Home
Deal of the day

ದೊಡ್ಡ ಆಫರ್‌! iPhone 16 ಬೆಲೆ ಭಾರೀ ಇಳಿಕೆ.. ಬರೋಬ್ಬರಿ 14,500 ಡಿಸ್ಕೌಂಟ್.. ಖರೀದಿ ಎಲ್ಲಿ?

ಹೊಸ ವರ್ಷ ಬಂದಿದೆ.. ಹೊಸ ಆಫರ್‌ಗಳನ್ನು ತಂದಿದೆ. ನೀವು, ಹೊಸ ಮೊಬೈಲ್ ಖರೀದಿಸಲು ಹುಡುಕುತ್ತಿದ್ದರೆ, ಅದರಲ್ಲೂ ಐಫೋನ್‌ (iPhone) ಖರೀದಿಸಲು ಬಯಸಿದರೆ ಇಲ್ಲಿದೆ ದೊಡ್ಡ ಸಿಹಿಸುದ್ದಿ. ಹೌದು, ಟೆಕ್ ದೈತ್ಯ ಆಪಲ್‌ (Apple) ತನ್ನ ಐಫೋನ್ 16 (iPhone 16) ಬೆಲೆಯನ್ನು ಭಾರೀ ಇಳಿಕೆ ಮಾಡಿದೆ. ನೀವು, ಈ ಮೊಬೈಲ್ ಖರೀದಿಸಿದರೆ, ಬರೋಬ್ಬರಿ 14,500 ರೂ. ಉಳಿತಾಯ ಮಾಡಬಹುದು. ಬನ್ನಿ, ಈ ಫೋನಿನ ಹೊಸ ಬೆಲೆ, ಆಫರ್‌ಗಳು ಮತ್ತು ವಿಶೇಷತೆಗಳನ್ನು ತಿಳಿಯೋಣ.

ಆಪಲ್‌ ತನ್ನ ಐಫೋನ್ 16 ಸರಣಿಯನ್ನು ಈ ವರ್ಷ ಭಾರತದಲ್ಲಿ ಬಿಡುಗಡೆ ಮಾಡಿದೆ. ಈ ಪೈಕಿ ಐಫೋನ್ 16 ಅನ್ನು 79,900 ರೂ.ಗೆ ಪರಿಚಯಿಸಿತ್ತು. ಪ್ರಈ ಫೋನ್ 48 ಮೆಗಾಪಿಕ್ಸೆಲ್ ಕ್ಯಾಮೆರಾ ಹೊಂದಿದೆ. 6.1 ಇಂಚಿನ ಡಿಸ್ಪ್ಲೇ, 512GB ಸ್ಟೋರೇಜ್‌ ಮತ್ತು 3,561mAh ಬ್ಯಾಟರಿ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಸ್ತುತ, ಕಂಪನಿಯು 14,500 ರೂ. ಡಿಸ್ಕೌಂಟ್ ಘೋಷಿಸಿದೆ. ಜೊತೆಗೆ ಬ್ಯಾಂಕ್ ಆಫರ್‌ ಸಹ ಲಭ್ಯವಿದೆ. ನೀವು, ಈ ಫೋನನ್ನು ಮತ್ತಷ್ಟು ಕಡಿಮೆ ಬೆಲೆಗೆ ಖರೀದಿಸಬಹುದು.

iPhone 16 ಬೆಲೆ ಭಾರೀ ಇಳಿಕೆ.. ಬರೋಬ್ಬರಿ 14,500 ಡಿಸ್ಕೌಂಟ್.. ಖರೀದಿ ಎಲ್ಲಿ?

ಐಫೋನ್ 16 ವೈಶಿಷ್ಟ್ಯಗಳು

ಡಿಸ್ಪ್ಲೇ ಹೇಗಿದೆ

ಐಫೋನ್ 16 ಸ್ಮಾರ್ಟ್‌ಫೋನ್ 6.1 ಇಂಚಿನ ಡಿಸ್ಪ್ಲೇಯನ್ನು ಹೊಂದಿದೆ. ಇದು ಡೈನಾಮಿಕ್ ಐಲ್ಯಾಂಡ್ ಡಿಸ್ಪ್ಲೇ ಆಗಿದೆ. ಈ ಡಿಸ್ಪ್ಲೇಯು 2,000 ನಿಟ್ಸ್‌ ಗರಿಷ್ಠ ಬ್ರೈಟ್‌ನೆಸ್, HDR10 ಮತ್ತು ಡಾಲ್ಬಿ ವಿಷನ್ ಬೆಂಬಲ ಪಡೆದಿದೆ. ಇದು ಸೂಪರ್ ರೆಟಿನಾ XDR ಓಎಲ್‌ಇಡಿ ಪ್ಯಾನಲ್ ಹೊಂದಿದೆ.

ಪ್ರೊಸೆಸರ್ ಯಾವುದು?

ಐಫೋನ್ 16 ಮೊಬೈಲ್ ಆಪಲ್‌ನ A18 ಬಯೋನಿಕ್ ಪ್ರೊಸೆಸರ್‌ ಅನ್ನು ಹೊಂದಿದೆ. ಈ ಸ್ಮಾರ್ಟ್‌ಫೋನ್ ಇತ್ತೀಚಿನ ಆಪರೇಟಿಂಗ್ ಸಿಸ್ಟಮ್ iOS 18 ನೊಂದಿಗೆ ಕೆಲಸ ಮಾಡುತ್ತದೆ.

ಸ್ಟೋರೇಜ್ ಸಾಮರ್ಥ್ಯ

ಐಫೋನ್ 16 ಫೋನ್ ಮೂರು ಸ್ಟೋರೇಜ್‌ ಆಯ್ಕೆಗಳನ್ನು ಒಳಗೊಂಡಿದೆ. ಈ ಫೋನಿನ ಮೂಲ ರೂಪಾಂತರವು 128GB ಮತ್ತು ಟಾಪ್ ವೇರಿಯಂಟ್ ರೂಪಾಂತರವು 512GB ಸ್ಟೋರೇಜ್‌ ಹೊಂದಿದೆ.

ಡ್ಯುಯಲ್ ಕ್ಯಾಮೆರಾ ಸೆಟಪ್

ಐಫೋನ್ 16 ಸ್ಮಾರ್ಟ್‌ಫೋನ್ ಡ್ಯುಯಲ್ ಕ್ಯಾಮೆರಾ ಸೆಟಪ್ ಹೊಂದಿದೆ. ಇದು ಟ್ರೂ ಟೋನ್ ಫ್ಲ್ಯಾಷ್‌ನೊಂದಿಗೆ ಬರುತ್ತದೆ. ಈ ಫೋನಿನಲ್ಲಿ 48 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಲಭ್ಯವಿದೆ. ಜೊತೆಗೆ 12 ಮೆಗಾಪಿಕ್ಸೆಲ್ 2X ಟೆಲಿಫೋಟೋ ಲೆನ್ಸ್ ಹೊಂದಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, ಈ ಮೊಬೈಲ್ 12 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಸಹ ಹೊಂದಿದೆ.

iPhone 16 ಬೆಲೆ ಭಾರೀ ಇಳಿಕೆ.. ಬರೋಬ್ಬರಿ 14,500 ಡಿಸ್ಕೌಂಟ್.. ಖರೀದಿ ಎಲ್ಲಿ?

ಬ್ಯಾಟರಿ ಮತ್ತು ಚಾರ್ಜಿಂಗ್

ಐಫೋನ್ 16 ಮೊಬೈಲ್ 3,561mAh ಸಾಮರ್ಥ್ಯದ ಬ್ಯಾಟರಿಯೊಂದಿಗೆ ಬಿಡುಗಡೆಯಾಗಿದೆ. ಇದನ್ನು ಚಾರ್ಜ್ ಮಾಡಲು ಯುಎಸ್‌ಬಿ ಟೈಪ್ ಸಿ ಪೋರ್ಟ್ ಇದೆ. 25W MagSafe ವೈರ್‌ಲೆಸ್ ಚಾರ್ಜಿಂಗ್ ಮತ್ತು 15W Qi ವೈರ್‌ಲೆಸ್ ಚಾರ್ಜಿಂಗ್ ಸೌಲಭ್ಯ ಸಹ ಒದಗಿಸಲಾಗಿದೆ.

ಐಫೋನ್ 16 ಬೆಲೆ ಮತ್ತು ಆಫರ್‌ಗಳು

ಪ್ರಸ್ತುತ, ಐಫೋನ್ 16 ಖರೀದಿ ಮೇಲೆ ಫ್ಲಾಟ್ ಡಿಸ್ಕೌಂಟ್ ಮತ್ತು ಬ್ಯಾಂಕ್ ಆಫರ್‌ಗಳನ್ನು ನೀಡಲಾಗುತ್ತಿದೆ. ಫೋನಿನ ಟಾಪ್ ವೇರಿಯಂಟ್‌ಗೆ 14,500 ರೂ. ರಿಯಾಯಿತಿ ಲಭ್ಯವಿದೆ. 128GB ಸ್ಟೋರೇಜ್ ಆಯ್ಕೆಯ ಮೇಲೆ 13,000 ರೂ. ರಿಯಾಯಿತಿ ಸಿಗುತ್ತದೆ. ನೀವು, 66,900 ರೂ.ಗೆ ಕೊಳ್ಳಬಹುದು. ಇದನ್ನು 79,900 ರೂ.ಗೆ ಬಿಡುಗಡೆ ಮಾಡಲಾಗಿತ್ತು.

ಈ ಫೋನಿನ 256GB ಸ್ಟೋರೇಜ್ ಆಯ್ಕೆಯನ್ನು 76,400 ರೂ.ಗೆ ಖರೀದಿಸಬಹುದು. ಇದರ ಬಿಡುಗಡೆ ಬೆಲೆ 89,900 ರೂ. ಆಗಿದೆ. ಟಾಪ್ ವೇರಿಯಂಟ್ 512GB ರೂಪಾಂತರದ ಮೇಲೆ 14,500 ರೂ. ರಿಯಾಯಿತಿ ಲಭ್ಯವಿದೆ. ನೀವು, 95,400 ರೂ.ಗೆ ಖರೀದಿಸಬಹುದು. ಇದನ್ನು 1,09,900 ರೂ. ಪರಿಚಯಿಸಲಾಗಿತ್ತು. ನೀವು, ವಿಜಯ್ ಸೇಲ್ಸ್ (Vijay Sales) ಆಪಲ್ ಡೇಸ್ ಮಾರಾಟದಲ್ಲಿ ಈ ಎಲ್ಲಾ ಆಫರ್‌ಗಳ ಲಾಭ ಪಡೆಯಬಹುದು. ಈ ಮಾರಾಟವು ಈಗಾಗಲೇ ಲೈವ್ ಆಗಿದೆ.

Best Mobiles in India

English summary
iPhone 16 Available With Rs 14,500 discount discount on Vijay Sales: know new price, offers, availability specs and more details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+