Home
Deal of the day

iQOO 12 5G ಬೆಲೆ ದೊಡ್ಡ ಕುಸಿತ! ಜೊತೆಗೆ 6,000 ರಿಯಾಯಿತಿ.. ಹೊಸ ಬೆಲೆ ಎಷ್ಟು?

ಐಕ್ಯೂ (iQOO) ಕಂಪನಿಯು ಕಳೆದ ವರ್ಷ ಡಿಸೆಂಬರ್‌ನಲ್ಲಿ ಐಕ್ಯೂ 12 5G (iQOO 12 5G) ಮೊಬೈಲ್ ಅನ್ನು ಬಿಡುಗಡೆ ಮಾಡಿತ್ತು. ಈ ಫೋನ್ ಭಾರತೀಯ ಗ್ರಾಹಕರನ್ನು ಆಕರ್ಷಿಸುವಲ್ಲಿ ಯಶಸ್ವಿಯಾಗಿತ್ತು. ಪ್ರಸ್ತುತ, ಐಕ್ಯೂ 12 5G ಅಮೆಜಾನ್ ಪ್ಲಾಟ್‌ಫಾರ್ಮ್‌ನಲ್ಲಿ ಭರ್ಜರಿ ರಿಯಾಯಿತಿಯೊಂದಿಗೆ ಮಾರಾಟವಾಗುತ್ತಿದೆ. ಜೊತೆಗೆ, ಇಎಂಐ ಆಯ್ಕೆಯೂ ಲಭ್ಯವಿದೆ. ಬನ್ನಿ, ಕಂಪನಿಯು ಈ ಫೋನಿನ ಮೇಲೆ ಯಾವೆಲ್ಲಾ ಆಫರ್‌ ನೀಡುತ್ತಿದೆ, ಹೊಸ ಬೆಲೆ ಮತ್ತು ವೈಶಿಷ್ಟ್ಯಗಳನ್ನು ತಿಳಿಯೋಣ.

ಐಕ್ಯೂ 12 5G ಸ್ಮಾರ್ಟ್‌ಫೋನ್ ಸ್ನಾಪ್‌ಡ್ರಾಗನ್ 8 Gen 3 ಚಿಪ್‌ಸೆಟ್ ಅನ್ನು ಹೊಂದಿದೆ. ಈ ಫೋನ್ 144Hz ರಿಫ್ರೆಶ್ ದರದೊಂದಿಗೆ 6.78 ಇಂಚಿನ ಡಿಸ್ಪ್ಲೇಯನ್ನು ಹೊಂದಿದೆ. ಇದು ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. 50 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ ಲಭ್ಯವಿದೆ. ಜೊತೆಗೆ, 5000mAh ಸಾಮರ್ಥ್ಯದ ಬ್ಯಾಟರಿ ಮತ್ಯತು 120W ವೇಗದ ಚಾರ್ಜಿಂಗ್ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಒಳಗೊಂಡಿದೆ.

iQOO 12 5G ಬೆಲೆ ಕುಸಿತ! ಜೊತೆಗೆ 6,000 ರಿಯಾಯಿತಿ.. ಹೊಸ ಬೆಲೆ ಎಷ್ಟು?

ಐಕ್ಯೂ 12 5G ಫೋನಿನ ಬೆಲೆ ಮತ್ತು ಆಫರ್‌ಗಳು

ಐಕ್ಯೂ 12 5G ಸ್ಮಾರ್ಟ್‌ಫೋನ್‌ ಖರೀದಿ ಮೇಲೆ 3,999 ರೂ. ಫ್ಲಾಟ್ ರಿಯಾಯಿತಿ ಲಭ್ಯವಿದೆ. ಈ ಫೋನ್ 49,999 ರೂ.ಗೆ ಮಾರಾಟವಾಗುತ್ತಿದೆ. ಫ್ಲಾಟ್ ಡಿಸ್ಕೌಂಟ್ ಜೊತೆಗೆ 2,000 ರೂ. ಬ್ಯಾಂಕ್ ಆಫರ್ ಸಹ ಸಿಗುತ್ತದೆ. ಎಸ್‌ಬಿಐ ಕ್ರೆಡಿಟ್ ಕಾರ್ಡ್ ವಹಿವಾಟುಗಳ ಮೇಲೆ ಈ ರಿಯಾಯಿತಿ ಲಭ್ಯವಿದೆ. ಎರಡು ಆಫರ್‌ಗಳ ಬಳಿಕ, ಫೋನಿನ ​​12GB+256GB ಸ್ಟೋರೇಜ್‌ ರೂಪಾಂತರವು 47,999 ರೂ.ಗಳಿಗೆ ಲಭ್ಯವಿರುತ್ತದೆ. 12GB+256GB ಸ್ಟೋರೇಜ್‌ ರೂಪಾಂತರವನ್ನು 52,999 ರೂ.ಗೆ ಬಿಡುಗಡೆ ಮಾಡಲಾಗಿತ್ತು.

ರಿಯಾಯಿತಿಯ ಜೊತೆಗೆ, ಈ ಫೋನನ್ನು ನೋ ಕಾಸ್ಟ್ ಇಎಂಐ ಮೂಲಕ 3 ರಿಂದ 9 ತಿಂಗಳ ಅವಧಿಯೊಂದಿಗೆ ಖರೀದಿಸಬಹುದು. ಇದಲ್ಲದೆ, ಎಕ್ಸ್ ಚೇಂಜ್ ಆಫರ್ ಮೂಲಕ 38,400 ರೂ. ವರೆಗೆ ರಿಯಾಯಿತಿ ಪಡೆಯಬಹುದು. ಇದು ನಿಮ್ಮ ಹಳೆಯ ಫೋನಿನ ಸ್ಥಿತಿಯನ್ನು ಅವಲಂಬಿಸಿರುತ್ತದೆ.

ಫೋನಿನ 16GB RAM + 512GB ಸ್ಟೋರೇಜ್ ರೂಪಾಂತರವನ್ನು 57,999 ರೂ.ಗೆ ಬಿಡುಗಡೆ ಮಾಡಲಾಗಿತ್ತು. ಪ್ರಸ್ತುತ, ಇದು 3,000 ರೂ. ಡಿಸ್ಕೌಂಟ್ ಮತ್ತು 2,000 ರೂ.ಗಳ ಬ್ಯಾಂಕ್ ಆಫರ್‌ಗಳೊಂದಿಗೆ ಮಾರಾಟವಾಗುತ್ತಿದೆ. ಎರಡೂ ರಿಯಾಯಿತಿಯೊಂದಿಗೆ ನೀವು, ಇದನ್ನು 52,999 ರೂ.ಗೆ ಖರೀದಿಸಬಹುದು. ನೀವು, ಐಕ್ಯೂ 12 5G ಅನ್ನು ಆನ್‌ಲೈನ್ ಶಾಪಿಂಗ್ ಸೈಟ್ ಅಮೇಜಾನ್‌ ಮೂಲಕ ಖರೀದಿಸಬಹುದು.

ಐಕ್ಯೂ 12 5G ಫೋನಿನ ವೈಶಿಷ್ಟ್ಯಗಳು

ಐಕ್ಯೂ 12 5G ಫೋನ್ 6.78 ಇಂಚಿನ 1.5K ಎಲ್‌ಇಡಿ ಡಿಸ್ಪ್ಲೇಯನ್ನು ಹೊಂದಿದೆ. ಇದು 144Hz ರಿಫ್ರೆಶ್ ದರ, 3000 ನಿಟ್ಸ್‌ ಗರಿಷ್ಠ ಬ್ರೈಟ್‌ನೆಸ್ ಬೆಂಬಲ ಪಡೆದಿದೆ. ಇದು ಸ್ನಾಪ್‌ಡ್ರಾಗನ್ 8 ಜೆನ್ 3 ಚಿಪ್‌ಸೆಟ್ ಅನ್ನು ಹೊಂದಿದೆ. ಈ ಫೋನ್ 16GB RAM ಮತ್ತು 1TB ವರೆಗೆ ಸ್ಟೋರೇಜ್‌ನೊಂದಿಗೆ ಬರುತ್ತದೆ. ಇದು 4.0 ಕಸ್ಟಮ್ ಸ್ಕಿನ್ ಆಧಾರಿತ ಆಂಡ್ರಾಯ್ಡ್ 14 ಓಎಸ್‌ನಲ್ಲಿ ಕಾರ್ಯನಿರ್ವಹಿಸುತ್ತದೆ.

ಐಕ್ಯೂ 12 5G ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಹೊಂದಿದೆ. ಇದು 50 ಮೆಗಾಪಿಕ್ಸೆಲ್ ಓಮ್ನಿವಿಷನ್ OV50H ಪ್ರಾಥಮಿಕ OIS ಕ್ಯಾಮೆರಾ, 50 ಮೆಗಾಪಿಕ್ಸೆಲ್ ಸ್ಯಾಮ್‌ಸಂಗ್ ಜೆಎನ್1 ಅಲ್ಟ್ರಾವೈಡ್ ಲೆನ್ಸ್ ಮತ್ತು 64 ಮೆಗಾಪಿಕ್ಸೆಲ್ ಟೆಲಿಫೋಟೋ ಲೆನ್ಸ್ ಅನ್ನು ಹೊಂದಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಳಿಗಾಗಿ, 32 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಇದೆ.

ಕಂಪನಿಯು ಐಕ್ಯೂ 12 5G ಅನ್ನು 5000mAh ಸಾಮರ್ಥ್ಯದ ಬ್ಯಾಟರಿಯೊಂದಿಗೆ ಬಿಡುಗಡೆ ಮಾಡಿದೆ. ಇದು 120 ವ್ಯಾಟ್ ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ ಈ ಫೋನ್ 5G, 4G, ಡ್ಯುಯಲ್ ಸಿಮ್, ಬ್ಲೂಟೂತ್, ವೈ-ಫೈ, ಜಿಪಿಎಸ್‌ ಸೇರಿದಂತೆ ಹಲವು ಆಯ್ಕೆಗಳನ್ನು ಒಳಗೊಂಡಿದೆ.

Best Mobiles in India

English summary
iQOO 12 5G price drop in India: know new price, Specs and more
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+