17,000 ರಿಯಾಯಿತಿ! iPhone 16 ಬೆಲೆ ದಿಢೀರ್ ಕುಸಿತ.. ಭಾರೀ ಬೇಡಿಕೆ.. ಮುಗಿಬಿದ್ದ ಜನ!
ಟೆಕ್ ದೈತ್ಯ ಆಪಲ್ ತನ್ನ ಐಫೋನ್ 16 (iPhone 16) ಬೆಲೆಯನ್ನು ದಿಢೀರನೆ ಇಳಿಕೆ ಮಾಡಿದೆ. ಈ ಐಫೋನ್ ಖರೀದಿಸಿದರೆ, ಬರೋಬ್ಬರಿ 17,000 ರೂ. ವರೆಗೆ ಉಳಿತಾಯ ಮಾಡಬಹುದು. ಹೌದು, ಆನ್‌ಲೈನ್ ಶಾಪಿಂಗ್ ಸೈಟ್ ಅಮೆಜಾನ್‌ನಲ್ಲಿ ಎಲ್ಲಾ ಐಫೋನ್ 16 ಮಾದರಿಗಳ ಖರೀದಿ ಮೇಲೆ ಭಾರೀ ರಿಯಾಯಿತಿ ನೀಡಲಾಗುತ್ತಿದೆ. ನೀವು, ಹೊಸ ಐಫೋನ್ ಖರೀದಿಸಲು ಬಯಸಿದರೆ, ಈ ಅವಕಾಶವನ್ನು ಮಿಸ್ ಮಾಡಿಕೊಳ್ಳಬೇಡಿ. ಈ ಐಫೋನಿನ ಮೂಲ ಬೆಲೆ, ಆಫರ್ ಮತ್ತು ವಿಶೇಷತೆಗಳ ಬಗ್ಗೆ ಇಲ್ಲಿದೆ ಮಾಹಿತಿ.
ಆಪಲ್ ಈ ವರ್ಷ ಐಫೋನ್ 16 ಸರಣಿಯ ಫೋನ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಈ ಪೈಕಿ ಐಫೋನ್ 16 ಮೊಬೈಲ್ ಪ್ರಿಯರ ಮೆಚ್ಚುಗೆ ಪಡೆದಿದೆ. ಈ ಫೋನಿನ ವಿಶೇಷತೆಗಳನ್ನು ನೋಡುವುದಾದರೆ, ಇದು ಆಪಲ್‌ನ A18 ಬಯೋನಿಕ್ ಪ್ರೊಸೆಸರ್ ಹೊಂದಿದೆ. ಈ ಫೋನಿನಲ್ಲಿ 48 ಮೆಗಾಪಿಕ್ಸೆಲ್ ಕ್ಯಾಮೆರಾ ಲಭ್ಯವಿದೆ. ಈ ಐಫೋನ್ 6.1 ಇಂಚಿನ ಡಿಸ್ಪ್ಲೇ ಹೊಂದಿದೆ. ಹಾಗೆಯೇ 512GB ಸ್ಟೋರೇಜ್, 3561mAh ಬ್ಯಾಟರಿ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಒಳಗೊಂಡಿದೆ.

ಐಫೋನ್ 16 ವೈಶಿಷ್ಟ್ಯಗಳು
ಡಿಸ್ಪ್ಲೇ ವಿವರ
ಐಫೋನ್ 16 ಮೊಬೈಲ್ 6.1 ಇಂಚಿನ ಡಿಸ್ಪ್ಲೇ ಹೊಂದಿದೆ. ಇದು ಡೈನಾಮಿಕ್ ಐಲ್ಯಾಂಡ್ ಸ್ಕ್ರೀನ್ ಆಗಿದೆ. ಈ ಡಿಸ್ಪ್ಲೇಯು ಸೂಪರ್ ರೆಟಿನಾ XDR ಓಎಲ್‌ಇಡಿ ಪ್ಯಾನಲ್ ಹೊಂದಿದೆ. ಇದು 2,000 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಮತ್ತು ಡಾಲ್ಬಿ ವಿಷನ್ ಬೆಂಬಲ ಪಡೆದಿದೆ.
ಪವರ್ ಫುಲ್ ಪ್ರೊಸೆಸರ್
ಐಫೋನ್ 16 ಸ್ಮಾರ್ಟ್‌ಫೋನ್ ಆಪಲ್‌ನ A18 ಬಯೋನಿಕ್ ಪ್ರೊಸೆಸರ್ ಹೊಂದಿದೆ. ಈ ಸ್ಮಾರ್ಟ್‌ಫೋನ್ ಇತ್ತೀಚಿನ ಆಪರೇಟಿಂಗ್ ಸಿಸ್ಟಮ್ iOS 18 ನೊಂದಿಗೆ ಕೆಲಸ ಮಾಡುತ್ತದೆ. ಈ ಐಫೋನ್ ಮೂರು ಸ್ಟೋರೇಜ್ ವೇರಿಯಂಟ್ ಒಳಗೊಂಡಿದೆ. ಈ ಫೋನಿನ ಮೂಲ ರೂಪಾಂತರವು 128GB ಮತ್ತು ಟಾಪ್ ವೇರಿಯಂಟ್ 512GB ಸ್ಟೋರೇಜ್ ಆಯ್ಕೆ ಹೊಂದಿದೆ.
ಕ್ಯಾಮೆರಾ ಸೆಟಪ್
ಕಂಪನಿಯು ಈ ಐಫೋನ್ ಅನ್ನು ಡ್ಯುಯಲ್ ಕ್ಯಾಮೆರಾ ಸೆಟಪ್‌ನೊಂದಿಗೆ ಪರಿಚಯಿಸಿದೆ. ಈ ಫೋನಿನಲ್ಲಿ 48 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಲಭ್ಯವಿದೆ. ಇದು ಟ್ರೂ ಟೋನ್ ಫ್ಲ್ಯಾಷ್ ಜೊತೆಗ ಬರುತ್ತದೆ. ಇದರೊಂದಿಗೆ 12 ಮೆಗಾಪಿಕ್ಸೆಲ್ 2X ಟೆಲಿಫೋಟೋ ಕ್ಯಾಮೆರಾ ಇದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, ಈ ಐಫೋನ್ 12 ಮೆಗಾಪಿಕ್ಸೆಲ್ ಸೆಲ್ಫಿ ಶೂಟರ್ ಸಹ ಒಳಗೊಂಡಿದೆ.
ಬ್ಯಾಟರಿ ಮತ್ತು ಚಾರ್ಜಿಂಗ್
ಐಫೋನ್ 16 ಅನ್ನು 3,561mAh ಸಾಮರ್ಥ್ಯದ ಬ್ಯಾಟರಿಯೊಂದಿಗೆ ಮಾರುಕಟ್ಟೆಗೆ ಪರಿಚಯಿಸಲಾಗಿದೆ. ಈ ಬ್ಯಾಟರಿಯನ್ನು ಚಾರ್ಜ್ ಮಾಡಲು, ಯುಎಸ್‌ಬಿ ಟೈಪ್ ಸಿ ಪೋರ್ಟ್ ಸೌಲಭ್ಯ ಒದಗಿಸಲಾಗಿದೆ. ಇದರೊಂದಿಗೆ 25W MagSafe ವೈರ್‌ಲೆಸ್ ಚಾರ್ಜಿಂಗ್ ಮತ್ತು 15W Qi ವೈರ್‌ಲೆಸ್ ಚಾರ್ಜಿಂಗ್ ತಂತ್ರಜ್ಞಾನ ಸಹ ನೀಡಲಾಗಿದೆ.
ಐಫೋನ್ 16 ಹೊಸ ಬೆಲೆ ಮತ್ತು ರಿಯಾಯಿತಿ
ಆನ್‌ಲೈನ್ ಶಾಪಿಂಗ್ ಸೈಟ್ ಅಮೆಜಾನ್ ಐಫೋನ್ 16 ಖರೀದಿ ಮೇಲೆ ಭಾರೀ ರಿಯಾಯಿತಿ ಘೋಷಿಸಿದೆ. ಈ ಐಫೋನಿನ 128GB ಸ್ಟೋರೇಜ್ ಮಾದರಿಯು 72,900 ರೂ.ಗೆ ಲಭ್ಯವಿದೆ. ಇದನ್ನು 79,900 ರೂ. ಬೆಲೆಗೆ ಬಿಡುಗಡೆ ಮಾಡಲಾಗಿತ್ತು. ಹಾಗೆಯೇ 256GB ಸ್ಟೋರೇಜ್ ರೂಪಾಂತರದ ಬೆಲೆ 83,400 ರೂ.ಗೆ ಇಳಿಕೆಯಾಗಿದೆ. ಇದರ ಬಿಡುಗಡೆ ಬೆಲೆ 89,900 ರೂ. ಆಗಿದೆ. ಪ್ರಸ್ತುತ 6,500 ರೂ.ಗಳಷ್ಟು ಇಳಿಕೆಯಾಗಿದೆ. ಇನ್ನು 512GB ಸ್ಟೋರೇಜ್ ವೇರಿಯಂಟ್ ಬೆಲೆ 1,09,900 ರೂ. ಆಗಿದೆ. ಪ್ರಸ್ತುತ, ಇದು 96,900 ರೂ.ಗೆ ಪಟ್ಟಿ ಮಾರಾಟವಾಗುತ್ತಿದೆ.
ಐಸಿಐಸಿಐ (ICICI) ಮತ್ತು ಎಸ್‌ಬಿಐ (SBI) ಕ್ರೆಡಿಟ್ ಕಾರ್ಡ್ ಬಳಕೆದಾರರು 4,000 ರೂ.ಗಳ ಹೆಚ್ಚುವರಿ ರಿಯಾಯಿತಿ ಪಡೆಯಬಹುದು. ಈ ಮೂಲಕ ಫೋನಿನ ಆರಂಭಿಕ ಬೆಲೆ 68,900 ರೂ.ಗಳಿಗೆ ಇಳಿಕೆಯಾಗಲಿದೆ. ಈ ರಿಯಾಯಿತಿಯೊಂದಿಗೆ ನೀವು ಐಫೋನ್ 16 ಫೋನಿನ 256GB ಮತ್ತು 512GB ಮಾದರಿಗಳನ್ನು ಕ್ರಮವಾಗಿ 79,400 ರೂ. ಮತ್ತು 92,900 ರೂ.ಗೆ ನಿಮ್ಮದಾಗಿಸಿಕೊಳ್ಳಬಹುದು.


Click it and Unblock the Notifications








