ದೊಡ್ಡ ಸಿಹಿಸುದ್ದಿ! iPhone 16 Pro ಬೆಲೆ ಭಾರೀ ಕುಸಿತ; 17,500 ಡಿಸ್ಕೌಂಟ್.. 13,000 ಉಳಿತಾಯ.. ಇಂಥಾ ಆಫರ್ ಬಿಡಬೇಡಿ!
ಐಫೋನ್ ಪ್ರಿಯರಿಗೆ ಇದು ದೊಡ್ಡ ಖುಷಿ ಸುದ್ದಿ! ಆಪಲ್‌ನ ಐಫೋನ್ 16 ಪ್ರೊ ಭಾರತದಲ್ಲಿ ಕೈಗೆಟುಕುವ ಬೆಲೆಗೆ ಲಭ್ಯವಿದೆ. ಹೌದು, ಐಫೋನ್ ಖರೀದಿಸುವ ಗ್ರಾಹಕರಿಗೆ ಇದೊಂದು ಸುವರ್ಣಾವಕಾಶ. ಐಫೋನ್ 16 ಪ್ರೊ (iPhone 16 Pro) ಮೊಬೈಲ್ ಬೆಲೆ ದಿಢೀರ್ ಕುಸಿತವಾಗಿದೆ. ಪ್ರಸ್ತುತ, ಭಾರತದಲ್ಲಿ ಇದು 17,500 ರೂ. ರಿಯಾಯಿತಿಯೊಂದಿಗೆ ಮಾರಾಟವಾಗುತ್ತಿದೆ. ನೀವು, ನೇರ ರಿಯಾಯಿತಿ ಮತ್ತು ಹೆಚ್ಚುವರಿ ಬ್ಯಾಂಕ್ ಆಫರ್‌ಗಳ ಲಾಭ ಪಡೆಯಬಹುದು. ಈ ಬೆಲೆ ಇಳಿಕೆಯು ಟೆಕ್ ಪ್ರಿಯರಲ್ಲಿ ಸಂಚಲನವನ್ನು ಸೃಷ್ಟಿಸಿದೆ. ಈ ಫೋನಿನ ಹೊಸ ಬೆಲೆ ಮತ್ತು ವಿಶೇಷತೆಗಳನ್ನು ತಿಳಿಯೋಣ ಬನ್ನಿ.
ಆಪಲ್ ಐಫೋನ್ 16 (Apple iPhone 16) ಸರಣಿಯ ಬಹುನಿರೀಕ್ಷಿತ ಸ್ಮಾರ್ಟ್‌ಫೋನ್‌ಗಳಲ್ಲಿ ಐಫೋನ್ 16 ಪ್ರೊ ಸಹ ಒಂದಾಗಿದೆ. ಈ ಮೊಬೈಲ್ 6.3 ಇಂಚಿನ ಡಿಸ್ಪ್ಲೇ ಹೊಂದಿದೆ. ಇದು A18 ಪ್ರೊ ಬಯೋನಿಕ್ ಪ್ರೊಸೆಸರ್‌ನಲ್ಲಿ ಕೆಲಸ ಮಾಡುತ್ತದೆ. ಈ ಫೋನಿನಲ್ಲಿ ಎರಡು 48 ಮೆಗಾಪಿಕ್ಸೆಲ್ ಕ್ಯಾಮೆರಾಗಳು ಲಭ್ಯವಿದೆ. ಜೊತೆಗೆ 128GB ಸ್ಟೋರೇಜ್ ಮತ್ತು 30W ವೈರ್‌ಲೆಸ್ ಚಾರ್ಜಿಂಗ್ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಪ್ರಸ್ತುತ, ಐಫೋನ್ 16 ಪ್ರೊ ಬೆಲೆ 13,000 ರೂ. ಇಳಿಕೆಯಾಗಿದೆ. ಈ ಫೋನಿನ ಆಫರ್‌ಗಳನ್ನು ತಿಳಿಯಲು ಮುಂದೆ ಓದಿ.

ಐಫೋನ್ 16 ಪ್ರೊ ವೈಶಿಷ್ಟ್ಯಗಳು
ಡಿಸ್ಪ್ಲೇ ಹೇಗಿದೆ
ಐಫೋನ್ 16 ಪ್ರೊ ಸ್ಮಾರ್ಟ್‌ಫೋನ್ 6.3 ಇಂಚಿನ ಓಎಲ್‌ಇಡಿ ಸೂಪರ್ ರೆಟಿನಾ XDR ಡಿಸ್ಪ್ಲೇಯನ್ನು ಹೊಂದಿದೆ. ಇದು 120Hz ರಿಫ್ರೆಶ್ ದರ ಮತ್ತು 2,000 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಬೆಂಬಲ ಪಡೆದಿದೆ. ಈ ಡಿಸ್ಪ್ಲೇಯು ಆಪಲ್‌ನ ಅಪ್‌ಗ್ರೇಡ್ ಮಾಡಿದ ಸೆರಾಮಿಕ್ ಶೀಲ್ಡ್ ರಕ್ಷಣೆ ಹೊಂದಿದೆ.
ಪ್ರೊಸೆಸರ್ ಯಾವುದು?
ಐಫೋನ್ 16 ಪ್ರೊ ಮೊಬೈಲ್ ಹೊಸ A18 ಪ್ರೊ ಬಯೋನಿಕ್ ಪ್ರೊಸೆಸರ್ ಹೊಂದಿವೆ. ಇದು ಐಫೋನ್ 16 ಮತ್ತು ಐಫೋನ್ 16 ಪ್ಲಸ್ ನಲ್ಲಿರುವ A18 ಗಿಂತ ವೇಗವಾಗಿದೆ. ಇದನ್ನು 3 ನ್ಯಾನೊಮೀಟರ್ ಫ್ಯಾಬ್ರಿಕೇಶನ್‌ಗಳಲ್ಲಿ ತಯಾರಿಸಲಾಗಿದೆ. ಇದು A17 ಪ್ರೊ ಗಿಂತ ವೇಗವಾದ ಮತ್ತು ಪರಿಣಾಮಕಾರಿಯಾದ 16 ಕೋರ್ ನ್ಯೂರಲ್ ಎಂಜಿನ್ ಹೊಂದಿದೆ. ಈ ಫೋನ್ ಆಪಲ್ ಇಂಟೆಲಿಜೆನ್ಸ್ ಆಧಾರಿತ iOS 18 ನಲ್ಲಿ ಕೆಲಸ ನಿರ್ವಹಿಸುತ್ತದೆ.
ಬೊಂಬಾಟ್ ಕ್ಯಾಮೆರಾಗಳು
ಐಫೋನ್ 16 ಪ್ರೊ ಫೋನ್ ಟ್ರಿಪಲ್ ಕ್ಯಾಮೆರಾ ಸೆಟಪ್ ಹೊಂದಿದೆ. ಈ ಫೋನಿನಲ್ಲಿ 48 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ ಲಭ್ಯವಿದೆ. ಜೊತೆಗೆ 12 ಮೆಗಾಪಿಕ್ಸೆಲ್ 5x ಟೆಲಿಫೋಟೋ ಕ್ಯಾಮೆರಾ ಮತ್ತು 48 ಮೆಗಾಪಿಕ್ಸೆಲ್ ಅಲ್ಟ್ರಾ ವೈಡ್ ಕ್ಯಾಮೆರಾ ಹೊಂದಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, ಈ ಮೊಬೈಲ್ 12 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಸಹ ಹೊಂದಿದೆ. ನೀವು 120 ಫ್ರೇಮ್‌ಗಳಲ್ಲಿ 4K ವಿಡಿಯೋ ಸೆರೆಹಿಡಿಯಬಹುದು.
ಬ್ಯಾಟರಿ ಬ್ಯಾಕಪ್
ಐಫೋನ್ 16 ಪ್ರೊ ಮೊಬೈಲ್ ಅತ್ಯುತ್ತಮ ಬ್ಯಾಟರಿ ಬ್ಯಾಕಪ್ ಹೊಂದಿದೆ. ಆಪಲ್ ಯುಎಸ್‌ಬಿ ಟೈಪ್ ಸಿ ಪೋರ್ಟ್ ಹೊಂದಿರುವ ಫೋನ್‌ಗಳನ್ನು ಬಿಡುಗಡೆ ಮಾಡಿದೆ. ಈ ಮೊಬೈಲ್ ಮ್ಯಾಗ್ ಸೇಫ್ ಮತ್ತು ಕ್ವಿ ವೈರ್‌ಲೆಸ್ ಚಾರ್ಜಿಂಗ್ ತಂತ್ರಜ್ಞಾನವನ್ನು ಹೊಂದಿದೆ. ಇದು 30W ಅಥವಾ ಹೆಚ್ಚಿನ ಅಡಾಪ್ಟರ್‌ನೊಂದಿಗೆ 25W ಮ್ಯಾಗ್‌ಸೇಫ್ ವೈರ್‌ಲೆಸ್ ಚಾರ್ಜಿಂಗ್ ಸಹ ಹೊಂದಿದೆ.
ಇತರೆ ವೈಶಿಷ್ಟ್ಯಗಳು
ಐಫೋನ್ 16 ಪ್ರೊ ಸ್ಮಾರ್ಟ್‌ಫೋನ್ ಧೂಳು ಮತ್ತು ನೀರಿನ ವಿರುದ್ಧ ರಕ್ಷಣೆಗಾಗಿ IP68 ರೇಟಿಂಗ್ ಪಡೆದಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ ಇದು ಯುಎಸ್‌ಬಿ ಟೈಪ್ ಸಿ ಪೋರ್ಟ್, ಕ್ಯಾಪ್ಚರ್ ಬಟನ್, ವೈರ್‌ಲೆಸ್ ಚಾರ್ಜಿಂಗ್ ಮತ್ತು ಎನ್‌ಎಫ್‌ಸಿ ಸೇರಿದಂತೆ ಹಲವು ಸೌಲಭ್ಯಗಳನ್ನು ಒಳಗೊಂಡಿದೆ.

ಐಫೋನ್ 16 ಪ್ರೊ ಬೆಲೆ ಮತ್ತು ಆಫರ್‌ಗಳು
ಐಫೋನ್ 16 ಪ್ರೊ 17,500 ರೂ. ಡಿಸ್ಕೌಂಟ್‌ನೊಂದಿಗೆ ಲಭ್ಯವಿದೆ. ವಿಜಯ್ ಸೇಲ್ಸ್ (Vijay Sales) ಐಫೋನ್ 16 ಪ್ರೊ ಫೋನಿನ 128GB ಸ್ಟೋರೇಜ್ ರೂಪಾಂತರವನ್ನು 1,06,900 ರೂ.ಗೆ ಮಾರಾಟ ಮಾಡಲಾಗುತ್ತಿದೆ. ಇದನ್ನು 1,19,900 ರೂ.ಗೆ ಬಿಡುಗಡೆ ಮಾಡಲಾಗಿತ್ತು. ಸದ್ಯ 13,000 ರೂ. ಬೆಲೆ ಇಳಿಕೆಯಾಗಿದೆ. ಜೊತೆಗೆ ಕೋಟಾಕ್, ಆರ್‌ಬಿಎಲ್, ಎಚ್‌ಡಿಎಫ್‌ಸಿ, ಎಸ್‌ಬಿಐ ಮತ್ತು ಐಸಿಐಸಿಐ ಬ್ಯಾಂಕ್ ಪಾವತಿಗಳ ಮೇಲೆ 4,500 ರೂ. ಬ್ಯಾಂಕ್ ಡಿಸ್ಕೌಂಟ್ ಲಭ್ಯವಿದೆ. ನೀವು, ರಿಯಾಯಿತಿ ಬಳಿಕ 1,02,400 ರೂ.ಗೆ ಈ ಮೊಬೈಲ್ ಕೊಳ್ಳಬಹುದು.
ಫ್ಲಿಪ್‌ಕಾರ್ಟ್‌ನಲ್ಲಿಯೂ ಆಫರ್ ಲಭ್ಯ!
ಮತ್ತೊಂದೆಡೆ, ಫ್ಲಿಪ್‌ಕಾರ್ಟ್‌ನಲ್ಲಿ ಐಫೋನ್ 16 ಪ್ರೊ ಫೋನಿನ 128GB ಸ್ಟೋರೇಜ್ ರೂಪಾಂತರವನ್ನು 1,12,900 ರೂ.ಗೆ ಮಾರಾಟ ಮಾಡಲಾಗುತ್ತಿದೆ. ನೀವು, ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಪಾವತಿ ಮೇಲೆ 5,645 ರೂ. ಕ್ಯಾಶ್‌ಬ್ಯಾಕ್ ಸಹ ಪಡೆಯಬಹುದು. ಡಿಸ್ಕೌಂಟ್ ಬಳಿಕ ಈ ಫೋನನ್ನು 1,07,255 ರೂ.ಗೆ ಖರೀದಿಸಬಹುದು. ಇದಲ್ಲದೆ, ನೀವು ಕ್ರೋಮಾದಿಂದ 1,09,900 ರೂ.ಗೆ ಈ ಮೊಬೈಲ್ ಕೊಳ್ಳಬಹುದು. ವಿಜಯ್ ಸೇಲ್ಸ್‌ನಲ್ಲಿ ಆಪಲ್ ಡೇಸ್ (Vijay Sales Apple Days Sale) ಮಾರಾಟವು ಜನವರಿ 5 ರಂದು ಮುಕ್ತಾಯಗೊಳ್ಳಲಿದೆ. ಈಗಲೇ ಈ ಆಫರ್‌ನ ಲಾಭ ಪಡೆಯಿರಿ.


Click it and Unblock the Notifications








