Home
Deal of the day

iPhone 15 Pro Max ಬೆಲೆ ಕುಸಿತ: 21,910 ರೂ. ರಿಯಾಯಿತಿ.. ಬೆಲೆ ಎಷ್ಟು?

iPhone 15 Pro Max Price Drop: ಹೊಸ ಐಫೋನ್ ಖರೀದಿಸುವ ಗ್ರಾಹಕರಿಗೆ ಇಲ್ಲಿದೆ ಸಿಹಿ ಸುದ್ದಿ. ಪ್ರಸಿದ್ಧ ಟೆಕ್ ದೈತ್ಯ ಆಪಲ್, ಶೀಘ್ರದಲ್ಲೇ ತನ್ನ ಹೊಸ ಐಫೋನ್ 16 ಸರಣಿಯನ್ನು ಭಾರತ ಸೇರಿದಂತೆ ಇತರೆ ದೇಶಗಳಲ್ಲಿ ಬಿಡುಗಡೆ ಮಾಡಲಿದೆ. ಈ ಹಿಂದೆ, ಐಫೋನ್ 15 ಸರಣಿಯ ಬೆಲೆಯನ್ನು ಆನ್‌ಲೈನ್‌ನಲ್ಲಿ ಕಡಿಮೆ ಮಾಡಲಾಗಿದೆ. iPhone 15 ಮತ್ತು iPhone 15 Plus ಈಗಾಗಲೇ ಅಗ್ಗದ ಬೆಲೆಗೆ ಲಭ್ಯವಿದೆ. ಇದೀಗ, ಐಫೋನ್ 15 ಪ್ರೊ ಮ್ಯಾಕ್ಸ್ (iPhone 15 Pro Max) ಬೆಲೆಯೂ ಇಳಿಕೆಯಾಗಿದೆ.

ಹೌದು, ಐಫೋನ್ 15 ಪ್ರೊ ಮ್ಯಾಕ್ಸ್ ಭಾರೀ ರಿಯಾಯಿತಿಯೊಂದಿಗೆ ಲಭ್ಯವಿದೆ. ಪ್ರಸ್ತುತ ರಿಲಯನ್ಸ್ ಡಿಜಿಟಲ್‌ನಲ್ಲಿ 1,37,990 ರೂ.ಗೆ ಲಭ್ಯವಿದೆ. ಕಳೆದ ವರ್ಷ ಈ ಫೋನ್ ಅನ್ನು ಭಾರತದಲ್ಲಿ 1,59,900 ರೂ.ಗೆ ಬಿಡುಗಡೆ ಮಾಡಲಾಯಿತು. ಪ್ರಸ್ತುತ ರಿಲಯನ್ಸ್ ಡಿಜಿಟಲ್ ಈ ಫೋನಿನ ಖರೀದಿ ಮೇಲೆ ಭರ್ಜರಿ ಡಿಸ್ಕೌಂಟ್‌ ನೀಡುತ್ತಿದೆ. ಇದು ಐಫೋನ್ 15 ಪ್ರೊ ಮ್ಯಾಕ್ಸ್‌ನ 256GB ಸ್ಟೋರೇಜ್ ಹೊಂದಿರುವ ಬ್ಲ್ಯಾಕ್ ಟೈಟಾನಿಯಂ ಬಣ್ಣದ ರೂಪಾಂತರದ ಬೆಲೆಯಾಗಿದೆ. ನೀವು 21,910 ರೂ.ಗಳ ಡಿಸ್ಕೌಂಟ್ ಪಡೆಯಬಹುದು.

iPhone 15 Pro Max ಬೆಲೆ ಕುಸಿತ: 21,910 ರೂ. ಡಿಸ್ಕೌಂಟ್.. ಬೆಲೆ ಎಷ್ಟು?

ಐಫೋನ್ 15 ಪ್ರೊ ಮ್ಯಾಕ್ಸ್ ಬ್ಯಾಂಕ್ ಡಿಸ್ಕೌಂಟ್‌

ನೀವು ಐಸಿಐಸಿಐ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ ಪಾವತಿಯೊಂದಿಗೆ ಐಫೋನ್ 15 ಪ್ರೊ ಮ್ಯಾಕ್ಸ್ ಖರೀದಿಸಿದರೆ 5,000 ರೂ.ಗಳ ರಿಯಾಯಿತಿ ಲಭ್ಯವಿದೆ. ಡಿಸ್ಕೌಂಟ್‌ನೊಂದಿಗೆ ಇದರ ಬೆಲೆ 1,32,990 ರೂ.ಗೆ ಇಳಿಕೆಯಾಗಲಿದೆ. ಇದಲ್ಲದೆ, ನೀವು ಇತರ ಆಯ್ದ ಬ್ಯಾಂಕ್ ಕಾರ್ಡ್‌ಗಳೊಂದಿಗೆ ಡಿಸ್ಕೌಂಟ್ ಮತ್ತು ಇಎಂಐ ಆಫರ್‌ಗಳನ್ನು ಸಹ ಪಡೆಯಬಹುದು. ಈ ಆಫರ್‌ ಎಷ್ಟು ದಿನ ಇರುತ್ತದೆ ಎಂಬ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. ಹಾಗಾಗಿ, ನೀವು ಐಫೋನ್ 15 ಪ್ರೊ ಮ್ಯಾಕ್ಸ್ ಅನ್ನು ಖರೀದಿಸಲು ಬಯಸಿದರೆ, ಕೂಡಲೇ ಖರೀದಿಸಿ.

ಐಫೋನ್ 15 ಪ್ರೊ ಮ್ಯಾಕ್ಸ್ ವೈಶಿಷ್ಟ್ಯಗಳು

ಡಿಸ್ಪ್ಲೇ: ಐಫೋನ್ 15 ಪ್ರೊ ಮ್ಯಾಕ್ಸ್ 6.7-ಇಂಚಿನ ಸೂಪರ್ ರೆಟಿನಾ XDR OLED ಡಿಸ್ಪ್ಲೇಯನ್ನು ಹೊಂದಿದೆ. ಇದು 2796 x 1290 ಪಿಕ್ಸೆಲ್‌ಗಳ ರೆಸಲ್ಯೂಶನ್ ಮತ್ತು 120Hzನ ರಿಫ್ರೆಶ್ ದರವನ್ನು ಹೊಂದಿದೆ. ಇದು 2000 ನಿಟ್ಸ್‌ ಗರಿಷ್ಠ ಬ್ರೈಟ್‌ನೆಸ್‌ ನೀಡುತ್ತದೆ.

ಪ್ರೊಸೆಸರ್: ಐಫೋನ್ 15 ಪ್ರೊ ಮ್ಯಾಕ್ಸ್ ಆಪಲ್‌ನ A17 Pro ಚಿಪ್‌ಸೆಟ್‌ ಅನ್ನು ಹೊಂದಿದೆ. ಇದು ತುಂಬಾ ಶಕ್ತಿಯುತವಾಗಿದೆ ಮತ್ತು ಇದು ಸ್ಮಾರ್ಟ್‌ಫೋನ್‌ಗಳಲ್ಲಿ ಅತ್ಯುತ್ತಮವಾಗಿದೆ ಎಂದು ಕಂಪನಿ ಹೇಳಿದೆ. ಇದು ಸ್ಟೀರಿಯೋ ಸ್ಪೀಕರ್‌ಗಳು ಮತ್ತು ನೀರು ನಿರೋಧಕ IP68 ರೇಟಿಂಗ್ ಅನ್ನು ಸಹ ಹೊಂದಿದೆ.

ಕ್ಯಾಮೆರಾ: ಐಫೋನ್ 15 ಪ್ರೊ ಮ್ಯಾಕ್ಸ್ ಟ್ರಿಪಲ್ ಕ್ಯಾಮೆರಾ ಸೆಟಪ್‌ ಹೊಂದಿದೆ. ಈ ಫೋನ್ 48 ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ಹೊಂದಿದೆ. ಇದು ಕಡಿಮೆ ಬೆಳಕಿನಲ್ಲಿಯೂ ಉತ್ತಮ ಫೋಟೋಗಳನ್ನು ತೆಗೆಯಲು ಸಹಾಯ ಮಾಡುತ್ತದೆ. ಫೋಟೋದಲ್ಲಿ ಯಾವುದೇ ಕಲೆಗಳು ಇರುವುದಿಲ್ಲ. ಈ ಕ್ಯಾಮೆರಾದಲ್ಲಿ ನೀವು ಫೋಕಲ್ ಲೆಂತ್ (24mm, 28mm, 35mm) ಬದಲಾಯಿಸಬಹುದು. ಇದು 5x ಆಪ್ಟಿಕಲ್ ಜೂಮ್‌ನ ಬೆಂಬಲವನ್ನು ಹೊಂದಿದೆ. ನೀವು ಇದರಲ್ಲಿ 4K60 ProRes ವಿಡಿಯೋ ಸಹ ರೆಕಾರ್ಡ್ ಮಾಡಬಹುದು.

ಬ್ಯಾಟರಿ: ಐಫೋನ್ 15 ಪ್ರೊ ಮ್ಯಾಕ್ಸ್ 4,441mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು 20W ವೈರ್ಡ್ ಫಾಸ್ಟ್ ಚಾರ್ಜಿಂಗ್ ಮತ್ತು 7.5W ವೈರ್‌ಲೆಸ್ ಮ್ಯಾಗ್‌ಸೇಫ್ ಚಾರ್ಜರ್‌ನೊಂದಿಗೆ ಚಾರ್ಜ್ ಆಗುತ್ತದೆ.

ಸೆ.10 ರಂದು iPhone 16 ಸರಣಿ ಬಿಡುಗಡೆ

ಆಪಲ್ ಪ್ರತಿ ವರ್ಷ ಹೊಸ ಐಫೋನ್ ಸರಣಿ​​ ಬಿಡುಗಡೆ ಮಾಡುತ್ತದೆ. ಕಳೆದ ವರ್ಷ ಇದೇ ವೇಳೆ ಐಫೋನ್ 15 ಸರಣಿಯನ್ನು ಪರಿಚಯಿಸಿತ್ತು. ಇದೀಗ, ಐಫೋನ್ 16 ಸರಣಿಯನ್ನು (iPhone 16) ಬಿಡುಗಡೆ ಮಾಡಲು ಸಜ್ಜಾಗಿದೆ. ಇದೇ ಸೆಪ್ಟೆಂಬರ್ 10 ರಂದು ಐಫೋನ್ 16 ಸೀರಿಸ್​​ ಬಿಡುಗಡೆಯಾಗಲಿದೆ. ಈ ಸರಣಿಯು iPhone 16, iPhone 16 Plus, iPhone 16 Pro ಮತ್ತು iPhone 16 Pro Max ಸ್ಮಾರ್ಟ್‌ಫೋನ್‌ಗಳನ್ನು ಒಳಗೊಂಡಿದೆ.

Best Mobiles in India

English summary
iPhone 15 Pro Max Gets A Massive Discount Ahead Of iPhone 16 Launch Event: Know Offer Price, availability, specs and more here
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+