 12 ಮೆಗಾಪಿಕ್ಸೆಲ್ ಅಲ್ಟ್ರಾವೈಡ್ ಲೆನ್ಸ್ ಅನ್ನು ಹೊಂದಿದೆ. ಇದು ಡ್ಯುಯಲ್ LED ಫ್ಲ್ಯಾಶ್ ಲೈಟ್‌ನೊಂದಿಗೆ ಬರುತ್ತದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, ಇದು 12 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾವನ್ನು ಹೊಂದಿದೆ.

ಬ್ಯಾಟರಿ: ಐಫೋನ್ 14 ಪ್ಲಸ್ ಮೊಬೈಲ್ 4352mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು 15W ಚಾರ್ಜಿಂಗ್ ಬೆಂಬಲದೊಂದಿಗೆ ಬರುತ್ತದೆ. ಒಂದೇ ಚಾರ್ಜ್‌ನಲ್ಲಿ 26 ಗಂಟೆಗಳ ಬ್ಯಾಟರಿ ಸಮಯವನ್ನು ಆಪಲ್‌ ದೃಢಪಡಿಸಿದೆ. ಈ ಫೋನ್ ಧೂಳು ಮತ್ತು ನೀರಿನ ಪ್ರತಿರೋಧಕ್ಕಾಗಿ IP68 ರೇಟಿಂಗ್ ಪಡೆದಿದೆ. ಜೊತೆಗೆ, ಈ ಫೋನ್ ಸ್ಟೀರಿಯೋ ಸ್ಪೀಕರ್‌ಗಳನ್ನು ಹೊಂದಿದೆ.

Best Mobiles in India

English summary
iPhone 14 plus Smartphone Receive Huge Price Cut in India: Check Price, Offer and More
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+