Home
Deal of the day

ಕ್ರೋಮಾ ಬ್ಲ್ಯಾಕ್ ಫ್ರೈಡೆ ಸೇಲ್: ₹46,000 ಕ್ಕಿಂತ ಕಡಿಮೆ ಬೆಲೆಗೆ ಐಫೋನ್ 17!

ಆಪಲ್‌ನ ಇತ್ತೀಚಿನ iPhone 17 ಸರಣಿಯು ಕಳೆದ ಸೆಪ್ಟೆಂಬರ್‌ನಲ್ಲಷ್ಟೇ ಅಧಿಕೃತವಾಗಿ ಮಾರುಕಟ್ಟೆಗೆ ಎಂಟ್ರಿ ನೀಡಿದೆ. ಇದು ತನ್ನ ಹಿಂದಿನ ಮಾದರಿಯಾದ iPhone 16 ಜೊತೆ ಹೋಲಿಸಿದಾಗ ಕಾರ್ಯಕ್ಷಮತೆ, ಕ್ಯಾಮೆರಾ ಸಾಮರ್ಥ್ಯ ಮತ್ತು ಬ್ಯಾಟರಿ ಬಾಳಿಕೆ ಸೇರಿದಂತೆ ಅನೇಕ ಪ್ರಮುಖ ವಿಭಾಗಗಳಲ್ಲಿ ಗಮನಾರ್ಹ ಸುಧಾರಣೆಗಳನ್ನು ತಂದಿದೆ. ಇದೇ ಕಾರಣದಿಂದ ತ್ತೀಚಿನ ವರ್ಷಗಳಲ್ಲಿ ಬಿಡುಗಡೆಯಾದ ಅತ್ಯುತ್ತಮ 'ಸ್ಟಾಂಡರ್ಡ್ ಅಥವಾ ವೆನಿಲ್ಲಾ' ಐಫೋನ್‌ಗಳಲ್ಲಿ ಒಂದಾಗಿ ಬಳಕೆದಾರರಿಂದ ಪ್ರಶಂಸೆಯನ್ನು ಪಡೆಯುತ್ತಿದೆ. ಈಗ ಈ ಜನಪ್ರಿಯ ಫೋನ್‌ ಅನ್ನು ಬೆಲೆಯಲ್ಲಿ ದೊಡ್ಡ ಕಡಿತದೊಂದಿಗೆ ಪಡೆಯುವ ಅವಕಾಶ ಬಂದಿದೆ. ಕ್ರೋಮಾ ಬ್ಲ್ಯಾಕ್ ಫ್ರೈಡೆ ಸೇಲ್ ಸಂದರ್ಭದಲ್ಲಿ iPhone 17 ಮಾದರಿಯ ಮೇಲೆ ಅನೇಕ ಆಕರ್ಷಕ ರಿಯಾಯಿತಿಗಳು ಲಭ್ಯವಿದ್ದು, ಇದು ಇದೀಗ ₹46,000 ಕ್ಕಿಂತ ಕಡಿಮೆ ಬೆಲೆಗೆ ಲಭ್ಯವಾಗುತ್ತಿದೆ.!

ಹೌದು, ಕ್ರೋಮಾದ ಬ್ಲ್ಯಾಕ್ ಫ್ರೈಡೇ ಸೇಲ್ ಸಮಯದಲ್ಲಿ, iPhone 17 (256 GB) ಅನ್ನು ₹82,900 ರೂ. ಮೂಲ ಬೆಲೆಯಲ್ಲಿ ಮಾರಾಟಕ್ಕಿಡಲಾಗಿದೆ. ಕಂಪನಿಯು ಹಲವು ಆಫರ್‌ಗಳ ಮೂಲಕ ದರವನ್ನು ಗಣನೀಯವಾಗಿ ಕಡಿತಗೊಳಿಸಿದ್ದು, ಗ್ರಾಹಕರಿಗೆ ಬ್ಯಾಂಕ್ ಆಫರ್ ಮೂಲಕ ₹1,000 ಕ್ಯಾಶ್‌ಬ್ಯಾಕ್ ಅನ್ನು ನೀಡಲಾಗುತ್ತಿದೆ. ಜೊತೆಗೆ ನೀವು ನಿಮ್ಮ ಹಳೆಯ ಸಾಧನವನ್ನು ವಿನಿಮಯ ಮಾಡಿಕೊಂಡರೆ, ನೀವು ಹೆಚ್ಚುವರಿ ರೂ. 7,000 ಅನ್ನು ವಿನಿಮಯ ಬೋನಸ್ ಆಗಿ ಪಡೆಯಬಹುದು. ಕ್ರೋಮಾ ವೆಬ್‌ಸೈಟ್ ಪ್ರಕಾರ, ನಿಮ್ಮ ಹಳೆಯ ಸಾಧನದಲ್ಲಿ ನೀವು ರೂ. 29,000 ವರೆಗೆ ಪಡೆಯಬಹುದು. ಈ ಎಲ್ಲಾ ಆಫರ್‌ಗಳನ್ನು ಸೇರಿಸಿದಾಗ, iPhone 17 ನ ಪರಿಣಾಮಕಾರಿ ಬೆಲೆ ₹45,900 ಕ್ಕೆ ಇಳಿಯುತ್ತದೆ. ಈ ಆಫರ್ ನವೆಂಬರ್ 30 ರವರೆಗೆ ಮಾತ್ರ ಲಭ್ಯವಿದ್ದು, ಗ್ರಾಹಕರು ಈ ಲಾಭವನ್ನು ಪಡೆಯಲು ಕ್ರೋಮಾ ವೆಬ್‌ಸೈಟ್‌ಗೆ ಭೇಟಿ ನೀಡಬಹುದು.

ಗಮನಿಸಿಖ ಈ ಆಫರ್ ಮೂಲಕ iPhone 17 ಖರೀದಿಸುವುದನ್ನು ಯೋಚಿಸುತ್ತಿದ್ದರೆ, ನಿಮ್ಮ ಹಳೆಯ ಸಾಧನದ ಸ್ಥಿತಿ ಹಾಗೂ ಅದರ ಮೌಲ್ಯವನ್ನು ಮುಂಚಿತವಾಗಿ ಪರಿಶೀಲಿಸುವುದು ಉತ್ತಮ. ವಿನಿಮಯ ಮೌಲ್ಯ ಮಾದರಿ, ಸ್ಥಿತಿ ಮತ್ತು ಪ್ರಸ್ತುತ ಮಾರುಕಟ್ಟೆ ದರವನ್ನು ಅವಲಂಬಿಸಿರುತ್ತದೆ. ಹಾಗೆಯೇ ಬ್ಯಾಂಕ್ ಆಫರ್‌ಗಳು ಆಯ್ಕೆ ಮಾಡಿದ ಪೇಮೆಂಟ್ ಕಾರ್ಡಿನ ಮೇಲೆ ಅವಲಂಬಿತವಾಗಿರಬಹುದು. ಇನ್ನು ಈ ಸ್ಟಾಂಡರ್ಡ್ iPhone 17 ಹೇಗಿದೆ?, ಇದರ ಈ ಪೋನ್ ಖರೀದಿಸಲು 10 ಕಾರಣಗಳು ಯಾವುವು ಆಗಿರಬಹುದು ಎಂಬುದನ್ನು ಸಹ ನೋಡೋಣ ಬನ್ನಿ.

ಕ್ರೋಮಾ ಬ್ಲ್ಯಾಕ್ ಫ್ರೈಡೆ ಸೇಲ್: ₹46,000 ಕ್ಕಿಂತ ಕಡಿಮೆ ಬೆಲೆಗೆ ಐಫೋನ್ 17!

1. ಪ್ರೊ-ಮಟ್ಟದ ಡಿಸ್ಪ್ಲೇ ಅನುಭವ
ಈ ಬಾರಿ ಇದು ಸಾಮಾನ್ಯ iPhone ಮಾದರಿಯಲ್ಲಿ ಒಂದು ದೊಡ್ಡ ಬದಲಾವಣೆ ಎಂದರೆ, ಇದೇ ಮೊದಲ ಬಾರಿಗೆ iPhone 17 ಮಾದರಿಯಲ್ಲಿ 120Hz ಪ್ರೊಮೋಷನ್ ಡಿಸ್ಪ್ಲೇಯನ್ನು ನೀಡಲಾಗಿದೆ. ಇದು ಅತ್ಯಂತ ಸ್ಮೂತ್ ಸ್ಕ್ರೋಲಿಂಗ್ ಮತ್ತು ಅನಿಮೇಷನ್ ಅನುಭವವನ್ನು ನೀಡುತ್ತದೆ ಎಂದು ಕಂಪೆನಿ ಹೇಳಿಕೊಂಡಿದೆ. ಇದಲ್ಲದೆ, ಇದರ ಹೊಸ ಡಿಸ್ಪ್ಲೇ 3,000 ನಿಟ್ಸ್ ಪೀಕ್ ಬ್ರೈಟ್‌ನೆಸ್ ಹೊಂದಿದೆ, ಇದು ಬಿಸಿಲಿನ ವಾತಾವರಣದಲ್ಲಿಯೂ ಪರದೆಯನ್ನು ಸ್ಪಷ್ಟವಾಗಿ ನೋಡಲು ಸಹಾಯ ಮಾಡುತ್ತದೆ.

2. ಶಕ್ತಿಯುತ A19 ಚಿಪ್‌ಸೆಟ್
iPhone 17 ಸಾಧನವು ಹೊಸ A19 ಚಿಪ್‌ಸೆಟ್‌ನಿಂದ ಶಕ್ತಿ ಪಡೆಯುತ್ತದೆ. ಇದು ಹಿಂದಿನ iPhone 16 ರ A18 ಚಿಪ್‌ಸೆಟ್‌ಗಿಂತ ಸುಮಾರು 20% ವೇಗವಾಗಿದೆ ಎಂದು ಆಪಲ್ ತಿಳಿಸಿದೆ. ಇದು ಅಪ್ಲಿಕೇಶನ್‌ಗಳು ವೇಗವಾಗಿ ತೆರೆಯಲು, ಮಲ್ಟಿಟಾಸ್ಕಿಂಗ್ ಸುಲಭವಾಗಿಸಲು ಮತ್ತು ಹೈ-ಎಂಡ್ ಗೇಮ್‌ಗಳನ್ನು ಯಾವುದೇ ತೊಂದರೆಯಿಲ್ಲದೆ ಆಡಲು ಸಹಾಯ ಮಾಡುತ್ತದೆ.

3. ಅತ್ಯುತ್ತಮ ಕ್ಯಾಮರಾ ವ್ಯವಸ್ಥೆ
ಸ್ಟಾಂಡರ್ಡ್ iPhone 17 ಸಾಧನವು ಮೊದಲ ಬಾರಿಗೆ 48MP ಫ್ಯೂಷನ್ ಡ್ಯುಯಲ್ ರಿಯರ್ ಕ್ಯಾಮರಾ ವ್ಯವಸ್ಥೆಯನ್ನು ಹೊಂದಿದೆ. ಇದು ಪ್ರೊ-ಮಟ್ಟದ ಕ್ಯಾಮೆರಾ ಫೀಲ್ ಸಾಮಾನ್ಯ ಬಳಕೆದಾರರಿಗೆ ತಲುಪಿದೆ. ಇದರಲ್ಲಿರುವ ಹೊಸ ಫ್ಯೂಷನ್ ತಂತ್ರಜ್ಞಾನವು ಹೆಚ್ಚು ವಿವರವಾದ ಮತ್ತು ಸ್ಪಷ್ಟವಾದ ಚಿತ್ರಗಳನ್ನು ಸೆರೆಹಿಡಿಯಲು ಸಹಾಯ ಮಾಡುತ್ತದೆ. ಅಲ್ಲದೆ, ಮುಂಭಾಗದಲ್ಲಿರುವ ಸೆಲ್ಫಿ ಕ್ಯಾಮರಾ ಕೂಡ 18MP ಗೆ ಅಪ್‌ಗ್ರೇಡ್ ಆಗಿದ್ದು, ಅತ್ಯುತ್ತಮ ಗುಣಮಟ್ಟದ ಸೆಲ್ಫಿಗಳನ್ನು ನೀಡುತ್ತದೆ ಎನ್ನಬಹುದು.

4. ಹೊಸ ವಿನ್ಯಾಸ ಮತ್ತು ಬಣ್ಣಗಳು
iPhone 17 ಈ ಬಾರಿ ಸುಧಾರಿತ ಮತ್ತು ಹೆಚ್ಚು ಬಾಳಿಕೆ ಬರುವ ವಿನ್ಯಾಸವನ್ನು ಹೊಂದಿದೆ ಎಂದು ಹೇಳಬಹುದು. ಇದರ ಹೊಸ Ceramic Shield 2 ಹಿಂದಿನದಕ್ಕಿಂತ ಮೂರು ಪಟ್ಟು ಹೆಚ್ಚು ಸ್ಕ್ರಾಚ್ ನಿರೋಧಕವಾಗಿದೆ. ಅಲ್ಲದೆ, ಇದರಲ್ಲಿ ಹೊಸ ಬಣ್ಣಗಳಾದ ಲ್ಯಾವೆಂಡರ್ ಮತ್ತು ಮಿಸ್ಟ್ ಬ್ಲ್ಯೂ ಸೇರಿವೆ, ಇದು ಹೊಸ ಮತ್ತು ಆಕರ್ಷಕ ನೋಟವನ್ನು ನೀಡುತ್ತದೆ. ನಿಮ್ಮ iPhone ಬಳಕೆಯ ಫೀಲ್ ಕೂಡ ಅತ್ಯುತ್ತಮವಾಗಿರಬಹುದು.

5. ದೀರ್ಘ ಬಾಳಿಕೆ ಬರುವ ಬ್ಯಾಟರಿ
ಹೊಸ iPhone 17 ಬ್ಯಾಟರಿ ಸಾಮರ್ಥ್ಯ 3,692 mAh ಆಗಿದ್ದು, iPhone 16 ಗಿಂತ 3.7% ಹೆಚ್ಚಾಗಿದೆ. ಇದು 30 ಗಂಟೆಗಳವರೆಗೆ ವೀಡಿಯೊ ಪ್ಲೇಬ್ಯಾಕ್ ನೀಡುತ್ತದೆ. ಇದು ದಿನವಿಡೀ ತಡೆರಹಿತ ಬಳಕೆಗೆ ಅವಕಾಶ ಮಾಡಿಕೊಡುತ್ತದೆ ಎಂದು ಆಪಲ್ ತಿಳಿಸಿದೆ. ಜೊತೆಗೆ, ಹೊಸ ವೇಗದ ವೈರ್‌ಲೆಸ್ ಚಾರ್ಜಿಂಗ್ ಬೆಂಬಲವು ಬ್ಯಾಟರಿ ಬೇಗನೆ ಚಾರ್ಜ್ ಆಗಲು ಸಹಾಯ ಮಾಡುತ್ತದೆ.

6. ಡಬಲ್ ಸ್ಟೋರೇಜ್ ಸಾಮರ್ಥ್ಯ
iPhone 17 ಈ ಬಾರಿ 128GB ಸಾಮರ್ಥ್ಯದಲ್ಲಿ ಬಿಡುಗಡೆಯಾಗಿಲ್ಲ. ಬದಲಾಗಿ ಕೇವಲ 256GB ಇಂಟರ್ನಲ್ ಸ್ಟೋರೇಜ್‌ನೊಂದಿಗೆ ಬಿಡುಗಡೆಯಾಗಿದೆ. ಇದು ಹೆಚ್ಚು ಫೋಟೋಗಳು, ವೀಡಿಯೊಗಳು ಮತ್ತು ಅಪ್ಲಿಕೇಶನ್‌ಗಳನ್ನು ಸಂಗ್ರಹಿಸಲು ಸಾಕಷ್ಟು ಜಾಗವನ್ನು ಒದಗಿಸುತ್ತದೆ. ಇದು ಆರಂಭಿಕ ಹಂತದ iPhone ಬಳಕೆದಾರರಿಗೆ ಒಂದು ದೊಡ್ಡ ಪ್ರಯೋಜನವಾಗಿದೆ.

7. Wi-Fi 7 ಬೆಂಬಲ
ಹೊಸ iPhone 17 ಹೊಸ ತಲೆಮಾರಿನ Wi-Fi 7 ತಂತ್ರಜ್ಞಾನವನ್ನು ಬೆಂಬಲಿಸುತ್ತದೆ. ಇದು ವೇಗದ ಇಂಟರ್ನೆಟ್ ಸಂಪರ್ಕ, ಕಡಿಮೆ ಲೇಟೆನ್ಸಿ ಮತ್ತು ಹೆಚ್ಚು ಸ್ಥಿರವಾದ ವೈರ್‌ಲೆಸ್ ಅನುಭವವನ್ನು ನೀಡುತ್ತದೆ. ಫೈಲ್ ಟ್ರಾನ್ಸ್‌ಫರ್, ಗೇಮಿಂಗ್ ಮತ್ತು ಸ್ಟ್ರೀಮಿಂಗ್‌ಗೆ ಇದು ಅತ್ಯಂತ ಉಪಯುಕ್ತವಾಗಿದೆ.

8. Apple ಇಂಟೆಲಿಜೆನ್ಸ್
ಹೊಸ iPhone 17 ರಲ್ಲಿ Apple ಇಂಟೆಲಿಜೆನ್ಸ್ ತಂತ್ರಜ್ಞಾನವನ್ನು ಸಂಯೋಜಿಸಲಾಗಿದೆ. ಇದು ಫೋನ್‌ನ ಪ್ರತಿಯೊಂದು ಕ್ರಿಯೆಯಲ್ಲೂ ಕೃತಕ ಬುದ್ಧಿಮತ್ತೆಯ ಶಕ್ತಿಯನ್ನು ಬಳಸುತ್ತದೆ. ಫೋನ್ ನಿಮ್ಮ ಬಳಕೆ ಮತ್ತು ಆದ್ಯತೆಗಳಿಗೆ ತಕ್ಕಂತೆ ಹೆಚ್ಚು ಸ್ಮಾರ್ಟ್ ಮತ್ತು ವೈಯಕ್ತಿಕ ಅನುಭವವನ್ನು ನೀಡುತ್ತದೆ.

9. ವೇಗದ ಯುಎಸ್‌ಬಿ-ಸಿ ಚಾರ್ಜಿಂಗ್
ಈ ಬಾರಿ ಎಲ್ಲಾ iPhone 17 ಮಾದರಿಗಳಿಗೂ ವೇಗದ ಯುಎಸ್‌ಬಿ-ಸಿ ಚಾರ್ಜಿಂಗ್ ಬೆಂಬಲವನ್ನು ವಿಸ್ತರಿಸಲಾಗಿದೆ. ಇದು ಪ್ರೊ ಮಾದರಿಗಳಿಗೆ ಮಾತ್ರ ಸೀಮಿತವಾಗಿದ್ದ ವೈಶಿಷ್ಟ್ಯವಾಗಿತ್ತು, ಈಗ ಸಾಮಾನ್ಯ iPhone 17 ಬಳಕೆದಾರರೂ ಸಹ ಇದರ ಲಾಭ ಪಡೆಯಬಹುದು.

10. ಬೆಲೆ ಕಡಿತ
iPhone 17 ಇದೀಗ 256GB ಬೇಸ್ ಮಾದರಿಯೊಂದಿಗೆ ಬಿಡುಗಡೆಯಾಗಿದ್ದು, ಇದು ಬಿಡುಗಡೆಯಾದಾಗ ಇದ್ದ iPhone 16 256GB ಗಿಂತ ₹7,000 ಅಗ್ಗವಾಗಿದೆ. ಅಂದರೆ, iPhone 17 ರ ಆರಂಭಿಕ ಬೆಲೆಯು ಹಿಂದಿನ iPhone 16 ಗಿಂತ ಕಡಿಮೆ ಇದೆ. ಉತ್ತಮ ವೈಶಿಷ್ಟ್ಯಗಳೊಂದಿಗೆ ಬೆಲೆಯಲ್ಲಿ ಕಡಿತವಿರುವುದು ಬಳಕೆದಾರರಿಗೆ ಮತ್ತೊಂದು ಪ್ರಮುಖ ಆಕರ್ಷಣೆಯಾಗಿದೆ.

ಈ ಮೇಲಿನ ಎಲ್ಲಾ ಕಾರಣಗಳಿಂದಾಗಿ, iPhone 17 ಕೇವಲ ಒಂದು ಫೋನ್ ಆಗಿರದೆ, ಉತ್ತಮ ಕಾರ್ಯಕ್ಷಮತೆ, ಸುಧಾರಿತ ಕ್ಯಾಮರಾ ಮತ್ತು ಪ್ರೊ-ಮಟ್ಟದ ವೈಶಿಷ್ಟ್ಯಗಳನ್ನು ಕೈಗೆಟುಕುವ ಬೆಲೆಯಲ್ಲಿ ನೀಡುವ ಒಂದು ಸಂಪೂರ್ಣ ಪ್ಯಾಕೇಜ್ ಆಗಿದೆ. ಸರಳವಾಗಿ, ಈ ಬಾರಿ ಸ್ಟಾಂಡರ್ಡ್ iPhone ಕೇವಲ ಅಪ್‌ಗ್ರೇಡ್ ಮಾತ್ರವಲ್ಲ, ಸಾಮಾನ್ಯ ಬಳಕೆದಾರರಿಗೂ ಪ್ರೊ-ಮಟ್ಟದ ಅನುಭವ ನೀಡಲು ವಿನ್ಯಾಸಗೊಳಿಸಲಾದ ಫೋನ್ ಆಗಿದೆ ಎನ್ನಬಹುದು. ಹಾಗಾಗಿ, ಹೆಚ್ಚು ಸಾಮರ್ಥ್ಯದೊಂದಿಗೆ, ಕಡಿಮೆ ಬೆಲೆಗೆ ಹೊಸ ತಂತ್ರಜ್ಞಾನವನ್ನು ಪಡೆಯುವುದು ಒಂದು ಉತ್ತಮ ನಿರ್ಧಾರ.

Best Mobiles in India

English summary
During Croma’s Black Friday sale, the iPhone 17 (256GB) is listed at ₹82,900. Thanks to multiple discounts and bundled offers, the effective price has dropped dramatically bringing the phone down to under ₹46,000.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+