Home
Deal of the day

ದಿಢೀರ್ ಕುಸಿತ! ಅಗ್ಗದ ಬೆಲೆಗೆ iPhone 16 ಸೇಲ್.. 11000 ಡಿಸ್ಕೌಂಟ್.. ಆಫರ್‌ ಮುಗಿಯುವ ಮುನ್ನ ಖರೀದಿಸಿ

iPhone 16 Price Drop: ಐಫೋನ್ ಖರೀದಿಸುವ ಆಸೆ ಎಲ್ಲರಿಗೂ ಇರುತ್ತೆ. ದುಬಾರಿ ಬೆಲೆ ಕಾರಣ ಬಹುತೇಕರಿಗೆ ಈ ಫೋನ್ ಕೊಳ್ಳಲು ಸಾಧ್ಯವಾಗಲ್ಲ. ಅಂಥವರಿಗೆ ಇಲ್ಲಿದೆ ಉತ್ತಮ ಅವಕಾಶ. ಹೌದು, ನೀವು ಇತ್ತೀಚಿನ ಐಫೋನ್ ಖರೀದಿಸಲು ಬಯಸಿದರೆ, ಆನ್‌ಲೈನ್ ಶಾಪಿಂಗ್ ಸೈಟ್‌ಗಳು ಐಫೋನ್ 16 (iPhone 16) ಬೆಲೆ ಕಡಿಮೆ ಮಾಡಿವೆ. ಈ ಪ್ರೀಮಿಯಂ ಐಫೋನ್‌ಗೆ ಯಾವುದೇ ಬ್ಯಾಂಕ್ ಆಫರ್‌ ಇಲ್ಲದೆ 11,000 ರೂ.ಗಳ ರಿಯಾಯಿತಿ ನೀಡಲಾಗುತ್ತಿದೆ. ಬನ್ನಿ, ಐಫೋನ್ 16 ಮೂಲ ಬೆಲೆ, ಆಫರ್‌ಗಳು ಮತ್ತು ವಿಶೇಷತೆಗಳನ್ನು ತಿಳಿಯೋಣ.

ಆಪಲ್‌ ತನ್ನ ಐಫೋನ್ 16 ಸರಣಿಯನ್ನು ಕಳೆದ ವರ್ಷ ಬಿಡುಗಡೆ ಮಾಡಿತ್ತು. ಪ್ರಸ್ತುತ, ಫ್ಲಿಪ್‌ಕಾರ್ಟ್‌ನಲ್ಲಿ ಐಫೋನ್ 16 ಬೆಲೆಯಲ್ಲಿ ದೊಡ್ಡ ಇಳಿಕೆ ಕಂಡಿದೆ. ಈ ಐಫೋನ್ 48 ಮೆಗಾಪಿಕ್ಸೆಲ್ ಕ್ಯಾಮೆರಾ ಹೊಂದಿದೆ. ಈ ಫೋನಿನಲ್ಲಿ 6.1 ಇಂಚಿನ ಡಿಸ್ಪ್ಲೇ ಲಭ್ಯವಿದೆ. ಜೊತೆಗೆ 512GB ಸ್ಟೋರೇಜ್‌ ಮತ್ತು 3,561mAh ಬ್ಯಾಟರಿ ಸೇರಿದಂತೆ ಹಲವು ಅತ್ಯುತ್ತಮ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಈ ಐಫೋನ್ ಫ್ಲಿಪ್‌ಕಾರ್ಟ್‌ನಲ್ಲಿ ಇದುವರೆಗಿನ ಅತ್ಯಂತ ಕಡಿಮೆ ಬೆಲೆಗೆ ಮಾರಾಟವಾಗುತ್ತಿದೆ. ನೀವು, ಈ ಫೋನ್ ಖರೀದಿ ಮೇಲೆ ದೊಡ್ಡ ಉಳಿತಾಯ ಮಾಡಬಹುದು.

ಮತ್ತೆ ಕುಸಿತ! ಅಗ್ಗದ ಬೆಲೆಗೆ iPhone 16 ಸೇಲ್, 11000 ಡಿಸ್ಕೌಂಟ್; ಖರೀದ ಎಲ್ಲಿ

ಐಫೋನ್ 16 ಮೇಲೆ ದೊಡ್ಡ ರಿಯಾಯಿತಿ

ಆಪಲ್‌ ಐಫೋನ್ 16 ಫೋನನ್ನು 79,900 ರೂ. ಬೆಲೆಗೆ ಬಿಡುಗಡೆ ಮಾಡಿತ್ತು. ಆದರೆ, ಪ್ರಸ್ತುತ ನೀವು ಇದನ್ನು 69,999 ರೂ.ಗೆ ಖರೀದಿಸಬಹುದು. ಅಂದರೆ ಈ ಐಫೋನ್ ಮೇಲೆ ಸುಮಾರು 10,000 ರೂ.ಗಳ ನೇರ ರಿಯಾಯಿತಿ ನೀಡಲಾಗುತ್ತಿದೆ. ಇದಲ್ಲದೆ, ಕೂಪನ್ ರಿಯಾಯಿತಿ ಸಹ ಲಭ್ಯವಿದೆ. ನೀವು ಹೆಚ್ಚುವರಿಯಾಗಿ 1,000 ರೂ.ಗಳನ್ನು ಉಳಿಸಬಹುದು. ಅಂದರೆ, ನೀವು 68,999 ರೂ.ಗೆ ಈ ಐಫೋನ್ ಖರೀದಿಸಬಹುದು.

ಇದಲ್ಲದೆ, ಬ್ಯಾಂಕ್ ಆಫರ್‌ಗಳ ಅಡಿಯಲ್ಲಿ ಹೆಚ್ಚುವರಿ ರಿಯಾಯಿತಿ ಸಿಗುತ್ತದೆ. ಈ ಮೂಲಕ ಈ ಐಫೋನಿನ ಬೆಲೆ ಇನ್ನಷ್ಟು ಕಡಿಮೆ ಆಗುತ್ತದೆ. ಈ ಫೋನಿನ ಖರೀದಿ ಮೇಲೆ ಎಕ್ಸ್‌ಚೇಂಜ್ ಆಫರ್‌ ಸಹ ಲಭ್ಯವಿದೆ. ನೀವು 60,200 ರೂ. ವರೆಗೆ ಉಳಿತಾಯ ಮಾಡಬಹುದು. ಇದು ಐಫೋನ್‌ನ ಬೆಲೆಯನ್ನು ಮತ್ತಷ್ಟು ಕಡಿಮೆ ಮಾಡಲಿದೆ.

ಐಫೋನ್ 16 ವೈಶಿಷ್ಟ್ಯಗಳು

ಡಿಸ್ಪ್ಲೇ ವಿವರ

ಐಫೋನ್ 16 ಸ್ಮಾರ್ಟ್‌ಫೋನ್ 6.1 ಇಂಚಿನ ಡಿಸ್ಪ್ಲೇಯನ್ನು ಹೊಂದಿದೆ. ಇದು ಡೈನಾಮಿಕ್ ಐಲ್ಯಾಂಡ್ ಡಿಸ್ಪ್ಲೇ ಆಗಿದೆ. ಈ ಡಿಸ್ಪ್ಲೇಯು 2,000 ನಿಟ್ಸ್‌ ಗರಿಷ್ಠ ಬ್ರೈಟ್‌ನೆಸ್, HDR10 ಮತ್ತು ಡಾಲ್ಬಿ ವಿಷನ್ ಬೆಂಬಲ ಪಡೆದಿದೆ. ಇದು ಸೂಪರ್ ರೆಟಿನಾ XDR ಓಎಲ್‌ಇಡಿ ಪ್ಯಾನಲ್ ಹೊಂದಿದೆ.

ಪ್ರೊಸೆಸರ್ ಸಾಮರ್ಥ್ಯ

ಐಫೋನ್ 16 ಮೊಬೈಲ್ ಆಪಲ್‌ನ A18 ಬಯೋನಿಕ್ ಪ್ರೊಸೆಸರ್‌ ಅನ್ನು ಹೊಂದಿದೆ. ಈ ಸ್ಮಾರ್ಟ್‌ಫೋನ್ ಇತ್ತೀಚಿನ ಆಪರೇಟಿಂಗ್ ಸಿಸ್ಟಮ್ iOS 18 ನೊಂದಿಗೆ ಕೆಲಸ ಮಾಡುತ್ತದೆ.

ಮತ್ತೆ ಕುಸಿತ! ಅಗ್ಗದ ಬೆಲೆಗೆ iPhone 16 ಸೇಲ್, 11000 ಡಿಸ್ಕೌಂಟ್; ಖರೀದ ಎಲ್ಲಿ

ಸ್ಟೋರೇಜ್ ಆಯ್ಕೆ

ಐಫೋನ್ 16 ಫೋನ್ ಮೂರು ಸ್ಟೋರೇಜ್‌ ಆಯ್ಕೆಗಳನ್ನು ಒಳಗೊಂಡಿದೆ. ಈ ಫೋನಿನ ಮೂಲ ರೂಪಾಂತರವು 128GB ಮತ್ತು ಟಾಪ್ ವೇರಿಯಂಟ್ ರೂಪಾಂತರವು 512GB ಸ್ಟೋರೇಜ್‌ ಹೊಂದಿದೆ.

ಕ್ಯಾಮೆರಾ ಸೆಟಪ್

ಐಫೋನ್ 16 ಸ್ಮಾರ್ಟ್‌ಫೋನ್ ಡ್ಯುಯಲ್ ಕ್ಯಾಮೆರಾ ಸೆಟಪ್ ಹೊಂದಿದೆ. ಇದು ಟ್ರೂ ಟೋನ್ ಫ್ಲ್ಯಾಷ್‌ನೊಂದಿಗೆ ಬರುತ್ತದೆ. ಈ ಫೋನಿನಲ್ಲಿ 48 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಲಭ್ಯವಿದೆ. ಜೊತೆಗೆ 12 ಮೆಗಾಪಿಕ್ಸೆಲ್ 2X ಟೆಲಿಫೋಟೋ ಲೆನ್ಸ್ ಹೊಂದಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, ಈ ಮೊಬೈಲ್ 12 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಸಹ ಹೊಂದಿದೆ.

ಬ್ಯಾಟರಿ ಮತ್ತು ಚಾರ್ಜಿಂಗ್

ಐಫೋನ್ 16 ಮೊಬೈಲ್ 3,561mAh ಸಾಮರ್ಥ್ಯದ ಬ್ಯಾಟರಿಯೊಂದಿಗೆ ಬಿಡುಗಡೆಯಾಗಿದೆ. ಇದನ್ನು ಚಾರ್ಜ್ ಮಾಡಲು ಯುಎಸ್‌ಬಿ ಟೈಪ್ ಸಿ ಪೋರ್ಟ್ ಇದೆ. 25W MagSafe ವೈರ್‌ಲೆಸ್ ಚಾರ್ಜಿಂಗ್ ಮತ್ತು 15W Qi ವೈರ್‌ಲೆಸ್ ಚಾರ್ಜಿಂಗ್ ಸೌಲಭ್ಯ ಸಹ ಒದಗಿಸಲಾಗಿದೆ.

Best Mobiles in India

English summary
iPhone 16 gets a big price drop on flipkart sale: know new price, offers, specs and more details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+