ಐಫೋನ್ 15 ಬೆಲೆಯಲ್ಲಿ ಇಳಿಕೆ: ಅಮೆಜಾನ್‌ನಲ್ಲಿ 24,950 ರೂ.ಗೆ ಖರೀದಿಸಲು ಅವಕಾಶ!
2023 ರಲ್ಲಿ ಬಿಡುಗಡೆಯಾದಾಗಿನಿಂದ ಆಪಲ್‌ನ ಜನಪ್ರಿಯ ಐಫೋನ್ 15 ಅಮೆಜಾನ್‌ನಲ್ಲಿ ಆಗಾಗ್ಗೆ ರಿಯಾಯಿತಿ ದರಗಳಲ್ಲಿ ಲಭ್ಯವಾಗುತ್ತಿದೆ. ಈ ಹಿಂದೆ ನೀಡಲಾದ ಸಾಮಾನ್ಯ ಕೊಡುಗೆಗಳಿಂದ ಕೆಲ ಗ್ರಾಹಕರು ಅಷ್ಟೇನೂ ಪ್ರಭಾವಿತರಾಗದಿದ್ದರೂ, ಪ್ರಸ್ತುತ ಬೆಲೆಯಲ್ಲಿನ ಕಡಿತವು ಗಮನಾರ್ಹವಾಗಿದೆ ಎಂದು ಹೇಳಬಹುದು. ಇತ್ತೀಚೆಗೆ ಐಫೋನ್ 16 ಸರಣಿಯು ಮಾರುಕಟ್ಟೆಗೆ ಬಂದ ನಂತರ, ಅಮೆಜಾನ್ ಐಫೋನ್ 15 (128 ಜಿಬಿ, ಕಪ್ಪು ಬಣ್ಣ) ಬೆಲೆಯನ್ನು ಮತ್ತಷ್ಟು ಕಡಿಮೆ ಮಾಡಿದೆ. ಈ ಹೊಸ ರಿಯಾಯಿತಿಯು ಆಸಕ್ತ ಖರೀದಿದಾರರಿಗೆ ಉತ್ತಮ ಗುಣಮಟ್ಟದ ಆಪಲ್ ಸ್ಮಾರ್ಟ್‌ಫೋನ್ ಅನ್ನು ಕಡಿಮೆ ಬೆಲೆಯಲ್ಲಿ ಪಡೆಯಲು ಒಂದು ಸುವರ್ಣಾವಕಾಶವಾಗಿದೆ. ಈ ಕುರಿತಂತೆ ಸಂಪೂರ್ಣ ಮಾಹಿತಿಯನ್ನು ಮುಂದೆ ಓದಿ ತಿಳಿಯೋಣ ಬನ್ನಿ.
ಪ್ರಸ್ತುತ, ಅಮೆಜಾನ್ ಇಂಡಿಯಾದಲ್ಲಿ ಆಪಲ್ ಐಫೋನ್ 15 (128 ಜಿಬಿ, ಕಪ್ಪು) ರೂ. 69,900 ರ ಚಿಲ್ಲರೆ ಬೆಲೆಯಲ್ಲಿ ಲಭ್ಯವಿದೆ. ಆದರೆ, ಅಮೆಜಾನ್ ನೀಡುತ್ತಿರುವ ವಿಶೇಷ ಪ್ರಚಾರದ ಭಾಗವಾಗಿ, ಇದರ ಬೆಲೆಯಲ್ಲಿ 16% ರಷ್ಟು ರಿಯಾಯಿತಿ ದೊರೆಯುತ್ತಿದ್ದು, ಕೇವಲ ರೂ. 58,999 ಕ್ಕೆ ಖರೀದಿಸಬಹುದು. ಇದರೊಂದಿಗೆ, ಇನ್ನಷ್ಟು ಉಳಿತಾಯ ಮಾಡಲು ಬಯಸುವ ಗ್ರಾಹಕರು ವಿನಿಮಯ ಕೊಡುಗೆಯ ಲಾಭವನ್ನು ಪಡೆಯಬಹುದು. ಉದಾಹರಣೆಗೆ, ಉತ್ತಮ ಸ್ಥಿತಿಯಲ್ಲಿರುವ ಐಫೋನ್ 14 (512 ಜಿಬಿ) ಅನ್ನು ವಿನಿಮಯ ಮಾಡಿಕೊಂಡರೆ, ಗರಿಷ್ಠ ರೂ. 31,100 ವರೆಗೆ ರಿಯಾಯಿತಿ ಪಡೆಯಬಹುದು. ಇದರಿಂದಾಗಿ ಐಫೋನ್ 15 ರ ಪರಿಣಾಮಕಾರಿ ಬೆಲೆ ಕೇವಲ ರೂ. 27,899 ಆಗಿರುತ್ತದೆ. ಅಷ್ಟೇ ಅಲ್ಲದೆ, ಅಮೆಜಾನ್ ಪೇ ಐಸಿಐಸಿಐ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಹೊಂದಿರುವವರು ಹೆಚ್ಚುವರಿಯಾಗಿ ರೂ. 2,949 ರ ರಿಯಾಯಿತಿಯನ್ನು ಪಡೆಯಬಹುದು, ಇದು ಅಂತಿಮ ಬೆಲೆಯನ್ನು ಕೇವಲ ರೂ. 24,950 ಕ್ಕೆ ಇಳಿಸುತ್ತದೆ.

ಐಫೋನ್ 15 ವೈಶಿಷ್ಟ್ಯಗಳು
ಐಫೋನ್ 15 ಹಲವು ಅತ್ಯಾಧುನಿಕ ವೈಶಿಷ್ಟ್ಯಗಳನ್ನು ಒಳಗೊಂಡಿದೆ ಮತ್ತು ಗುಲಾಬಿ, ಹಳದಿ, ಹಸಿರು, ನೀಲಿ ಮತ್ತು ಕಪ್ಪು ಬಣ್ಣಗಳಲ್ಲಿ ಲಭ್ಯವಿದೆ. ಈ ಫೋನಿನಲ್ಲಿ ಆಪಲ್ ತನ್ನ ಹಿಂದಿನ ವಿನ್ಯಾಸವನ್ನು ಉಳಿಸಿಕೊಂಡಿದ್ದರೂ, ಸಾಂಪ್ರದಾಯಿಕ ನಾಚ್‌ನ ಬದಲಿಗೆ ಡೈನಾಮಿಕ್ ಐಲ್ಯಾಂಡ್ ನಾಚ್ ಅನ್ನು ಈ ಮಾದರಿಯಲ್ಲಿ ಪರಿಚಯಿಸಿದೆ. ಐಫೋನ್ 15 ಡಿಸ್‌ಪ್ಲೇ ಕುರಿತು ನೋಡುವುದಾದರೆ, ಇದು 6.1 ಇಂಚಿನ ಫುಲ್ ಎಚ್‌ಡಿ ಪ್ಲಸ್ ಡಿಸ್ಪ್ಲೇ ಹೊಂದಿದೆ. ಇದನ್ನು ಸೂಪರ್ ರೆಟಿನಾ XDR OLED ಪ್ಯಾನೆಲ್‌ನಲ್ಲಿ ನಿರ್ಮಿಸಲಾಗಿದೆ. ಇದು 1179 x 2556 ಪಿಕ್ಸೆಲ್ ರೆಸಲ್ಯೂಶನ್‌ನೊಂದಿಗೆ ಬರುತ್ತದೆ. ಈ ಡಿಸ್ಪ್ಲೇಯು 2,000 ನಿಟ್ಸ್ ಗರಿಷ್ಠ ಬ್ರೈಟ್ನೆಸ್, ಡಾಲ್ಬಿ ವಿಷನ್ ಮತ್ತು HDR10 ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ. ಇದು ಸೆರಾಮಿಕ್ ಶೀಲ್ಡ್ ಗಾಜಿನ ರಕ್ಷಣೆಯನ್ನು ಹೊಂದಿದೆ.
ಪ್ರೊಸೆಸರ್ ವಿಭಾಗದಲ್ಲಿ, ಐಫೋನ್ 15 ಫೋನ್ ಆಪಲ್‌ನ A16 ಬಯೋನಿಕ್ ಪ್ರೊಸೆಸರ್ ಹೊಂದಿದೆ. ಇದನ್ನು 4 ನ್ಯಾನೊಮೀಟರ್ ಫ್ಯಾಬ್ರಿಕೇಶನ್‌ಗಳ ಆಧಾರದ ಮೇಲೆ ತಯಾರಿಸಲಾಗಿದೆ. ಇದಕ್ಕೆ ಪೂರಕವಾಗಿ ಈ ಐಫೋನ್‌ನ iOS 17 ಆಪರೇಟಿಂಗ್ ಸಿಸ್ಟಮ್ ಬೆಂಬಲ ಇದೆ. ಪ್ರಸ್ತುತ, iOS 18ರ ನವೀಕರಣವನ್ನು ಹೊಂದಿರುವ ಈ ಫೋನ್ 128GB, 256GB ಮತ್ತು 512GB ಸ್ಟೋರೇಜ್ ಮಾದರಿಗಳಲ್ಲಿದೆ. ಡ್ಯುಯಲ್ ಕ್ಯಾಮೆರಾ ಸೆಟಪ್ ಹೊಂದಿರುವ ಈ ಫೋನಿನಲ್ಲಿ 48 ಮೆಗಾಪಿಕ್ಸಲ್ ಮುಖ್ಯ ಕ್ಯಾಮೆರಾ ಲಭ್ಯವಿದೆ. ಇದರೊಂದಿಗೆ ಎರಡನೇ ಕ್ಯಾಮೆರಾವು 12 ಮೆಗಾಪಿಕ್ಸೆಲ್ ಅಲ್ಟ್ರಾ ವೈಡ್ ಆಂಗಲ್ ಲೆನ್ಸ್ ಹೊಂದಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, ಐಫೋನ್ 15 ಫೋನಿನಲ್ಲಿ 12 ಮೆಗಾಪಿಕ್ಸೆಲ್ ಸೆಲ್ಫಿ ಫ್ರಂಟ್ ಕ್ಯಾಮೆರಾವನ್ನು ಅಳವಡಿಸಲಾಗಿದೆ.
ಈ ಐಫೋನ್ 15 ಹಿಂದಿನ ಫೋನಿಗಿಂತ ಶಕ್ತಿಶಾಲಿ ಬ್ಯಾಟರಿ ಒಳಗೊಂಡಿದೆ. ಇದು 3,349mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಸಾಮಾನ್ಯ ಬಳಕೆಯಲ್ಲಿ ಇದು ಸುಮಾರು 9 ಗಂಟೆಗಳಿಗಿಂತ ಹೆಚ್ಚು ಕಾಲ ಬಾಳಿಕೆ ಬರುತ್ತದೆ .ಈ ಫೋನ್ ವೇಗದ ಚಾರ್ಜಿಂಗ್ ತಂತ್ರಜ್ಞಾನ ಮತ್ತು ವೈರ್ಲೆಸ್ ಚಾರ್ಜಿಂಗ್ ತಂತ್ರಜ್ಞಾನವನ್ನು ಹೊಂದಿದೆ. ಕಂಪನಿಯು ಇದನ್ನು 27W ವೈರ್ಡ್ ಮತ್ತು 18W ವೈರ್‌ಲೆಸ್ ಚಾರ್ಜಿಂಗ್‌ನೊಂದಿಗೆ ಪರಿಚಯಿಸಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ, ಇದು 5G ಸಪೋರ್ಟ್, ವೈರ್‌ಲೆಸ್ ಸೌಲಭ್ಯ ಮತ್ತು ರೋಡ್‌ಸೈಡ್ ಅಸಿಸ್ಟೆಂಟ್ ವೈಯಾ ಸೆಟಲೈಟ್ ಆಯ್ಕೆ ಲಭ್ಯವಿದೆ. ಇದರೊಂದಿಗೆ ಫೇಸ್‌ಮ್ ಕ್ಯಾಮೆರಾ ಮತ್ತು ಫೇಸ್‌ಐಡಿ ಸೌಲಭ್ಯವನ್ನು ಒಳಗೊಂಡಿದೆ. ಒಟ್ಟಾರೆಯಾಗಿ, ಐಫೋನ್ 15 ಈಗ ಅಮೆಜಾನ್‌ನಲ್ಲಿ ಲಭ್ಯವಿರುವ ರಿಯಾಯಿತಿ ದರಗಳು ಮತ್ತು ವಿನಿಮಯ ಕೊಡುಗೆಗಳೊಂದಿಗೆ ಅತ್ಯುತ್ತಮ ಆಯ್ಕೆಯಾಗಿದೆ.


Click it and Unblock the Notifications



